ಜಂಟಿ ಕಾರ್ಯಾಚರಣೆ ಮೂಲಕ ಉದ್ಯಮಿಯನ್ನು ಅಪಹರಣಕಾರರಿಂದ ರಕ್ಷಿಸಿದ ಪೊಲೀಸರು

ಅಪಹರಣಕ್ಕೀಡಾಗಿದ್ದ ಉದ್ಯಮಿಯೊಬ್ಬರನ್ನು ಕರ್ನಾಟಕ ಹಾಗೂ ಕೇರಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಪೊಲೀಸರು ರಸ್ತೆಯಲ್ಲಿ ಟ್ರಕ್ ಅನ್ನು ಅಡ್ಡ ನಿಲ್ಲಿಸಿ ಒತ್ತೆಯಾಳನ್ನು ಅಪಹರಣಕಾರರಿಂದ ರಕ್ಷಿಸಿದ್ದಾರೆ.

ಜಂಟಿ ಕಾರ್ಯಾಚರಣೆ ಮೂಲಕ ಉದ್ಯಮಿಯನ್ನು ಅಪಹರಣಕಾರರಿಂದ ರಕ್ಷಿಸಿದ ಪೊಲೀಸರು

ಅಪಹರಣ ನಡೆದ 16 ಗಂಟೆಗಳಲ್ಲಿ ಪೊಲೀಸರು ಉದ್ಯಮಿಯನ್ನು ರಕ್ಷಿಸಿದ್ದಾರೆ. ಮಲಪ್ಪುರಂ ನಿವಾಸಿಯಾದ 35 ವರ್ಷದ ಅನ್ವರ್ ಎಂಬುವವರನ್ನು ಕಾಸರಗೋಡು ಜಿಲ್ಲೆಯ ಉಡುಮಾದಲ್ಲಿರುವ ಲಾಡ್ಜ್‌ನ ಹೊರಗಿನಿಂದ ನಾಲ್ವರು ಅಪಹಾರಣಕಾರರಿದ್ದ ತಂಡವು ಅಪಹರಿಸಿತ್ತು.

ಜಂಟಿ ಕಾರ್ಯಾಚರಣೆ ಮೂಲಕ ಉದ್ಯಮಿಯನ್ನು ಅಪಹರಣಕಾರರಿಂದ ರಕ್ಷಿಸಿದ ಪೊಲೀಸರು

ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಕರ್ನಾಟಕ ಪೊಲೀಸರ ನೆರವಿನಿಂದ ಕಾರ್ಯಾಚರಣೆ ನಡೆಸಿದ್ದಾರೆ. ಅನ್ವರ್, ಕರಿಪುರದ ನಿವಾಸಿಯಾದ ತಮ್ಮ ಬಾಸ್ ನಜರ್ ಎಂಬುವವರೊಂದಿಗೆ ಉದುಮಾಕ್ಕೆ ಭೇಟಿ ನೀಡಿದ್ದರು.

ಜಂಟಿ ಕಾರ್ಯಾಚರಣೆ ಮೂಲಕ ಉದ್ಯಮಿಯನ್ನು ಅಪಹರಣಕಾರರಿಂದ ರಕ್ಷಿಸಿದ ಪೊಲೀಸರು

ನಜರ್ ರಸಗೊಬ್ಬರ ಕಂಪನಿಯನ್ನು ಹೊಂದಿದ್ದಾರೆ. ರಸಗೊಬ್ಬರಗಳಿಗೆ ಕಚ್ಚಾ ಸಾಮಗ್ರಿಯಾಗಿ ಬಳಸಲು ಅವರಿಬ್ಬರು ಜಿಲ್ಲೆಯ ಕ್ಷೌರಿಕ ಅಂಗಡಿಗಳಿಂದ ಕೂದಲನ್ನು ಸಂಗ್ರಹಿಸಿ ಲಾಡ್ಜ್ ನಲ್ಲಿ ತಂಗಿದ್ದರು.

ಜಂಟಿ ಕಾರ್ಯಾಚರಣೆ ಮೂಲಕ ಉದ್ಯಮಿಯನ್ನು ಅಪಹರಣಕಾರರಿಂದ ರಕ್ಷಿಸಿದ ಪೊಲೀಸರು

ಅವರ ಬಳಿ ಅಪಾರ ಪ್ರಮಾಣದ ಹಣವಿದೆ ಎಂದು ತಿಳಿದ ಲಾಡ್ಜ್'ನ ಸಹಾಯಕ ಅಪಹರಣಕಾರರಿಗೆ ಮಾಹಿತಿ ನೀಡಿದ್ದಾನೆ. ಅಪಹರಣಕಾರರ ಗ್ಯಾಂಗ್ ಅವರನ್ನು ಅಪಹರಿಸಲು ಬಂದಾಗ ನಜರ್ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.

ಜಂಟಿ ಕಾರ್ಯಾಚರಣೆ ಮೂಲಕ ಉದ್ಯಮಿಯನ್ನು ಅಪಹರಣಕಾರರಿಂದ ರಕ್ಷಿಸಿದ ಪೊಲೀಸರು

ಆದರೆ ಅನ್ವರ್ ಅಪಹರಣಕಾರರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಅವರ ಬಳಿ ಯಾವುದೇ ಹಣವಿಲ್ಲವೆಂದು ತಿಳಿದ ಅಪಹರಣಕಾರರು ಅವರನ್ನು ಬಿಡುಗಡೆಗೊಳಿಸಲು ರೂ. 2 ಲಕ್ಷ ನೀಡಬೇಕೆಂದು ಅನ್ವರ್'ರವರ ಪತ್ನಿಗೆ ಅನ್ವರ್'ರವರ ಮೊಬೈಲ್'ನಿಂದಲೇ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ.

ಜಂಟಿ ಕಾರ್ಯಾಚರಣೆ ಮೂಲಕ ಉದ್ಯಮಿಯನ್ನು ಅಪಹರಣಕಾರರಿಂದ ರಕ್ಷಿಸಿದ ಪೊಲೀಸರು

ಕೂಡಲೇ ಅನ್ವರ್'ರವರ ಪತ್ನಿ ಕಾಸರಗೋಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಪಹರಣಕಾರರು ಇರುವ ಸ್ಥಳವನ್ನು ತಿಳಿಯಲು ಪೊಲೀಸರು ಮೊಬೈಲ್ ಫೋನ್ ಅನ್ನು ಟ್ರ್ಯಾಕ್ ಮಾಡಿದ್ದಾರೆ.

ಜಂಟಿ ಕಾರ್ಯಾಚರಣೆ ಮೂಲಕ ಉದ್ಯಮಿಯನ್ನು ಅಪಹರಣಕಾರರಿಂದ ರಕ್ಷಿಸಿದ ಪೊಲೀಸರು

ಅಪಹರಣದ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ನಜರ್ ಸಹ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಅಪಹರಣಕಾರರು ಮಂಗಳೂರಿನಲ್ಲಿರುವುದನ್ನು ಪತ್ತೆ ಹಚ್ಚಿದ್ದಾರೆ.

ಜಂಟಿ ಕಾರ್ಯಾಚರಣೆ ಮೂಲಕ ಉದ್ಯಮಿಯನ್ನು ಅಪಹರಣಕಾರರಿಂದ ರಕ್ಷಿಸಿದ ಪೊಲೀಸರು

ಕಾಸರಗೋಡು ಪೊಲೀಸರ ಜೊತೆಗೆ ಜಂಟಿ ಕಾರ್ಯಾಚರಣೆಗೆ ಇಳಿದ ಮಂಗಳೂರು ಪೊಲೀಸರು ಅಪಹರಣಕಾರರನ್ನು ಹಿಡಿಯಲು ವಿವಿಧ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ.

ಜಂಟಿ ಕಾರ್ಯಾಚರಣೆ ಮೂಲಕ ಉದ್ಯಮಿಯನ್ನು ಅಪಹರಣಕಾರರಿಂದ ರಕ್ಷಿಸಿದ ಪೊಲೀಸರು

ಆದರೆ ಹ್ಯುಂಡೈ ಕ್ರೆಟಾ ಕಾರಿನಲ್ಲಿ ಸಾಗುತ್ತಿದ್ದ ಅಪಹರಣಕಾರರ ಗ್ಯಾಂಗ್ ಬ್ಯಾರಿಕೇಡ್‌ಗಳಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ರಸ್ತೆಯಲ್ಲಿದ್ದ ಹಲವಾರು ಬ್ಯಾರಿಕೇಡ್‌ಗಳಿಗೆ ಗುದ್ದಿದ್ದಾರೆ.

ಅವರನ್ನು ತಡೆಯಲು ಸಾಧ್ಯವಾಗದ ಪೊಲೀಸರು ಕೊನೆಗೆ ದೊಡ್ಡ ಬ್ಯಾರಿಕೇಡ್‌ಗಳನ್ನು ಬಳಸಲು ನಿರ್ಧರಿಸಿ ರಸ್ತೆಯನ್ನು ಟ್ರಕ್ ಮೂಲಕ ಬ್ಲಾಕ್ ಮಾಡಿದ್ದಾರೆ. ಹ್ಯುಂಡೈ ಕ್ರೆಟಾ ಟ್ರಕ್ಕಿನ ಮುಂದೆ ಚಲಿಸಲು ಸಾಧ್ಯವಾಗದೇ ಯು ಟರ್ನ್ ತೆಗೆದುಕೊಳ್ಳುವುದನ್ನು ವೀಡಿಯೊದಲ್ಲಿ ಕಾಣಬಹುದು.

ಜಂಟಿ ಕಾರ್ಯಾಚರಣೆ ಮೂಲಕ ಉದ್ಯಮಿಯನ್ನು ಅಪಹರಣಕಾರರಿಂದ ರಕ್ಷಿಸಿದ ಪೊಲೀಸರು

ಕಾರು ನಿಧಾನವಾದಾಗ, ಪೊಲೀಸ್ ಅಧಿಕಾರಿಯೊಬ್ಬರು ಕಾರಿನ ಹಿಂದಿನ ಬಾಗಿಲು ತೆರೆದು ಅನ್ವರ್‌ರವರಿಗೆ ಅಪಹರಣಕಾರರಿಂದ ತಪ್ಪಿಸಿಕೊಳ್ಳಲು ನೆರವಾಗಿದ್ದಾರೆ. ಕ್ರೆಟಾ ಕಾರಿನಲ್ಲಿ ಕೆಲವು ಕಿ.ಮೀ ಸಾಗಿದ ಅಪಹರಣಕಾರರು ಕಾರು ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರು ಅವರನ್ನು ಬಂಧಿಸಲು ಬಲೆ ಬೀಸಿದ್ದಾರೆ.

ಗಮನಿಸಿ: ಕೊನೆಯ ಮೂರು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Kerala cops rescues kidnapped businessman by joint operation. Read in Kannada.
Story first published: Friday, July 30, 2021, 21:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X