ಪೆಟ್ರೋಲ್ ಬಂಕ್‌ಗಳಲ್ಲಿ ಕೈದಿಗಳನ್ನು ನಿಯೋಜಿಸಿದ ಸರ್ಕಾರ

ಜೈಲುಗಳಲ್ಲಿರುವ ಕೈದಿಗಳು ಇನ್ನು ಮುಂದೆ ಪೆಟ್ರೋಲ್ ಬಂಕ್ ಉದ್ಯೋಗಿಗಳಾಗಿ ಕೆಲಸ ಮಾಡಲಿದ್ದಾರೆ. ಜೊತೆಗೆ ಸಂಬಳವನ್ನು ಪಡೆಯಲಿದ್ದಾರೆ. ಕೇರಳ ಸರ್ಕಾರವು ಇಂಡಿಯನ್ ಆಯಿಲ್ ಕಾರ್ಪೋರೇಶನ್ ಸಹಯೋಗದಲ್ಲಿ ಜೈಲು ಆವರಣದಲ್ಲಿ ಪೆಟ್ರೋಲ್ ಬಂಕ್ ಗಳನ್ನು ತೆರೆದಿದೆ.

ಪೆಟ್ರೋಲ್ ಬಂಕ್‌ಗಳಲ್ಲಿ ಕೈದಿಗಳನ್ನು ನಿಯೋಜಿಸಿದ ಸರ್ಕಾರ

ಈ ಪೆಟ್ರೋಲ್ ಬಂಕ್ ಗಳಲ್ಲಿ ಜೈಲಿನಲ್ಲಿರುವ ಕೈದಿಗಳು ಗ್ರಾಹಕರ ವಾಹನಗಳಿಗೆ ಪೆಟ್ರೋಲ್ ತುಂಬಿಸಲಿದ್ದಾರೆ. ಕೇರಳ ಸರ್ಕಾರವು ಕೈದಿಗಳನ್ನು ನೇಮಿಸಿಕೊಳ್ಳುವ ಹಲವಾರು ಯೋಜನೆಗಳನ್ನು ಆರಂಭಿಸಿದೆ. ಪ್ರತಿ ಪೆಟ್ರೋಲ್ ಬಂಕ್ ನಲ್ಲಿ 15 ಜೈಲು ಕೈದಿಗಳನ್ನು ನಿಯೋಜಿಸಲಾಗುವುದು.

ಪೆಟ್ರೋಲ್ ಬಂಕ್‌ಗಳಲ್ಲಿ ಕೈದಿಗಳನ್ನು ನಿಯೋಜಿಸಿದ ಸರ್ಕಾರ

ತಿರುವನಂತಪುರಂ, ವೆಯೂರ್ ಹಾಗೂ ಚೆಮಿನಿ ಜೈಲುಗಳಲ್ಲಿರುವ ಪೆಟ್ರೋಲ್ ಬಂಕ್ ಗಳು ಈಗಾಗಲೇ ಕಾರ್ಯಾಚರಣೆಯನ್ನು ಆರಂಭಿಸಿವೆ. ಕೈದಿಗಳಿಗೆ ಉದ್ಯೋಗ ಒದಗಿಸಲು, ಇಂಡಿಯನ್ ಆಯಿಲ್ ಕಾರ್ಪೋರೇಶನ್ ರಾಜ್ಯದ ವಿವಿಧ ಜೈಲು ಆವರಣದಲ್ಲಿ ರೂ.9.4 ಕೋಟಿ ವೆಚ್ಚದಲ್ಲಿ ನಾಲ್ಕು ಪೆಟ್ರೋಲ್ ಬಂಕ್ ಗಳನ್ನು ತೆರೆದಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಪೆಟ್ರೋಲ್ ಬಂಕ್‌ಗಳಲ್ಲಿ ಕೈದಿಗಳನ್ನು ನಿಯೋಜಿಸಿದ ಸರ್ಕಾರ

ಕೈದಿಗಳು ತಪ್ಪಿಸಿಕೊಳ್ಳುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಜೈಲು ಆಡಳಿತವು ಕೈದಿಗಳಿಗೆ ತರಬೇತಿ ನೀಡಲಾಗಿದೆ. ಕೈದಿಗಳ ಅನುಭವ ಹಾಗೂ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದೆ.

ಪೆಟ್ರೋಲ್ ಬಂಕ್‌ಗಳಲ್ಲಿ ಕೈದಿಗಳನ್ನು ನಿಯೋಜಿಸಿದ ಸರ್ಕಾರ

ಕೈದಿಗಳು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುವುದು ಜೈಲು ಆಡಳಿತದ ಜವಾಬ್ದಾರಿಯಾಗಿದೆ. ರಾಜ್ಯದ ವಿವಿಧ ಜೈಲು ಕೈದಿಗಳು ರಾಜ್ಯದಲ್ಲಿ 5 ಕೆಫೆಟೇರಿಯಾಗಳನ್ನು ನಡೆಸುತ್ತಿದ್ದಾರೆ ಎಂದು ಜೈಲು ಆಡಳಿತವು ತಿಳಿಸಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಪೆಟ್ರೋಲ್ ಬಂಕ್‌ಗಳಲ್ಲಿ ಕೈದಿಗಳನ್ನು ನಿಯೋಜಿಸಿದ ಸರ್ಕಾರ

ಇದರ ಜೊತೆಗೆ ಅನೇಕ ಕೈದಿಗಳು ಫುಡ್ ಪ್ಯಾಕೆಟ್‌ಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಕೈದಿಗಳಿಗೆ ನೀಡಲಾಗುತ್ತಿರುವ ಸಂಬಳದ ಜೊತೆಗೆ ಜೈಲು ಆಡಳಿತವು ಅವರಿಗೆ ಪ್ರತಿದಿನವೂ ಸಂಬಳ ನೀಡುತ್ತಿದೆ ಎಂದು ಹೇಳಲಾಗಿದೆ.

ಪೆಟ್ರೋಲ್ ಬಂಕ್‌ಗಳಲ್ಲಿ ಕೈದಿಗಳನ್ನು ನಿಯೋಜಿಸಿದ ಸರ್ಕಾರ

ಪ್ರತಿ ಕೈದಿಗೆ ದಿನಕ್ಕೆ 220 ರೂಪಾಯಿ ನೀಡಲಾಗುವುದು. ಕರೋನಾ ವೈರಸ್ ಸಂಕಷ್ಟದ ಸಂದರ್ಭದಲ್ಲಿ ಕೆಲವು ಕೈದಿಗಳು ಶ್ಲಾಘನೀಯ ಕೆಲಸ ಮಾಡುತ್ತಿದ್ದು, ಜನರಿಗೆ ನೆರವಾಗುತ್ತಿದ್ದಾರೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಪೆಟ್ರೋಲ್ ಬಂಕ್‌ಗಳಲ್ಲಿ ಕೈದಿಗಳನ್ನು ನಿಯೋಜಿಸಿದ ಸರ್ಕಾರ

ಜೈಲು ಆವರಣದಲ್ಲಿ ನಾಲ್ಕು ಪೆಟ್ರೋಲ್ ಬಂಕ್ ಗಳನ್ನು ತೆರೆಯಲು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸುಮಾರು ರೂ.9.4 ಕೋಟಿ ವೆಚ್ಚ ಮಾಡಿದೆ. ಇದರ ಜೊತೆಗೆ ಜೈಲು ಇಲಾಖೆಯು ರೂ.30 ಲಕ್ಷ ವೆಚ್ಚ ಮಾಡಿದೆ. ಈ ಮೂರು ಬಂಕ್ ಗಳ ಜೊತೆಗೆ ಶೀಘ್ರದಲ್ಲಿಯೇ ಕಣ್ಣೂರು ಜೈಲಿನಲ್ಲಿಯೂ ಮತ್ತೊಂದು ಪೆಟ್ರೋಲ್ ಬಂಕ್ ತೆರೆಯಲಾಗುವುದು.

Most Read Articles

Kannada
English summary
Kerala government deploys jail inmates in petrol bunks. Read in Kannada.
Story first published: Monday, August 3, 2020, 17:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X