ವಿವಾದಕ್ಕೆ ಕಾರಣವಾದ ಆಫ್ಟರ್ ಮಾರ್ಕೆಟ್ ವ್ಹೀಲ್ ಗಳಿಗೆ ವಿಧಿಸಿದ ದಂಡ

ಅಕ್ರಮವಾಗಿ ಮಾಡಿಫೈಗೊಂಡಿರುವ ವಾಹನಗಳ ವಿರುದ್ಧ ಕೇರಳದ ಮೋಟಾರು ವಾಹನ ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಇದರ ಹಲವಾರು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ವಿವಾದಕ್ಕೆ ಕಾರಣವಾದ ಆಫ್ಟರ್ ಮಾರ್ಕೆಟ್ ವ್ಹೀಲ್ ಗಳಿಗೆ ವಿಧಿಸಿದ ದಂಡ

ಈ ವೇಳೆ ಕೇರಳ ಮೋಟಾರು ವಾಹನ ಇಲಾಖೆಯು ತನ್ನ ಕಾರಿನಲ್ಲಿ ಆಫ್ಟರ್ ಮಾರ್ಕೆಟ್ ವ್ಹೀಲ್ ಗಳನ್ನು ಅಳವಡಿಸಿದ್ದ ಯುವಕನೊಬ್ಬನಿಗೆ ಪ್ರತಿ ವ್ಹೀಲ್ ಗೆ ರೂ.5,000ದಂತೆ ಒಟ್ಟು ರೂ.20,000ಗಳ ದಂಡ ವಿಧಿಸಿದೆ ಎಂದು ವರದಿಯಾಗಿದೆ. ಈ ಬಗ್ಗೆ ಆ ಯುವಕನು ಆರೋಪ ಮಾಡಿರುವ ವೀಡಿಯೊ ವೈರಲ್ ಆಗಿದ್ದು ವಿವಾದಕ್ಕೆ ಕಾರಣವಾಗಿದೆ. ಪ್ರತಿ ವ್ಹೀಲ್ ಗೂ ಪ್ರತ್ಯೇಕವಾಗಿ ದಂಡ ವಿಧಿಸಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಕಾರು ಪ್ರಿಯರಲ್ಲಿ ಮೂಡಿದೆ.

ವಿವಾದಕ್ಕೆ ಕಾರಣವಾದ ಆಫ್ಟರ್ ಮಾರ್ಕೆಟ್ ವ್ಹೀಲ್ ಗಳಿಗೆ ವಿಧಿಸಿದ ದಂಡ

ಯುವಕನ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಕೇರಳದ ಕೊಟ್ಟಾಯಂನ ಆರ್‌ಟಿಒ ಅಧಿಕಾರಿ ಟೊಜೊ ಎಂ ಥಾಮಸ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಟೊಜೊ ಥಾಮಸ್ ರವರು ಮಲಯಾಳಂ ಸುದ್ದಿ ತಾಣ ವನಿತಾಗೆ ನೀಡಿರುವ ಸಂದರ್ಶನದಲ್ಲಿ ಇದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ವಿವಾದಕ್ಕೆ ಕಾರಣವಾದ ಆಫ್ಟರ್ ಮಾರ್ಕೆಟ್ ವ್ಹೀಲ್ ಗಳಿಗೆ ವಿಧಿಸಿದ ದಂಡ

ಕೋವಿಡ್ -19 ವೈರಸ್‌ ಕಾರಣದಿಂದಾಗಿ ವಾಹನಗಳ ತಪಾಸಣೆಯನ್ನು ಕೆಲವು ತಿಂಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಲಾಕ್ ಡೌನ್ ಜಾರಿಯಲ್ಲಿದ್ದ ಏಪ್ರಿಲ್, ಮೇ ತಿಂಗಳ ಅವಧಿಯಲ್ಲಿ ಮಾಡಿಫೈಗೊಂಡಿದ್ದ ವಾಹನಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ವಿವಾದಕ್ಕೆ ಕಾರಣವಾದ ಆಫ್ಟರ್ ಮಾರ್ಕೆಟ್ ವ್ಹೀಲ್ ಗಳಿಗೆ ವಿಧಿಸಿದ ದಂಡ

ಇದರಿಂದಾಗಿ ಈ ವರ್ಷದ ಜೂನ್-ಜುಲೈ ತಿಂಗಳಿನಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಕಳೆದ ವರ್ಷಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಅಂಕಿಅಂಶಗಳ ಪ್ರಕಾರ, ಈ ವರ್ಷದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ 60%ನಷ್ಟು ಹೆಚ್ಚಾಗಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ವಿವಾದಕ್ಕೆ ಕಾರಣವಾದ ಆಫ್ಟರ್ ಮಾರ್ಕೆಟ್ ವ್ಹೀಲ್ ಗಳಿಗೆ ವಿಧಿಸಿದ ದಂಡ

ಜನರು ಲಾಕ್ ಡೌನ್ ಅವಧಿಯನ್ನು ದುರುಪಯೋಗಪಡಿಸಿಕೊಂಡಿದ್ದೇ ಇದಕ್ಕೆ ಪ್ರಮುಖ ಕಾರಣ. ಲಾಕ್ ಡೌನ್ ಅವಧಿಯಲ್ಲಿ ಜನರ ನಿರ್ಲಕ್ಷ್ಯದಿಂದಾಗಿ ಹೆಚ್ಚಿನ ಸಂಖ್ಯೆಯ ರಸ್ತೆ ಅಪಘಾತಗಳು ಸಂಭವಿಸಿವೆ.

ವಿವಾದಕ್ಕೆ ಕಾರಣವಾದ ಆಫ್ಟರ್ ಮಾರ್ಕೆಟ್ ವ್ಹೀಲ್ ಗಳಿಗೆ ವಿಧಿಸಿದ ದಂಡ

ಈ ಕಾರಣಕ್ಕೆ ವಿವಿಧ ರಾಜ್ಯಗಳ ಸಾರಿಗೆ ಇಲಾಖೆಗಳು ಹಾಗೂ ಪೊಲೀಸ್ ಇಲಾಖೆ ಈ ಪರಿಸ್ಥಿತಿಯನ್ನು ಎದುರಿಸಲು ಹೊಸ ಕಾರ್ಯತಂತ್ರಗಳನ್ನು ಅಳವಡಿಸಿಕೊಂಡಿವೆ. ಇವುಗಳಲ್ಲಿ ಅಕ್ರಮವಾಗಿ ಮಾಡಿಫೈಗೊಂಡಿರುವ ವಾಹನಗಳಿಗೆ ಭಾರೀ ಪ್ರಮಾಣದ ದಂಡ ವಿಧಿಸುವುದು ಸಹ ಸೇರಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ವಿವಾದಕ್ಕೆ ಕಾರಣವಾದ ಆಫ್ಟರ್ ಮಾರ್ಕೆಟ್ ವ್ಹೀಲ್ ಗಳಿಗೆ ವಿಧಿಸಿದ ದಂಡ

ಇನ್ನು ನಾಲ್ಕು ಆಫ್ಟರ್ ಮಾರ್ಕೆಟ್ ಅಲಾಯ್ ವ್ಹೀಲ್ ಗಳಿಗೆ ರೂ.20,000ಗಳ ದಂಡ ವಿಧಿಸಿರುವ ಬಗ್ಗೆ ಹೇಳುವುದಾದರೆ, ಎಲ್ಲಾ ನಾಲ್ಕು ಆಫ್ಟರ್ ಮಾರ್ಕೆಟ್ ವ್ಹೀಲ್ ಗಳಿಗೂ ಸೇರಿ ರೂ.20,000 ದಂಡ ವಿಧಿಸಲಾಗಿದ್ದು, ಪ್ರತಿ ವ್ಹೀಲ್ ಗೆ ಪ್ರತ್ಯೇಕವಾಗಿ ದಂಡ ವಿಧಿಸಿಲ್ಲವೆಂದು ಟೊಜೊ ಥಾಮಸ್ ಸ್ಪಷ್ಟ ಪಡಿಸಿದ್ದಾರೆ.

ವಿವಾದಕ್ಕೆ ಕಾರಣವಾದ ಆಫ್ಟರ್ ಮಾರ್ಕೆಟ್ ವ್ಹೀಲ್ ಗಳಿಗೆ ವಿಧಿಸಿದ ದಂಡ

ಅದೇ ರೀತಿಯಾಗಿ ಕಾರುಗಳಲ್ಲಿ ಟೀಂಟೆಡ್ ಗ್ಲಾಸ್ ಹೊಂದಿರುವುದು, ವಾಹನದ ಹಾರ್ನ್ ಬದಲಿಸುವುದು, ವಾಹನದ ಬಾಡಿಯನ್ನು ಮಾಡಿಫೈಗೊಳಿಸಿದರೆ ಪ್ರತ್ಯೇಕವಾಗಿ ದಂಡ ವಿಧಿಸಬಹುದು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ವಿವಾದಕ್ಕೆ ಕಾರಣವಾದ ಆಫ್ಟರ್ ಮಾರ್ಕೆಟ್ ವ್ಹೀಲ್ ಗಳಿಗೆ ವಿಧಿಸಿದ ದಂಡ

ಇದರ ಜೊತೆಗೆ ಹೆಲ್ಮೆಟ್ ಧರಿಸದೆ, ಮಾಡಿಫೈಗೊಂಡಿರುವ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವ ವ್ಯಕ್ತಿಗೆ ಪ್ರತ್ಯೇಕವಾಗಿ ದಂಡ ವಿಧಿಸಬಹುದು ಎಂದು ಟೊಜೊ ಥಾಮಸ್ ಹೇಳಿದ್ದಾರೆ.

ವಿವಾದಕ್ಕೆ ಕಾರಣವಾದ ಆಫ್ಟರ್ ಮಾರ್ಕೆಟ್ ವ್ಹೀಲ್ ಗಳಿಗೆ ವಿಧಿಸಿದ ದಂಡ

ಇದರ ಬಗ್ಗೆ ಮಾಹಿತಿ ಇರದ ಯುವಕನು ಕೇರಳ ಮೋಟಾರು ವಾಹನ ಇಲಾಖೆಯ ಮೇಲೆಯೇ ಆರೋಪ ಹೊರಿಸಿದ್ದಾನೆ. ಈ ಕಾರಣಕ್ಕೆ ಆರ್‌ಟಿಒ ಅಧಿಕಾರಿ ಟೊಜೊ ಎಂ ಥಾಮಸ್ ಸ್ಪಷ್ಟನೆ ನೀಡಿದ್ದಾರೆ.

Most Read Articles

Kannada
English summary
Kottayam RTO officer clarifies about fine to after market alloy wheels. Read in Kannada.
Story first published: Thursday, October 1, 2020, 10:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X