ದುಬಾರಿ ಬೆಲೆಯ ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್‌ ನಾಶಪಡಿಸಿದ ಕರ್ನಾಟಕ ಪೊಲೀಸರು

ಭಾರತದಲ್ಲಿ ಬೈಕ್ ಮಾಲೀಕರು ತಮ್ಮ ಬೈಕ್‌ಗಳಿಗೆ ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್‌ಗಳನ್ನು ಅಳವಡಿಸಿಕೊಳ್ಳುವುದು ಸಾಮಾನ್ಯ. ಈ ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್‌ಗಳು ಹೆಚ್ಚು ಶಬ್ದವನ್ನುಂಟು ಮಾಡುತ್ತವೆ.

ದುಬಾರಿ ಬೆಲೆಯ ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್‌ ನಾಶಪಡಿಸಿದ ಕರ್ನಾಟಕ ಪೊಲೀಸರು

ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್‌ಗಳು ಭಾರತದಲ್ಲಿ ಕೈಗೆಟಕುವ ಬೆಲೆಯಲ್ಲಿ ದೊರೆಯುತ್ತವೆ. ಆದರೆ ಕೆಲವು ಶೋಕಿವಾಲರು ದುಬಾರಿ ಬೆಲೆಯ ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್‌ಗಳನ್ನು ಖರೀದಿಸುತ್ತಾರೆ. ಇಂತಹ ದುಬಾರಿ ಬೆಲೆಯ ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್‌ ಅನ್ನು ಖರೀದಿಸಿ ತನ್ನ ಬೈಕಿನಲ್ಲಿ ಅಳವಡಿಸಿಕೊಂಡಿದ್ದ ವ್ಯಕ್ತಿಗೆ ಮುಂದೇನಾಯಿತು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ದುಬಾರಿ ಬೆಲೆಯ ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್‌ ನಾಶಪಡಿಸಿದ ಕರ್ನಾಟಕ ಪೊಲೀಸರು

ಭಾರತದಲ್ಲಿ ಪೊಲೀಸರು ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್‌ಗಳನ್ನು ಹೊಂದಿರುವ ವಾಹನಗಳು ಹಾಗೂ ಆ ವಾಹನಗಳ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಈ ಹಿಂದೆ ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್‌ಗಳನ್ನು ಅಳವಡಿಸಿಕೊಂಡಿದ್ದ ಅನೇಕ ಬೈಕ್ ಮಾಲೀಕರಿಗೆ ದಂಡ ವಿಧಿಸಲಾಗಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ದುಬಾರಿ ಬೆಲೆಯ ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್‌ ನಾಶಪಡಿಸಿದ ಕರ್ನಾಟಕ ಪೊಲೀಸರು

ಭಾರತದ ವಿವಿಧ ರಾಜ್ಯಗಳಲ್ಲಿ ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್‌ಗಳನ್ನು ಹೊಂದಿರುವ ಬೈಕುಗಳ ತಪಾಸಣೆ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಬೈಕ್‌ಗಳಲ್ಲಿ ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್‌ಗಳು ಪತ್ತೆಯಾದರೆ ಅಂತಹ ಬೈಕ್‌ಗಳನ್ನು ವಶಕ್ಕೆ ಪಡೆದು ಎಕಾಸ್ಟ್‌ಗಳನ್ನು ನಾಶಪಡಿಸಲಾಗುತ್ತದೆ.

ದುಬಾರಿ ಬೆಲೆಯ ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್‌ ನಾಶಪಡಿಸಿದ ಕರ್ನಾಟಕ ಪೊಲೀಸರು

ಈ ಹಿಂದೆ ರೋಡ್ ರೋಲರ್‌ಗಳನ್ನು ಬಳಸಿ ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್‌ಗಳನ್ನು ಬೃಹತ್ ಪ್ರಮಾಣದಲ್ಲಿ ನಾಶಪಡಿಸಲಾಗಿತ್ತು. ಪೊಲೀಸರು ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್‌ಗಳನ್ನು ನಾಶಪಡಿಸುವ ಅನೇಕ ವೀಡಿಯೊಗಳನ್ನು ಯುಟ್ಯೂಬ್‌ನಲ್ಲಿ ಕಾಣಬಹುದು.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ದುಬಾರಿ ಬೆಲೆಯ ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್‌ ನಾಶಪಡಿಸಿದ ಕರ್ನಾಟಕ ಪೊಲೀಸರು

ವಾಸ್ತವವಾಗಿ, ರಾಯಲ್ ಎನ್‌ಫೀಲ್ಡ್ ಬೈಕ್‌ಗಳಲ್ಲಿ ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಕರ್ನಾಟಕ ಪೊಲೀಸರು ಇತ್ತೀಚಿಗೆ ಕವಾಸಕಿ ನಿಂಜಾ ಝಡ್‌ಎಕ್ಸ್ 10 ಆರ್‌ಆರ್ ಬೈಕಿನಲ್ಲಿ ಅಳವಡಿಸಿದ್ದ ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್‌ ಅನ್ನು ನಾಶಪಡಿಸಿದ್ದಾರೆ.

ದುಬಾರಿ ಬೆಲೆಯ ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್‌ ನಾಶಪಡಿಸಿದ ಕರ್ನಾಟಕ ಪೊಲೀಸರು

ಈ ಬೈಕಿನಲ್ಲಿ ದುಬಾರಿ ಎಸ್‌ಸಿ-ಪ್ರಾಜೆಕ್ಟ್ ಎಕ್ಸಾಸ್ಟ್ ಅಳವಡಿಸಲಾಗಿತ್ತು. ಈ ಎಕ್ಸಾಸ್ಟ್ ಬೆಲೆ ಕೇಳಿದರೆ ತಲೆ ತಿರುಗುತ್ತದೆ. ಕ್ಯಾಚ್ ಎ ಮೈಲ್ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಇದರ ವೀಡಿಯೊ ಅಪ್‌ಲೋಡ್ ಮಾಡಲಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ದುಬಾರಿ ಬೆಲೆಯ ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್‌ ನಾಶಪಡಿಸಿದ ಕರ್ನಾಟಕ ಪೊಲೀಸರು

ಕವಾಸಕಿ ನಿಂಜಾ ಝಡ್‌ಎಕ್ಸ್‌ಎಕ್ಸ್ ಆರ್‌ಆರ್ ಬೈಕ್‌ ಅನ್ನು ತಡೆದು ನಿಲ್ಲಿಸಿದ ಪೊಲೀಸರು ಬೈಕಿನ ಸೌಂಡ್ ಹೆಚ್ಚಿಸುವಂತೆ ಹೇಳಿದ್ದಾರೆ. ಬೈಕಿನ ಮಾಲೀಕರಾದ ಗೌತಮ್ ಬೈಕಿನ ಶಬ್ದವನ್ನು ಹೆಚ್ಚಿಸಿದ್ದಾರೆ. ನಂತರ ಪೊಲೀಸರಿಗೆ ಬೈಕಿನಲ್ಲಿ ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್‌ ಅಳವಡಿಸಿರುವುದು ಕಂಡು ಬಂದಿದೆ.

ದುಬಾರಿ ಬೆಲೆಯ ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್‌ ನಾಶಪಡಿಸಿದ ಕರ್ನಾಟಕ ಪೊಲೀಸರು

ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್‌ ಬಳಸಿದ್ದಕ್ಕಾಗಿ ಆತನಿಗೆ ದಂಡ ವಿಧಿಸಿದ ಪೊಲೀಸರು ಹತ್ತಿರದ ಪೊಲೀಸ್ ಠಾಣೆಗೆ ಬರಲು ಸೂಚಿಸಿದ್ದಾರೆ. ಅವರು ಪೊಲೀಸ್ ಠಾಣೆಗೆ ತಲುಪಿದ ನಂತರ ಬೈಕ್‌ನಿಂದ ಎಕ್ಸಾಸ್ಟ್ ತೆಗೆಯುವಂತೆ ಹೇಳಿದ್ದಾರೆ. ಗೌತಮ್‌ರವರು ಬೈಕ್ ಮೆಕ್ಯಾನಿಕ್ ಬರುವವರೆಗೂ ಕಾಯದೇ ಸ್ವತಃ ತಾವೇ ತೆಗೆದು ಹಾಕಿದ್ದಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ದುಬಾರಿ ಬೆಲೆಯ ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್‌ ನಾಶಪಡಿಸಿದ ಕರ್ನಾಟಕ ಪೊಲೀಸರು

ಪೊಲೀಸರು ಈ ಎಸ್‌ಸಿ-ಪ್ರಾಜೆಕ್ಟ್ ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್ ಅನ್ನು ಗೌತಮ್‌ರವರಿಗೆ ಹಿಂದಿರುಗಿಸದೇ ಕೆಲವು ದಿನಗಳ ನಂತರ ಪಡೆಯಲು ಸೂಚಿಸಿದ್ದಾರೆ. ಕೆಲವು ದಿನಗಳ ನಂತರ, ಗೌತಮ್ ಅದನ್ನು ಹಿಂಪಡೆಯಲು ಪೊಲೀಸ್ ಠಾಣೆಗೆ ಹೋದಾಗ ಆ ಎಕ್ಸಾಸ್ಟ್ ಅನ್ನು ನಾಶಪಡಿಸಲಾಗಿತ್ತು.

ದುಬಾರಿ ಬೆಲೆಯ ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್‌ ನಾಶಪಡಿಸಿದ ಕರ್ನಾಟಕ ಪೊಲೀಸರು

ಹೊಸ ಮೋಟಾರು ವಾಹನ ನಿಯಮಗಳ ಪ್ರಕಾರ, ಯಾವುದೇ ಕಾನೂನುಬಾಹಿರ ಎಕ್ಸಾಸ್ಟ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. ಜೊತೆಗೆ ನಾಶಪಡಿಸಬಹುದೆಂದು ಪೊಲೀಸರು ಗೌತಮ್‌ರವರಿಗೆ ತಿಳಿಸಿದ್ದಾರೆ. ಅಂದಹಾಗೆ ಈ ಎಸ್‌ಸಿ-ಪ್ರಾಜೆಕ್ಟ್ ಎಕ್ಸಾಸ್ಟ್ ಅನ್ನು ಇಟಲಿಯಿಂದ ಆಮದು ಮಾಡಿಕೊಳ್ಳಲಾಗಿತ್ತು. ಮೂಲಗಳ ಪ್ರಕಾರ ಈ ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್‌‌ನ ಬೆಲೆ ರೂ.1 ಲಕ್ಷ.

Most Read Articles

Kannada
English summary
Kawasaki Ninja ZX10R aftermarket exhaust crushed by Karnataka Police. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X