ಆದ ಪ್ರಮಾದಕ್ಕೆ ಕ್ಷಮೆಯಾಚಿಸಿ ಹೊಸ ಕಾರು ಒದಗಿಸಿದ ಜೀಪ್...

ಹೊಸ ಕಾರಿನ ಚಕ್ರಗಳು ತುಂಡಾದ ಪ್ರಮಾದದ ಬಗ್ಗೆ ನಿಮ್ಮಗೆಲ್ಲಾ ಗೊತ್ತೆ ಇದೆ. ಇದೀಗ ಘಟನೆ ಬಗ್ಗೆ ಎಚ್ಚೆತ್ತುಕೊಂಡಿರುವ ಜೀಪ್ ಇಂಡಿಯಾ ಸಂಸ್ಥೆಯು ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಲ್ಲದೇ ಹೊಸ ಕಾರು ಮಾದರಿಯನ್ನು ವಿತರಣೆ ಮಾಡಿದೆ.

By Praveen

Recommended Video

Auto Rickshaw Explodes In Broad Daylight

ಮೊನ್ನೆಯಷ್ಟೇ ಹೊಸ ಜೀಪ್ ಕಂಪಾಸ್ ಕಾರೊಂದು ಖರೀದಿ ಮಾಡಿದ ಮೂರು ಗಂಟೆಯಲ್ಲಿ ಕಾರಿನ ಚಕ್ರಗಳು ತುಂಡಾದ ಪ್ರಮಾದದ ಬಗ್ಗೆ ನಿಮ್ಮಗೆಲ್ಲಾ ಗೊತ್ತೆ ಇದೆ. ಇದೀಗ ಘಟನೆ ಬಗ್ಗೆ ಎಚ್ಚೆತ್ತುಕೊಂಡಿರುವ ಜೀಪ್ ಇಂಡಿಯಾ ಸಂಸ್ಥೆಯು ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಲ್ಲದೇ ನೊಂದ ಗ್ರಾಹಕನಿಗೆ ಹೊಸ ಕಾರು ಮಾದರಿಯನ್ನು ವಿತರಣೆ ಮಾಡಿದೆ.

ಆದ ಪ್ರಮಾದಕ್ಕೆ ಕ್ಷಮೆಯಾಚಿಸಿ ಹೊಸ ಕಾರು ಒದಗಿಸಿದ ಜೀಪ್...

ನಮಗೆ ಗೊತ್ತಿರುವ ಹಾಗೇ ಜೀಪ್ ಕಂಪಾಸ್ ಕಾರು ಖರೀದಿ ಮಾಡೋದು ಪ್ರತಿಷ್ಠೆಯ ಸಂಕೇತ ಅಂದ್ರೆ ತಪ್ಪಾಗಲಾರದು. ಯಾಕಂದ್ರೆ ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಅಮೆರಿಕ ಮೂಲಕ ಜೀಪ್ ಸಂಸ್ಥೆಯು ಹತ್ತಾರು ಬಗೆಯ ಕಾರು ಉತ್ಪನ್ನಗಳನ್ನು ಹೊರತಂದಿದೆ.

ಆದ ಪ್ರಮಾದಕ್ಕೆ ಕ್ಷಮೆಯಾಚಿಸಿ ಹೊಸ ಕಾರು ಒದಗಿಸಿದ ಜೀಪ್...

ಆದ್ರೆ ಕಳೆದ ಮೂರು ದಿನಗಳ ಹಿಂದಷ್ಟೇ ಹೊಸ ಮಾದರಿಯ ಜೀಪ್ ಕಂಪಾಸ್ ಖರೀದಿ ಮಾಡಿದ್ದ ಗುವಾಹಾಟಿ ಮೂಲದ ಜಯಂತ್ ಪುಕಾನ್ ಎಂಬುವರಿಗೆ ನಿಜಕ್ಕೂ ಅಚ್ಚರಿ ಕಾದಿತ್ತು. ಹೊಸ ಜೀಪ್ ಕಂಪಾಸ್‌ ಮೂಲಕ 172 ಕಿಮಿ ಪ್ರಯಾಣ ಮಾಡಿದ್ದೇ ತಡ ಹೊಸ ಕಾರಿನ ಯಾಕ್ಸಿಲ್‌ಗಳೇ ತುಂಡರಿಸಿದ್ದವು.

ಆದ ಪ್ರಮಾದಕ್ಕೆ ಕ್ಷಮೆಯಾಚಿಸಿ ಹೊಸ ಕಾರು ಒದಗಿಸಿದ ಜೀಪ್...

ಅದೃಷ್ಟವಶಾತ್ ಕಾರಿನಲ್ಲಿದ್ದ ಜಯಂತ್ ಪುಕಾನ್ ಮತ್ತು ನಾಲ್ವರು ಸ್ನೇಹಿತರು ಪ್ರಾಣಾಪಾಯದಿಂದ ಪಾರಾಗಿದ್ದು, ಕಾರಿನಲ್ಲಿ ಜೋರಾಗಿ ಬರುತ್ತಿದ್ದ ಶಬ್ದದಿಂದಾಗಿ ಕೂಡಲೇ ರಸ್ತೆ ಬದಿಗೆ ಕಾರು ಹಾಕಿದ್ದರು.

ಆದ ಪ್ರಮಾದಕ್ಕೆ ಕ್ಷಮೆಯಾಚಿಸಿ ಹೊಸ ಕಾರು ಒದಗಿಸಿದ ಜೀಪ್...

ಘಟನೆಯಿಂದ ಜೀಪ್ ಕಂಪಾಸ್ ಉತ್ಪಾದಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಜಯಂತ್ ಪುಕಾನ್ ಅವರು, ಜೀಪ್ ಕಂಪಾಸ್ ಕಾರುಗಳ ಕಾರ್ಯಕ್ಷಮತೆ ಮತ್ತು ಜನಪ್ರಿಯತೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದರು.

ಆದ ಪ್ರಮಾದಕ್ಕೆ ಕ್ಷಮೆಯಾಚಿಸಿ ಹೊಸ ಕಾರು ಒದಗಿಸಿದ ಜೀಪ್...

ಜಯಂತ್ ಅವರ ಫೇಸ್‌ಬುಕ್ ಪೊಸ್ಟ್ ಹಾಕಿದ ಕೆಲವೇ ಗಂಟೆಗಳಲ್ಲಿ 30 ಸಾವಿರಕ್ಕೂ ಹೆಚ್ಚು ಜನ ಶೇರ್ ಮಾಡಿದ್ದಲ್ಲದೇ, ಮೇಕ್ ಇನ್ ಇಂಡಿಯಾ ಹೆಸರಿನಲ್ಲಿ ದೇಶಿಯ ಕಂಪಾಸ್ ಕಾರುಗಳ ಉತ್ಪಾದನೆ ಕೈಗೊಂಡಿರುವ ಜೀಪ್ ವಿರುದ್ಧ ನೆಟ್ಟಿಗರು ಟೀಕೆ ಮಾಡಿದ್ದರು.

ಆದ ಪ್ರಮಾದಕ್ಕೆ ಕ್ಷಮೆಯಾಚಿಸಿ ಹೊಸ ಕಾರು ಒದಗಿಸಿದ ಜೀಪ್...

ಇನ್ನು ಕೆಲವರು ಕಾರು ಉತ್ಪಾದನೆಯಲ್ಲಾದ ನ್ಯೂನತೆಗಳೇ ಇಂತಹ ಅವಘಡಕ್ಕೆ ಕಾರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು, ಜನಪ್ರಿಯ ಕಾರು ಉತ್ಪಾದಕರ ಕಾರು ಮಾದರಿಗಳೇ ಹೀಗಾದ್ರೆ ಇನ್ನು ಅಗ್ಗದ ಕಾರು ಕಥೆ ಏನು ಎನ್ನುವ ಪ್ರಶ್ನೆಗಳು ಕೇಳಿಬಂದಿದ್ದವು.

ಆದ ಪ್ರಮಾದಕ್ಕೆ ಕ್ಷಮೆಯಾಚಿಸಿ ಹೊಸ ಕಾರು ಒದಗಿಸಿದ ಜೀಪ್...

ಇದರಿಂದ ಕೂಡಲೇ ಎಚ್ಚೆತ್ತುಕೊಂಡ ಜೀಪ್ ಇಂಡಿಯಾ ಸಂಸ್ಥೆಯು ಗ್ರಾಹಕ ಜಯಂತ್ ಅವರು ಸಂಪರ್ಕಿಸಿ ಆದ ಪ್ರಮಾದಕ್ಕೆ ಕ್ಷಮೆ ಕೊರಿದ್ದು, ಕೂಡಲೇ ಸಮಸ್ಯೆ ಬಗೆಹರಿಸುವುದಲ್ಲದೇ ಮುಂದಿನ 2 ದಿನದೊಳಗಾಗಿ ಹೊಸ ಕಾರು ಮಾದರಿಯನ್ನು ವಿತರಣೆ ಮಾಡುವುದಾಗಿ ಭರವಸೆ ನೀಡಿದೆ.

ಆದ ಪ್ರಮಾದಕ್ಕೆ ಕ್ಷಮೆಯಾಚಿಸಿ ಹೊಸ ಕಾರು ಒದಗಿಸಿದ ಜೀಪ್...

ಜಯಂತ್ ಅವರು ಗುವಾಹಟಿಯ ಮಹೇಶ್ ಮೋಟಾರ್ಸ್‌ನಲ್ಲಿ ಜೀಪ್ ಕಂಪಾಸ್ ಖರೀದಿಸಿದ್ದು, ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರಂ ಪ್ರಕಾರ 18.36 ಲಕ್ಷ ಬೆಲೆ ಪಡೆದುಕೊಂಡಿದೆ.

ಆದ ಪ್ರಮಾದಕ್ಕೆ ಕ್ಷಮೆಯಾಚಿಸಿ ಹೊಸ ಕಾರು ಒದಗಿಸಿದ ಜೀಪ್...

ಸದ್ಯ ತಾಂತ್ರಿಕ ತೊಂದರೆಗಳಿಂದ ಅವಘಡಕ್ಕೆ ಈಡಾಗಿರುವ ಕಂಪಾಸ್ ಕಾರನ್ನು ಶೋರಂಗೆ ವಾಪಸ್ ಮಾಡಲಾಗಿದ್ದು, ನಡೆದ ಘಟನೆ ಬಗ್ಗೆ ಜೀಪ್ ಇಂಡಿಯಾ ಸಂಸ್ಥೆಯು ಸೂಕ್ತ ಕ್ರಮ ಕೈಗೊಂಡು ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕಿದೆ.

Trending On DriveSpark Kannada:

100 ಸಿಸಿ ಬೈಕ್ ಎಂಜಿನ್‌ನಲ್ಲಿ ದುಬಾರಿ ಬೆಲೆಯ ಲಂಬೋರ್ಗಿನಿ ಕಾರು ನಿರ್ಮಾಣ ಮಾಡಿದ ರೈತ...!!

ಕಾನೂನು ಬಾಹಿರವಾಗಿ ಹ್ಯಾಂಡ್‌ಲಿಂಗ್ ಚಾರ್ಜ್- ಟಾಟಾ ಡೀಲರ್ಸ್‌ಗೆ ಕಾದಿತ್ತು ಶಾಕ್..!!

ಎಂದಿಗೂ ಮರೆಯಲಾಗದ ಟೈಟಾನಿಕ್ ದುರಂತದ ನಗ್ನ ಸತ್ಯಗಳು

Most Read Articles

Kannada
Read more on off beat accident
English summary
Jeep India To Exchange Customer’s Compass SUV.
Story first published: Sunday, February 4, 2018, 12:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X