ವೆಡ್ಡಿಂಗ್ ಫೋಟೋ ಶೂಟ್‌ಗೆ ಬಸ್​ಗಳನ್ನು ನೀಡಲಿದೆ ಕೆಎಸ್​ಆರ್​ಟಿಸಿ

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಎನ್ನುವುದು ಇತ್ತೀಚಿಗಿನ ಟ್ರೆಂಡ್ ಆಗಿದೆ. ಫೋಟೋ ಶೂಟ್ ಎಂಬುದು ಮದುವೆ ಮುಂಚೆ ನಡೆಯಬೇಕಾಗಿರುವ ಕಡ್ಡಾಯ ಶಾಸ್ತ್ರ ಎಂಬಂತಹ ಅಲಿಖಿತ ನಿಯಮ ಜಾರಿಯಾದ ರೀತಿಯಲ್ಲಿ ಟ್ರೆಂಡ್ ಸೃಷ್ಟಿಯಾಗಿದೆ.

ವೆಡ್ಡಿಂಗ್ ಫೋಟೋ ಶೂಟ್‌ಗೆ ಬಸ್​ಗಳನ್ನು ನೀಡಲಿದೆ ಕೆಎಸ್​ಆರ್​ಟಿಸಿ

ಸುಂದರವಾದ ತಾಣಗಳಲ್ಲಿ ಬಗೆಬಗೆ ಪೋಸ್ ನೀಡಿ ಹೆಚ್ಚಾಗಿ ವೃತ್ತಿಪರ ಫೋಟೋಗ್ರಾಫರ್‌ಗಳಿಂದ ಫೋಟೋ ಶೂಟ್ ನಡೆಸುತ್ತಾರೆ. ಇದರಿಂದಲೇ ಇತ್ತೀಚೆಗೆ ವೆಡ್ಡಿಂಗ್​ ಫೋಟೋಗ್ರಾಫಿಗೆ ಸಖತ್ ಡಿಮ್ಯಾಂಡ್ ಬಂದಿದೆ. ಇನ್ನು ಯುವ ಜೋಡಿಗಳು ತಮ್ಮ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಅನ್ನು ವಿಭಿನ್ನವಾಗಿ ನಡೆಸಬೇಕೆಂದು ಬಯಸುತ್ತಾರೆ. ಅದ್ದರಿಂದ ವಿಭಿನ್ನವಾಗಿ ಇತ್ತೀಚೆಗೆ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ನಡೆಸಿ ಯುವ ಜೋಡಿಗಳು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಕೆಲವು ವಿವಾದಗಳು ಕೂಡ ಸೃಷ್ಠಿಯಾಗಿತ್ತು.

ವೆಡ್ಡಿಂಗ್ ಫೋಟೋ ಶೂಟ್‌ಗೆ ಬಸ್​ಗಳನ್ನು ನೀಡಲಿದೆ ಕೆಎಸ್​ಆರ್​ಟಿಸಿ

ಅದು ಏನೇ ಇರಲಿ, ಪ್ರಿ ವೆಡ್ಡಿಂಗ್ ಫೋಟೋ ಶೂಟ್ ದಿನದಿಂದ ದಿನಕ್ಕೆ ಟ್ರೆಂಡ್ ಹೆಚ್ಚಾಗುತ್ತಿದೆ. ಅದರಲ್ಲಿಯು ಕೇರಳ ರಾಜ್ಯದಲ್ಲಿ ಹೆಚ್ಚಾಗಿ ವಿಭಿನ್ನವಾಗಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಗಳು ನಡೆಯುತ್ತದೆ. ಕೇರಳದಲ್ಲಿ ನಡೆದ ಇತ್ತೀಚಿನ ಪ್ರಿ ವೆಡ್ಡಿಂಗ್ ಫೋಟೋ ಶೂಟ್‌ ಸಾಕಷ್ಟು ವೈರಲ್ ಆಗಿ ನೆಟ್ಟಿಗರು ಯುವ ಜೋಡಿಗಳ ಮೇಲೆ ಅಕ್ರೋಶವನ್ನು ವ್ಯಕ್ತ ಪಡಿಸಿದ್ದರು.

MOST READ: ಐಷಾರಾಮಿ ಫೋಕ್ಸ್‌ವ್ಯಾಗನ್ ಎಸ್‍ಯುವಿಯನ್ನು ಖರೀದಿಸಿದ ಜನಪ್ರಿಯ ಬಾಲಿವುಡ್ ನಟ

ವೆಡ್ಡಿಂಗ್ ಫೋಟೋ ಶೂಟ್‌ಗೆ ಬಸ್​ಗಳನ್ನು ನೀಡಲಿದೆ ಕೆಎಸ್​ಆರ್​ಟಿಸಿ

ಕೇರಳದಲ್ಲಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್‌ಗಳು ಟ್ರೇಂಡ್ ಹೆಚ್ಚಾತ್ತಿರುವಾಗ ಕೇರಳದ ಕೆಎಸ್​ಆರ್​ಟಿಸಿ ಇದನ್ನೇ ಆದಾಯದ ಮೂಲವನ್ನಾಗಿಸಲು ಹೊಸ ಐಡಿಯಾ ಮಾಡಿದೆ. ಕೇರಳದ ಕೆಎಸ್​ಆರ್​ಟಿಸಿ ತಮ್ಮ ಡಬ್ಬಲ್ ​ಡೆಕ್ಕರ್​ ಬಸ್​ಗಳನ್ನು ವೆಡ್ಡಿಂಗ್ ಫೋಟೋ ಶೂಟ್‌ ನಡೆಸಲು ಬಾಡಿಗೆಗೆ ನೀಡಲು ನಿರ್ಧರಿಸಿದೆ.

ವೆಡ್ಡಿಂಗ್ ಫೋಟೋ ಶೂಟ್‌ಗೆ ಬಸ್​ಗಳನ್ನು ನೀಡಲಿದೆ ಕೆಎಸ್​ಆರ್​ಟಿಸಿ

ಡಬ್ಬಲ್ ​ಡೆಕ್ಕರ್​ ಬಸ್​ಗಳಲ್ಲಿ ವೆಡ್ಡಿಂಗ್ ಫೋಟೋ ಶೂಟ್‌ ನಡೆಸಲು ಕೆಎಸ್​ಆರ್​ಟಿಸಿ ದರವನ್ನು ನಿಗಧಿ ಪಡಿಸಿದೆ. ಯುವ ಜೋಡಿಗಳಿಗೆ ವಿಭಿನ್ನವಾಗಿ ವೆಡ್ಡಿಂಗ್ ಫೋಟೋ ಶೂಟ್‌ ಮಾಡಬಹುದು ಅಲ್ಲದೇ ಕೇರಳ ಕೆಎಸ್​ಆರ್​ಟಿಸಿಗೆ ಆದಾಯವು ಲಭಿಸುತ್ತದೆ.

MOST READ: ಕರೋನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಉಬರ್ ಜೊತೆಗೆ ಕೈಜೋಡಿಸಿದ ಪೊಲೀಸ್ ಇಲಾಖೆ

ವೆಡ್ಡಿಂಗ್ ಫೋಟೋ ಶೂಟ್‌ಗೆ ಬಸ್​ಗಳನ್ನು ನೀಡಲಿದೆ ಕೆಎಸ್​ಆರ್​ಟಿಸಿ

ಕೇರಳದ ಕೆಎಸ್​ಆರ್​ಟಿಸಿ ಸಂಸ್ಥೆಯು ಡಬ್ಬಲ್​ ಟೆಕ್ಕರ್​ ಬಸ್​ನ್ನು ವೆಡ್ಡಿಂಗ್ ಫೋಟೋ ಶೂಟ್​ಗೆ ನೀಡುತ್ತಿದೆ. ರಾಜ್ಯ ರಾಜಧಾನಿಯಲ್ಲಿ 8 ಗಂಟೆಗಳ ಕಾಲ ವೆಡ್ಡಿಂಗ್ ಫೋಟೋ ಶೂಟ್ ಮಾಡಲು ಬಾಡಿಗೆ ಪಡೆಯಬಹುದಾಗಿದೆ.

ವೆಡ್ಡಿಂಗ್ ಫೋಟೋ ಶೂಟ್‌ಗೆ ಬಸ್​ಗಳನ್ನು ನೀಡಲಿದೆ ಕೆಎಸ್​ಆರ್​ಟಿಸಿ

ಪ್ರಸ್ತುತ ಕೇರಳದ ಕೆಎಸ್​ಆರ್​ಟಿಸಿ ಸಂಸ್ಥೆಯು 50 ಕಿ.ಮೀಗೆ 4 ಸಾವಿರದಂತೆ ಬಾಡಿಗೆ ದರ ನಿಗದಿಸಲಾಗಿದೆ. ಮೊದಲ ಬಾರಿಗೆ ಗಣೇಶ್ ಮತ್ತು ಲಕ್ಷ್ಮಿ ಎಂಬ ಯುವ ಜೋಡಿ ಎಸ್​ಆರ್​ಟಿಸಿ ಡಬ್ಬಲ್ ​ಡೆಕ್ಕರ್​ ಬಸ್​ ಅನ್ನು ಬಳಿಸಿಕೊಂಡಿದ್ದಾರೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ವೆಡ್ಡಿಂಗ್ ಫೋಟೋ ಶೂಟ್‌ಗೆ ಬಸ್​ಗಳನ್ನು ನೀಡಲಿದೆ ಕೆಎಸ್​ಆರ್​ಟಿಸಿ

ಇದೇ ತಿಂಗಳ 21ರಂದು ನಗರದಲ್ಲಿ ಡಬ್ಬಲ್ ​ಡೆಕ್ಕರ್ ಬಸ್​ ಏರಿ ಯುವ ಜೋಡಿಗಳು ಫೋಸ್​ ನೀಡಿದ್ದಾರೆ. ಮುಂದಿನ ವರ್ಷದ ಜನವರಿ 18ರಂದು ಈ ಯುವ ಜೋಡಿ ಮದುವೆಯಾಗಲಿದ್ದಾರೆ.

ವೆಡ್ಡಿಂಗ್ ಫೋಟೋ ಶೂಟ್‌ಗೆ ಬಸ್​ಗಳನ್ನು ನೀಡಲಿದೆ ಕೆಎಸ್​ಆರ್​ಟಿಸಿ

ಇವರ ಡಬ್ಬಲ್ ​ಡೆಕ್ಕರ್​ ಬಸ್ ಪ್ರಿ ವೆಡ್ಡಿಂಗ್ ಫೋಟೋ ಶೂಟ್‌ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಅಲ್ಲದೇ ಹಲವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೇರಳದ ಕೆಎಸ್​ಆರ್​ಟಿಸಿ ಸಂಸ್ಥೆಯು ಡಿಸೆಂಬರ್ ತಿಂಗಳಲ್ಲಿ ಬುಕ್ ಮಾಡುವವಗೆ ವಿಶೇಷವಾದ ಆಫರ್ ಅನ್ನು ಘೋಷಿಸಿದೆ.

Most Read Articles

Kannada
English summary
Ksrtc to Rent Out Double Decker Buses For Wedding Photo. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X