ಲಾಕ್‌ಡೌನ್ ನಡುವೆಯೂ ಮಾನವೀಯತೆ ಮೆರೆದ ಬೆಂಗಳೂರು ಪೊಲೀಸ್

ಮಹಾಮಾರಿ ಕರೋನಾ ವೈರಸ್ ತಡೆಗಟ್ಟಲು ದೇಶಾದ್ಯಂತ ಲಾಕ್‌ಡೌನ್ ವಿಧಿಸಲಾಗಿದ್ದು, ಅನಿವಾರ್ಯ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರು ಕೂಡಾ ಒಂದಿಲ್ಲಾ ಒಂದು ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಲುಕುವಂತಾಗಿದೆ.

ಲಾಕ್‌ಡೌನ್ ನಡುವೆಯೂ ಮಾನವೀಯತೆ ಮೆರೆದ ಬೆಂಗಳೂರು ಪೊಲೀಸ್

ಲಾಕ್‌ಡೌನ್ ವೇಳೆ ಅಗತ್ಯ ವಸ್ತುಗಳ ಕೊರತೆಯಿಂದಾಗಿ ಜನಸಾಮಾನ್ಯರು ಒಂದು ಕಡೆ ಪರದಾಟುವಂತಾಗಿದ್ದರೆ ಮತ್ತೊಂದು ಕಡೆಗೆ ಕರೋನಾ ವೈರಸ್ ಸೋಂಕಿತರನ್ನು ಹೊರತುಪಡಿಸಿ ಸಾಮಾನ್ಯ ರೋಗಿಗಳು ಸೂಕ್ತ ವೈದ್ಯಕೀಯ ಸೌಲಭ್ಯ ಮತ್ತು ಚಿಕಿತ್ಸೆ ಸಿಗದೆ ಕಂಗಾಲಾಗಿದ್ದಾರೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲೂ ಕೂಡಾ ಮಾನವೀಯತೆ ಮೆರೆದಿರುವ ಬೆಂಗಳೂರು ನಗರ ಪೊಲೀಸ್ ಪೇದೆಯೊಬ್ಬರು ಸ್ಕೂಟರ್ ಮೂಲಕ ನೂರಾರು ಕಿ.ಮೀ ಪ್ರಯಾಣಿಸಿ ಕ್ಯಾನ್ಸರ್ ರೋಗಿರೊಬ್ಬರಿಗೆ ಸಮಯಕ್ಕೆ ಸರಿಯಾಗಿ ಔಷಧಿ ತಲುಪಿಸಿ ಜನ ಮೆಚ್ಚುಗೆಗೆ ಕಾರಣರಾಗಿದ್ದಾರೆ.

ಲಾಕ್‌ಡೌನ್ ನಡುವೆಯೂ ಮಾನವೀಯತೆ ಮೆರೆದ ಬೆಂಗಳೂರು ಪೊಲೀಸ್

ವೈರಸ್ ಹರಡದಂತೆ ಕಟ್ಟುನಿಟ್ಟಿನ ಕ್ರಮ ಜಾರಿಗೆ ತಂದ ಹಿನ್ನಲೆಯಲ್ಲಿ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣ ಬಂದ್ ಆಗಿದ್ದು, ಸಾರಿಗೆ ಸಂಪರ್ಕವಿಲ್ಲದೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.

ಲಾಕ್‌ಡೌನ್ ನಡುವೆಯೂ ಮಾನವೀಯತೆ ಮೆರೆದ ಬೆಂಗಳೂರು ಪೊಲೀಸ್

ಈ ವೇಳೆ ಕ್ಯಾನ್ಸರ್ ರೋಗಿಯೊಬ್ಬರಿಗೆ ಸೂಕ್ತವಾದ ಔಷಧಿ ಸಿಗದೆ ಪರದಾಡುವಂತಾಗಿದ್ದು, ತುರ್ತು ಪರಿಸ್ಥಿತಿಯಲ್ಲೂ ಮಾನವೀಯತೆ ಮೆರೆದ ಪೊಲೀಸರೊಬ್ಬರು ಬೆಂಗಳೂರಿನಿಂದ ದೂರದ ಧಾರವಾಡಕ್ಕೆ ಸ್ಕೂಟರ್ ಮೂಲಕ ಪ್ರಯಾಣಿಸಿ ಔಷಧಿ ತಲುಪಿಸಿ ಬಂದಿದ್ದಾರೆ.

MOST READ: ಲಾಕ್ ಡೌನ್ ವೇಳೆ ಜಾಲಿ ರೈಡ್ ಮಾಡುತ್ತಿದ್ದ ಬೈಕ್ ಸವಾರನಿಗೆ ಕೊನೆಗೆ ಶಾಕ್..!

ಲಾಕ್‌ಡೌನ್ ನಡುವೆಯೂ ಮಾನವೀಯತೆ ಮೆರೆದ ಬೆಂಗಳೂರು ಪೊಲೀಸ್

ಏಪ್ರಿಲ್​​ 10ರಂದು ಬೆಂಗಳೂರಿನಿಂದ ಧಾರವಾಡಕ್ಕೆ ಪ್ರಯಾಣ ಬೆಳೆಸಿದ್ದ ಪೊಲೀಸ್​​ ಪೇದೆ ಎಸ್ ಕುಮಾರಸ್ವಾಮಿ ಅವರು​ ಒಟ್ಟು 860 ಕಿಲೋ ಮೀಟರ್ ಸ್ಕೂಟರ್ ಚಾಲನೆ ಮಾಡಿದ್ದು, ಸೂಕ್ತವಾದ ಔಷಧಿ ಸಿಗದೆ ಪರದಾಡುತ್ತಿದ್ದ ಕ್ಯಾನ್ಸರ್ ರೋಗಿಯ ಪ್ರಾಣ ಉಳಿಸುವಲ್ಲಿ ನೆರವಾಗಿದ್ದಾರೆ.

ಲಾಕ್‌ಡೌನ್ ನಡುವೆಯೂ ಮಾನವೀಯತೆ ಮೆರೆದ ಬೆಂಗಳೂರು ಪೊಲೀಸ್

ಬೆಂಗಳೂರಿನಲ್ಲಿ ಮಾತ್ರ ಲಭ್ಯವಿದ್ದ ಕ್ಯಾನ್ಸರ್ ಔಷಧಿಯನ್ನು ಧಾರವಾಡವಾಡಕ್ಕೆ ತರಿಸಿಕೊಳ್ಳಲು ಯತ್ನಿಸುತ್ತಿದ್ದಾಗ ರೋಗಿ ಸಹಾಯಕ್ಕೆ ಧಾವಿಸಿದ ಪೊಲೀಸ್ ಪೇದೆ ಕುಮಾರಸ್ವಾಮಿ ಅವರು, ಔಷಧಿಯ ಮಾಹಿತಿ ಪಡೆದುಕೊಂಡ ನಂತರ ಆನ್‌ಲೈನ್ ಮೂಲಕ ಖರೀದಿಸಿ ತಲುಪಿಸಿ ಬಂದಿದ್ದಾರೆ.

MOST READ: ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ನ್ಯಾಯಾಧೀಶರ ಪತ್ನಿ

ಲಾಕ್‌ಡೌನ್ ನಡುವೆಯೂ ಮಾನವೀಯತೆ ಮೆರೆದ ಬೆಂಗಳೂರು ಪೊಲೀಸ್

ಲಾಕ್‌ಡೌನ್ ನಡುವೆ ಜನರನ್ನು ಹೊರಗೆ ಹೋಗದಂತೆ ಎಚ್ಚರ ವಹಿಸುವುದರ ಜೊತೆಗೆ ಹಲವಾರು ಮಾನವೀಯತೆ ಕಾರ್ಯಗಳನ್ನು ಮಾಡಿರುವ ಬೆಂಗಳೂರು ಪೊಲೀಸರು ಕರ್ತವ್ಯ ಜೊತೆಗೆ ಅಗತ್ಯವಿರುವ ಜನರ ಸಹಾಯಕ್ಕೆ ಬಂದಿದ್ದನ್ನು ಮಾತ್ರ ಯಾರು ಮರೆಯುವಂತಿಲ್ಲ.

ಲಾಕ್‌ಡೌನ್ ನಡುವೆಯೂ ಮಾನವೀಯತೆ ಮೆರೆದ ಬೆಂಗಳೂರು ಪೊಲೀಸ್

ಇದೇ ಕಾರಣಕ್ಕೆ ಪೊಲೀಸ್ ಪೇದೆ ಕುಮಾರಸ್ವಾಮಿಯವರ ಮಾನವೀಯ ಕಾರ್ಯವನ್ನು ಮೆಚ್ಚಿದ ಬೆಂಗಳೂರು ನಗರ ಪೊಲೀಸ್​​ ಆಯುಕ್ತ ಭಾಸ್ಕರ್​​ ರಾವ್ ಕೂಡಾ​​​​ ಮೆಚ್ಚುಗೆ ವ್ಯಕ್ತಪಡಿಸಿ ಜನಪರ ಕಾಳಜಿ ತೊರಿದ್ದಕ್ಕೆ ಸನ್ಮಾನ ಮಾಡಿದ್ದಾರೆ.

MOST READ: ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..!

ಲಾಕ್‌ಡೌನ್ ನಡುವೆಯೂ ಮಾನವೀಯತೆ ಮೆರೆದ ಬೆಂಗಳೂರು ಪೊಲೀಸ್

ಇನ್ನು ವೈರಸ್ ತೊಲಗಿಸಲು ಆಸ್ಪತ್ರೆಗಳಲ್ಲಿ ವೈದ್ಯರು ಹೋರಾಟ ನಡೆಸುತ್ತಿದ್ದರೆ ವೈರಸ್ ದಾಳಿಗೆ ಜನಸಾಮಾನ್ಯರು ತುತ್ತಾಗದಂತೆ ತಮ್ಮ ಪ್ರಾಣ ಪಣಕ್ಕಿಟ್ಟು ಎಚ್ಚರ ವಹಿಸಿರುವ ಪೊಲೀಸರು ಕರ್ತವ್ಯ ಜೊತೆಗೆ ಮಾನವೀಯ ಕಾರ್ಯಗಳನ್ನು ಸಹ ಮಾಡುತ್ತಿದ್ದು, ಈ ನಡುವೆ ಆರಕ್ಷರ ಮೇಲೆ ಹೆಲ್ಲೆ ಮಾಡುವ ಅಮಾನವೀಯ ಪ್ರಕರಣಗಳು ಹೆಚ್ಚುತ್ತಿರುವುದು ನಿಜಕ್ಕೂ ದುರಂತವೇ ಸರಿ.

Most Read Articles

Kannada
Read more on ಪೊಲೀಸ್ police
English summary
Bengaluru Police Officer Rides Honda Activa For 860 Kms To Deliver Medicine During Covid-19 Lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X