ಆಕರ್ಷಕ ಎಲೆಕ್ಟ್ರಿಕ್ ಕಾರನ್ನು ನಿರ್ಮಿಸಿದ 67 ವರ್ಷದ ವೃದ್ಧ: 60 ಕಿ.ಮೀ ಪ್ರಯಾಣಿಸಲು ರೂ.5 ವೆಚ್ಚ

ಇತ್ತೀಚೆಗೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳುತ್ತಿದೆ. ಅಲ್ಲದೇ ಇಂಧನ ಬೆಲೆಯು ಕೂಡ ದಾಖಲೆಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಇದರಿಂದ ಹೆಚ್ಚಿನ ಜನರು ನಿಧಾನವಾಗಿ ಎಲೆಕ್ಟ್ರಿಕ್ ವಾಹನಗಳ ಕಡೆ ಮೊರೆ ಹೋಗುತ್ತಿದ್ದಾರೆ.

ಆಕರ್ಷಕ ಎಲೆಕ್ಟ್ರಿಕ್ ಕಾರನ್ನು ನಿರ್ಮಿಸಿದ 67 ವರ್ಷದ ವೃದ್ಧ: 60 ಕಿಮೀ ಪ್ರಯಾಣಿಸಲು ರೂ.5 ವೆಚ್ಚ

ಇದರಿಂದ ಬಹುತೇಕ ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ ಕೆಲವು ಜನಪ್ರಿಯ ವಾಹನ ತಯಾರಕ ಕಂಪನಿಯು ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳ ಕಡೆ ಗಮನಹರಿಸುತ್ತಿದೆ. ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸುವ ಟಾಟಾ, ಎಂಜಿಯಂತಹ ತಯಾರಕರು ಮತ್ತು ಹಲವಾರು ದ್ವಿಚಕ್ರ ವಾಹನ ತಯಾರಕರು ಸಹ ಎಲೆಕ್ಟ್ರಿಕ್ ಕ್ಷೇತ್ರವನ್ನು ಪ್ರವೇಶಿಸಿದ್ದಾರೆ. ಇನ್ನು ಹಲವು ಜನರು ಸ್ವತಃವಾಗಿ ಎಲೆಕ್ಟ್ರಿಕ್ ವಾಹನಗಳನ್ನು ನಿರ್ಮಿಸಿ ಸುದ್ದಿಯಾಗಿದ್ದಾರೆ. ಅದೇ ರೀತಿ ಇಲ್ಲಿ 67 ವರ್ಷದ ವೃದ್ಧ ಎಲೆಕ್ಟ್ರಿಕ್ ಕಾರನ್ನು ನಿರ್ಮಿಸಿದ್ದಾರೆ.

ಆಕರ್ಷಕ ಎಲೆಕ್ಟ್ರಿಕ್ ಕಾರನ್ನು ನಿರ್ಮಿಸಿದ 67 ವರ್ಷದ ವೃದ್ಧ: 60 ಕಿಮೀ ಪ್ರಯಾಣಿಸಲು ರೂ.5 ವೆಚ್ಚ

ಕೇರಳದ 67 ವರ್ಷದ ವ್ಯಕ್ತಿಯೊಬ್ಬರು ತಮ್ಮ ದೈನಂದಿನ ಪ್ರಯಾಣಕ್ಕಾಗಿ ಎಲೆಕ್ಟ್ರಿಕ್ ಕಾರನ್ನು ನಿರ್ಮಿಸಿದ್ದಾರೆ.ಈ ವಿಡಿಯೋವನ್ನು ವಿಲೇಜ್ ವಾರ್ತಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಕೇರಳದ ಕೊಲ್ಲಂ ಜಿಲ್ಲೆಯ 67 ವರ್ಷದ ಆಂಟೋನಿ ಜಾನ್ ತನಗಾಗಿ ಎಲೆಕ್ಟ್ರಿಕ್ ಕಾರನ್ನು ನಿರ್ಮಿಸಿದ್ದಾರೆ.

ಆಕರ್ಷಕ ಎಲೆಕ್ಟ್ರಿಕ್ ಕಾರನ್ನು ನಿರ್ಮಿಸಿದ 67 ವರ್ಷದ ವೃದ್ಧ: 60 ಕಿಮೀ ಪ್ರಯಾಣಿಸಲು ರೂ.5 ವೆಚ್ಚ

ಆಂಟೋನಿ ಜಾನ್ ವೃತ್ತಿ ಸಲಹೆಗಾರರಾಗಿದ್ದಾರೆ ಮತ್ತು ಅವರ ಮನೆಯಿಂದ ಸುಮಾರು 30 ಕಿಮೀ ದೂರದಲ್ಲಿ ಕಚೇರಿಯನ್ನು ಹೊಂದಿದ್ದಾರೆ. ಅವರು ತಮ್ಮ ಪ್ರಯಾಣಕ್ಕೆ ಎಲೆಕ್ಟ್ರಿಕ್ ಸ್ಕೂಟರ್ ಬಳಸುತ್ತಿದ್ದರು. ಆಂಟೋನಿ ವಯಸ್ಸಾಗುತ್ತಿದ್ದಂತೆ, ಅವರಿಗೆ ಆರಾಮದಾಯಕವಾದ ಪ್ರಯಾಣವನ್ನು ಒದಗಿಸುವ ಮತ್ತು ಮಳೆ ಮತ್ತು ಶಾಖದಿಂದ ದೂರವಿರಿಸುವ ವಾಹನವನ್ನು ಅವರು ಬಯಸಿದ್ದರು.

ಆಕರ್ಷಕ ಎಲೆಕ್ಟ್ರಿಕ್ ಕಾರನ್ನು ನಿರ್ಮಿಸಿದ 67 ವರ್ಷದ ವೃದ್ಧ: 60 ಕಿಮೀ ಪ್ರಯಾಣಿಸಲು ರೂ.5 ವೆಚ್ಚ

ಅವರು ಎಲೆಕ್ಟ್ರಿಕ್ ವಾಹನವನ್ನು ಬಯಸಿದ್ದರು ಆದರೆ, ಆ ಸಮಯದಲ್ಲಿ ಅವರಿಗೆ ಮಾರುಕಟ್ಟೆಯಲ್ಲಿ ಯಾವುದೇ ಆಯ್ಕೆಗಳು ಲಭ್ಯವಿರಲಿಲ್ಲ. ಅವರು 2018 ರಲ್ಲಿ ಸ್ವತಃ ಎಲೆಕ್ಟ್ರಿಕ್ ಕಾರನ್ನು ನಿರ್ಮಿಸುವ ಬಗ್ಗೆ ಯೋಚಿಸಲು ಪ್ರಾರಂಭಿಸಿದರು. ಅವರು ಕಾರಿನ ವಿನ್ಯಾಸ ಮತ್ತು ಇತರ ಎಲೆಕ್ಟ್ರಿಕಲ್ ಬದಿಯ ಬಗ್ಗೆ ತಮ್ಮ ಸಂಶೋಧನೆ ನಡೆಸಿದರು.

ಆಕರ್ಷಕ ಎಲೆಕ್ಟ್ರಿಕ್ ಕಾರನ್ನು ನಿರ್ಮಿಸಿದ 67 ವರ್ಷದ ವೃದ್ಧ: 60 ಕಿಮೀ ಪ್ರಯಾಣಿಸಲು ರೂ.5 ವೆಚ್ಚ

ಕಾರಿನ ಬಾಡಿಯನ್ನು ನಿರ್ಮಿಸಲು, ಅವರು ಬಸ್‌ಗಳಿಗೆ ಬಾಡಿ ನಿರ್ಮಿಸುವ ಅನುಭವ ಹೊಂದಿರುವ ಗ್ಯಾರೇಜ್‌ನೊಂದಿಗೆ ಸಂಪರ್ಕ ಸಾಧಿಸಿದರು. ಆಂಟೋನಿ ಅವರಿಗೆ ಆನ್‌ಲೈನ್‌ನಲ್ಲಿ ಕಂಡುಕೊಂಡ ಕಾರಿನ ವಿನ್ಯಾಸವನ್ನು ನೀಡಿದರು ಮತ್ತು ಗ್ಯಾರೇಜ್ ಅದಕ್ಕೆ ಅನುಗುಣವಾಗಿ ಬಾಡಿಯನ್ನು ನಿರ್ಮಿಸಿದರು.

ಆಕರ್ಷಕ ಎಲೆಕ್ಟ್ರಿಕ್ ಕಾರನ್ನು ನಿರ್ಮಿಸಿದ 67 ವರ್ಷದ ವೃದ್ಧ: 60 ಕಿಮೀ ಪ್ರಯಾಣಿಸಲು ರೂ.5 ವೆಚ್ಚ

ಇದು ಇಬ್ಬರು ವಯಸ್ಕರಿಗೆ ಸ್ಥಳಾವಕಾಶ ನೀಡುವ ಅತ್ಯಂತ ಚಿಕ್ಕ ಕಾರು. ಇದು ಹಿಂಭಾಗದಲ್ಲಿ ಸೀಟ್ ಅನ್ನು ಹೊಂದಿದೆ ಆದರೆ, ಇದು ಮಕ್ಕಳಿಗೆ ಮಾತ್ರ ಸರಿಯಾಗುತ್ತದೆ. ಇನ್ನು ಆಂಟನಿ ಅವರು ವರ್ಕ್‌ಶಾಪ್‌ನಿಂದ ಬಾಡಿಯನ್ನು ನಿರ್ಮಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ ಆದರೆ, ಕಾರಿನ ಎಲೆಕ್ಟ್ರಿಕಲ್ ಭಾಗವನ್ನು ಅವರೇ ಮಾಡಿದ್ದಾರೆ.ಅವರು ದೆಹಲಿಯ ಮಾರಾಟಗಾರರಿಂದ ಬ್ಯಾಟರಿಗಳು, ಮೋಟಾರ್ ಮತ್ತು ವೈರಿಂಗ್ ಅನ್ನು ಪಡೆದರು.

ಆಕರ್ಷಕ ಎಲೆಕ್ಟ್ರಿಕ್ ಕಾರನ್ನು ನಿರ್ಮಿಸಿದ 67 ವರ್ಷದ ವೃದ್ಧ: 60 ಕಿಮೀ ಪ್ರಯಾಣಿಸಲು ರೂ.5 ವೆಚ್ಚ

ಅವರು 2018 ರಲ್ಲಿ ಕಾರಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಕೆಲಸವು ವಿಳಂಬವಾಯಿತು. ಆಂಟೋನಿ ಅವರಿಗೆ ಇವಿ ನಿರ್ಮಿಸುವಲ್ಲಿ ಅನುಭವವಿಲ್ಲದ ಕಾರಣ, ತಪ್ಪುಗಳನ್ನು ಮಾಡಲಾಗಿದೆ ಮತ್ತು ಪ್ರಾಜೆಕ್ಟ್ ಅನ್ನು ಪೂರ್ಣಗೊಳಿಸಲು ಅವರಿಗೆ ಹೆಚ್ಚು ಸಮಯ ತೆಗೆದುಕೊಂಡಿತು.

ಆಕರ್ಷಕ ಎಲೆಕ್ಟ್ರಿಕ್ ಕಾರನ್ನು ನಿರ್ಮಿಸಿದ 67 ವರ್ಷದ ವೃದ್ಧ: 60 ಕಿಮೀ ಪ್ರಯಾಣಿಸಲು ರೂ.5 ವೆಚ್ಚ

ಅವರು ಬ್ಯಾಟರಿ ಪವರ್ ಅನ್ನು ತಪ್ಪಾಗಿ ಲೆಕ್ಕ ಹಾಕಿದರು ಮತ್ತು ಕಾರು ಮೊದಲಿಗೆ ಅವರಿಗ್ ಅಪೇಕ್ಷಿತ ಡ್ರೈವಿಂಗ್ ರೇಂಹ್ ಅನ್ನು ನೀಡುತ್ತಿರಲಿಲ್ಲ. ಲಾಕ್‌ಡೌನ್‌ಗಳು ಮತ್ತು ನಿರ್ಬಂಧಗಳನ್ನು ತೆಗೆದುಹಾಕಿದ ನಂತರ, ಅವರು ಮತ್ತೆ ಮಾರಾಟಗಾರರನ್ನು ಸಂಪರ್ಕಿಸಿದರು ಮತ್ತು ಅವರು ಕಾರಿಗೆ ದೊಡ್ಡ ಸಾಮರ್ಥ್ಯದ ಬ್ಯಾಟರಿಯನ್ನು ಸೂಚಿಸಿದರು

ಆಕರ್ಷಕ ಎಲೆಕ್ಟ್ರಿಕ್ ಕಾರನ್ನು ನಿರ್ಮಿಸಿದ 67 ವರ್ಷದ ವೃದ್ಧ: 60 ಕಿಮೀ ಪ್ರಯಾಣಿಸಲು ರೂ.5 ವೆಚ್ಚ

ಇದು ನಿಜವಾಗಿಯೂ ಕಡಿಮೆ ಪವರ್ ರೇಟಿಂಗ್ ಹೊಂದಿರುವ ಇವಿ ಆಗಿದೆ. ಅಲ್ಲದೆ ಇದು 25 ಕಿ.ಮೀ ಗಿಂತ ಕಡಿಮೆ ಗರಿಷ್ಠ ವೇಗವನ್ನು ಹೊಂದಿದೆ. ಇಂತಹ ಎಲೆಕ್ಟ್ರಿಕ್ ವಾಹನಗಳು ಭಾರತದಲ್ಲಿ ನೋಂದಣಿ ಫಲಕದ ಅವಶ್ಯಕತೆ ಇಲ್ಲ್ಲ. ಆದರೆ, ಚಾಲಕ ಮಾನ್ಯವಾದ ಚಾಲನಾ ಪರವಾನಗಿಯನ್ನು ಹೊಂದಿರಬೇಕು. ಇನ್ನು ಆಂಟೋನಿ ಅವರು ಈ ಎಲೆಕ್ಟ್ರಿಕ್ ಕಾರನ್ನು ಸುಮಾರು ರೂ.4.5 ಲಕ್ಷ ಖರ್ಚು ಮಾಡಿದ್ದಾರೆ ಮತ್ತು ಮತ್ತೊಂದು ಎಲೆಕ್ಟ್ರಿಕ್ ವಾಹನವನ್ನು ಸಹ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಆಕರ್ಷಕ ಎಲೆಕ್ಟ್ರಿಕ್ ಕಾರನ್ನು ನಿರ್ಮಿಸಿದ 67 ವರ್ಷದ ವೃದ್ಧ: 60 ಕಿಮೀ ಪ್ರಯಾಣಿಸಲು ರೂ.5 ವೆಚ್ಚ

ಹೊಸ ಬ್ಯಾಟರಿಯನ್ನು ಅಳವಡಿಸಿದ ನಂತರ, ಎಲೆಕ್ಟ್ರಿಕ್ ಕಾರು ಅವರಿಗೆ ಗರಿಷ್ಠ 60 ಕಿಮೀ ರೇಂಜ್ ಅನ್ನು ನೀಡುತ್ತದೆ. ಅವರ ಈ ಕೆಲಸದ ಬಗ್ಗೆ ಅವನು ತುಂಬಾ ಹೆಮ್ಮೆಪಡುತ್ತಾರೆ ಮತ್ತು ಅವರು ತನ್ನ ಕಚೇರಿಗೆ ಪ್ರಯಾಣಿಸಲು ಪ್ರತಿದಿನ ಕಾರನ್ನು ಬಳಸುತ್ತಾನೆ. ಎಲೆಕ್ಟ್ರಿಕ್ ಕಾರನ್ನು ಅವರು ಮಾತ್ರ ಬಳಸುತ್ತಾರೆ ಮತ್ತು ಅವರು ತಮ್ಮ ಕುಟುಂಬದೊಂದಿಗೆ ಪ್ರಯಾಣಿಸಲು ಬಯಸಿದಾಗ ಮಾರುತಿ ಆಲ್ಟೊವನ್ನು ಹೊಂದಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ

ಆಕರ್ಷಕ ಎಲೆಕ್ಟ್ರಿಕ್ ಕಾರನ್ನು ನಿರ್ಮಿಸಿದ 67 ವರ್ಷದ ವೃದ್ಧ: 60 ಕಿಮೀ ಪ್ರಯಾಣಿಸಲು ರೂ.5 ವೆಚ್ಚ

ಬಾಹ್ಯ ವಿನ್ಯಾಸವು ತುಂಬಾ ಮೂಲಭೂತವಾಗಿದೆ ಮತ್ತು ಒಳಾಂಗಣವು ಬೆಂಚ್ ಸೀಟುಗಳು, ಸ್ಟೀರಿಂಗ್, ಮತ್ತು ಬ್ರೇಕ್ ಪೆಡಲ್ ಅನ್ನು ಸಹ ನೀಡುತ್ತದೆ. ಇದು ತುಂಬಾ ಚಿಕ್ಕ ಕಾರು ಮತ್ತು ಸಾಮಾನ್ಯ ಕಾರು ಹೋಗಲು ಸಾಧ್ಯವಾಗದ ಚಿಕ್ಕ ಬೀದಿಗಳಲ್ಲಿ ಸುಲಭವಾಗಿ ಹೋಗಬಹುದು.

Most Read Articles

Kannada
English summary
Kerala old man builds electric vehicle costs range details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X