ಜಾನ್ ಅಬ್ರಹಾಂ ಮನ ಸೆಳೆದ ಚೆಲುವೆ

ಇನ್ನೊಂದು ತಿಂಗಳ ಅವಧಿಯಲ್ಲಿ ಕಪ್ಪು ವರ್ಣದ ನಿಸ್ಸಾನ್ ಗಾಡ್ಜಿಲ್ಲಾ ಕಾರಿನಲ್ಲಿ ಮುಂಬೈ ನಗರದೆಲ್ಲೆಡೆ ಜಾನ್ ಅಬ್ರಹಾಂ ಸುತ್ತಾಟ ಆರಂಭಿಸಲಿದ್ದಾರೆ.

By Nagaraja

ಜಪಾನ್ ಮೂಲದ ಐಕಾನಿಕ್ ವಾಹನ ಸಂಸ್ಥೆ ನಿಸ್ಸಾನ್ ಇತ್ತೀಚೆಗಷ್ಟೇ ಅತ್ಯಂತ ಶಕ್ತಿಶಾಲಿ ಜಿಟಿಆರ್ ಸೂಪರ್ ಕಾರನ್ನು ಭಾರತಕ್ಕೆ ಪರಿಚಯಿಸಿತ್ತು. ಜಗತ್ತಿನಾದ್ಯಂತ ಗಾಡ್ಜಿಲ್ಲಾ ಎಂದೇ ಪ್ರಸಿದ್ಧ ಪಡೆದಿರುವ ನಿಸ್ಸಾನ್ ಜಿಟಿಆರ್ ಕಾರನ್ನೀಗ ಖರೀದಿಸಲು ಬಾಲಿವುಡ್‌ನ ಜನಪ್ರಿಯ ನಟ ಜಾನ್ ಅಬ್ರಹಾಂ ನಿರ್ಧರಿಸಿದ್ದಾರೆ.

ಜಾನ್ ಅಬ್ರಹಾಂ ಮನ ಸೆಳೆದ ಚೆಲುವೆ

ಜಗತ್ತಿನ ಅತಿ ಹೆಚ್ಚು ನಿರ್ವಹಣೆಯ ಕಾರುಗಳಲ್ಲಿ ಒಂದಾಗಿರುವ ನಿಸ್ಸಾನ್ ಜಿಟಿಆರ್ ಬ್ಲ್ಯಾಕ್ ಎಡಿಷನ್ ಕಾರನ್ನು ಖರೀದಿಸಲು ಜಾನ್ ಅಬ್ರಹಾಂ ನಿರ್ಧರಿಸಿದ್ದಾರೆ.

ಜಾನ್ ಅಬ್ರಹಾಂ ಮನ ಸೆಳೆದ ಚೆಲುವೆ

ತವರೂರಾದ ಜಪಾನ್ ನಲ್ಲೇ ಇದರ ಎಂಜಿನನ್ನು ಕೈಯಿಂದಲೇ ನಿರ್ಮಿಸಲಾಗುತ್ತಿದೆ. ಇನ್ನು ಜಾನ್ ಅಬ್ರಹಾಂ ವೈಯಕ್ತಿಕ ಬೇಡಿಕೆಗಳಿಗೆ ಅನುಸಾರವಾಗಿ ಕೆಲವೊಂದು ಮಾರ್ಪಾಡುಗಳನ್ನು ತರಲಾಗುವುದು.

ಜಾನ್ ಅಬ್ರಹಾಂ ಮನ ಸೆಳೆದ ಚೆಲುವೆ

ಸೂಪರ್ ಬೈಕ್ ಗಳ ಮೇಲೆ ಅತಿ ಹೆಚ್ಚು ಕ್ರೇಜ್ ಹೊಂದಿರುವ ಅಬ್ರಹಾಂ ಈಗ ಸೂಪರ್ ಕಾರುಗಳ ಮೇಲೂ ತಮ್ಮ ಸಲುಗೆಯನ್ನು ತೋರಿದ್ದಾರೆ.

ಜಾನ್ ಅಬ್ರಹಾಂ ಮನ ಸೆಳೆದ ಚೆಲುವೆ

ಜಾನ್ ಅಬ್ರಹಾಂ ಪಾಲಾಗಲಿರುವ ಈ ಪುಟ್ಟ ಸುಂದರಿ ಸರಿ ಸುಮಾರು ಎರಡು ಕೋಟಿ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

ಜಾನ್ ಅಬ್ರಹಾಂ ಮನ ಸೆಳೆದ ಚೆಲುವೆ

2016 ವರ್ಷಾರಂಭದಲ್ಲಿ ನಡೆದ ದೆಹಲಿ ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿದ್ದ ನಿಸ್ಸಾನ್ ಜಿಟಿಆರ್ ಬಳಿಕ ನವೆಂಬರ್ ತಿಂಗಳಲ್ಲಿ ಅದ್ದೂರಿಯಾಗಿ ಮಾರುಕಟ್ಟೆ ಪ್ರವೇಶಿಸಿತ್ತು.

ಜಾನ್ ಅಬ್ರಹಾಂ ಮನ ಸೆಳೆದ ಚೆಲುವೆ

ಶಕ್ತಿಶಾಲಿ 3.8 ಲೀಟರ್ ಟ್ವಿನ್ ಟರ್ಬೊ ವಿ6 ಎಂಜಿನ್ ನಿಂದ ನಿಯಂತ್ರಿಸಲ್ಪಡಲಿರುವ ನಿಸ್ಸಾನ್ ಜಿಟಿಆರ್, 628 ಎನ್‌ಎಂ ತಿರುಗುಬಲದಲ್ಲಿ 542 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ಆರು ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಜಾನ್ ಅಬ್ರಹಾಂ ಮನ ಸೆಳೆದ ಚೆಲುವೆ

ಶಕ್ತಿಶಾಲಿ 3.8 ಲೀಟರ್ ಟ್ವಿನ್ ಟರ್ಬೊ ವಿ6 ಎಂಜಿನ್ ನಿಂದ ನಿಯಂತ್ರಿಸಲ್ಪಡಲಿರುವ ನಿಸ್ಸಾನ್ ಜಿಟಿಆರ್, 628 ಎನ್‌ಎಂ ತಿರುಗುಬಲದಲ್ಲಿ 542 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ಆರು ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಜಾನ್ ಅಬ್ರಹಾಂ ಮನ ಸೆಳೆದ ಚೆಲುವೆ

ನಿಸ್ಸಾನ್ ಗಾಡ್ಜಿಲ್ಲಾ ಕೇವಲ ಮೂರು ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧನೆ ಮತ್ತು ಗಂಟೆಗೆ 315 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಜಾನ್ ಅಬ್ರಹಾಂ ಮನ ಸೆಳೆದ ಚೆಲುವೆ

ಅತ್ಯಂತ ಹೊಳಪಿನಿಂದ ಕೂಡಿರುವ ನಿಸ್ಸಾನ್ ಜಿಟಿಆರ್ ಪ್ರತಿಯೊಬ್ಬ ವಾಹನ ಪ್ರೇಮಿಯನ್ನು ತನ್ನತ್ತ ಸೆಳೆಯುತ್ತಿದೆ. ತನ್ನ ಶಕ್ತಿಯನ್ನು ಪ್ರತಿಬಿಂಬಿಸುವಂತೆ ನಿಸ್ಸಾನ್ ಜಿಟಿಆರ್ ಮುಂಭಾಗದಲ್ಲಿ ದೊಡ್ಡದಾದ ಫ್ರಂಟ್ ಗ್ರಿಲ್ ಪಡೆದಿದೆ.

ಜಾನ್ ಅಬ್ರಹಾಂ ಮನ ಸೆಳೆದ ಚೆಲುವೆ

ಹಿಂಭಾಗದಲ್ಲಿ 1990ರ ನಿಸ್ಸಾನ್ ಜಿಟಿಆರ್‌ಗೆ ಗೌರವ ಸೂಚಿಸಿಕೊಂಡು ತಲಾ ನಾಲ್ಕು ಟೈಲ್ ಲ್ಯಾಂಪ್ ಗಳು ಹಾಗೂ ಎಕ್ಸಾಸ್ಟ್ ಕೊಳವೆಗಳನ್ನು ಲಗತ್ತಿಸಲಾಗಿದೆ. ಇದು ಈ ಐಕಾನಿಕ್ ಕಾರಿಗೆ ತನ್ನದೇ ಆದ ವಿಶಿಷ್ಟತೆ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ.

ಜಾನ್ ಅಬ್ರಹಾಂ ಮನ ಸೆಳೆದ ಚೆಲುವೆ

ನಿಸ್ಸಾನ್ ಸಂಸ್ಥೆಯ ಮುಖ್ಯ ಪ್ರಚಾರ ರಾಯಭಾರಿ ಕೂಡಾ ಆಗಿರುವ ಜಾನ್ ಅಬ್ರಹಾಂ, ಗಾಡ್ಜಿಲ್ಲಾ ಕಾರಿನ ಮೇಲೆ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ.

Most Read Articles

Kannada
English summary
Bollywood Star John Abraham Orders A ‘Godzilla’ For Rs. 2 Crore
Story first published: Monday, November 14, 2016, 12:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X