ನಿಯಮಗಳ ಉಲ್ಲಂಘನೆಯನ್ನು ಪತ್ತೆ ಹಚ್ಚಲು ಹೊಸ ಸಾಧನಗಳೊಂದಿಗೆ ಸಜ್ಜಾದ ಸಾರಿಗೆ ಇಲಾಖೆ

ಕೇರಳ ರಾಜ್ಯದ ಸಾರಿಗೆ ಇಲಾಖೆಯು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದೆ. ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕೇರಳದ ಸಾರಿಗೆ ಇಲಾಖೆಯು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ.

ನಿಯಮಗಳ ಉಲ್ಲಂಘನೆಯನ್ನು ಪತ್ತೆ ಹಚ್ಚಲು ಹೊಸ ಸಾಧನಗಳೊಂದಿಗೆ ಸಜ್ಜಾದ ಸಾರಿಗೆ ಇಲಾಖೆ

ಈಗ ಸಂಚಾರಿ ನಿಯಮಗಳನ್ನು ಮತ್ತಷ್ಟು ಉತ್ತಮವಾಗಿ ಜಾರಿಗೊಳಿಸಲು ಹೊಸ ಉಪಕರಣಗಳನ್ನು ಖರೀದಿಸಿದೆ. ಆಫ್ಟರ್ ಮಾರ್ಕೆಟ್ ಸೈಲೆನ್ಸರ್ ಹಾಗೂ ಆಫ್ಟರ್ ಮಾರ್ಕೆಟ್ ಹಾರ್ನ್ ಗಳ ಪರಿಶೀಲನೆ ಸೇರಿದಂತೆ ಹಲವು ನಿಯಮಗಳ ಉಲ್ಲಂಘನೆಯನ್ನು ಪರಿಶೀಲಿಸಲು ಹೊಸ ಉಪಕರಣಗಳನ್ನು ಖರೀದಿಸುವುದಾಗಿ ಸಾರಿಗೆ ಇಲಾಖೆಯು ಕಳೆದ ವರ್ಷ ಘೋಷಿಸಿತ್ತು.

ನಿಯಮಗಳ ಉಲ್ಲಂಘನೆಯನ್ನು ಪತ್ತೆ ಹಚ್ಚಲು ಹೊಸ ಸಾಧನಗಳೊಂದಿಗೆ ಸಜ್ಜಾದ ಸಾರಿಗೆ ಇಲಾಖೆ

ಅದರಂತೆ ಈಗ ಹೊಸ ಉಪಕರಣಗಳನ್ನು ಖರೀದಿಸಿ ಸಾರಿಗೆ ಇಲಾಖೆಯ ಅಧಿಕಾರಿಗಳ ಅಧಿಕೃತ ವಾಹನಗಳಲ್ಲಿ ಅಳವಡಿಸಲಾಗಿದೆ. ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ಹೊಸದಾಗಿ ಖರೀದಿಸಿದ ಉಪಕರಣಗಳನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿದರು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ನಿಯಮಗಳ ಉಲ್ಲಂಘನೆಯನ್ನು ಪತ್ತೆ ಹಚ್ಚಲು ಹೊಸ ಸಾಧನಗಳೊಂದಿಗೆ ಸಜ್ಜಾದ ಸಾರಿಗೆ ಇಲಾಖೆ

ಅವರು ಪ್ರದರ್ಶಿಸಿದ ಮೊದಲ ಸಾಧನ ಲಕ್ಸ್ ಮೀಟರ್. ಇದು ಬೆಳಕಿನ ತೀವ್ರತೆಯ ಪ್ರಮಾಣವನ್ನು ಅಳೆಯುವ ಸಾಧನವಾಗಿದೆ. ಆಫ್ಟರ್ ಮಾರ್ಕೆಟ್ ಹೆಡ್‌ಲೈಟ್ ಗಳ ಬಳಕೆಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಆದರೆ ಅನೇಕ ಜನರು ತಮ್ಮ ವಾಹನಗಳಲ್ಲಿ ಆಫ್ಟರ್ ಮಾರ್ಕೆಟ್ ಹೆಡ್‌ಲೈಟ್ ಗಳನ್ನು ಅಳವಡಿಸಿಕೊಂಡಿದ್ದಾರೆ.

ನಿಯಮಗಳ ಉಲ್ಲಂಘನೆಯನ್ನು ಪತ್ತೆ ಹಚ್ಚಲು ಹೊಸ ಸಾಧನಗಳೊಂದಿಗೆ ಸಜ್ಜಾದ ಸಾರಿಗೆ ಇಲಾಖೆ

ವಾಹನಗಳಲ್ಲಿರುವ ಹೆಡ್‌ಲೈಟ್ ಗಳು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಬೆಳಕು ಹೊರ ಸೂಸುತ್ತಿವೆಯೇ ಎಂಬುದನ್ನು ಈ ಸಾಧನವು ಪತ್ತೆ ಹಚ್ಚಲಿದೆ. ಹೆಚ್ಚಿನ ಪ್ರಕಾಶಮಾನ ಹೊಂದಿರುವ ಹೆಡ್‌ಲೈಟ್ ಗಳು ಎದುರುಗಡೆಯಿಂದ ಬರುತ್ತಿರುವ ವಾಹನ ಚಾಲಕರ ಕಣ್ಣುಗಳಿಗೆ ಬಡಿದು ಅಪಘಾತಗಳಿಗೆ ಕಾರಣವಾಗುತ್ತಿವೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ನಿಯಮಗಳ ಉಲ್ಲಂಘನೆಯನ್ನು ಪತ್ತೆ ಹಚ್ಚಲು ಹೊಸ ಸಾಧನಗಳೊಂದಿಗೆ ಸಜ್ಜಾದ ಸಾರಿಗೆ ಇಲಾಖೆ

ಸಾರಿಗೆ ಇಲಾಖೆಯ ಅಧಿಕಾರಗಳ ವಾಹನಗಳಲ್ಲಿ ಸೌಂಡ್ ಮೀಟರ್ ಸಹ ಅಳವಡಿಸಲಾಗಿದೆ. ಈ ಸಾಧನವು ವಾಹನಗಳಲ್ಲಿರುವ ಶಬ್ದದ ಪ್ರಮಾಣವನ್ನು ಪರಿಶೀಲಿಸುತ್ತದೆ. ಇದರಿಂದ ವಾಹನಗಳಲ್ಲಿ ಆಫ್ಟರ್ ಮಾರ್ಕೆಟ್ ಸೈಲೆನ್ಸರ್ ಗಳನ್ನು ಅಳವಡಿಸಿಕೊಂಡು ಕರ್ಕಶ ಶಬ್ದವನ್ನುಂಟು ಮಾಡುವವರಿಗೆ ದಂಡ ವಿಧಿಸಲು ಸಹಾಯವಾಗಲಿದೆ.

ನಿಯಮಗಳ ಉಲ್ಲಂಘನೆಯನ್ನು ಪತ್ತೆ ಹಚ್ಚಲು ಹೊಸ ಸಾಧನಗಳೊಂದಿಗೆ ಸಜ್ಜಾದ ಸಾರಿಗೆ ಇಲಾಖೆ

ಕೆಲವರು ಹೆಚ್ಚಿನ ಶಬ್ದ ಮಾಡುವ ಸಲುವಾಗಿಯೇ ತಮ್ಮ ವಾಹನಗಳಲ್ಲಿ ಆಫ್ಟರ್ ಮಾರ್ಕೆಟ್ ಸೈಲೆನ್ಸರ್ ಗಳನ್ನು ಅಳವಡಿಸಿಕೊಳ್ಳುತ್ತಾರೆ. ಸೌಂಡ್ ಮೀಟರ್ ನಿಂದ ಆಫ್ಟರ್ ಮಾರ್ಕೆಟ್ ಸೈಲೆನ್ಸರ್ ಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ನಿಯಮಗಳ ಉಲ್ಲಂಘನೆಯನ್ನು ಪತ್ತೆ ಹಚ್ಚಲು ಹೊಸ ಸಾಧನಗಳೊಂದಿಗೆ ಸಜ್ಜಾದ ಸಾರಿಗೆ ಇಲಾಖೆ

ಸೈಲೆನ್ಸರ್ ಗಳನ್ನು ಮಾತ್ರವಲ್ಲದೇ ಆಫ್ಟರ್ ಮಾರ್ಕೆಟ್ ಹಾರ್ನ್ ಗಳನ್ನು ಸಹ ಈ ಸಾಧನದಿಂದ ಪತ್ತೆ ಹಚ್ಚಬಹುದು. ಬಹುತೇಕ ಜನರು ಕಾನೂನುಬಾಹಿರವಾಗಿ ಆಫ್ಟರ್ ಮಾರ್ಕೆಟ್ ಹಾರ್ನ್ ಗಳನ್ನು ಬಳಸುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯು ದಂಡ ವಿಧಿಸಲು ಮುಂದಾಗಿದೆ.

ನಿಯಮಗಳ ಉಲ್ಲಂಘನೆಯನ್ನು ಪತ್ತೆ ಹಚ್ಚಲು ಹೊಸ ಸಾಧನಗಳೊಂದಿಗೆ ಸಜ್ಜಾದ ಸಾರಿಗೆ ಇಲಾಖೆ

ಈ ಎರಡು ಸಾಧನಗಳು ಮಾತ್ರವಲ್ಲದೇ ಆಲ್ಕೋಹಾಲ್ ಮೀಟರ್ ಅನ್ನು ಸಹ ಸಾರಿಗೆ ಇಲಾಖೆ ಅಧಿಕಾರಿಗಳ ವಾಹನಗಳಲ್ಲಿ ಅಳವಡಿಸಲಾಗಿದೆ. ವಾಹನ ಸವಾರರು ಡ್ರಿಂಕ್ ಅಂಡ್ ಡ್ರೈವ್ ಮಾಡಿರುವರೋ ಇಲ್ಲವೋ ಎಂದು ಪರೀಕ್ಷಿಸುವ ವೇಳೆಯಲ್ಲಿ ನಿಯಮವನ್ನು ಉಲ್ಲಂಘಿಸಿರುವುದು ಕಂಡು ಬಂದರೆ ಆ ವ್ಯಕ್ತಿಯ ಫೋಟೋವನ್ನು ಈ ಸಾಧನವು ತೆಗೆದುಕೊಳ್ಳುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈ ಆಧುನಿಕ ಸಾಧನಗಳ ನೆರವಿನೊಂದಿಗೆ ಮುಂಬರುವ ದಿನಗಳಲ್ಲಿ ನಿಯಮಗಳನ್ನು ಉಲ್ಲಂಘಿಸುತ್ತಿರುವವರಿಗೆ ವಿಧಿಸುತ್ತಿರುವ ದಂಡದ ಪ್ರಮಾಣವು ಹೆಚ್ಚಾಗುವ ಸಾಧ್ಯತೆಗಳಿವೆ. ದಂಡ ವಿಧಿಸುವುದು ಹೆಚ್ಚಿದಂತೆಲ್ಲಾ ನಿಯಮಗಳ ಉಲ್ಲಂಘನೆ ಪ್ರಮಾಣವು ಕಡಿಮೆಯಾಗಬಹುದು ಎಂದು ಹೇಳಲಾಗಿದೆ.

ನಿಯಮಗಳ ಉಲ್ಲಂಘನೆಯನ್ನು ಪತ್ತೆ ಹಚ್ಚಲು ಹೊಸ ಸಾಧನಗಳೊಂದಿಗೆ ಸಜ್ಜಾದ ಸಾರಿಗೆ ಇಲಾಖೆ

ಈ ರೀತಿಯ ಅತ್ಯಾಧುನಿಕ ಸಾಧನಗಳೊಂದಿಗೆ ಭಾರತದಲ್ಲಿ ವಾಹನಗಳ ತಪಾಸಣೆ ನಡೆಸುತ್ತಿರುವ ರಾಜ್ಯ ಬಹುಶಃ ಕೇರಳ ಮಾತ್ರವೇ ಇರಬಹುದು. ಬೇರೆ ಯಾವುದೇ ರಾಜ್ಯವು ಈ ರೀತಿಯ ಅತ್ಯಾಧುನಿಕ ಸಾಧನಗಳನ್ನು ಹೊಂದಿರುವ ಸಾಧ್ಯತೆಗಳಿಲ್ಲ.

Most Read Articles

Kannada
English summary
Kerala transport department gets high tech devices to check violations. Read in Kannada.
Story first published: Wednesday, October 21, 2020, 12:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X