ಲಾಕ್ ಡೌನ್ ಉದ್ದೇಶವನ್ನೇ ಮರೆತ ಶಾಸಕ..!

ಕೋವಿಡ್ -19, ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ. ವಿಶ್ವಾದ್ಯಂತ, 7 ಲಕ್ಷಕ್ಕೂ ಹೆಚ್ಚು ಜನರು ಕೋವಿಡ್ -19 ವೈರಸ್ ಸೋಂಕಿಗೆ ಒಳಗಾಗಿದ್ದಾರೆ. 33 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಚೀನಾ, ಇಟಲಿ, ಅಮೆರಿಕಾ, ಇಂಗ್ಲೆಂಡ್ ಹಾಗೂ ಇರಾನ್ ದೇಶಗಳು ಕೋವಿಡ್ -19ನಿಂದಾಗಿ ಹೆಚ್ಚು ಹಾನಿಗೊಳಗಾಗಿವೆ.

ಲಾಕ್ ಡೌನ್ ಉದ್ದೇಶವನ್ನೇ ಮರೆತ ಶಾಸಕ..!

ಭಾರತದಲ್ಲಿ ಕೋವಿಡ್ -19 ವೈರಸ್ ಹರಡುವುದನ್ನು ತಡೆಗಟ್ಟಲು 21 ದಿನಗಳ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಬಸ್, ರೈಲು ಸೇವೆಗಳನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ. ಅಗತ್ಯ ವಸ್ತುಗಳನ್ನು ಸಾಗಿಸುವ ಟ್ರಕ್‌ಗಳಂತಹ ವಾಹನಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಜನ ಮನೆ ಬಿಟ್ಟು ಹೊರಗೆ ಬರದಂತೆ ನಿರ್ಬಂಧ ವಿಧಿಸಲಾಗಿದೆ.

ಲಾಕ್ ಡೌನ್ ಉದ್ದೇಶವನ್ನೇ ಮರೆತ ಶಾಸಕ..!

ಆದರೆ ತುರ್ತು ಸೇವೆಯ ಕೆಲಸದಲ್ಲಿ ಇರುವವರು ಮನೆಗಳಿಂದ ಹೊರಬರಬಹುದು. ಹಲವರು ಈ ಲಾಕ್ ಡೌನ್ ಅನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದಾರೆ. ಜನರ ಸಂಚಾರವಿಲ್ಲದೇ ರಸ್ತೆಗಳು ನಿರ್ಜನವಾಗಿದ್ದು, ಬಿಕೋ ಎನ್ನುತ್ತಿವೆ. ಇದನ್ನು ದುರ್ಬಳಕೆ ಮಾಡಿಕೊಂಡಿರುವ ಕೆಲವರು ತಮ್ಮ ಕಾರು ಹಾಗೂ ಬೈಕುಗಳಲ್ಲಿ ಸುತ್ತಾಡುತ್ತಿದ್ದಾರೆ.

ಲಾಕ್ ಡೌನ್ ಉದ್ದೇಶವನ್ನೇ ಮರೆತ ಶಾಸಕ..!

ಇದರಿಂದಾಗಿ ಲಾಕ್ ಡೌನ್ ನ ಉದ್ದೇಶವೇ ವ್ಯರ್ಥವಾಗಿದೆ. ಈ ಕಾರಣಕ್ಕೆ ವಿನಾಕಾರಣ ರಸ್ತೆಗಳಲ್ಲಿ ಅಡ್ಡಾಡುತ್ತಿರುವವರ ವಿರುದ್ಧ ಪೊಲೀಸರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಕೆಲವರಿಗೆ ದಂಡ ವಿಧಿಸಿದರೆ, ಇನ್ನೂ ಕೆಲವರ ಮೇಲೆ ಕೇಸುಗಳನ್ನು ಹಾಕಲಾಗುತ್ತಿದೆ.

ಲಾಕ್ ಡೌನ್ ಉದ್ದೇಶವನ್ನೇ ಮರೆತ ಶಾಸಕ..!

ಸಾಮಾನ್ಯ ಜನ ನಿಯಮಗಳನ್ನು ಉಲ್ಲಂಘಿಸಿದಾಗ, ಜನಪ್ರತಿನಿಧಿಗಳು ಅವರನ್ನು ಎಚ್ಚರಿಸಬೇಕು. ಆದರೆ ಜನರನ್ನು ಎಚ್ಚರಿಸಬೇಕಾದವರೇ ನಿಯಮಗಳನ್ನು ಉಲ್ಲಂಘಿಸಿದರೆ ಹೇಗೆ ? ಜನಪ್ರತಿನಿಧಿಯೊಬ್ಬರು ಲಾಕ್ ಡೌನ್ ನ ಉದ್ದೇಶವನ್ನೇ ಉಲ್ಲಂಘಿಸಿ ತಮ್ಮ ಮೊಮ್ಮಗನೊಂದಿಗೆ ಸಾರ್ವಜನಿಕ ರಸ್ತೆಯಲ್ಲಿ ಆಟವಾಡಿದ್ದಾರೆ. ಈ ವೇಳೆ ಅವರಾಗಲಿ, ಅವರ ಮೊಮ್ಮಗನಾಗಲಿ ಮುಖಕ್ಕೆ ಮಾಸ್ಕ್ ಧರಿಸಿರಲಿಲ್ಲ.

ಲಾಕ್ ಡೌನ್ ಉದ್ದೇಶವನ್ನೇ ಮರೆತ ಶಾಸಕ..!

ಭಾರತದಲ್ಲಿರುವ ರಾಜಕಾರಣಿಗಳು ನಿಯಮಗಳನ್ನು ಉಲ್ಲಂಘಿಸುವುದು ಹೊಸ ವಿಷಯವಲ್ಲ. ಆದರೆ ಕರೋನಾ ವೈರಸ್ ಹರಡುವುದನ್ನು ತಡೆಯಲು ವಿಧಿಸಲಾಗಿರುವ ಲಾಕ್ ಡೌನ್ ಉದ್ದೇಶವನ್ನೇ ಹಾಳುಗೆಡವಲಾಗಿದೆ. ಕರೋನಾ ವೈರಸ್‌ನ ಗಂಭೀರತೆಯನ್ನು ಜನ ಪ್ರತಿನಿಧಿಗಳೇ ಅರ್ಥಮಾಡಿಕೊಳ್ಳದಿದ್ದರೆ ಇನ್ನೂ ಸಾಮಾನ್ಯ ಜನರು ಹೇಗೆ ಅರ್ಥಮಾಡಿಕೊಳ್ಳುತ್ತಾರೆ?

MOST READ: ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಲಾಕ್ ಡೌನ್ ಉದ್ದೇಶವನ್ನೇ ಮರೆತ ಶಾಸಕ..!

ಅಂದ ಹಾಗೆ ತಮ್ಮ ಮೊಮ್ಮಗನೊಂದಿಗೆ ಸಾರ್ವಜನಿಕ ರಸ್ತೆಯಲ್ಲಿ ಆಟವಾಡಿ ಲಾಕ್ ಡೌನ್ ಉದ್ದೇಶವನ್ನು ಹಾಳು ಮಾಡಿದ ಜನಪ್ರತಿನಿಧಿಯ ಹೆಸರು ಎಸ್.ಆರ್.ಶ್ರೀನಿವಾಸ್. ಇವರು ಗುಬ್ಬಿ ಕ್ಷೇತ್ರದ ಶಾಸಕರು. ಈ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದರು.

MOST READ: ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?

ಎಸ್.ಆರ್ ಶ್ರೀನಿವಾಸ್ ರವರು ತಮ್ಮ ಮೊಮ್ಮಗನೊಂದಿಗೆ ರಿಮೋಟ್ ಕಂಟ್ರೋಲ್ ಆಟಿಕೆ ಕಾರಿನಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಆಟವಾಡುತ್ತಿರುವ ವೀಡಿಯೊ ಈಗ ವೈರಲ್ ಆಗಿದೆ. ಕಳೆದ ಕೆಲವು ದಿನಗಳಿಂದ, ವಿನಾ ಕಾರಣ ಸಾರ್ವಜನಿಕ ರಸ್ತೆಗಳಲ್ಲಿ ಓಡಾಡುವ ಜನರಿಗೆ ಲಾಠಿ ರುಚಿ ತೋರಿಸುತ್ತಿದ್ದಾರೆ. ಅಗತ್ಯ ಕೆಲಸಕ್ಕಾಗಿ ಹೊರಬಂದ ಹಲವರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ.

MOSTREAD: ವಾಹನ ಉತ್ಪಾದನೆ ಸ್ಥಗಿತದಿಂದಾಗಿ ಸಾವಿರಾರು ಕೋಟಿ ನಷ್ಟ

ಲಾಕ್ ಡೌನ್ ಉದ್ದೇಶವನ್ನೇ ಮರೆತ ಶಾಸಕ..!

ಆದರೆ ನಿಯಮಗಳನ್ನು ಉಲ್ಲಂಘಿಸಿ ತನ್ನ ಮೊಮ್ಮಗನೊಂದಿಗೆ ಆಟವಾಡಿದ ಜನಪ್ರತಿನಿಧಿಯ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಇದಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದೇ ಎಂಬುದನ್ನೂ ಕಾದು ನೋಡಬೇಕಿದೆ.

Most Read Articles

Kannada
English summary
Karnataka MLA violates covid 19 lockdown, uses empty roads to play with grandson. Read in Kannada.
Story first published: Monday, March 30, 2020, 14:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X