ಕೋವಿಡ್ 19 ಸೋಂಕಿತರನ್ನು ಪತ್ತೆಹಚ್ಚುತ್ತೆ ಈ ವಿಶೇಷ ಇನೋವಾ ಕಾರು..!

ಕರೋನಾ ವೈರಸ್ ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ. ಕರೋನಾ ವೈರಸ್‌ ಭಾರತದ ಮೇಲೂ ಪರಿಣಾಮ ಬೀರಿದೆ. ಕೋವಿಡ್ -19 ವೈರಸ್ ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರವು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ.

ಕೋವಿಡ್ 19 ಸೋಂಕಿತರನ್ನು ಪತ್ತೆಹಚ್ಚಲಿದೆ ಈ ಇನೊವಾ ಕಾರು..!

ಸೋಂಕಿತ ರೋಗಿಗಳನ್ನು ಪರೀಕ್ಷಿಸುವಾಗ ಆರೋಗ್ಯ ಕಾರ್ಯಕರ್ತರಿಗೂ ಸೋಂಕು ತಗುಲುವ ಸಾಧ್ಯತೆಗಳಿರುತ್ತವೆ. ಆರೋಗ್ಯ ಕಾರ್ಯಕರ್ತರಿಗೆ ಸೋಂಕು ತಗುಲದಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ಸಮಸ್ಯೆಯನ್ನು ಪರಿಹರಿಸಲು ತಿರಂಗಾ ಕಾರನ್ನು ಕೇರಳಕ್ಕೆ ತರಲಾಗಿದೆ. ಟೊಯೊಟಾ ಇನೊವಾವನ್ನು ಮಾರ್ಪಡಿಸಿ, ಈ ಕಾರ್ ಅನ್ನು ತಯಾರಿಸಲಾಗಿದೆ.

ಕೋವಿಡ್ 19 ಸೋಂಕಿತರನ್ನು ಪತ್ತೆಹಚ್ಚಲಿದೆ ಈ ಇನೊವಾ ಕಾರು..!

ರೋಗಿಗಳನ್ನು ಸುರಕ್ಷಿತವಾಗಿ ಪರೀಕ್ಷಿಸಲು ಈ ಕಾರನ್ನು ಬಳಸಲಾಗುತ್ತದೆ. ಕೋವಿಡ್ -19 ವೈರಸ್ ಸೋಂಕಿತ ರೋಗಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಲು ಕೇರಳ ರಾಜ್ಯದ ಪಥನಮತ್ತಟ್ಟಾ ಜಿಲ್ಲಾಡಳಿತ ಈ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. 3 ಜನ ಆರೋಗ್ಯ ಕಾರ್ಯಕರ್ತರು ಈ ಟೊಯೊಟಾ ಇನೊವಾ ಕಾರಿನಲ್ಲಿ ಕೋವಿಡ್ -19 ರೋಗಿಗಳನ್ನು ಪರೀಕ್ಷಿಸುತ್ತಾರೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಕೋವಿಡ್ 19 ಸೋಂಕಿತರನ್ನು ಪತ್ತೆಹಚ್ಚಲಿದೆ ಈ ಇನೊವಾ ಕಾರು..!

ಅದಕ್ಕೆ ತಕ್ಕಂತೆ ಈ ಕಾರ್ ಅನ್ನು ಮಾರ್ಪಾಡಿಸಲಾಗಿದೆ. ತಪಾಸಣೆಗಾಗಿ ಹೊರಗೆ ನಿಲ್ಲುವವರು ಕಾರಿನೊಳಗಿರುವ ಆರೋಗ್ಯ ಕಾರ್ಯಕರ್ತರನ್ನು ನೋಡಲು ಸಾಧ್ಯವಿಲ್ಲ. ಅಂತೆಯೇ, ಆರೋಗ್ಯ ಕಾರ್ಯಕರ್ತರು ಕಾರಿನಿಂದ ಹೊರಬರುವುದಿಲ್ಲ. ಆರೋಗ್ಯ ಕಾರ್ಯಕರ್ತರು ಹೊರಗಡೆ ನಿಂತವರೊಂದಿಗೆ ಸಾರ್ವಜನಿಕ ಸೂಚನೆ ವ್ಯವಸ್ಥೆಯ ಮೂಲಕ ಮಾತನಾಡುತ್ತಾರೆ.

ಕೋವಿಡ್ 19 ಸೋಂಕಿತರನ್ನು ಪತ್ತೆಹಚ್ಚಲಿದೆ ಈ ಇನೊವಾ ಕಾರು..!

ಆರೋಗ್ಯ ಕಾರ್ಯಕರ್ತರು ಕಾರಿನೊಳಗೆ ಹೋಗಿ ಜನರ ಗುರುತಿನ ದಾಖಲೆಗಳನ್ನು ಪರಿಶೀಲಿಸುತ್ತಾರೆ. ಅವರ ಪ್ರಯಾಣದ ವಿವರ ಹಾಗೂ ಜ್ವರದ ಲಕ್ಷಣಗಳಿವೆಯೇ ಎಂಬುದನ್ನು ಪರೀಕ್ಷಿಸುತ್ತಾರೆ. ನಂತರ ಈ ದಾಖಲೆಗಳ ಜೆರಾಕ್ಸ್ ಕಾಪಿ ತೆಗೆದುಕೊಳ್ಳಲಾಗುತ್ತದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕೋವಿಡ್ 19 ಸೋಂಕಿತರನ್ನು ಪತ್ತೆಹಚ್ಚಲಿದೆ ಈ ಇನೊವಾ ಕಾರು..!

ಈ ಟೊಯೊಟಾ ಇನೊವಾ ಕಾರಿನಲ್ಲಿ ಇನ್ಫ್ರಾರೆಡ್ ಥರ್ಮಾಮೀಟರ್ ಅಳವಡಿಸಲಾಗಿದೆ. ಇದರ ಜೊತೆಗೆ ಥರ್ಮಲ್ ಸ್ಕ್ರೀನ್ ಸಿಸ್ಟಂ, ಟೂ ವೇ ಮೈಕ್ರೊಫೋನ್ ಸಿಸ್ಟಂ ನೀಡಲಾಗಿದೆ. ಜನರೊಂದಿಗೆ ಸಂಪರ್ಕ ಸಾಧಿಸಲು ಆರೋಗ್ಯ ಕಾರ್ಯಕರ್ತರು ಇದನ್ನು ಬಳಸುತ್ತಾರೆ.

ಕೋವಿಡ್ 19 ಸೋಂಕಿತರನ್ನು ಪತ್ತೆಹಚ್ಚಲಿದೆ ಈ ಇನೊವಾ ಕಾರು..!

ಆರೋಗ್ಯ ಕಾರ್ಯಕರ್ತರು ಕಾರಿನಿಂದ ಇಳಿಯದೆ ಈ ಎಲ್ಲಾ ಪ್ರಕ್ರಿಯೆಯನ್ನು ನಡೆಸುತ್ತಾರೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ವಾಹನವನ್ನು ಬಳಸಲಾಗುತ್ತಿದೆ. ಈ ವಾಹನವನ್ನು ಸದ್ಯಕ್ಕೆ ಟೆಸ್ಟಿಂಗ್‌ಗಾಗಿಮಾತ್ರ ಬಳಸಲಾಗುತ್ತಿದೆ. ಈ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕೋವಿಡ್ 19 ಸೋಂಕಿತರನ್ನು ಪತ್ತೆಹಚ್ಚಲಿದೆ ಈ ಇನೊವಾ ಕಾರು..!

ಟೆಸ್ಟಿಂಗ್‌ ಮಾಡುವಾಗ ಕೋವಿಡ್ -19 ವೈರಸ್ ರೋಗಲಕ್ಷಣಗಳು ಪತ್ತೆಯಾದಾಗ ಅಥವಾ ದೇಹದ ಟೆಂಪರೇಚರ್ ಹೆಚ್ಚಾಗಿದ್ದರೆ, ಅವುಗಳ ವಿವರಗಳನ್ನು ಸಂಗ್ರಹಿಸಲಾಗುತ್ತದೆ. ಈ ಲಕ್ಷಣಗಳಿರುವ ವ್ಯಕ್ತಿಯನ್ನು 14 ದಿನಗಳವರೆಗೆ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗುತ್ತದೆ.

ಕೋವಿಡ್ 19 ಸೋಂಕಿತರನ್ನು ಪತ್ತೆಹಚ್ಚಲಿದೆ ಈ ಇನೊವಾ ಕಾರು..!

ಪರೀಕ್ಷೆಯ ನಂತರ ಕೋವಿಡ್ -19 ವೈರಸ್ ರೋಗ ಲಕ್ಷಣ ಕಂಡುಬಂದವರ ವಿವರಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (ಪಿಎಚ್‌ಸಿ) ಕಳುಹಿಸಲಾಗುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅಂತಹ ವ್ಯಕ್ತಿಗಳನ್ನು ಫಾಲೋ ಅಪ್ ಮಾಡಿ, ಪರೀಕ್ಷೆಗೊಳಪಡಿಸುತ್ತವೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಮಾಡಿಫೈ ಮಾಡಲಾದ ಈ ಟೊಯೊಟಾ ಇನೊವಾವನ್ನು ಆರ್‌ಎಸ್‌ವಿ -1 ಎಂದು ಕರೆಯಲಾಗುತ್ತದೆ. ಆರ್‌ಎಸ್‌ವಿ -1 ಎಂದರೆ ರಾಪಿಡ್ ಸ್ಕ್ರೀನ್ ವೆಹಿಕಲ್‌. ಇದರ ಜೊತೆಗೆ ಆರ್‌ಎಸ್‌ವಿ -2 ವಾಹನವನ್ನು ಬಿಡುಗಡೆಗೊಳಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಈ ವಾಹನಗಳು ಶಂಕಿತರಿಂದ ಸ್ಯಾಂಪಲ್‌ಗಳನ್ನು ಸಂಗ್ರಹಿಸುತ್ತವೆ.

ಕೋವಿಡ್ 19 ಸೋಂಕಿತರನ್ನು ಪತ್ತೆಹಚ್ಚಲಿದೆ ಈ ಇನೊವಾ ಕಾರು..!

ಸದ್ಯಕ್ಕೆ ಆರ್‌ಎಸ್‌ವಿ -2 ವಾಹನವು ಉತ್ಪಾದನೆಯ ಹಂತದಲ್ಲಿದೆ. ಕೇರಳ ಸರ್ಕಾರದ ಈ ಕ್ರಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಕರೋನಾ ಸೋಂಕಿತರು ಚೇತರಿಸಿಕೊಳ್ಳಲು ಹಾಗೂ ವೈರಸ್ ಹರಡದಂತೆ ತಡೆಯಲು ಕೇರಳ ಸರ್ಕಾರವು ಕೈಗೊಂಡಿರುವ ಕ್ರಮಗಳಿಗೆ ಭಾರತದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

Most Read Articles

Kannada
English summary
Modified Toyota Innova detects Covid 19. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X