ಆ್ಯಂಬುಲೆನ್ಸ್‌ ಚಲಾಯಿಸಿ ಗಮನ ಸೆಳೆದ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್‌

ಕೊರೋನಾ ಸೋಂಕಿನ ಆರ್ಭಟದಿಂದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸಂಕಷ್ಟಕದ ಸಮಯದಲ್ಲಿ ಹಲವು ರಾಜಕೀಯ ಮುಖಂಡರು ಜನರ ನೆರವಿಗೆ ನಿಂತಿದ್ದಾರೆ. ಇದರಲ್ಲಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು ಮುಂಚೂಣಿಯಲ್ಲಿದ್ದಾರೆ.

ಆ್ಯಂಬುಲೆನ್ಸ್‌ ಚಲಾಯಿಸಿ ಗಮನ ಸೆಳೆದ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್‌

ಇದೀಗ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಲ್ಕರ್ ಸಹ ಇದೇ ರೀತಿ ಜನರಿಗೆ ನೆರವಾಗುತ್ತಿದ್ದಾರೆ. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ನಾಲ್ಕು ಆ್ಯಂಬುಲೆನ್ಸ್ ಖರೀದಿಸಿ ಖಾನಾಪೂರ ತಾಲೂಕು ಆಸ್ಪತ್ರೆಗೆ ಶಾಸಕಿ ಅಂಜಲಿ ನಿಂಬಾಳ್ಕರ್ ಹಸ್ತಾಂತರಿಸಿದರು. ಇದೇ ವೇಳೆ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ಆ್ಯಂಬುಲೆನ್ಸ್ ಚಲಾಯಿಸುವ ಮೂಲಕ ಗಮನ ಸೆಳೆದರು.

ಆ್ಯಂಬುಲೆನ್ಸ್‌ ಚಲಾಯಿಸಿ ಗಮನ ಸೆಳೆದ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್‌

ಸದ್ಯ ಬೆಳಗಾವಿಯಲ್ಲಿ ಕೊರೋನಾ ಸೋಂಕಿನ ಪ್ರಮಾಣ ಕೊಂಚ ಮಟ್ಟಿಗೆ ಕಡಿಮೆಯಾಗಿದ್ದು, ಸೋಂಕು ನಿವಾರಣೆಗೆ ಹಲವು ಕ್ರಮ ಕೈಗೊಳ್ಳಲಾಗುತ್ತಿದೆ. ತಮ್ಮ ಕ್ಷೇತ್ರದ ಜನತೆಯ ಕಷ್ಟವನ್ನು ತಿಳಿಯಲು ಶಾಸಕಿ ಅಂಜಲಿ ಆವರು ಈ ಹಿಂದೆ ಖುದ್ದಾಗಿ ಸ್ಕೂಟಿ ಏರಿ ತನ್ನ ಕ್ಷೇತ್ರದ ಗ್ರಾಮಗಳಿಗೆ ಭೇಟಿ ನೀಡಿದ್ದರು.

ಆ್ಯಂಬುಲೆನ್ಸ್‌ ಚಲಾಯಿಸಿ ಗಮನ ಸೆಳೆದ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್‌

ಕಳೆದ ವಾರ ಶಾಸಕಿ ಅಂಜಲಿ ತಮ್ಮ ಸ್ವಂತ ಖರ್ಚಿನಲ್ಲಿ 8 ಆಕ್ಸಿಜನ್ ಕಾನ್ಸಟ್ರೇಟರ್ ಖರೀದಿಸಿ ತಾಲೂಕು ಆಸ್ಪತ್ರೆಗೆ ನೀಡಿದ್ದರು. ಹೀಗೆ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ತಮ್ಮ ಕ್ಷೇತ್ರದ ಜನರಿಗೆ ನೆರವಾಗುತ್ತಿದ್ದಾರೆ.

ಆ್ಯಂಬುಲೆನ್ಸ್‌ ಚಲಾಯಿಸಿ ಗಮನ ಸೆಳೆದ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್‌

ವರದಿಗಳ ಪ್ರಕಾರ, ಖಾನಾಪುರ ಕ್ಷೇತ್ರದಲ್ಲಿ ಎರಡನೇ ಅಲೆಯ ಆರ್ಭಟ ಹೆಚ್ಚಾಗಲು ಮುಖ್ಯ ಕಾರಣ, ನೆರೆಯ ಗೋವಾ ಹಾಗೂ ಮಹಾರಾಷ್ಟ್ರಕ್ಕೆ ಖಾನಾಪುರ ತಾಲೂಕಿನ ಬಹುತೇಕರು ವಲಸೆ ಹೋಗುತ್ತಾರೆ. ಉಭಯ ರಾಜ್ಯಗಳಲ್ಲಿ ಲಾಕ್​​​ಡೌನ್ ಇರುವ ಕಾರಣ ಅವರೆಲ್ಲ ತಮ್ಮೂರಿಗೆ ಮರಳಿದ್ದಾರೆ.

ಆ್ಯಂಬುಲೆನ್ಸ್‌ ಚಲಾಯಿಸಿ ಗಮನ ಸೆಳೆದ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್‌

ಹೀಗಾಗಿ ವಲಸಿಗರಿಂದ ಕ್ಷೇತ್ರದ ಗ್ರಾಮೀಣ ಭಾಗಗಳಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಿದೆ. ಆದರೆ ಕಳೆದ ಕೆಲವು ದಿನಗಳಿಂದ ಖಾನಾಪುರದಲ್ಲಿ ಕರೋನಾ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿದೆ.

ಆ್ಯಂಬುಲೆನ್ಸ್‌ ಚಲಾಯಿಸಿ ಗಮನ ಸೆಳೆದ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್‌

ಇನ್ನು ದಾವಣಗೆರೆ ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಶಾಸಕ ಹಾಗೂ ಸಿಎಂ ಯಡಿಯೂರಪ್ಪರ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಎಂಪಿ ರೇಣುಕಾಚಾರ್ಯ ಅವರು ತಮ್ಮ ಕ್ಷೇತ್ರದಲ್ಲಿರುವ ಜನರಿಗಾಗಿ ಮತ್ತು ಕರೋನಾ ಸೋಂಕಿತರಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.

ತಾವೇ ಕೊಡುಗೆಯಾಗಿ ನೀಡಿದ್ದ ಆ್ಯಂಬುಲೆನ್ಸ್ ಚಾಲಕರಾಗಿ ಕೊರೋನಾದಿಂದ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ಸಾಗಿಸಿ ಅವರ ಕುಟುಂಬಕ್ಕೆ ವೈಯಕ್ತಿಕವಾಗಿ ಧನಸಹಾಯ ಸಹ ಮಾಡಿದ್ದಾರೆ. ಇವರ ಕೆಲಸಕ್ಕೆ ಜನರು ಕೂಡ ಇವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಆ್ಯಂಬುಲೆನ್ಸ್‌ ಚಲಾಯಿಸಿ ಗಮನ ಸೆಳೆದ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್‌

ಒಟ್ಟಿನಲ್ಲಿ ತಮ್ಮ ಕ್ಷೇತ್ರದ ಜನರ ಕಷ್ಟಕ್ಕೆ ಹಲವು ನಾಯಕರು ನೆರವಾಗುತ್ತಿದ್ದಾರೆ. ಇನ್ನು ಕಷ್ಟಕ್ಕೆ ನೆರವಾಗದ ನಾಯಕರಿಗೆ ಜನರು ಮುಂದಿನ ಚುನಾವಣೆಗಳಲ್ಲಿ ಪಾಠ ಕಲಿಸಬಹುದು. ಇನ್ನು ರಾಜ್ಯಾದಂತ್ಯ ಕರೋನಾ ಸೋಂಕಿನ ಪ್ರಕರಣಗಳು ಇಳಿಕೆಯಾಗುವುದರಿಂದು ಸಮಾಧಾನಕರ ಸಂಗತಿ.

Most Read Articles

Kannada
English summary
Anjali Nimbalkar MLA Khanapur Drive Ambulance. Read In Kannada.
Story first published: Saturday, June 12, 2021, 18:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X