ಕಿಯಾ ಮೋಟಾರ್ಸ್ ಸಂಸ್ಥೆಯ ಈ ಕಾರ್ಯವನ್ನು ನಾವು ಮೆಚ್ಚಲೇಬೇಕು...

ದಕ್ಷಿಣ ಕೊರಿಯಾದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಕಿಯಾ ಮೋಟಾರ್ಸ್ ಸದ್ಯ ಭಾರತದಲ್ಲಿ ತನ್ನ ವಾಣಿಜ್ಯ ಚಟುವಟಿಕೆಗಳನ್ನು ಆರಂಭಗೊಳಿಸಿ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

By Praveen Sannamani

ದಕ್ಷಿಣ ಕೊರಿಯಾದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಕಿಯಾ ಮೋಟಾರ್ಸ್ ಸದ್ಯ ಭಾರತದಲ್ಲಿ ತನ್ನ ವಾಣಿಜ್ಯ ಚಟುವಟಿಕೆಗಳನ್ನು ಆರಂಭಗೊಳಿಸಿ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಈ ಮಧ್ಯೆ ಭಾರತದ ಕಿರಿಯ ಫುಟ್‌ಬಾಲ್ ತಂಡಕ್ಕೆ ಹೊಸದೊಂದು ಆಫರ್ ನೀಡಿರುವುದು ಆಟೋ ಉದ್ಯಮದಲ್ಲಿ ಚರ್ಚೆಗೆ ಕಾರಣವಾಗಿದೆ.

ಕಿಯಾ ಮೋಟಾರ್ಸ್ ಸಂಸ್ಥೆಯ ಈ ಕಾರ್ಯವನ್ನು ನಾವು ಮೆಚ್ಚಲೇಬೇಕು...

ರಷ್ಯಾದಲ್ಲಿ ಆರಂಭವಾಗಲಿರುವ 2018ರ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಆಟೋ ವಿಭಾಗದ ಪಾಲುದಾರರಾಗಿರುವ ಕಿಯಾ ಮೋಟಾರ್ಸ್ ಸಂಸ್ಥೆಯು ಭಾರತದಲ್ಲಿ ತನ್ನ ಹೊಸ ಕಾರುಗಳನ್ನು ಬಿಡುಗಡೆಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಕಿರಿಯ ಫುಟ್‌ಬಾಲ್ ತಂಡದ ಆರು ಉದಯೊನ್ಮುಖ ಆಟಗಾರರಿಗೆ ಫಿಫಾ ಪಂದ್ಯಗಳಲ್ಲಿ ಭಾಗಿಯಾಗುವ ಅವಕಾಶವನ್ನು ನೀಡಿದೆ.

ಕಿಯಾ ಮೋಟಾರ್ಸ್ ಸಂಸ್ಥೆಯ ಈ ಕಾರ್ಯವನ್ನು ನಾವು ಮೆಚ್ಚಲೇಬೇಕು...

ಆರು ಆಟಗಾರರ ಸಂಪೂರ್ಣ ಖರ್ಚು ವೆಚ್ಚವನ್ನು ಕಿಯಾ ಸಂಸ್ಥೆಯೇ ಭರಿಸಲಿದ್ದು,ಆಯ್ಕೆಯಾದ ಒಟ್ಟು 6 ವಿದ್ಯಾರ್ಥಿಗಳಲ್ಲಿ ಇಬ್ಬರಿಗೆ ಮ್ಯಾಚ್ ಬಾಲ್ ಕ್ಯಾರಿಯರ್ ಆಗುವ ಅವಕಾಶ ಒದಗಿಸಿರುವುದು ಭಾರತದ ಫುಟ್‌ಬಾಲ್ ಅಭಿಮಾನಿಗಳ ಪಾಲಿಗೆ ಇದೊಂದು ಖುಷಿಯ ವಿಚಾರ ಎಂದೇ ಹೇಳಬಹುದು.

ಕಿಯಾ ಮೋಟಾರ್ಸ್ ಸಂಸ್ಥೆಯ ಈ ಕಾರ್ಯವನ್ನು ನಾವು ಮೆಚ್ಚಲೇಬೇಕು...

ಮತ್ತೊಂದು ಪ್ರಮುಖ ವಿಚಾರ ಅಂದ್ರೆ ಮ್ಯಾಚ್ ಬಾಲ್ ಕ್ಯಾರಿಯರ್ ಆಗಿ ಬೆಂಗಳೂರಿನ ರಿಷಿ ತೇಜ್(10 ವರ್ಷ) ಮತ್ತು ಚೆನ್ನೈನ ನಥಾನಾ ಜಾನ್ ಕೆ(11 ವರ್ಷ) ಆಯ್ಕೆಯಾಗಿದ್ದು, ಇನ್ನುಳಿದ ನಾಲ್ವರು ಆಟಗಾರರು ಫಿಫಾ ಪಂದ್ಯಗಳನ್ನ ವೀಕ್ಷಣೆ ಮಾಡಲಿದ್ದಾರೆ.

ಕಿಯಾ ಮೋಟಾರ್ಸ್ ಸಂಸ್ಥೆಯ ಈ ಕಾರ್ಯವನ್ನು ನಾವು ಮೆಚ್ಚಲೇಬೇಕು...

ಇನ್ನು ಕಿಯಾ ಮೋಟಾರ್ಸ್ ಹೊಸ ಅವಕಾಶದಿಂದಾಗಿ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಭಾರತೀಯ ಮೂಲದ ಮ್ಯಾಚ್ ಬಾಲ್ ಕ್ಯಾರಿಯರ್ ಆಗಿಯಾಗಿತ್ತಿರುವುದು ಇದೇ ಮೊದಲ ಎನ್ನಲಾಗಿದ್ದು, 10 ವರ್ಷದಿಂದ 14 ವರ್ಷದೊಳಗಿನ ಉದಯೊನ್ಮುಖ ಆಟಗಾರರನ್ನು ಮಾತ್ರ ಇಲ್ಲಿ ಆಯ್ಕೆ ಮಾಡಲಾಗಿದೆ.

ಕಿಯಾ ಮೋಟಾರ್ಸ್ ಸಂಸ್ಥೆಯ ಈ ಕಾರ್ಯವನ್ನು ನಾವು ಮೆಚ್ಚಲೇಬೇಕು...

ಇದೇ ಅವಕಾಶಕ್ಕಾಗಿ ಸುಮಾರು 1600 ಕಿರಿಯ ಫುಟ್‌ಬಾಲ್ ಆಟಗಾರರು ಭಾಗಿಯಾಗಿದ್ದರು. ಇದರಲ್ಲಿ ಫುಟ್ ಬಾಲ್ ಕೌಶಲ್ಯವನ್ನು ಹೊಂದಿರುವ ಕಿರಿಯ ವಯಸ್ಸಿನ 6 ಉದಯೊನ್ಮುಖ ಆಟಗಾರರನ್ನು ಕಿಯಾ ಮೋಟಾರ್ಸ್ ಆಯ್ಕೆ ಮಾಡಿದೆ.

ಕಿಯಾ ಮೋಟಾರ್ಸ್ ಸಂಸ್ಥೆಯ ಈ ಕಾರ್ಯವನ್ನು ನಾವು ಮೆಚ್ಚಲೇಬೇಕು...

ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಅವರ ಮಾರ್ಗದರ್ಶನದಲ್ಲೇ ಈ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಇವರೊಟ್ಟಿಗೆ ಅವರ ಪೋಷಕರು ಸಹ ಫಿಫಾ ಟೂರ್ನಿಗಳಲ್ಲಿ ಭಾಗಿಯಾಗುವ ಅವಕಾಶವನ್ನು ಕಿಯಾ ಮೋಟಾರ್ಸ್ ಕಲ್ಪಿಸಿದೆ.

ಕಿಯಾ ಮೋಟಾರ್ಸ್ ಸಂಸ್ಥೆಯ ಈ ಕಾರ್ಯವನ್ನು ನಾವು ಮೆಚ್ಚಲೇಬೇಕು...

ಜೂನ್ 18ರಂದು ನಡೆಯಲಿರುವ ಬೆಜ್ಜಿಯಂ v/s ಪನಾಮಾ ಪಂದ್ಯ ಮತ್ತು ಜೂನ್ 22ರಂದು ನಡಯಲಿರುವ ಬ್ರೆಜಿಲ್ v/s ಕೊಸ್ಟಾರಿಕಾ ನಡುವಿನ ಪಂದ್ಯಗಳಲ್ಲಿ ರಿಷಿ ತೇಜ್ ಹಾಗೂ ನಥಾನಾ ಜಾನ್ ಕೆ ಮ್ಯಾಚ್ ಬಾಲ್ ಕ್ಯಾರಿಯರ್ ಆಗಿ ಕಾಣಿಸಿಕೊಳ್ಳಲಿದ್ದು, ಈ ಅವಕಾಶಕ್ಕಾಗಿ ವಿಶ್ವದ ಪ್ರಮುಖ ರಾಷ್ಟ್ರಗಳ ಯುವ ಫುಟ್‌ಬಾಲ್ ಪ್ರತಿಭೆಗಳಲ್ಲಿ ಎಲ್ಲಿಲ್ಲದ ಪೈಪೋಟಿ ಇದೆ.

ಕಿಯಾ ಮೋಟಾರ್ಸ್ ಸಂಸ್ಥೆಯ ಈ ಕಾರ್ಯವನ್ನು ನಾವು ಮೆಚ್ಚಲೇಬೇಕು...

ಇದಕ್ಕೆ ಕಾರಣ, ಮ್ಯಾಚ್ ಬಾಲ್ ಕ್ಯಾರಿಯರ್ ಆಗಿ ಆಯ್ಕೆಯಾಗಿದ್ದ ಅದೆಷ್ಟೋ ಆಟಗಾರರು ಇಂದು ವಿವಿಧ ತಂಡಗಳನ್ನು ಪ್ರತಿನಿಧಿಸುತ್ತಿದ್ದು, ಇದೇ ಉದ್ದೇಶದಿಂದಲೇ ಕಿಯಾ ಮೋಟಾರ್ಸ್ ಸಂಸ್ಥೆಯು ಸಹ ಭಾರತೀಯ ಉದಯೊನ್ಮುಖ ಆಟಗಾರರಿಗೆ ಒಂದು ವಿಶೇಷ ಅವಕಾಶ ಕಲ್ಪಿಸಿದೆ ಎನ್ನಬಹುದು.

ಕಿಯಾ ಮೋಟಾರ್ಸ್ ಸಂಸ್ಥೆಯ ಈ ಕಾರ್ಯವನ್ನು ನಾವು ಮೆಚ್ಚಲೇಬೇಕು...

ಇದಲ್ಲದೇ ಭಾರತದಲ್ಲಿ ತನ್ನ ಹೊಸ ಕಾರು ಉತ್ಪನ್ನಗಳನ್ನು ಪರಿಚಯಿಸಲು ಸಿದ್ದವಾಗಿರುವ ಕಿಯಾ ಮೋಟಾರ್ಸ್ ಸಂಸ್ಥೆಯು 15 ಸಾವಿರ ಕೋಟಿ ಬಂಡವಾಳದೊಂದಿಗೆ ಆಂಧ್ರಪ್ರದೇಶದಲ್ಲಿ ಹೊಸ ಕಾರು ಉತ್ಪಾದನಾ ಘಟಕ ತೆರೆದಿದ್ದು, 2019ರ ಆರಂಭದಲ್ಲಿ ವಿವಿಧ ನಮೂನೆಯ ಹಲವು ಕಾರುಗಳನ್ನು ಬಿಡುಗಡೆ ಮಾಡುವ ತವಕದಲ್ಲಿದೆ.

Most Read Articles

Kannada
Read more on kia motors ಕಿಯಾ
English summary
Kia Fulfills The Dream Of 6 Young Indian Footballers.
Story first published: Tuesday, June 12, 2018, 14:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X