ರೆಸ್ಟೋರೆಂಟ್‌ಗಳಾಗಿ ಬದಲಾಗಲಿವೆ ಹಳೆ ಸರ್ಕಾರಿ ಬಸ್‌ಗಳು

ಭಾರತದ ಹಲವು ರಾಜ್ಯಗಳಲ್ಲಿ, ಶಿಥಿಲಾವಸ್ಥೆಯಲ್ಲಿರುವ ಹಳೆಯ ಸರ್ಕಾರಿ ಬಸ್‌ಗಳನ್ನು ಪ್ರಯಾಣಿಕರ ಸೇವೆಗೆ ಬಳಸಲಾಗುತ್ತಿದೆ ಎಂಬ ಆರೋಪ ಬಹಳ ಹಿಂದಿನಿಂದಲೂ ಕೇಳಿ ಬರುತ್ತಲೇ ಇದೆ. ಆದರೆ ಈ ಆರೋಪಗಳ ಬಗ್ಗೆ ರಾಜ್ಯ ಸರ್ಕಾರಗಳು ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ.

ರೆಸ್ಟೋರೆಂಟ್‌ಗಳಾಗಿ ಬದಲಾಗಲಿವೆ ಹಳೆ ಸರ್ಕಾರಿ ಬಸ್‌ಗಳು

ಕೆಲವು ರಾಜ್ಯಗಳ ರಾಜ್ಯ ಸಾರಿಗೆ ನಿಗಮಗಳು ನಷ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ, ಬೇರೆ ದಾರಿಯಿಲ್ಲದೆ ಹಳೆಯ ಬಸ್‌ಗಳನ್ನೇ ಪ್ರಯಾಣಿಕರ ಸೇವೆಗಾಗಿ ಬಳಸಲಾಗುತ್ತಿದೆ. ಕೆಲ ತಿಂಗಳ ಹಿಂದಷ್ಟೇ ಕರ್ನಾಟಕ ಸರ್ಕಾರವು ಬೆಂಗಳೂರಿನಲ್ಲಿ ಹಳೆಯ ಕೆಎಸ್‌ಆರ್‌ಟಿಸಿ ಬಸ್ ಅನ್ನು ಹೈಟೆಕ್ ಮಹಿಳಾ ಶೌಚಾಲಯವನ್ನಾಗಿ ಬದಲಿಸಿತ್ತು.

ರೆಸ್ಟೋರೆಂಟ್‌ಗಳಾಗಿ ಬದಲಾಗಲಿವೆ ಹಳೆ ಸರ್ಕಾರಿ ಬಸ್‌ಗಳು

ಈಗ ಕೇರಳ ರಾಜ್ಯ ಸರ್ಕಾರದ ಸರದಿ. ಕೇರಳ ಸರ್ಕಾರವು ತನ್ನ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧೀನದಲ್ಲಿರುವ ಹಳೆಯ ಬಸ್‌ಗಳನ್ನು ರೆಸ್ಟೋರೆಂಟ್‌ ಹಾಗೂ ಡೈರಿ ಮಳಿಗೆಗಳಾಗಿ ಪರಿವರ್ತಿಸುತ್ತಿದೆ. ಇದರಿಂದಾಗಿ ಹಳೆಯ ಬಸ್‌ಗಳನ್ನು ಹಂತಹಂತವಾಗಿ ಸೇವೆಯಿಂದ ಹೊರಗಿಡಲು ಹಾಗೂ ಮರುಬಳಕೆ ಮಾಡಲು ಸಾಧ್ಯವಾಗಲಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ರೆಸ್ಟೋರೆಂಟ್‌ಗಳಾಗಿ ಬದಲಾಗಲಿವೆ ಹಳೆ ಸರ್ಕಾರಿ ಬಸ್‌ಗಳು

ಇದರಿಂದ ಕೇರಳದ ರಸ್ತೆ ಸಾರಿಗೆ ನಿಗಮಕ್ಕೆ ಸಾಕಷ್ಟು ಆದಾಯವು ದೊರೆಯಲಿದೆ. ಕೇರಳ ಸರ್ಕಾರವು ತನ್ನ ಹಳೆಯ ಸರ್ಕಾರಿ ಬಸ್‌ಗಳನ್ನು ಮಾರಾಟ ಮಾಡಲು ಅಥವಾ ಬಾಡಿಗೆಗೆ ನೀಡಲು ಚಿಂತನೆ ನಡೆಸಿದೆ. ವರದಿಗಳ ಪ್ರಕಾರ ಅಲ್ಲಿನ ರಸ್ತೆ ಸಾರಿಗೆ ನಿಗಮವು 500ಕ್ಕೂ ಹೆಚ್ಚು ಹಳೆಯ ಬಸ್‌ಗಳನ್ನು ಹೊಂದಿದೆ.

ರೆಸ್ಟೋರೆಂಟ್‌ಗಳಾಗಿ ಬದಲಾಗಲಿವೆ ಹಳೆ ಸರ್ಕಾರಿ ಬಸ್‌ಗಳು

ಅವುಗಳನ್ನು ರೆಸ್ಟೋರೆಂಟ್‌ಗಳಾಗಿ ಬದಲಿಸಬಹುದು. ವರದಿಗಳ ಪ್ರಕಾರ ಕೇರಳ ಸರ್ಕಾರವು ಈ ಬಸ್‌ಗಳನ್ನು ಪ್ರತಿಯೊಂದಕ್ಕೆ ರೂ.75,000ಗಳಂತೆ ಮಾರಾಟ ಮಾಡಲು ಬಯಸಿದೆ. ಈ ಬಸ್‌ಗಳು ಸಾಕಷ್ಟು ಸ್ಥಳವನ್ನು ಹೊಂದಿರುವುದರಿಂದ ಇವುಗಳನ್ನು ಸುಲಭವಾಗಿ ರೆಸ್ಟೋರೆಂಟ್‌ ಅಥವಾ ಡೈರಿ ಮಳಿಗೆಗಳಾಗಿ ಪರಿವರ್ತಿಸಬಹುದು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ರೆಸ್ಟೋರೆಂಟ್‌ಗಳಾಗಿ ಬದಲಾಗಲಿವೆ ಹಳೆ ಸರ್ಕಾರಿ ಬಸ್‌ಗಳು

ಹೀಗೆ ಪರಿವರ್ತಿಸಲಾದ ಬಸ್ ಗಳನ್ನು ಬಸ್ ನಿಲ್ದಾಣಗಳ ಬಳಿ ನಿಲ್ಲಿಸಬಹುದು. ಇದರಿಂದ ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಸರಕುಗಳನ್ನು ಮಾರಾಟ ಮಾಡಬಹುದು.

ರೆಸ್ಟೋರೆಂಟ್‌ಗಳಾಗಿ ಬದಲಾಗಲಿವೆ ಹಳೆ ಸರ್ಕಾರಿ ಬಸ್‌ಗಳು

ಬಸ್ಸುಗಳನ್ನು ರೆಸ್ಟೋರೆಂಟ್‌ಗಳಾಗಿ ಪರಿವರ್ತಿಸಲು ನಿರ್ಧರಿಸಿದರೆ, ಆ ಬಸ್ಸುಗಳಲ್ಲಿರುವ ಎಂಜಿನ್ ಸೇರಿದಂತೆ ವಿವಿಧ ಬಿಡಿ ಭಾಗಗಳನ್ನು ತೆಗೆದುಹಾಕಿ ಮತ್ತೊಂದು ಬಸ್‌ನಲ್ಲಿ ಅಳವಡಿಸಬಹುದು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ರೆಸ್ಟೋರೆಂಟ್‌ಗಳಾಗಿ ಬದಲಾಗಲಿವೆ ಹಳೆ ಸರ್ಕಾರಿ ಬಸ್‌ಗಳು

ಹೆಚ್ಚು ಹಣ ಪಾವತಿಸುವವರಿಗೆ ಈ ಬಸ್‌ಗಳನ್ನು ಮಾರಾಟ ಮಾಡಲಾಗುವುದು. ಇಲ್ಲವೇ ಬಾಡಿಗೆಗೆ ನೀಡಲಾಗುವುದು. ವರದಿಗಳ ಪ್ರಕಾರ, ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಭಾರತೀಯ ಕಾಫಿ ಹೌಸ್‌ಗೆ ಆದ್ಯತೆ ನೀಡಲು ಕೇರಳ ಸರ್ಕಾರವು ಚಿಂತನೆ ನಡೆಸಿದೆ.

ರೆಸ್ಟೋರೆಂಟ್‌ಗಳಾಗಿ ಬದಲಾಗಲಿವೆ ಹಳೆ ಸರ್ಕಾರಿ ಬಸ್‌ಗಳು

ಹಳೆಯ ಬಸ್ಸುಗಳಿಂದ ವಾಯು ಮಾಲಿನ್ಯ ಉಂಟಾಗುತ್ತದೆ. ಈ ಕಾರಣಕ್ಕೆ ಒಂದು ನಿರ್ದಿಷ್ಟ ಅವಧಿಯ ನಂತರ ಅವುಗಳನ್ನು ನಾಶಮಾಡುವ ಅವಶ್ಯಕತೆಯಿದೆ. ಆದರೆ ಕೇರಳ ಸರ್ಕಾರದ ಈ ಯೋಜನೆಯ ಪ್ರಕಾರ ಹಳೆಯ ಬಸ್ಸುಗಳನ್ನು ನಾಶಪಡಿಸದೆ, ಪರಿಸರವನ್ನು ಕಲುಷಿತಗೊಳಿಸದೆ ಮರುಬಳಕೆ ಮಾಡಬಹುದು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ರೆಸ್ಟೋರೆಂಟ್‌ಗಳಾಗಿ ಬದಲಾಗಲಿವೆ ಹಳೆ ಸರ್ಕಾರಿ ಬಸ್‌ಗಳು

ಈ ಯೋಜನೆಯು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರಿಂದ ಕೇರಳ ಸರ್ಕಾರದ ಈ ನಿರ್ಧಾರಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಸದ್ಯಕ್ಕೆ ಹಳೆಯ ಬಸ್‌ನಲ್ಲಿ ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಮೊದಲ ಡೈರಿ ಔಟ್‌ಲೆಟ್ ಸ್ಥಾಪಿಸಲಾಗಿದೆ.

ರೆಸ್ಟೋರೆಂಟ್‌ಗಳಾಗಿ ಬದಲಾಗಲಿವೆ ಹಳೆ ಸರ್ಕಾರಿ ಬಸ್‌ಗಳು

ಕೇರಳದ ಸಹಕಾರಿ ಹಾಲು ಮಾರ್ಕೆಟಿಂಗ್ ಫೆಡರೇಶನ್ ಮಿಲ್ಮಾದ ಸಹಭಾಗಿತ್ವದಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಇದೇ ಮಾದರಿಯಲ್ಲಿ ಹೆಚ್ಚಿನ ಮಳಿಗೆಗಳನ್ನು ಸ್ಥಾಪಿಸುವ ನಿರೀಕ್ಷೆಗಳಿವೆ.

Most Read Articles

Kannada
English summary
Kerala government converts old government bus as sales outlet. Read in Kannada.
Story first published: Wednesday, October 28, 2020, 9:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X