ಬೈಕಿಗೆ ದಂಡ ವಿಧಿಸಲು ಗೂಗಲ್ ಮೊರೆ ಹೋದ ಪೊಲೀಸರು

ಸಂಚಾರಿ ನಿಯಮಗಳ ಉಲ್ಲಂಘನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳದ ಮೋಟಾರು ವಾಹನ ಇಲಾಖೆಯು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇತ್ತೀಚಿಗೆ ಸಾಮಾಜಿಕ ಜಾಲತಾಣಗಳ ಮೂಲಕ ನೀಡಿದ್ದ ದೂರಿನ ಆಧಾರದ ಮೇಲೆ ಭಾರೀ ಪ್ರಮಾಣದಲ್ಲಿ ಮಾಡಿಫೈಗೊಂಡಿದ್ದ ಕಾರಿಗೆ ಗರಿಷ್ಠ ದಂಡ ವಿಧಿಸಲಾಗಿತ್ತು.

ಬೈಕಿಗೆ ದಂಡ ವಿಧಿಸಲು ಗೂಗಲ್ ಮೊರೆ ಹೋದ ಪೊಲೀಸರು

ಇದರ ಜೊತೆಗೆ ಆ ಕಾರನ್ನು ಮುಟ್ಟುಗೋಲು ಹಾಕಿಕೊಂಡು ಕಾರಿನ ನೋಂದಣಿಯನ್ನು ಅಮಾನತುಗೊಳಿಸಿತ್ತು. ಕಾರನ್ನು ಮೂಲ ಸ್ವರೂಪಕ್ಕೆ ತರದಿದ್ದರೆ ನೋಂದಣಿಯನ್ನು ಶಾಶ್ವತವಾಗಿ ರದ್ದುಗೊಳಿಸಲಾಗುವುದೆಂದು ಎಚ್ಚರಿಕೆಯನ್ನು ಸಹ ನೀಡಿತ್ತು. ಕೇರಳದ ಮೋಟಾರು ವಾಹನ ಇಲಾಖೆಯು ರಾಜ್ಯಾದ್ಯಂತ ವಾಹನಗಳ ತಪಾಸಣೆಯನ್ನು ನಡೆಸುತ್ತಿದೆ.

ಬೈಕಿಗೆ ದಂಡ ವಿಧಿಸಲು ಗೂಗಲ್ ಮೊರೆ ಹೋದ ಪೊಲೀಸರು

ಕೇರಳದ ಮೋಟಾರು ವಾಹನ ಇಲಾಖೆಯ ಜೊತೆಗೆ ಅಲ್ಲಿನ ಪೊಲೀಸರು ಸಹ ಕೈಜೋಡಿಸಿದ್ದಾರೆ. ರಸ್ತೆಯಲ್ಲಿ ಹಾದು ಹೋಗುವ ಪ್ರತಿಯೊಂದು ವಾಹನವನ್ನು ಕೂಲಂಕಷ ಪರಿಶೀಲಿಸಿದ ನಂತರವೇ ಕಳುಹಿಸಲಾಗುತ್ತಿದೆ. ಇದೇ ವೇಳೆ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ತಡೆದು ತಪಾಸಣೆ ನಡೆಸಿದ್ದಾರೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಬೈಕಿಗೆ ದಂಡ ವಿಧಿಸಲು ಗೂಗಲ್ ಮೊರೆ ಹೋದ ಪೊಲೀಸರು

ಬೈಕ್ ನಿಲ್ಲಿಸಿದ ಪೊಲೀಸರು ಬೈಕ್ ಸವಾರನಿಗೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಬೈಕ್ ತಪಾಸಣೆ ವೇಳೆ ಅನುಮಾನ ಬಂದ ಕಾರಣ ದಂಡ ವಿಧಿಸುವ ಬಗ್ಗೆ ಗೊಂದಲ ಉಂಟಾಗಿ ಗೂಗಲ್ ಸರ್ಚ್ ಮಾಡಿದ್ದಾರೆ. ಗೂಗಲ್ ಮೂಲಕ ಹಿಮಾಲಯನ್ ಬೈಕಿನಲ್ಲಿ ಏನಾದರೂ ಬದಲಾವಣೆಗಳಾಗಿವೆಯೇ ಎಂಬುದರ ಬಗ್ಗೆ ಹುಡುಕಾಟ ನಡೆಸಿದ್ದಾರೆ.

ಬೈಕಿಗೆ ದಂಡ ವಿಧಿಸಲು ಗೂಗಲ್ ಮೊರೆ ಹೋದ ಪೊಲೀಸರು

ಈ ಬೈಕಿನಲ್ಲಿದ್ದ ಎಕ್ಸಾಸ್ಟ್ ಬಗ್ಗೆ ಪೊಲೀಸರಿಗೆ ಅನುಮಾನ ಉಂಟಾಗಿದೆ. ಈ ಎಕ್ಸಾಸ್ಟ್ ಪೈಪ್ ಅನ್ನು ಮಾಡಿಫೈ ಮಾಡಿರಬಹುದು ಎಂಬ ಸಂದೇಹ ಉಂಟಾಗಿದೆ. ಈ ಕಾರಣಕ್ಕೆ ಬೈಕ್ ಸವಾರನನ್ನು ಪದೇ ಪದೇ ಪ್ರಶ್ನಿಸಿದ್ದಾರೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಬೈಕಿಗೆ ದಂಡ ವಿಧಿಸಲು ಗೂಗಲ್ ಮೊರೆ ಹೋದ ಪೊಲೀಸರು

ಬೈಕ್ ಸವಾರನು ಇದು ಬಿಎಸ್ 6 ಸೈಲೆನ್ಸರ್, ಇದನ್ನು ಕಂಪನಿಯೇ ಒದಗಿಸಿದೆ ಎಂದು ಹೇಳಿದ್ದಾನೆ. ಪೊಲೀಸರ ಅನುಮಾನ ಬಗೆಹರಿಯದ ಕಾರಣ ಅವರು ಗೂಗಲ್ ನಲ್ಲಿ ಹುಡುಕಾಟ ನಡೆಸಿದ್ದಾರೆ.

ಬೈಕಿಗೆ ದಂಡ ವಿಧಿಸಲು ಗೂಗಲ್ ಮೊರೆ ಹೋದ ಪೊಲೀಸರು

ಗೂಗಲ್‌ನಲ್ಲಿ ಹುಡುಕಿದ ನಂತರ ದಂಡ ವಿಧಿಸದೇ ಬೈಕ್ ಸವಾರನನ್ನು ಅಲ್ಲಿಂದ ಕಳುಹಿಸಿದ್ದಾರೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ಎಲ್ಲಾ ಬೈಕುಗಳನ್ನು ಹೊಸ ಬಿಎಸ್ 6 ನಿಯಮಗಳಿಗೆ ತಕ್ಕಂತೆ ಮಾಡಿಫೈಗೊಳಿಸಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಬೈಕಿಗೆ ದಂಡ ವಿಧಿಸಲು ಗೂಗಲ್ ಮೊರೆ ಹೋದ ಪೊಲೀಸರು

ಎಂಜಿನ್ ನೊಂದಿಗೆ ಕೆಲವು ಬಿಡಿಭಾಗಗಳನ್ನು ಸಹ ಅಪ್ ಡೇಟ್ ಮಾಡಿದೆ. ಇವುಗಳಲ್ಲಿ ಎಕ್ಸಾಸ್ಟ್ ಸಿಸ್ಟಂ ಸಹ ಸೇರಿದೆ. ಬಿಎಸ್ 6 ಬೈಕುಗಳಲ್ಲಿರುವ ಎಕ್ಸಾಸ್ಟ್ ಸಿಸ್ಟಂ ಬಿಎಸ್ 4 ಬೈಕುಗಳಲ್ಲಿದ್ದ ಎಕ್ಸಾಸ್ಟ್ ಸಿಸ್ಟಂಗಳಿಗಿಂತ ದೊಡ್ಡದಾಗಿದೆ.

ಬೈಕಿಗೆ ದಂಡ ವಿಧಿಸಲು ಗೂಗಲ್ ಮೊರೆ ಹೋದ ಪೊಲೀಸರು

ಈ ಕಾರಣಕ್ಕೆ ಹೊಸ ಬಿಎಸ್ 6 ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿನ ಬಗ್ಗೆ ಪೊಲೀಸರಿಗೆ ಅನುಮಾನ ಬಂದಿದೆ. ಗೂಗಲ್ ನಲ್ಲಿ ತಮ್ಮ ಅನುಮಾನವನ್ನು ಬಗೆಹರಿಸಿಕೊಂಡ ನಂತರ ಬೈಕ್ ಸವಾರನಿಗೆ ದಂಡ ವಿಧಿಸದೇ ಕಳುಹಿಸಿದ್ದಾರೆ. ಇಬ್ಬರು ಸ್ನೇಹಿತರು ಬೈಕಿನಲ್ಲಿ ಹೋಗುವಾಗ ಈ ಘಟನೆ ನಡೆದಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಈ ಘಟನೆಗೆ ಸಂಬಂಧಿಸಿದ ವೀಡಿಯೊವನ್ನು ಅನೀಶ್ ಶಜನ್ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಪೊಲೀಸರು ಈ ಹಿಂದೆ ಇದೇ ರೀತಿಯ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿನ ಪರಿಶೀಲನೆ ನಡೆಸಿದ್ದರು. ಆ ಬೈಕಿನ ಹ್ಯಾಂಡಲ್‌ನಲ್ಲಿ ಹೆಚ್ಚುವರಿಯಾಗಿ ಬಾರ್ ಅಳವಡಿಸಿದ್ದ ಬಗ್ಗೆ ಪೊಲೀಸರಿಗೆ ಅನುಮಾನ ಬಂದಿತ್ತು. ನಂತರ ಗೂಗಲ್ ಸರ್ಚ್ ನಡೆಸಿ ಬೈಕ್ ಸವಾರನಿಗೆ ರೂ.5,000 ದಂಡ ವಿಧಿಸಿದ್ದರು.

ಬೈಕಿಗೆ ದಂಡ ವಿಧಿಸಲು ಗೂಗಲ್ ಮೊರೆ ಹೋದ ಪೊಲೀಸರು

ಕೇರಳ ಮೋಟಾರು ವಾಹನ ಇಲಾಖೆಯು ಬೈಕ್‌ಗಳನ್ನು ಮಾತ್ರವಲ್ಲದೆ ಕಾರು, ಟ್ರಕ್‌ನಂತಹ ದೊಡ್ಡ ವಾಹನಗಳನ್ನು ಸಹ ಪರಿಶೀಲಿಸುತ್ತಿದೆ. ಇದಕ್ಕಾಗಿ ಗೂಗಲ್‌ನಂತಹ ತಂತ್ರಜ್ಞಾನದ ನೆರವನ್ನು ಪಡೆಯಲಾಗುತ್ತಿದೆ.

Most Read Articles

Kannada
English summary
Kerala cops used google search to check illegal modification in bike. Read in Kannada.
Story first published: Tuesday, September 29, 2020, 18:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X