Just In
Don't Miss!
- News
ರಾಜ್ಯ ಬಜೆಟ್ ಬಗ್ಗೆ ಸಿಎಂ ಯಡಿಯೂರಪ್ಪ ಹೇಳಿದ್ದೇನು?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ಜೊತೆ ಇಶ್ ಸೋಧಿ ಒಪ್ಪಂದ
- Lifestyle
ಅರಿಶಿನದ ಈ ಆರೋಗ್ಯ ಪ್ರಯೋಜನಗಳನ್ನು ಕೇಳಿದರೆ, ನೀವೂ ಶಾಕ್ ಆಗ್ತೀರಾ!
- Finance
30,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ ಕ್ಯಾಪ್ಜೆಮಿನಿ
- Movies
ರಾಬರ್ಟ್ ಸಂಭ್ರಮ: ವಿನಯದಿಂದ ತೆಲುಗು ಅಭಿಮಾನಿಗಳ ಮನಸು ಕದ್ದ ದರ್ಶನ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸನ್ ಫಿಲ್ಮ್ ತೆರವಿಗೆ ವಿಶೇಷ ಕಾರ್ಯಾಚರಣೆ ಆರಂಭಿಸಿದ ಪೊಲೀಸ್ ಇಲಾಖೆ
ಭಾರತದಲ್ಲಿ ಕಾರುಗಳ ಗ್ಲಾಸುಗಳ ಮೇಲೆ ಯಾವುದೇ ರೀತಿಯ ಸನ್ ಫಿಲ್ಮ್ ಅಥವಾ ಸ್ಕ್ರೀನ್'ಗಳನ್ನು ಅಳವಡಿಸುವುದನ್ನು ನಿಷೇಧಿಸಲಾಗಿದೆ. ವಾಹನಗಳಲ್ಲಿ ನಡೆಯುವ ಅಪರಾಧಗಳನ್ನು ತಡೆಗಟ್ಟಲು ಸುಪ್ರೀಂ ಕೋರ್ಟ್ ಈ ಆದೇಶ ಹೊರಡಿಸಿದೆ.

ಆದರೂ ಕೆಲವರು ಇನ್ನೂ ಸಹ ಕಾರುಗಳಲ್ಲಿ ಸನ್ ಫಿಲ್ಮ್'ಗಳನ್ನು ಬಳಸುತ್ತಿದ್ದಾರೆ. ಅದರಲ್ಲೂ ರಾಜಕಾರಣಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಕಾರುಗಳಲ್ಲಿ ಸನ್ ಫಿಲ್ಮ್ ಬಳಸುವುದರ ಮೂಲಕ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸುತ್ತಿದ್ದಾರೆ. ಪೊಲೀಸರು ಇವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಾರೆ. ಆದರೆ ಕೇರಳ ಪೊಲೀಸರು ಸನ್ ಫಿಲ್ಮ್ ಹೊಂದಿರುವ ವಾಹನಗಳ ವಿರುದ್ಧ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.

ಇದಕ್ಕೆ ಸಂಬಂಧಪಟ್ಟ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೊದಲ್ಲಿ ಕೇರಳ ಪೊಲೀಸರು ರಾಜಕಾರಣಿಗಳ ಬೆಂಗಾವಲು ವಾಹನಗಳನ್ನು ನಿಲ್ಲಿಸುವ ಮೂಲಕ ತಪಾಸಣೆ ನಡೆಸುತ್ತಿದ್ದಾರೆ. ಈ ವಾಹನಗಳು ಸನ್ ಫಿಲ್ಮ್ ಹೊಂದಿರುವುದು ಕಂಡು ಬಂದರೆ ದಂಡ ವಿಧಿಸುತ್ತಿದ್ದಾರೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕೇರಳ ಮೋಟಾರು ವಾಹನ ಇಲಾಖೆಯ ಸೂಚನೆಯ ಮೇರೆಗೆ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಸಚಿವರು ಹಾಗೂ ಅಧಿಕಾರಿಗಳ ವಾಹನಗಳನ್ನು ಪರಿಶೀಲಿಸಿ ಸನ್ ಫಿಲ್ಮ್ ಕಂಡು ಬಂದರೆ ತಕ್ಷಣ ಅವುಗಳನ್ನು ತೆಗೆದುಹಾಕುವಂತೆ ಸಾರಿಗೆ ಇಲಾಖೆಯು ಸಂಚಾರ ಪೊಲೀಸರಿಗೆ ನಿರ್ದೇಶನ ನೀಡಿದೆ.

ಈ ಸೂಚನೆಯ ಮೇರೆಗೆ ಸಂಚಾರ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಸಚಿವರ ಅಧಿಕೃತ ವಾಹನಗಳಲ್ಲಿ ಯಾವುದೇ ರೀತಿಯ ಮಾರ್ಪಾಡುಗಳನ್ನು ನಿಷೇಧಿಸಲಾಗಿದೆ. ಮಾರ್ಪಾಡುಗಳು ಕಂಡು ಬಂದರೆ ಸಂಬಂಧಪಟ್ಟ ಇಲಾಖೆಯು ದಂಡ ಪಾವತಿಸಬೇಕಾಗುತ್ತದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಎಲ್ಲಾ ಸಚಿವರುಗಳಿಗೆ ತಮ್ಮ ವಾಹನಗಳಲ್ಲಿರುವ ಸನ್ ಫಿಲ್ಮ್ ತೆಗೆದುಹಾಕುವಂತೆ ನೋಟಿಸ್ ನೀಡಲಾಗಿದೆ. ಈ ಪೈಕಿ ಕೆಲವು ಸಚಿವರು ಸನ್ ಫಿಲ್ಮ್'ಗಳನ್ನು ತೆಗೆದು ಹಾಕಿದ್ದರೆ, ಇನ್ನೂ ಕೆಲವರು ತೆಗೆದು ಹಾಕದೇ ನಿಯಮ ಉಲ್ಲಂಘಿಸುತ್ತಿರುವುದು ಕಂಡು ಬಂದಿದೆ.

ಝಡ್ ಪ್ಲಸ್ ಭದ್ರತೆ ಹೊಂದಿರುವ ಸಚಿವರು ಹಾಗೂ ಅಧಿಕಾರಿಗಳು ಮಾತ್ರ ತಮ್ಮ ಕಾರುಗಳಲ್ಲಿ ಸ್ಕ್ರೀನ್'ಗಳನ್ನು ಅಳವಡಿಸಿಕೊಳ್ಳಬಹುದು. ಇದರ ಜೊತೆಗೆ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಂತಹ ಸಾಂವಿಧಾನಿಕ ಸ್ಥಾನಗಳಲ್ಲಿರುವವರು ತಮ್ಮ ವಾಹನಗಳಲ್ಲಿ ಸ್ಕ್ರೀನ್'ಗಳನ್ನು ಬಳಸಬಹುದು.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ
ಎಕ್ಸ್ ಹಾಗೂ ಝಡ್ ಪ್ಲಸ್ ಭದ್ರತೆ ಹೊಂದಿರುವ ವಾಹನಗಳು ಸ್ಕ್ರೀನ್'ಗಳನ್ನು ಹೊಂದಬಹುದು, ಆದರೆ ಸನ್ ಫಿಲ್ಮ್'ಗಳನ್ನು ಅಳವಡಿಸಿಕೊಳ್ಳುವಂತಿಲ್ಲ. ಅಧಿಕೃತ ವಾಹನದ ಮುಂಭಾಗ ಹಾಗೂ ಹಿಂಭಾಗದಲ್ಲಿ ಕ್ರ್ಯಾಶ್ ಗಾರ್ಡ್ಗಳನ್ನು ಅಳವಡಿಸಿಕೊಳ್ಳುವಂತಿಲ್ಲ.

ಕೇರಳದ ಮೋಟಾರು ವಾಹನ ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧಿಕೃತ ಸರ್ಕಾರಿ ವಾಹನಗಳಲ್ಲಿರುವ ಸನ್ ಫಿಲ್ಮ್ ಹಾಗೂ ಸ್ಕ್ರೀನ್'ಗಳನ್ನು ತೆಗೆದುಹಾಕುವಂತೆ ಆದೇಶ ಹೊರಡಿಸಿದ್ದಾರೆ. ಈ ಆದೇಶದನ್ವಯ ವಿಶೇಷ ವಾಹನ ತಪಾಸಣೆ ನಡೆಸುವಂತೆ ಸಾರಿಗೆ ಆಯುಕ್ತರು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಈ ಚಿತ್ರಗಳನ್ನು ಮನೋರಮಾ ಸುದ್ದಿಯಿಂದ ಪಡೆಯಲಾಗಿದೆ.