ಡಬಲ್ ಡೆಕ್ಕರ್ ಬಸ್‌ಗಳಿಗೆ ಮರುಜೀವ ನೀಡಿದ ರಾಜ್ಯ ಸರ್ಕಾರ

ಒಂದು ಕಾಲದಲ್ಲಿ ನಗರ ಪ್ರದೇಶಗಳಲ್ಲಿ ಪ್ರಮುಖ ಆಕರ್ಷಣೆಯಾಗಿದ್ದ ಡಬಲ್ ಡೆಕ್ಕರ್ ಬಸ್‌ಗಳು ಆಧುನಿಕತೆಯ ಭರಾಟೆಯಿಂದಾಗಿ ಮೂಲೆಗುಂಪಾಗಿದ್ದು, ಕಳೆದ ಮೂರು ದಶಕಗಳ ನಂತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಡಬಲ್ ಡೆಕ್ಕರ್ ಬಸ್‌ಗಳ ಸಂಚಾರಕ್ಕೆ ಮರುಜೀವ ನೀಡಲಾಗುತ್ತಿದೆ.

ಡಬಲ್ ಡೆಕ್ಕರ್ ಬಸ್ ಸೇವೆಗಳಿಗೆ ಮರುಜೀವ ನೀಡಲು ಮುಂದಾಗಿರುವ ರಾಜ್ಯ ಸರ್ಕಾರವು ಇಂದು ಮಂಡಿಸಲಾದ 2019-20ರ ಅವಧಿಯ ಬಜೆಟ್‌ನಲ್ಲಿ ರೂ.6 ಕೋಟಿ ಅನುದಾನಕ್ಕೆ ಒಪ್ಪಿಗೆ ಸೂಚಿಸಿದ್ದು, ಮೊದಲ ಹಂತವಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಒಟ್ಟು 6 ಡಬ್ಬರ್ ಡೆಕ್ಕರ್ ಬಸ್‌ಗಳು ಸೇವೆ ಆರಂಭಿಸಲಿವೆ.

ಡಬಲ್ ಡೆಕ್ಕರ್ ಬಸ್‌ಗಳಿಗೆ ಮರುಜೀವ ನೀಡಿದ ರಾಜ್ಯ ಸರ್ಕಾರ

ಕಳೆದ ಮೂರು ದಶಕಗಳ ಹಿಂದೆ ನಗರ ದರ್ಶನಕ್ಕೆ ಮಾತ್ರ ಸೀಮಿತವಾಗಿದ್ದ ಡಬಲ್ ಡೆಕ್ಕರ್ ಬಸ್‌ಗಳು ಕ್ರಮೇಣ ಮೂಲೆ ಸೇರಿದ್ದವು. ಆದ್ರೆ ಪ್ರಸ್ತುತ ದಿನಗಳಲ್ಲಿ ಡಬಲ್ ಡೆಕ್ಕರ್ ಬಸ್ ಸೇವೆಗಳು ಅವಶ್ಯಕತೆಯಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಬೃಹತ್ ಯೋಜನೆ ರೂಪಿಸಿದೆ.

ಮೊದಲ ಹಂತವಾಗಿ ಮೈಸೂರಿನಲ್ಲಿ ಡಬಲ್ ಡೆಕ್ಕರ್ ಬಸ್‌ಗಳ ಸಂಚಾರಕ್ಕೆ ಚಾಲನೆ ನೀಡಲಿರುವ ಕರ್ನಾಟಕ ಸಾರಿಗೆ ಇಲಾಖೆಯು ಪ್ರವಾಸಿಗರ ಓಡಾಟಕ್ಕೆ ಹೊಸ ಸಂಚಾರ ವ್ಯವಸ್ಥೆ ಕಲ್ಪಿಸಲಿದ್ದು, ತದನಂತರವಷ್ಟೇ ರಾಜಧಾನಿ ಬೆಂಗಳೂರಿನಲ್ಲಿಯೂ ಸಹ ಡಬಲ್ ಡೆಕ್ಕರ್ ಬಸ್‌ಗಳು ಆರಂಭಿಸುವ ಚಿಂತನೆಯಲ್ಲಿದೆ.

ಡಬಲ್ ಡೆಕ್ಕರ್ ಬಸ್‌ಗಳಿಗೆ ಮರುಜೀವ ನೀಡಿದ ರಾಜ್ಯ ಸರ್ಕಾರ

44 ಹೊಸ ಬಸ್ ನಿಲ್ದಾಣಗಳ ನಿರ್ಮಾಣಕ್ಕೆ ಒಪ್ಪಿಗೆ
ಈ ಬಾರಿಯ ಬಜೆಟ್‌ನಲ್ಲಿ ರಾಜ್ಯದ ವಿವಿಧಡೆ 44 ಹೊಸ ಬಸ್ ನಿಲ್ದಾಣಗಳನ್ನು ನಿರ್ಮಾಣ ಮಾಡಲು ಒಪ್ಪಿಗೆ ಸೂಚಿಸಿದ್ದು, ಇದರ ಜೊತೆಗೆ 10 ಹೊಸ ಬಸ್ ಡಿಪೋಗಳಿಗೆ ಚಾಲನೆ ನೀಡಲಿದೆ. ಈ ಮೂಲಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಗೊಳಿಸಲು ಪ್ರಯತ್ನಿಸಿರುವುದಲ್ಲದೇ ಗ್ರಾಮಿಣ ಭಾಗದ ರಸ್ತೆಗಳ ನಿರ್ಮಾಣಕ್ಕೂ ಹೆಚ್ಚುವರಿ ಅನುದಾನವನ್ನು ಮೀಸಲು ಇರಿಸಲಾಗಿದೆ.
Most Read Articles

Kannada
English summary
Karnataka Chief minister and Finance minister H.D.Kumaraswamy presented Karnataka budget 2019-20 on Feb 08, 2019. Read in Kannada.
Story first published: Friday, February 8, 2019, 15:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X