ದೇವೇಗೌಡರಿಗೆ ದುಬಾರಿ ಬೆಲೆಯ ಐಷಾರಾಮಿ ಕಾರು ನೀಡಿದ ರಾಜ್ಯ ಸರ್ಕಾರ

ಮಾಜಿ ಪ್ರಧಾನ ಮಂತ್ರಿಗಳು ಹಾಗೂ ಹಾಲಿ ರಾಜ್ಯಸಭಾ ಸದಸ್ಯರೂ ಆದ ದೇವೇಗೌಡರಿಗೆ ಇತ್ತೀಚೆಗೆ ಹೊಸ ಐಷಾರಾಮಿ ಕಾರನ್ನು ನೀಡಲಾಗಿದೆ. ಕಳೆದ ವಾರ ದೇವೇಗೌಡರಿಗೆ ಹೊಸ ವೊಲ್ವೋ ಕಾರನ್ನು ನೀಡಲಾಗಿದೆ.

ದೇವೇಗೌಡರಿಗೆ ದುಬಾರಿ ಬೆಲೆಯ ಐಷಾರಾಮಿ ಕಾರು ನೀಡಿದ ರಾಜ್ಯ ಸರ್ಕಾರ

ಇದು ಕರ್ನಾಟಕ ರಾಜ್ಯದ ಯಾವುದೇ ಜನಪ್ರತಿನಿಧಿಗೆ ರಾಜ್ಯ ಸರ್ಕಾರವು ನೀಡಿದ ಅತ್ಯಂತ ದುಬಾರಿ ಬೆಲೆಯ ವಾಹನವಾಗಿದೆ. ಈ ಕಾರು ರಾಜ್ಯಸಭಾ ಸದಸ್ಯರಿಗೆ ನೀಡಬಹುದಾದ ಕಾರಿನ ಬೆಲೆಗಿಂತ ಮೂರು ಪಟ್ಟು ಹೆಚ್ಚು ಬೆಲೆಯನ್ನು ಹೊಂದಿದೆ. ರಾಜ್ಯ ಸರ್ಕಾರವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಮಯದಲ್ಲಿ ಈ ಕಾರನ್ನು ನೀಡಲಾಗಿದೆ.

ದೇವೇಗೌಡರಿಗೆ ದುಬಾರಿ ಬೆಲೆಯ ಐಷಾರಾಮಿ ಕಾರು ನೀಡಿದ ರಾಜ್ಯ ಸರ್ಕಾರ

ಈ ಕಾರಣಕ್ಕೆ ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಟೀಕಿಸಲಾಗುತ್ತಿದೆ. ನಿಯಮಗಳ ಪ್ರಕಾರ, ಚುನಾಯಿತ ಪ್ರತಿನಿಧಿ, ಕ್ಯಾಬಿನೆಟ್ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರು ರೂ.22 ಲಕ್ಷವರೆಗಿನ ಮೌಲ್ಯದ ಕಾರುಗಳನ್ನು ಖರೀದಿಸಲು ಅವಕಾಶವಿದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ದೇವೇಗೌಡರಿಗೆ ದುಬಾರಿ ಬೆಲೆಯ ಐಷಾರಾಮಿ ಕಾರು ನೀಡಿದ ರಾಜ್ಯ ಸರ್ಕಾರ

ನಿಗಮ ಮಂಡಳಿಯ ಅಧ್ಯಕ್ಷರು ರೂ.11 ಲಕ್ಷಗಳ ಮೌಲ್ಯದ ಕಾರುಗಳನ್ನು ಮಾತ್ರ ಖರೀದಿಸಬಹುದು. ಆದರೆ ಮುಖ್ಯಮಂತ್ರಿಗಳ ವಾಹನ ಖರೀದಿಯ ಮೇಲೆ ಯಾವುದೇ ಮಿತಿಯಿಲ್ಲ. ಮಾಜಿ ಪ್ರಧಾನ ಮಂತ್ರಿಗಳಿಗೆ ಈ ಕಾರು ನೀಡಲು ನಿಯಮವನ್ನು ಬದಲಿಸಲಾಗಿದೆ ಎಂದು ಹೇಳಲಾಗಿದೆ.

ದೇವೇಗೌಡರಿಗೆ ದುಬಾರಿ ಬೆಲೆಯ ಐಷಾರಾಮಿ ಕಾರು ನೀಡಿದ ರಾಜ್ಯ ಸರ್ಕಾರ

ದೇವೇಗೌಡರಿಗಾಗಿ ವೊಲ್ವೋ ಎಕ್ಸ್‌ಸಿ 60 ಖರೀದಿಸಲಾಗಿದೆ. ಈ ಕಾರಿನ ಬೆಲೆ ರೂ.76 ಲಕ್ಷಗಳಾಗಿದೆ. ಸರ್ಕಾರಿ ಕಾರು ಎಂಬ ಕಾರಣಕ್ಕೆ ಈ ಕಾರಿಗೆ ತೆರಿಗೆ ನೀಡಲಾಗಿದ್ದು, ಈ ಕಾರಿನ ಆನ್ ರೋಡ್ ಬೆಲೆ ರೂ.60 ಲಕ್ಷಗಳಾಗಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ದೇವೇಗೌಡರಿಗೆ ದುಬಾರಿ ಬೆಲೆಯ ಐಷಾರಾಮಿ ಕಾರು ನೀಡಿದ ರಾಜ್ಯ ಸರ್ಕಾರ

ದೇವೇಗೌಡರು ಆರಾಮದಾಯಕವಾದ ಕಾರನ್ನು ಬಯಸಿದ್ದರು ಎಂದು ಹೇಳಲಾಗುತ್ತಿದೆ. ಕರ್ನಾಟಕದಿಂದ ಪ್ರಧಾನಿ ಹುದ್ದೆಗೇರಿದ ಏಕೈಕ ವ್ಯಕ್ತಿ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಈ ಕಾರು ಖರೀದಿಗೆ ಒಪ್ಪಿಗೆ ನೀಡಿದ್ದಾರೆ.

ದೇವೇಗೌಡರಿಗೆ ದುಬಾರಿ ಬೆಲೆಯ ಐಷಾರಾಮಿ ಕಾರು ನೀಡಿದ ರಾಜ್ಯ ಸರ್ಕಾರ

ಕರ್ನಾಟಕದ ಬಹುತೇಕ ಮಂತ್ರಿಗಳು ಹಾಗೂ ಶಾಸಕರು ಟೊಯೊಟಾ ಇನೋವಾ ಕ್ರಿಸ್ಟಾ ಎಂಪಿವಿಯನ್ನು ಬಳಸುತ್ತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರೂ.40 - 45 ಲಕ್ಷ ಬೆಲೆಯ ಟೊಯೋಟಾ ಫಾರ್ಚೂನರ್ ಬೆಲೆಯ ಎಸ್ ಯುವಿಗಳನ್ನು ಬಳಸುತ್ತಿದ್ದಾರೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ದೇವೇಗೌಡರಿಗೆ ದುಬಾರಿ ಬೆಲೆಯ ಐಷಾರಾಮಿ ಕಾರು ನೀಡಿದ ರಾಜ್ಯ ಸರ್ಕಾರ

ದೇವೇಗೌಡರಿಗೆ ನೀಡಲಾಗಿರುವ ಈ ಹೊಸ ಕಾರನ್ನು ರಾಜ್ಯದ ಮುಖ್ಯ ಕಾರ್ಯದರ್ಶಿಯವರ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಮುಖ್ಯಮಂತ್ರಿಯವರು ಬಳಸುತ್ತಿರುವುದಕ್ಕಿಂತ ದುಬಾರಿ ಬೆಲೆಯ ಕಾರನ್ನು ಮಾಜಿ ಪ್ರಧಾನ ಮಂತ್ರಿಗಳಿಗೆ ನೀಡಲಾಗಿದೆ.

ದೇವೇಗೌಡರಿಗೆ ದುಬಾರಿ ಬೆಲೆಯ ಐಷಾರಾಮಿ ಕಾರು ನೀಡಿದ ರಾಜ್ಯ ಸರ್ಕಾರ

ವೊಲ್ವೋ ಕಾರುಗಳು ಐಷಾರಾಮಿತನಕ್ಕೆ ಹೆಸರುವಾಸಿಯಾಗಿವೆ. ಇತ್ತೀಚೆಗೆ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರನ್ನು ಖರೀದಿಸಿದ್ದಾರೆ. ಅಮಿತಾಬ್ ಬಚ್ಚನ್ ರವರಿಗೆ ಅವರ ಮುಂಬೈ ನಿವಾಸದಲ್ಲಿ ಈ ಕಾರನ್ನು ವಿತರಿಸಲಾಯಿತು.

Most Read Articles
 
Kannada
English summary
Karnataka government gives luxury Volvo car to Devegowda. Read in Kannada.
Story first published: Friday, September 25, 2020, 19:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X