ಶೀಘ್ರದಲ್ಲೇ ನೀರಿಗಿಳಿಯಲಿವೆ 15 ನಾಟಿಕಲ್ ಮೈಲಿ ವೇಗದಲ್ಲಿ ಸಾಗುವ ವಾಟರ್ ಟ್ಯಾಕ್ಸಿಗಳು

ಕರೋನಾ ವೈರಸ್ ಹರಡುವುದನ್ನು ತಡೆಯಲು ಜಾರಿಗೊಳಿಸಲಾದ ಲಾಕ್ ಡೌನ್ ನಿಂದ ಭಾರತದಲ್ಲಿ ಲಕ್ಷಾಂತರ ಕಾರ್ಮಿಕರ ಜೀವನ ಬುಡಮೇಲಾಯಿತು. ಅದರಲ್ಲೂ ಆಟೋ ಹಾಗೂ ಟ್ಯಾಕ್ಸಿ ಚಾಲಕರು ಹೆಚ್ಕು ಸಂಕಷ್ಟಕ್ಕೀಡಾದರು.

ಶೀಘ್ರದಲ್ಲೇ ನೀರಿಗಿಳಿಯಲಿವೆ 15 ನಾಟಿಕಲ್ ಮೈಲಿ ವೇಗದಲ್ಲಿ ಸಾಗುವ ವಾಟರ್ ಟ್ಯಾಕ್ಸಿಗಳು

ಲಾಕ್ ಡೌನ್ ಜಾರಿಯಾದ ತಕ್ಷಣ ಆಟೋ ಹಾಗೂ ಟ್ಯಾಕ್ಸಿಗಳ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಈ ಕಾರಣಕ್ಕೆ ಆಟೋ, ಟ್ಯಾಕ್ಸಿ ಕೆಲಸವಿಲ್ಲದೇ ಮನೆಯಲ್ಲಿಯೇ ಕೂರುವಂತಾಯಿತು. ಲಾಕ್ ಡೌನ್ ನಿಂದ ವಿನಾಯಿತಿ ಸಿಕ್ಕ ಹಿನ್ನೆಲೆಯಲ್ಲಿ ಆಟೋ ಹಾಗೂ ಟ್ಯಾಕ್ಸಿಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆಯಾದರೂ ಜನರು ಕರೋನಾ ವೈರಸ್ ಹರಡಬಹುದೆಂಬ ಭೀತಿಯಿಂದ ಆಟೋ ಹಾಗೂ ಟ್ಯಾಕ್ಸಿಗಳಲ್ಲಿ ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ.

ಶೀಘ್ರದಲ್ಲೇ ನೀರಿಗಿಳಿಯಲಿವೆ 15 ನಾಟಿಕಲ್ ಮೈಲಿ ವೇಗದಲ್ಲಿ ಸಾಗುವ ವಾಟರ್ ಟ್ಯಾಕ್ಸಿಗಳು

ಜನರು ತಮ್ಮ ಸ್ವಂತ ಕಾರು ಹಾಗೂ ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವುದಕ್ಕೆ ಆದ್ಯತೆ ನೀಡುತ್ತಿದ್ದಾರೆ. ಈ ಕಾರಣದಿಂದಾಗಿ ಅನೇಕ ಟ್ಯಾಕ್ಸಿ ಚಾಲಕರು ಇನ್ನೂ ಆದಾಯವಿಲ್ಲದೆ ಕಷ್ಟಪಡುತ್ತಿದ್ದಾರೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಶೀಘ್ರದಲ್ಲೇ ನೀರಿಗಿಳಿಯಲಿವೆ 15 ನಾಟಿಕಲ್ ಮೈಲಿ ವೇಗದಲ್ಲಿ ಸಾಗುವ ವಾಟರ್ ಟ್ಯಾಕ್ಸಿಗಳು

ಆಟೋ ಹಾಗೂ ಟ್ಯಾಕ್ಸಿ ಚಾಲಕರ ಭವಿಷ್ಯವು ಪ್ರಶ್ನಾರ್ಹವಾಗಿದೆ. ಆದರೆ ಈ ಎಲ್ಲಾ ಸಮಸ್ಯೆಗಳು ಎದುರಾಗಿರುವುದು ರಸ್ತೆಯಲ್ಲಿ ಸಂಚರಿಸುವ ಟ್ಯಾಕ್ಸಿಗಳಿಗೆ ಮಾತ್ರ. ನೀರಿನ ಮೇಲೆ ಚಲಿಸುವ ವಾಟರ್ ಟ್ಯಾಕ್ಸಿಗಳಿಗೆ ಯಾವುದೇ ಸಮಸ್ಯೆ ಎದುರಾಗಿಲ್ಲ.

ಶೀಘ್ರದಲ್ಲೇ ನೀರಿಗಿಳಿಯಲಿವೆ 15 ನಾಟಿಕಲ್ ಮೈಲಿ ವೇಗದಲ್ಲಿ ಸಾಗುವ ವಾಟರ್ ಟ್ಯಾಕ್ಸಿಗಳು

ಕೇರಳ ಸರ್ಕಾರವು ಅಕ್ಟೋಬರ್‌ ತಿಂಗಳಿನಿಂದ 10 ಸೀಟುಗಳ ನೀರಿನ ಟ್ಯಾಕ್ಸಿಗಳನ್ನು ನಡೆಸಲು ಸಿದ್ಧತೆ ನಡೆಸಿದೆ. ಈ ವಾಟರ್ ಟ್ಯಾಕ್ಸಿಗಳನ್ನು ಕೇರಳದ ಆಲಪ್ಪುಲ ಜಿಲ್ಲೆಯಲ್ಲಿ ಪರಿಚಯಿಸಲಾಗುವುದು. ಆಲಪ್ಪುಲ ಕೇರಳದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಶೀಘ್ರದಲ್ಲೇ ನೀರಿಗಿಳಿಯಲಿವೆ 15 ನಾಟಿಕಲ್ ಮೈಲಿ ವೇಗದಲ್ಲಿ ಸಾಗುವ ವಾಟರ್ ಟ್ಯಾಕ್ಸಿಗಳು

ವಾಟರ್ ಟ್ಯಾಕ್ಸಿಗಳ ಕಾರ್ಯಾಚರಣೆಯ ಕುರಿತು 2019ರಲ್ಲಿ ಅಧ್ಯಯನ ನಡೆಸಲಾಗಿತ್ತು. ನಂತರ ರಾಜ್ಯ ಜಲ ಸಾರಿಗೆ ಇಲಾಖೆ (ಎಸ್‌ಡಬ್ಲ್ಯುಟಿಡಿ) 4 ದೋಣಿಗಳಿಗೆ ಆದೇಶ ನೀಡಿತ್ತು. ಈ 4 ದೋಣಿಗಳನ್ನು ಸಾರ್ವಜನಿಕ ಬಳಕೆಗಾಗಿ ವಾಟರ್ ಟ್ಯಾಕ್ಸಿಗಳಾಗಿ ಬಳಸಲಾಗುವುದು.

ಶೀಘ್ರದಲ್ಲೇ ನೀರಿಗಿಳಿಯಲಿವೆ 15 ನಾಟಿಕಲ್ ಮೈಲಿ ವೇಗದಲ್ಲಿ ಸಾಗುವ ವಾಟರ್ ಟ್ಯಾಕ್ಸಿಗಳು

ಈ ಬಗ್ಗೆ ಮಾತನಾಡಿರುವ ಕೇರಳ ರಾಜ್ಯ ಜಲ ಸಾರಿಗೆ ಇಲಾಖೆಯ ಅಧಿಕಾರಿಗಳು, ರಸ್ತೆಯಲ್ಲಿ ಚಲಿಸುವ ಟ್ಯಾಕ್ಸಿಗಳಂತೆ, ಈ ವಾಟರ್ ಟ್ಯಾಕ್ಸಿಗಳು ಸಾರ್ವಜನಿಕ ಬಳಕೆಗೆ ಲಭ್ಯವಿರಲಿವೆ. ಈ ವಾಟರ್ ಟ್ಯಾಕ್ಸಿಗಳಿಗಾಗಿ ನಿರ್ದಿಷ್ಟ ಫೋನ್ ನಂಬರ್ ನೀಡಲಾಗುವುದು. ಜನರು ಆ ಸಂಖ್ಯೆಗೆ ಕರೆ ಮಾಡಿ ವಾಟರ್ ಟ್ಯಾಕ್ಸಿ ಸೇವೆಯನ್ನು ಪಡೆಯಬಹುದು ಎಂದು ಹೇಳಿದರು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಶೀಘ್ರದಲ್ಲೇ ನೀರಿಗಿಳಿಯಲಿವೆ 15 ನಾಟಿಕಲ್ ಮೈಲಿ ವೇಗದಲ್ಲಿ ಸಾಗುವ ವಾಟರ್ ಟ್ಯಾಕ್ಸಿಗಳು

ಈ ವಾಟರ್ ಟ್ಯಾಕ್ಸಿಗಳು ಜನರನ್ನು ಪಿಕ್ ಅಪ್ ಮಾಡಿ, ಡ್ರಾಪ್ ಮಾಡುತ್ತವೆ. ಶುಲ್ಕಗಳು ಒಂದು ಗಂಟೆಗಿಂತ ಕಡಿಮೆ ಇರಲಿವೆ. ಈ ಟ್ಯಾಕ್ಸಿಗಳು ಡೀಸೆಲ್ ಮೂಲಕ ಚಾಲನೆಗೊಳ್ಳುತ್ತವೆ. ಈ ವಾಟರ್ ಟ್ಯಾಕ್ಸಿಗಳಲ್ಲಿ 10 ಜನರು ಆರಾಮವಾಗಿ ಕುಳಿತುಕೊಳ್ಳಬಹುದು. ಈ ದೋಣಿಗಳು ಗಂಟೆಗೆ 15 ನಾಟಿಕಲ್ ಮೈಲಿ ವೇಗದಲ್ಲಿ ಚಲಿಸುತ್ತವೆ.

ಶೀಘ್ರದಲ್ಲೇ ನೀರಿಗಿಳಿಯಲಿವೆ 15 ನಾಟಿಕಲ್ ಮೈಲಿ ವೇಗದಲ್ಲಿ ಸಾಗುವ ವಾಟರ್ ಟ್ಯಾಕ್ಸಿಗಳು

ಇದರಿಂದಾಗಿ ಪ್ರಯಾಣಿಕರು ವೇಗವಾಗಿ ತಮ್ಮ ಸ್ಥಳಕ್ಕೆ ತಲುಪಬಹುದು. ಈ ವಾಟರ್ ಟ್ಯಾಕ್ಸಿಗಳನ್ನು ಕೇರಳದ ಕೊಚ್ಚಿಯ ನವಗತಿ ಕಂಪನಿಯವರು ನಿರ್ಮಿಸಿದ್ದಾರೆ. ಕಡಿಮೆ ಇಂಧನವನ್ನು ಬಳಸಲಿ ಎಂಬ ಕಾರಣಕ್ಕೆ ಈ ವಾಟರ್ ಟ್ಯಾಕ್ಸಿಗಳನ್ನು ಫೈಬರ್‌ನೊಂದಿಗೆ ಸಮರ್ಥ ವಿನ್ಯಾಸದಲ್ಲಿ ನಿರ್ಮಿಸಲಾಗಿದೆ ಎಂದು ವರದಿಗಳು ಹೇಳಿವೆ.

Most Read Articles

Kannada
English summary
Alappuzha District in Kerala introducing Ten Seater water taxis. Read in Kannada.
Story first published: Thursday, September 17, 2020, 12:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X