ಆಫ್ ರೋಡ್ ನಲ್ಲಿ ಅಪಘಾತಕ್ಕೀಡಾದ ಹೊಸ ಕೆಟಿಎಂ ಬೈಕ್ ಗಳು

ಕೆಟಿಎಂ ಬೈಕ್ ಗಳು ಬೈಕ್ ಪ್ರಿಯರ ನೆಚ್ಚಿನ ಬೈಕ್ ಗಳಲ್ಲಿ ಒಂದಾಗಿವೆ. ಇವು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಹೈ-ಎಂಡ್ ಬೈಕ್‌ಗಳಾಗಿವೆ. ಕೆಟಿಎಂ ಕಂಪನಿಯು ಕಾಲಕಾಲಕ್ಕೆ ಹೊಸ ಹೊಸ ಬೈಕ್ ಗಳನ್ನು ಬಿಡುಗಡೆಗೊಳಿಸುತ್ತಿದೆ. ಕೆಟಿಎಂ ಕಂಪನಿಯು ಕೆಲ ದಿನಗಳ ಹಿಂದಷ್ಟೇ ತನ್ನ 390 ಅಡ್ವೆಂಚರ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು.

ಆಫ್ ರೋಡ್ ನಲ್ಲಿ ಅಪಘಾತಕ್ಕೀಡಾದ ಹೊಸ ಕೆಟಿಎಂ ಬೈಕ್ ಗಳು

ಕೆಟಿಎಂ ಕಂಪನಿಯ ಈ ಬೈಕ್ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. ಬೈಕ್ ಪ್ರಿಯರು ಹೆಚ್ಚಾಗಿ ಈ ಬೈಕ್ ಗಳನ್ನು ಖರೀದಿಸುತ್ತಿದ್ದಾರೆ. ಇದನ್ನು ಬೈಕಿನ ಮಾರಾಟ ಅಂಶಗಳೇ ಖಚಿತಪಡಿಸಿವೆ. ಈ ಬೈಕ್ ಅನ್ನು ಖರೀದಿಸಿದ ಯುವಕರಿಬ್ಬರು ಈ ಬೈಕಿನಲ್ಲಿ ಆಫ್ ರೋಡ್ ಪ್ರಯಾಣ ನಡೆಸುತ್ತಿದ್ದಾಗ ಅಪಘಾತಕ್ಕೆ ಒಳಗಾಗಿದ್ದಾರೆ. ಇಷ್ಟಕ್ಕೂ ನಡೆದಿದ್ದು ಏನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಆಫ್ ರೋಡ್ ನಲ್ಲಿ ಅಪಘಾತಕ್ಕೀಡಾದ ಹೊಸ ಕೆಟಿಎಂ ಬೈಕ್ ಗಳು

ಕೆಟಿಎಂ 390 ಅಡ್ವೆಂಚರ್ ಬೈಕ್‌ನಲ್ಲಿ 373 ಸಿಸಿ ಸಾಮರ್ಥ್ಯದ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 43 ಬಿಹೆಚ್‌ಪಿ ಪವರ್ ಹಾಗೂ 37 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಆಫ್ ರೋಡ್ ನಲ್ಲಿ ಅಪಘಾತಕ್ಕೀಡಾದ ಹೊಸ ಕೆಟಿಎಂ ಬೈಕ್ ಗಳು

ಈ ಎಂಜಿನ್ 390 ಅಡ್ವೆಂಚರ್ ಬೈಕಿಗೆ ಸರಿಯಾದ ಸಾಮರ್ಥ್ಯವನ್ನು ನೀಡುತ್ತದೆ. ಈ ಸಾಮರ್ಥ್ಯವನ್ನು ನಿರ್ವಹಿಸುವಾಗ ಹೆಚ್ಚು ಜಾಗರೂಕತೆಯನ್ನು ವಹಿಸಬೇಕಾಗುತ್ತದೆ. ಅದರಲ್ಲೂ ಆಫ್ ರೋಡ್ ನಲ್ಲಿ ಬಲಸುವಾಗ ಹೆಚ್ಚು ಗಮನ ವಹಿಸಬೇಕಾಗುತ್ತದೆ.

ಆಫ್ ರೋಡ್ ನಲ್ಲಿ ಅಪಘಾತಕ್ಕೀಡಾದ ಹೊಸ ಕೆಟಿಎಂ ಬೈಕ್ ಗಳು

ಎರಡು ಕೆಟಿಎಂ 390 ಅಡ್ವೆಂಚರ್ ಬೈಕ್‌ ಗಳ ನಡುವೆ ನಡೆದ ಈ ಅಪಘಾತದ ವೀಡಿಯೊ ವೈರಲ್ ಆಗಿದೆ. ಈ ವೀಡಿಯೊದಲ್ಲಿ, ಇಬ್ಬರು ಯುವಕರು ತಮ್ಮ ಹೊಸ ಕೆಟಿಎಂ 390 ಬೈಕುಗಳನ್ನು ಪರೀಕ್ಷಿಸಲು ಮುಂದಾಗುವುದನ್ನು ಕಾಣಬಹುದು. ಅದರಲ್ಲಿ, ಒಬ್ಬ ಯುವಕ ಮುಂದೆ ಸಾಗಿದರೆ, ಮತ್ತೊಬ್ಬ ಅಲ್ಲಿಯೇ ನಿಂತಿದ್ದಾನೆ.

ಆಫ್ ರೋಡ್ ನಲ್ಲಿ ಅಪಘಾತಕ್ಕೀಡಾದ ಹೊಸ ಕೆಟಿಎಂ ಬೈಕ್ ಗಳು

ಬೈಕ್ ಸ್ಟಾರ್ಟ್ ಮಾಡಿಕೊಂಡು ಹೋಗುವ ಯುವಕ ಮತ್ತೆ ವಾಪಸ್ ಬಂದಾಗ ಮತ್ತೊಂದು ಬೈಕಿನಲ್ಲಿದ್ದವನಿಗೆ ಗುದ್ದಿದ್ದಾನೆ. ಬೈಕ್ ವೇಗದಲ್ಲಿದ್ದಾಗ ಕಾರಣ ಅಲ್ಲಿದ್ದ ದಿಬ್ಬದ ಮೇಲೆ ನಿಯಂತ್ರಣ ಸಾಧ್ಯವಾಗದೇ ಎದುರಿಗಿದ್ದ ಬೈಕಿಗೆ ಗುದ್ದಿದ್ದಾನೆ.

ಆಫ್ ರೋಡ್ ನಲ್ಲಿ ಅಪಘಾತಕ್ಕೀಡಾದ ಹೊಸ ಕೆಟಿಎಂ ಬೈಕ್ ಗಳು

ಈ ಕಾರಣಕ್ಕೆ ಆಫ್-ರೋಡ್ ಗಳಲ್ಲಿ ಸ್ಟಂಟ್ ಮಾಡುವಾಗ ಹೆಚ್ಚುವರಿ ಗಮನವಹಿಸುವುದು ಅಗತ್ಯ. ಆದ ಕಾರಣ ಸರಿಯಾದ ತರಬೇತಿಯಿಲ್ಲದೆ ಇಂತಹ ಸ್ಟಂಟ್ ಗಳಲ್ಲಿ ತೊಡಗದಂತೆ ಸೂಚಿಸಲಾಗುತ್ತದೆ.

ಆಫ್ ರೋಡ್ ನಲ್ಲಿ ಅಪಘಾತಕ್ಕೀಡಾದ ಹೊಸ ಕೆಟಿಎಂ ಬೈಕ್ ಗಳು

ಈ ಯುವಕರು ಬೈಕ್ ಪರೀಕ್ಷಿಸಲು ಬಳಸಿದ ರಸ್ತೆ ಒರಟಾದ ಸಾರ್ವಜನಿಕ ರಸ್ತೆಯಾಗಿದ್ದು, ಇತರ ವಾಹನಗಳು ಬರುವುದನ್ನು ಕಾಣಬಹುದು. ಸಾರ್ವಜನಿಕ ರಸ್ತೆಗಳಲ್ಲಿ ಈ ರೀತಿಯ ಸ್ಟಂಟ್ ಮಾಡುವುದು ಮೋಟಾರು ವಾಹನ ಕಾಯ್ದೆಯಡಿ ಅಪರಾಧವಾಗಿದೆ.

ಈ ಅಪಘಾತದಲ್ಲಿ ಇಬ್ಬರೂ ಯುವಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಬೈಕ್‌ಗೆ ಹೆಚ್ಚಿನ ಹಾನಿಯಾಗಿರುವ ಸಾಧ್ಯತೆಗಳಿವೆ. ಡಿಕ್ಕಿಯ ಕಾರಣಕ್ಕೆ ಬೈಕ್‌ನ ಹೆಡ್‌ಲ್ಯಾಂಪ್ ಹಾಗೂ ಫ್ರಂಟ್ ವೀಲ್ ಫೋರ್ಕ್ ಹಾನಿಯಾಗಿದೆ. ಎದುರಿನಿಂದ ಬಂದ ಬೈಕ್ ಗುದ್ದಿದ ರಭಸಕ್ಕೆ ಬೈಕ್ ಮೇಲೆ ಕುಳಿತಿದ್ದ ಸವಾರ ಕೆಳಗೆ ಬಿದ್ದಿದ್ದಾನೆ.

ಆಫ್ ರೋಡ್ ನಲ್ಲಿ ಅಪಘಾತಕ್ಕೀಡಾದ ಹೊಸ ಕೆಟಿಎಂ ಬೈಕ್ ಗಳು

ಈ ವೀಡಿಯೋವನ್ನು ಮತ್ತೊಂದು ಬೈಕಿನಲ್ಲಿ ಕುಳಿತಿದ್ದ ಸವಾರನ ಹೆಲ್ಮೆಟ್‌ನಲ್ಲಿ ಅಳವಡಿಸಲಾಗಿರುವ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಲಾಗಿದೆ. ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಶಾಂತೋನಿಲ್ ನಾಗ್ ರವರು ಈ ವೀಡಿಯೊವನ್ನು ಯುಟ್ಯೂಬ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

Most Read Articles

Kannada
English summary
KTM 390 Adventure bikes crash while riding off-road. Read in Kannada.
Story first published: Thursday, March 26, 2020, 15:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X