Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!
ಭಾರತದಲ್ಲಿರುವ ಪೊಲೀಸರು ದ್ವಿಚಕ್ರ ವಾಹನಗಳಿಗೆ ದಂಡ ವಿಧಿಸುವುದರಲ್ಲಿ ಎತ್ತಿದ ಕೈ. ಅದರಲ್ಲೂ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ಶಬ್ದವನ್ನುಂಟು ಮಾಡುವ ಬೈಕುಗಳಿಗೆ ಅಥವಾ ದುಬಾರಿ ಬೆಲೆಯ ಬೈಕುಗಳಿಗೆ ದಂಡವನ್ನು ವಿಧಿಸುತ್ತಲೇ ಇರುತ್ತಾರೆ. ಹೆಚ್ಚು ಶಬ್ದವನ್ನುಂಟು ಮಾಡುವ ಬೈಕುಗಳು ಸಹಜವಾಗಿಯೇ ಪೊಲೀಸರ ಗಮನ ಸೆಳೆಯುತ್ತವೆ.

ಈ ರೀತಿಯಾಗಿ ಅತಿಯಾಗಿ ಶಬ್ದವನ್ನುಂಟು ಮಾಡುತ್ತಿದ್ದ ಕವಾಸಕಿ ನಿಂಜಾ ಝಡ್ಎಕ್ಸ್ 10 ಆರ್ ಬೈಕ್ ಸವಾರನಿಗೆ ದಂಡ ವಿಧಿಸಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು. ಈ ವೀಡಿಯೊವನ್ನು ಡಿಸಿ ಡೇಸ್ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದೆ. ಈ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ವೀಡಿಯೊವನ್ನು ಬೈಕ್ ಚಾಲನೆ ಮಾಡುತ್ತಿದ್ದ ದೀಪಕ್ ಚೌಹಾನ್ರವರ ಹೆಲ್ಮೆಟ್ನಲ್ಲಿದ್ದ ಕ್ಯಾಮರಾದಿಂದ ಚಿತ್ರಿಸಲಾಗಿದೆ. ಅವರು ಚಾಲನೆ ಮಾಡುತ್ತಿದ್ದ ಬೈಕಿನಲ್ಲಿ ಹಿಂಬದಿ ಸವಾರನೂ ಸಹ ಇದ್ದನು.
ಪೊಲೀಸರು ತಡೆದು ನಿಲ್ಲಿಸಿದ ಕವಾಸಕಿ ನಿಂಜಾ ಝಡ್ಎಕ್ಸ್ 10 ಆರ್ ಜೋರಾಗಿ ಶಬ್ದ ಮಾಡುವ ಎಸ್ಸಿ ಪ್ರಾಜೆಕ್ಟ್ ಎಕ್ಸಾಸ್ಟ್ ಹೊಂದಿತ್ತು. ಆದರೆ ಸ್ಥಳದಲ್ಲಿದ್ದ ಪೊಲೀಸ್ ಬೈಕಿನಲ್ಲಿ ದೋಷಯುಕ್ತ ನಂಬರ್ ಪ್ಲೇಟ್ ಇದ್ದ ಕಾರಣ ಬೈಕ್ ಅನ್ನು ತಡೆದು ನಿಲ್ಲಿಸಿದ್ದಾರೆ.

ನಂತರ ಡ್ರೈವಿಂಗ್ ಲೈಸೆನ್ಸ್ ಹಾಗೂ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ನೀಡುವಂತೆ ಕೇಳಿದ್ದಾರೆ. ನಂತರ ಬೈಕ್ ಸವಾರನನ್ನು ಇಂಟರ್ಸೆಪ್ಟರ್ನಲ್ಲಿ ಕುಳಿತಿರುವ ಹಿರಿಯ ಪೊಲೀಸ್ ಅಧಿಕಾರಿಯ ಬಳಿ ಕಳುಹಿಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿ ಹೇಳುವಂತೆ ಬೈಕಿನಲ್ಲಿ ಆಫ್ಟರ್ ಮಾರ್ಕೆಟ್ ಲೌಡ್ ಎಕ್ಸಾಸ್ಟ್ ಅಳವಡಿಸಲಾಗಿದೆ. ಆದರೆ ಸವಾರನು ನಂಬರ್ ಪ್ಲೇಟ್ಗಾಗಿ ಅವನನ್ನು ನಿಲ್ಲಿಸಲಾಗಿದೆ ಎಂದು ವಾದಿಸುತ್ತಾನೆ. ಇಷ್ಟೆಲ್ಲಾ ನಡೆದ ನಂತರ ಪೊಲೀಸರು ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್ ಹೊಂದಿರುವ ಕಾರಣಕ್ಕೆ ಬೈಕ್ ಸವಾರನಿಗೆ ದಂಡ ವಿಧಿಸಿರುವ ಚಲನ್ ನೀಡುತ್ತಾರೆ.

ಕಾನೂನು ಪ್ರಕಾರ ಯಾವುದೇ ವಾಹನದಲ್ಲಿ ಎರಡು ಭಿನ್ನವಾದ ದೋಷಗಳಿದ್ದರೆ, ಪೊಲೀಸರು ವಾಹನದ ಮಾಲೀಕರಿಗೆ ಎರಡು ವಿಭಿನ್ನವಾದ ದಂಡಗಳನ್ನು ವಿಧಿಸಬಹುದು. ಆದರೆ, ಈ ವೀಡಿಯೊದಲ್ಲಿ ತಪ್ಪು ತಿಳುವಳಿಕೆಯಿಂದಾಗಿ, ಪೊಲೀಸರು ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್ ಗೆ ಮಾತ್ರ ದಂಡ ವಿಧಿಸಿದ್ದಾರೆ.

ಎಕ್ಸಾಸ್ಟ್ ದೋಷಕ್ಕಾಗಿ ರೂ.1,100 ದಂಡ ವಿಧಿಸಲಾಗಿದೆ. ಆದರೆ ದೋಷಯುಕ್ತ ನಂಬರ್ ಪ್ಲೇಟ್ಗಾಗಿ ಯಾವುದೇ ದಂಡವನ್ನು ವಿಧಿಸಿಲ್ಲ. ಸೂಪರ್ಬೈಕುಗಳು ಹೆಚ್ಚು ಶಬ್ದವನ್ನುಂಟು ಮಾಡುವ ಕಾರಣಕ್ಕೆ ಸುಲಭವಾಗಿ ಪೊಲೀಸರ ಗಮನವನ್ನು ಸೆಳೆಯುತ್ತವೆ.
MOST READ: ಭಾರತದಲ್ಲಿ ಐಕಾನಿಕ್ ಯಜ್ಡಿ ಬೈಕ್ಗಳ ಮರುಬಿಡುಗಡೆ ಪಕ್ಕಾ

ಈ ಪರಿಸ್ಥಿತಿಯು ಭಾರತದಲ್ಲೆಡೆ ಬಹುತೇಕ ಒಂದೇ ಆಗಿದೆ. ಗಮನಿಸಬೇಕಾದ ಸಂಗತಿಯೆಂದರೆ, ಮೋಟಾರ್ ವೆಹಿಕಲ್ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದ್ದು, ಇತ್ತೀಚಿಗೆ ಹೊಸ ಕಾಯ್ದೆ ಜಾರಿಗೆ ಬಂದಿದೆ. ಹೊಸ ಕಾಯ್ದೆಯ ಪ್ರಕಾರ ದಂಡದ ಪ್ರಮಾಣವನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ.
MOST READ: ಹೊಸ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಬಿಡುಗಡೆಗೊಳಿಸಿದ ಹೀರೋ ಎಲೆಕ್ಟ್ರಿಕ್

ಬಹುತೇಕ ಸಂದರ್ಭಗಳಲ್ಲಿ, ಪೊಲೀಸರು ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್ ಅನ್ನು ತೆಗೆದುಹಾಕುತ್ತಾರೆ, ಇಲ್ಲವೇ ಬೈಕುಗಳನ್ನು ವಶಕ್ಕೆ ಪಡೆಯುತ್ತಾರೆ. ಮತ್ತೊಮ್ಮೆ ಈ ರೀತಿಯಾಗಿ ಎಕ್ಸಾಸ್ಟ್ ಬಳಸುವುದಿಲ್ಲವೆಂಬ ಕಾರಣಕ್ಕೆ ಈ ರೀತಿಯಾಗಿ ಎಕ್ಸಾಸ್ಟ್ ವಶಕ್ಕೆ ಪಡೆಯುತ್ತಾರೆ, ಇಲ್ಲವೇ ನಾಶಪಡಿಸುತ್ತಾರೆ.
MOST READ: ಏರಿಕೆಯಾಗಲಿವೆ ಇನೋವಾ ಕ್ರಿಸ್ಟಾ ಹಾಗೂ ಫಾರ್ಚೂನರ್ ದರಗಳು

ಇಂತಹ ಪ್ರಕರಣಗಳು ದೇಶದ ಪ್ರಮುಖ ನಗರಗಳಲ್ಲಿ ಸಾಕಷ್ಟು ಬಾರಿ ಜರುಗಿವೆ. ಆದರೆ ಈ ವೀಡಿಯೊದಲ್ಲಿರುವ ಕವಾಸಕಿ ನಿಂಜಾ ಝಡ್ಎಕ್ಸ್ 10 ಆರ್ ಬೈಕಿನ ಎಕ್ಸಾಸ್ಟ್ ಅನ್ನು ತೆಗೆದು ಹಾಕಿಲ್ಲ. ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್ ಗಳನ್ನು ಸಾರ್ವಜನಿಕ ರಸ್ತೆಗಳಲ್ಲಿ ಬಳಸುವುದು ಕಾನೂನುಬಾಹಿರ.

ಇದರಿಂದಾಗಿ ಭಾರೀ ಪ್ರಮಾಣದ ಶಬ್ದ ಮಾಲಿನ್ಯ ಉಂಟಾಗುತ್ತದೆ. ಇವು ನಿಗದಿಪಡಿಸಿದ ಶಬ್ದದ ಮಟ್ಟವನ್ನು ಮೀರುತ್ತವೆ. ಆದರೆ, ಭಾರತದಲ್ಲಿ ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್ ಗಳನ್ನು ಮಾರುವುದು ಹಾಗೂ ಖರೀದಿಸುವುದು ಕಾನೂನುಬದ್ಧವಾಗಿದೆ. ಇವುಗಳನ್ನು ತಮ್ಮ ಬೈಕುಗಳಲ್ಲಿ ಅಳವಡಿಸಿಕೊಳ್ಳಲೂ ಬಹುದು.

ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್ ಹೊಂದಿರುವ ವಾಹನಗಳನ್ನು ರೇಸಿಂಗ್ ಟ್ರ್ಯಾಕ್ ಅಥವಾ ಫಾರಂಹೌಸ್ನಂತಹ ಖಾಸಗಿ ಸ್ವತ್ತುಗಳಲ್ಲಿ ಬಳಸಬಹುದು. ಸಾರ್ವಜನಿಕ ರಸ್ತೆಗಳಲ್ಲಿ ಅವುಗಳನ್ನು ಬಳಸುವುದು ಕಾನೂನುಬಾಹಿರವಾಗಿದೆ.

ಅನೇಕ ರಾಜ್ಯಗಳ ಪೊಲೀಸರು ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್ ಹೊಂದಿರುವ ರಾಯಲ್ ಎನ್ಫೀಲ್ಡ್ ಬೈಕುಗಳನ್ನು ಗುರಿಯಾಗಿರಿಸಿಕೊಂಡಿದ್ದಾರೆ. ಇದುವರೆಗೂ ಈ ರೀತಿಯ ಎಕ್ಸಾಸ್ಟ್ ಗಳನ್ನು ಹೊಂದಿದ್ದ ಸಾವಿರಾರು ಬೈಕುಗಳಿಗೆ ದಂಡ ವಿಧಿಸಲಾಗಿದೆ. ಇದರ ಜೊತೆಗೆ ಪೊಲೀಸರು, ಹೆಚ್ಚಿನ ಶಬ್ದವನ್ನುಂಟು ಮಾಡುವ ಟಾಪ್ ಎಂಡ್ ಮಾದರಿಯ ಬೈಕುಗಳನ್ನು ಸಹ ಗುರಿಯಾಗಿಸಿಕೊಂಡಿದ್ದಾರೆ.

ಪೊಲೀಸರು ಕೆಲವೊಮ್ಮೆ ಬೈಕ್ಗಳ ಜೊತೆಗೆ ಬರುವ ಎಕ್ಸಾಸ್ಟ್ ಅನ್ನು ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್ ಗಳೆಂದು ತಪ್ಪಾಗಿ ಭಾವಿಸುತ್ತಾರೆ. ಆದ ಕಾರಣ ದಂಡವನ್ನು ವಿಧಿಸುವ ಮುನ್ನ ಮಾಡಿಫೈ ವಾಹನಗಳನ್ನು ಪರೀಕ್ಷಿಸುವ ಸಲುವಾಗಿ ಡೆಸಿಬಲ್ ಮೀಟರ್ಗಳಂತಹ ವೈಜ್ಞಾನಿಕ ಉಪಕರಣಗಳನ್ನು ಬಳಸುವುದು ಒಳಿತು.
Source: DC Days/YouTube