Just In
- 10 hrs ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 11 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 12 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- 12 hrs ago ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
Don't Miss!
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವೆಡ್ಡಿಂಗ್ ಫೋಟೋ ಶೂಟ್ಗೆ ಬಸ್ಗಳನ್ನು ನೀಡಲಿದೆ ಕೆಎಸ್ಆರ್ಟಿಸಿ
ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಎನ್ನುವುದು ಇತ್ತೀಚಿಗಿನ ಟ್ರೆಂಡ್ ಆಗಿದೆ. ಫೋಟೋ ಶೂಟ್ ಎಂಬುದು ಮದುವೆ ಮುಂಚೆ ನಡೆಯಬೇಕಾಗಿರುವ ಕಡ್ಡಾಯ ಶಾಸ್ತ್ರ ಎಂಬಂತಹ ಅಲಿಖಿತ ನಿಯಮ ಜಾರಿಯಾದ ರೀತಿಯಲ್ಲಿ ಟ್ರೆಂಡ್ ಸೃಷ್ಟಿಯಾಗಿದೆ.
ಸುಂದರವಾದ ತಾಣಗಳಲ್ಲಿ ಬಗೆಬಗೆ ಪೋಸ್ ನೀಡಿ ಹೆಚ್ಚಾಗಿ ವೃತ್ತಿಪರ ಫೋಟೋಗ್ರಾಫರ್ಗಳಿಂದ ಫೋಟೋ ಶೂಟ್ ನಡೆಸುತ್ತಾರೆ. ಇದರಿಂದಲೇ ಇತ್ತೀಚೆಗೆ ವೆಡ್ಡಿಂಗ್ ಫೋಟೋಗ್ರಾಫಿಗೆ ಸಖತ್ ಡಿಮ್ಯಾಂಡ್ ಬಂದಿದೆ. ಇನ್ನು ಯುವ ಜೋಡಿಗಳು ತಮ್ಮ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಅನ್ನು ವಿಭಿನ್ನವಾಗಿ ನಡೆಸಬೇಕೆಂದು ಬಯಸುತ್ತಾರೆ. ಅದ್ದರಿಂದ ವಿಭಿನ್ನವಾಗಿ ಇತ್ತೀಚೆಗೆ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ನಡೆಸಿ ಯುವ ಜೋಡಿಗಳು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಕೆಲವು ವಿವಾದಗಳು ಕೂಡ ಸೃಷ್ಠಿಯಾಗಿತ್ತು.
ಅದು ಏನೇ ಇರಲಿ, ಪ್ರಿ ವೆಡ್ಡಿಂಗ್ ಫೋಟೋ ಶೂಟ್ ದಿನದಿಂದ ದಿನಕ್ಕೆ ಟ್ರೆಂಡ್ ಹೆಚ್ಚಾಗುತ್ತಿದೆ. ಅದರಲ್ಲಿಯು ಕೇರಳ ರಾಜ್ಯದಲ್ಲಿ ಹೆಚ್ಚಾಗಿ ವಿಭಿನ್ನವಾಗಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಗಳು ನಡೆಯುತ್ತದೆ. ಕೇರಳದಲ್ಲಿ ನಡೆದ ಇತ್ತೀಚಿನ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಸಾಕಷ್ಟು ವೈರಲ್ ಆಗಿ ನೆಟ್ಟಿಗರು ಯುವ ಜೋಡಿಗಳ ಮೇಲೆ ಅಕ್ರೋಶವನ್ನು ವ್ಯಕ್ತ ಪಡಿಸಿದ್ದರು.
MOST READ: ಐಷಾರಾಮಿ ಫೋಕ್ಸ್ವ್ಯಾಗನ್ ಎಸ್ಯುವಿಯನ್ನು ಖರೀದಿಸಿದ ಜನಪ್ರಿಯ ಬಾಲಿವುಡ್ ನಟ
ಕೇರಳದಲ್ಲಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್ಗಳು ಟ್ರೇಂಡ್ ಹೆಚ್ಚಾತ್ತಿರುವಾಗ ಕೇರಳದ ಕೆಎಸ್ಆರ್ಟಿಸಿ ಇದನ್ನೇ ಆದಾಯದ ಮೂಲವನ್ನಾಗಿಸಲು ಹೊಸ ಐಡಿಯಾ ಮಾಡಿದೆ. ಕೇರಳದ ಕೆಎಸ್ಆರ್ಟಿಸಿ ತಮ್ಮ ಡಬ್ಬಲ್ ಡೆಕ್ಕರ್ ಬಸ್ಗಳನ್ನು ವೆಡ್ಡಿಂಗ್ ಫೋಟೋ ಶೂಟ್ ನಡೆಸಲು ಬಾಡಿಗೆಗೆ ನೀಡಲು ನಿರ್ಧರಿಸಿದೆ.
ಡಬ್ಬಲ್ ಡೆಕ್ಕರ್ ಬಸ್ಗಳಲ್ಲಿ ವೆಡ್ಡಿಂಗ್ ಫೋಟೋ ಶೂಟ್ ನಡೆಸಲು ಕೆಎಸ್ಆರ್ಟಿಸಿ ದರವನ್ನು ನಿಗಧಿ ಪಡಿಸಿದೆ. ಯುವ ಜೋಡಿಗಳಿಗೆ ವಿಭಿನ್ನವಾಗಿ ವೆಡ್ಡಿಂಗ್ ಫೋಟೋ ಶೂಟ್ ಮಾಡಬಹುದು ಅಲ್ಲದೇ ಕೇರಳ ಕೆಎಸ್ಆರ್ಟಿಸಿಗೆ ಆದಾಯವು ಲಭಿಸುತ್ತದೆ.
MOST READ: ಕರೋನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಉಬರ್ ಜೊತೆಗೆ ಕೈಜೋಡಿಸಿದ ಪೊಲೀಸ್ ಇಲಾಖೆ
ಕೇರಳದ ಕೆಎಸ್ಆರ್ಟಿಸಿ ಸಂಸ್ಥೆಯು ಡಬ್ಬಲ್ ಟೆಕ್ಕರ್ ಬಸ್ನ್ನು ವೆಡ್ಡಿಂಗ್ ಫೋಟೋ ಶೂಟ್ಗೆ ನೀಡುತ್ತಿದೆ. ರಾಜ್ಯ ರಾಜಧಾನಿಯಲ್ಲಿ 8 ಗಂಟೆಗಳ ಕಾಲ ವೆಡ್ಡಿಂಗ್ ಫೋಟೋ ಶೂಟ್ ಮಾಡಲು ಬಾಡಿಗೆ ಪಡೆಯಬಹುದಾಗಿದೆ.
ಪ್ರಸ್ತುತ ಕೇರಳದ ಕೆಎಸ್ಆರ್ಟಿಸಿ ಸಂಸ್ಥೆಯು 50 ಕಿ.ಮೀಗೆ 4 ಸಾವಿರದಂತೆ ಬಾಡಿಗೆ ದರ ನಿಗದಿಸಲಾಗಿದೆ. ಮೊದಲ ಬಾರಿಗೆ ಗಣೇಶ್ ಮತ್ತು ಲಕ್ಷ್ಮಿ ಎಂಬ ಯುವ ಜೋಡಿ ಎಸ್ಆರ್ಟಿಸಿ ಡಬ್ಬಲ್ ಡೆಕ್ಕರ್ ಬಸ್ ಅನ್ನು ಬಳಿಸಿಕೊಂಡಿದ್ದಾರೆ.
MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ
ಇದೇ ತಿಂಗಳ 21ರಂದು ನಗರದಲ್ಲಿ ಡಬ್ಬಲ್ ಡೆಕ್ಕರ್ ಬಸ್ ಏರಿ ಯುವ ಜೋಡಿಗಳು ಫೋಸ್ ನೀಡಿದ್ದಾರೆ. ಮುಂದಿನ ವರ್ಷದ ಜನವರಿ 18ರಂದು ಈ ಯುವ ಜೋಡಿ ಮದುವೆಯಾಗಲಿದ್ದಾರೆ.
ಇವರ ಡಬ್ಬಲ್ ಡೆಕ್ಕರ್ ಬಸ್ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಅಲ್ಲದೇ ಹಲವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೇರಳದ ಕೆಎಸ್ಆರ್ಟಿಸಿ ಸಂಸ್ಥೆಯು ಡಿಸೆಂಬರ್ ತಿಂಗಳಲ್ಲಿ ಬುಕ್ ಮಾಡುವವಗೆ ವಿಶೇಷವಾದ ಆಫರ್ ಅನ್ನು ಘೋಷಿಸಿದೆ.