ಕಾರಿನಲ್ಲಿ ಕಿಸ್ ಮಾಡೋದು ಭಾರತದಲ್ಲಿ ಕಾನೂನುಬದ್ಧವೇ?

ಭಾರತದಲ್ಲಿ ಪುರುಷ ಮಹಿಳೆಯನ್ನು ಅಥವಾ ಮಹಿಳೆಯು ಪುರುಷನಿಗೆ ಕಾರಿನಲ್ಲಿ ಚುಂಬಿಸುವುದು ಕಾನೂನುಬಾಹಿರ ಚಟುವಟಿಕೆಯಾಗಿದೆ. ಈ ಬಗ್ಗೆ ದೇಶದಲ್ಲಿ ನೇರವಾದ ಕಾನೂನು ಇಲ್ಲದಿದ್ದರೂ ಇಂತಹ ಚಟುವಟಿಕೆಗಳಲ್ಲಿ ತೊಡಗುವವರನ್ನು ಪೊಲೀಸರು ಬಂಧಿಸಲು ಹಾಗೂ ಶಿಕ್ಷಿಸಲು ಕಾನೂನಿನಲ್ಲಿ ಅವಕಾಶವಿದೆ. ಅದರ ಬಗ್ಗೆ ವಿವರವಾಗಿ ಇಲ್ಲಿ ತಿಳಿಯೋಣ.

ಕಾರು ಕೇವಲ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಚಲಿಸಲು ಬಳಸುವ ವಾಹನವಲ್ಲ. ಅದು ನಮ್ಮ ಭಾವನಾತ್ಮಕ ಸಂಬಂಧದೊಂದಿಗೆ ಬೆಸೆದುಕೊಂಡಿರುತ್ತದೆ. ಅನೇಕರು, ತಮ್ಮ ಕಾರುಗಳಲ್ಲಿ ಜೀವನವನ್ನು ಬದಲಾಯಿಸುವ ಪ್ರಮುಖ ನಿರ್ಧಾರಗಳನ್ನು ಸಹ ಮಾಡುತ್ತಾರೆ. ಕಾರು ಪ್ರಯಾಣವು ತುಂಬಾ ರೋಮ್ಯಾಂಟಿಕ್ ಆಗಿರುತ್ತದೆ ಎಂದೇ ಹೇಳಬಹುದು. ಪ್ರವಾಸಿ ತಾಣಗಳಿಗೆ ಕಾರಿನಲ್ಲಿ ಭೇಟಿ ನೀಡುವ ಪ್ರೇಮಿಗಳು ಮತ್ತು ನವದಂಪತಿಗಳು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಪರಸ್ಪರ ಚುಂಬಿಸುವುದು ಈಗಿನ ದಿನಗಳಲ್ಲಿ ಸಾಮಾನ್ಯವಾಗಿದೆ.

ಕಾರಿನಲ್ಲಿ ಕಿಸ್ ಮಾಡೋದು ಭಾರತದಲ್ಲಿ ಕಾನೂನುಬದ್ಧವೇ?

ಬಹಿರಂಗವಾಗಿ ಅಥವಾ ಕಾರಿನಲ್ಲಿ ಚುಂಬಿಸುವುದು ಭಾರತದಲ್ಲಿ ಅಪರಾಧವಾಗಿದೆ. 'ಭಾರತೀಯ ದಂಡ ಸಂಹಿತೆ' ದೇಶದಲ್ಲಿ ಸಾರ್ವಜನಿಕವಾಗಿ ಚುಂಬಿಸುವುದನ್ನು ನಿಷೇಧ ಮಾಡಲಾಗಿದೆ. ಈ ಕೃತ್ಯ ಎಸಗುವವರನ್ನು ಪೊಲೀಸರು ಬಂಧಿಸಿ, ಜೈಲಿಗೆ ಕಳುಹಿಸಬಹುದಾಗಿದೆ. ಭಾರತೀಯ ಕಾನೂನಿನ ಪ್ರಕಾರ, ಕಾರಿನೊಳಗೆ ಚುಂಬಿಸಲು ಯಾವುದೇ ರೀತಿಯ ಅವಕಾಶವಿಲ್ಲ ಎಂದೇ ಹೇಳಬಹುದು. ಐಪಿಸಿಯ ಸೆಕ್ಷನ್ 294ರ ಅಡಿಯಲ್ಲಿ ಇದು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುತ್ತದೆ. ಕಾರು ಸಾರ್ವಜನಿಕ ಸ್ಥಳದಲ್ಲಿದ್ದಾಗ, ಅದನ್ನು ಸಾರ್ವಜನಿಕ ಸ್ಥಳವೆಂದು ಪರಿಗಣಿಸಲಾಗುತ್ತದೆ.

ಅಂತಹ ಸಂದರ್ಭಗಳಲ್ಲಿ, ಒಬ್ಬ ಪುರುಷ ಮತ್ತು ಮಹಿಳೆ ಕಾರಿನೊಳಗೆ ಚುಂಬಿಸುತ್ತಿರುವುದು ಹೊರಗಿನವರಿಗೆ ವಿಚಿತ್ರವಾಗಿ ಕಾಣಿಸಬಹುದು. ಈ ಮೂಲಕ ಕಾರಿನಲ್ಲಿ ಇಬ್ಬರು ಚುಂಬಿಸುತ್ತಿರುವುದನ್ನು ಹೊರಗಿನಿಂದ ಯಾರಾದರೂ ನೋಡಿ ದೂರು ನೀಡಿದರೆ ಅದು ಕಾನೂನಿನಡಿ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಈ ಅಪರಾಧಕ್ಕೆ 3 ತಿಂಗಳ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಯಿದೆ. ಆದರೆ, ಈ ಶಿಕ್ಷೆಯು ನಿರ್ದಿಷ್ಟ ಅಪರಾಧದ ಸ್ವರೂಪ ಮತ್ತು ಅಪರಾಧಿಯ ನಡವಳಿಕೆಯ ಮೇಲೆ ಆಧಾರಿತವಾಗಿರುತ್ತದೆ.

ಈ ಅಪರಾಧದ ಶಿಕ್ಷೆಯು ಜಾಮೀನು ನೀಡಬಹುದಾದ ಪ್ರಕರಣವಾಗಿದೆ. ಇದೊಂದು ಚಿಕ್ಕ ಪ್ರಕರಣವಾದರೂ ಹಲವರಿಗೆ ಇದರ ಬಗ್ಗೆ ಯಾವುದೇ ರೀತಿಯ ಮಾಹಿತಿಯಿಲ್ಲ. ಅನೇಕ ಪ್ರೇಮಿಗಳು ರಾತ್ರಿ ವೇಳೆ ಕಾರಿನಲ್ಲಿ ಪ್ರಯಾಣಿಸುತ್ತಾರೆ. ಜೊತೆಗೆ ಸಾರ್ವಜನಿಕ ಸ್ಥಳದಲ್ಲಿ ಕಾರನ್ನು ನಿಲ್ಲಿಸಿ, ತಮ್ಮ ಪ್ರೀತಿಯನ್ನು ಹಂಚಿಕೊಳ್ಳುವ ಮಾರ್ಗವಾಗಿ ಚುಂಬಿಸುತ್ತಾರೆ. ಇದು ಸಂಪೂರ್ಣ ಅಸಭ್ಯ ಚಟುವಟಿಕೆಯಾಗಿದೆ. ಇದು ಕಾರು ಮಾತ್ರವಲ್ಲದೇ ಬೈಕ್‌, ಬಸ್‌ಗಳು, ರೈಲುಗಳು ಮತ್ತು ಮೆಟ್ರೋಗಳಂತಹ ಸಾರ್ವಜನಿಕ ಸಾರಿಗೆಗೂ ಅನ್ವಯಿಸುತ್ತದೆ ಎಂದು ಹೇಳಬಹುದು.

ಚುಂಬನವು ಪ್ರೀತಿಯ ಅಭಿವ್ಯಕ್ತಿಯಾಗಿದ್ದರೂ, ಅದನ್ನು ಸಾರ್ವಜನಿಕವಾಗಿ ಮಾಡುವುದು ತಪ್ಪು ಎನ್ನಬಹುದು. ನೀವು ಸಾರ್ವಜನಿಕ ಸ್ಥಳದಲ್ಲಿ ಇರುವಾಗ ನಿಮ್ಮ ಕಾರ್ಯಗಳು ಮತ್ತು ನಡವಳಿಕೆ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಭಾರತೀಯ ದಂಡ ಸಂಹಿತೆ ಪ್ರಕಾರ, ನಿರ್ದಿಷ್ಟವಾಗಿ ಯಾವುದೇ ರೀತಿಯ ಅಶ್ಲೀಲ ಕೃತ್ಯಗಳನ್ನು ನಿಷೇಧ ಮಾಡಲಾಗಿದ್ದು, ನೀವು ಕಾನೂನನ್ನು ಉಲ್ಲಂಘಿಸಿದಾಗ ಪೊಲೀಸರು ನಿಮ್ಮನ್ನು ಬಂಧಿಸಲು ಅವಕಾಶವಿದೆ. ಆದ್ದರಿಂದಾಗಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಎಂದಿಗೂ ಈ ರೀತಿ ಮಾಡದಿರಿ.

ಪಬ್ಲಿಕ್ ಡಿಸ್ಪ್ಲೇ ಆಫ್ ಆಫ್ಫೆಕ್ಷನ್ (PDA) ಪುರುಷ ಹಾಗೂ ಮಹಿಳೆ ನಡುವೆ ಸಾರ್ವಜನಿಕವಾಗಿ ಯಾವುದೇ ರೀತಿಯ ಅನ್ಯೋನ್ಯತೆಗೆ ಸಂಬಂಧಿಸಿದೆ. ಕೆಲವು ದೇಶಗಳು ಇದನ್ನು ಬಹಿರಂಗವಾಗಿ ಒಪ್ಪಿಕೊಳ್ಳುತ್ತಿವೆ. ವಿಶೇಷವಾಗಿ ಉದಾರವಾದಿ ರಾಷ್ಟ್ರಗಳು. ಆದರೆ, ಇಸ್ಲಾಂ ಪ್ರಾಬಲ್ಯವಿರುವ ದೇಶಗಳು ಮತ್ತು ಭಾರತದಂತಹ ಇತರೆ ಸಂಪ್ರದಾಯವಾದಿ ರಾಷ್ಟ್ರಗಳು ಇದನ್ನು ಕಟ್ಟುನಿಟ್ಟಾಗಿ ನಿಷೇಧಿಸಿವೆ. ಸಮಾಜದಲ್ಲಿನ ಬದಲಾವಣೆಗಳಿಗೆ ಹೆಚ್ಚು ಜನರು ಇದನ್ನು ಒಪ್ಪಿಕೊಳ್ಳಬೇಕು ಎನ್ನುತ್ತಾರೆ. ಭಾರತದಲ್ಲಿ ಇದಕ್ಕೆ ಯಾವುದೇ ರೀತಿಯ ಮಾನ್ಯತೆ ಇಲ್ಲ ಎಂದು ಹೇಳಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
Kissing in a car legal in india
Story first published: Tuesday, December 6, 2022, 18:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X