ಹೊಸ ಕೆಟಿಎಂ ಡ್ಯೂಕ್ 390 ಖರೀದಿಸಿದ ತಪ್ಪಿಗೆ ಅಲೆದಾಡುತ್ತಿರುವ ಬೈಕರ್...

ಕಳೆದ ವರ್ಷ ಫೆಬ್ರುವರಿಯಲ್ಲಿ ಭರ್ಜರಿಯಾಗಿ ಬಿಡುಗೊಂಡಿದ್ದ ವಿನೂತನ ಕೆಟಿಎಂ 390 ಬೈಕಿನಲ್ಲಿ ಹಲವು ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿದ್ದು, ಬೈಕ್ ಖರೀದಿಸಿದ ಗ್ರಾಹಕರೊಬ್ಬರು ಇದೀಗ ಪರಿಹಾರಕ್ಕಾಗಿ ಅಲೆದಾಡುವಂತಾಗಿದೆ.

By Praveen Sannamani

ಕಳೆದ ವರ್ಷವಷ್ಟೇ ಬಿಎಸ್ 4 ವೈಶಿಷ್ಟ್ಯತೆಗಳ ಜೊತೆ ಹತ್ತಾರು ಬದಲಾವಣೆಗಳೊಂದಿಗೆ ಡ್ಯೂಕ್ 390 ಬಿಡುಗಡೆ ಮಾಡಿದ್ದ ಕೆಟಿಎಂ ಸಂಸ್ಥೆಯು, ಸೂಪರ್ ಬೈಕ್ ಸವಾರರಿಗೆ ಅತ್ಯುತ್ತಮ ಚಾಲನಾ ಅನುಭವ ದೊರಕಿಸುವ ಭರವಸೆ ನೀಡಿತ್ತು. ಆದರೆ ವಾಸ್ತವಾಂಶ ಹಾಗಿಲ್ಲ, ಬೈಕಿನಲ್ಲಿರುವ ತಾಂತ್ರಿಕ ಸಮಸ್ಯೆಗಳು ಇಲ್ಲೊಬ್ಬ ಚಾಂಪಿಯನ್ ಬೈಕರ್‌ನನ್ನು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿಸುವಂತೆ ಮಾಡಿದೆ.

Recommended Video

[Kannada] Maruti Swift 2018 - Full Specifications, Features, Price, Mileage, Colours - DriveSpark
ಹೊಸ ಕೆಟಿಎಂ ಡ್ಯೂಕ್ 390 ಖರೀದಿಸಿದ ತಪ್ಪಿಗೆ ಅಲೆದಾಡುತ್ತಿರುವ ಬೈಕರ್...

ಬೆಂಗಳೂರಿನ ಪ್ರತಿಷ್ಠಿತ ಲಾಂಗ್ ಫೋರ್ಡ್ ಕೆಟಿಎಂ ಡಿಲರ್ಸ್ ಬಳಿ ದೀಪಕ್ ಪೌಲ್ ಚಿನ್ನಪ್ಪ ಎಂಬುವವರು ಕಳೆದ ಜೂನ್‌ನಲ್ಲಿ ಹೊಸ ಮಾದರಿಯ ಡ್ಯೂಕ್ 390 ಖರೀದಿಸಿದ್ದರು. ಆದ್ರೆ ಬೈಕ್ ಖರೀದಿ ಮಾಡಿದ ಕೆಲವೇ ದಿನಗಳಲ್ಲಿ ಬೈಕಿನಲ್ಲಿರುವ ಹತ್ತಾರು ತಾಂತ್ರಿಕ ಸಮಸ್ಯೆಗಳ ಸತ್ಯ ದರ್ಶನವಾಗಿದೆ.

ಹೊಸ ಕೆಟಿಎಂ ಡ್ಯೂಕ್ 390 ಖರೀದಿಸಿದ ತಪ್ಪಿಗೆ ಅಲೆದಾಡುತ್ತಿರುವ ಬೈಕರ್...

ಡ್ಯೂಕ್ 390 ಬೈಕಿನಲ್ಲಿ ಕೀ ಇಲ್ಲದೆಯೇ ಹೆಡ್‌ಲ್ಯಾಂಪ್ ಆನ್ ಆಗಿಯೇ ಇರುತ್ತದೆ. ಜೊತೆಗೆ ಫ್ಯೂಲ್ ಲೀಕ್, ಬೈಕ್ ಆನ್ ಆದಾಗಲೂ ಕೆಲಸ ನಿರ್ವಹಿಸದ ಟಿಎಫ್‌ಟಿ ಡಿಸ್‌ಫೈ, ಆಗಾಗ ಸಾಮರ್ಥ್ಯ ಕಳೆದುಕೊಳ್ಳುವ ಬ್ಯಾಟರಿಯಿಂದಾಗಿ ದೀಪಕ್ ಪೌಲ್ ಬೇಸತ್ತು ಹೋಗಿದ್ದಾರೆ.

ಹೊಸ ಕೆಟಿಎಂ ಡ್ಯೂಕ್ 390 ಖರೀದಿಸಿದ ತಪ್ಪಿಗೆ ಅಲೆದಾಡುತ್ತಿರುವ ಬೈಕರ್...

ಈ ಬಗ್ಗೆ ಲಾಂಗ್ ಫೋರ್ಡ್ ಕೆಟಿಎಂ ಡೀಲರ್ಸ್ ಅಧಿಕಾರಿಗಳ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಹಾರಿಕೆ ಉತ್ತರ ಬರುತ್ತಿದೆಯೇ ಹೊರತು ಬೈಕಿನಲ್ಲಿರುವ ತಾಂತ್ರಿಕ ಸಮಸ್ಯೆ ಸರಿಪಡಿಸುವ ಬಗ್ಗೆ ಯಾವುದೇ ನಿಖರ ಮಾಹಿತಿ ನೀಡುತ್ತಿಲ್ಲವಂತೆ.

ಹೊಸ ಕೆಟಿಎಂ ಡ್ಯೂಕ್ 390 ಖರೀದಿಸಿದ ತಪ್ಪಿಗೆ ಅಲೆದಾಡುತ್ತಿರುವ ಬೈಕರ್...

ವೃತ್ತಿಯಲ್ಲಿ ಬೈಕರ್ ಆಗಿರುವ ದೀಪಕ್ ಪೌಲ್ ಚಿನ್ನಪ್ಪ ಅವರು ಇದೇ ಮೊದಲೇನು ಡ್ಯೂಕ್ 390 ಖರೀದಿಸಿಲ್ಲ. ನಾಲ್ಕು ಬಾರಿ ಕಾರ್ಟಿಂಗ್ ನ್ಯಾಷನಲ್ ಚಾಂಪಿಯನ್ ಆಗಿರುವ ದೀಪಕ್, ಈ ಹಿಂದೆಯೇ ಬಿಎಸ್ 3 ಮಾದರಿಯ ಡ್ಯೂಕ್ 390 ಬೈಕ್ ಅನ್ನು ಕೂಡಾ ಖರೀದಿಸಿದ್ದು, ಅದರಲ್ಲಿ ಈ ರೀತಿಯಾದ ಯಾವುದೇ ಸಮಸ್ಯೆ ಕಂಡುಬಂದಿಲ್ಲ.

ಹೊಸ ಕೆಟಿಎಂ ಡ್ಯೂಕ್ 390 ಖರೀದಿಸಿದ ತಪ್ಪಿಗೆ ಅಲೆದಾಡುತ್ತಿರುವ ಬೈಕರ್...

ಈ ಬಗ್ಗೆ ದೀಪಕ್ ಪೌಲ್ ಅವರು ವಿಡಿಯೋ ಒಂದನ್ನು ಕೂಡಾ ಸಿದ್ದಪಡಿಸಿದ್ದು, ಹೊಸ ಡ್ಯೂಕ್ 390 ಬೈಕಿನಲ್ಲಿರುವ ತಾಂತ್ರಿಕ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಹೊಸ ಕೆಟಿಎಂ ಡ್ಯೂಕ್ 390 ಖರೀದಿಸಿದ ತಪ್ಪಿಗೆ ಅಲೆದಾಡುತ್ತಿರುವ ಬೈಕರ್...

ಜೊತೆಗೆ ಹೊಸ ಬೈಕ್ ಖರೀದಿಸಿದಾಗ ಸಿಗುವ ಮೂರು ಫ್ರೀ ಸರ್ವಿರ್ಸ್‌ಗಳಲ್ಲೂ ಸಮಸ್ಯೆ ಬಗೆಹರಿಸುವ ಯಾವುದೇ ಸುಳಿವು ನೀಡದ ಲಾಂಗ್ ಫೋರ್ಡ್ ಕೆಟಿಎಂ ಡೀಲರ್ಸ್, ಮೊನ್ನೆ ಕೂಡಾ ಫ್ಯೂಲ್ ಲೀಕ್ ಸಮಸ್ಯೆ ಕಂಡುಬಂದಾಗಲೂ ಸಮಸ್ಯೆ ಬಗೆಹರಿಸಿಲ್ಲ.

ಹೊಸ ಕೆಟಿಎಂ ಡ್ಯೂಕ್ 390 ಖರೀದಿಸಿದ ತಪ್ಪಿಗೆ ಅಲೆದಾಡುತ್ತಿರುವ ಬೈಕರ್...

ಇದಕ್ಕೆ ಬದಲಾಗಿ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ 'ಇ ಸಿಟಿ' ಕೆಟಿಎಂ ಡೀಲರ್ಸ್ ಬಳಿಗೆ ಹೋಗುವಂತೆ ಸಲಹೆ ನೀಡಿದ್ದರಂತೆ. ಸರಿ, ಸಮಸ್ಯೆಗೆ ಮಕ್ತಿ ಸಿಕ್ಕರೆ ಸಾಕೆಂದು ಇ ಸಿಟಿ ಡೀಲರ್ಸ್ ಅಧಿಕಾರಿಗಳಿಗೆ ಸಂಪರ್ಕಿಸಿದ ದೀಪಕ್ ಪೌಲ್ ಅವರಿಗೆ ಅಲ್ಲೂ ನಿರಾಸೆ ಕಾದಿತ್ತು.

ಹೊಸ ಕೆಟಿಎಂ ಡ್ಯೂಕ್ 390 ಖರೀದಿಸಿದ ತಪ್ಪಿಗೆ ಅಲೆದಾಡುತ್ತಿರುವ ಬೈಕರ್...

ಮಾಡಿದ ತಪ್ಪಿಗೆ ಫ್ರೀ ಸರ್ವಿಸ್ ಮಾಡಬೇಕಿರುವ ಕೆಟಿಎಂ ಡೀಲರ್ಸ್‌ಗಳು ಸರ್ವಿಸ್ ಚಾರ್ಜ್ ಕೇಳುತ್ತಿದ್ದಾರೆ. ಪರಿಣಾಮ ಸಮಸ್ಯೆ ಬಗೆಹರಿದೇ ಇತ್ತ ಬೈಕ್ ಬ್ಯಾಟರಿ ನಿಷ್ಕ್ರಿಯಗೊಂಡಿದ್ದು, ದುಬಾರಿ ಬೈಕ್ ಖರೀದಿಸಿ ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ.

ಹೊಸ ಕೆಟಿಎಂ ಡ್ಯೂಕ್ 390 ಖರೀದಿಸಿದ ತಪ್ಪಿಗೆ ಅಲೆದಾಡುತ್ತಿರುವ ಬೈಕರ್...

ಇದರಿಂದ ಮತ್ತಷ್ಟು ಮನನೊಂದಿರುವ ದೀಪಕ್, ಸದ್ಯ ಲಾಂಗ್ ಫೋರ್ಡ್ ಡಿಲರ್ಸ್‌ನವರೇ ಸಮಸ್ಯೆ ಬಗೆಹರಿಸಲಿ ಎಂಬ ನೀರಿಕ್ಷೆಯಲ್ಲಿದ್ದರು ಇದುವರೆಗೂ ಯಾರೋಬ್ಬರು ಅವರನ್ನು ಸಂಪರ್ಕಿಸಿಲ್ಲವಂತೆ ಎನ್ನುವ ಹತಾಶೆಯಲ್ಲಿದ್ದಾರೆ.

ಹೊಸ ಕೆಟಿಎಂ ಡ್ಯೂಕ್ 390 ಖರೀದಿಸಿದ ತಪ್ಪಿಗೆ ಅಲೆದಾಡುತ್ತಿರುವ ಬೈಕರ್...

ನಿಜ, ಇದು ದೀಪಕ್ ಪೌಲ್ ಚಿನ್ನಪ್ಪ ಅವರಿಗೆ ಅಷ್ಟೇ ಅಲ್ಲ. ಹೊಸ ಡ್ಯೂಕ್ 390 ಖರೀದಿಸಿದ ಬಹುತೇಕ ಗ್ರಾಹಕರು ಇದೇ ಸಮಸ್ಯೆಗೆ ಸಿಲುಕಿದ್ದಾರೆ ಎಂದ್ರೆ ನೀವು ನಂಬಲೇಬೇಕು. ಹೀಗಾಗಿ ಸಂಬಂಧ ಪಟ್ಟ ಬೈಕ್ ಉತ್ಪಾದನಾ ಸಂಸ್ಥೆಯವರು ಮತ್ತು ಡೀಲರ್ಸ್‌ಗಳು ಈ ಕೂಡಲೇ ಬೈಕ್ ಸವಾರಿಗೆ ಅಡ್ಡಿಯಾಗಿರುವ ಇಂತಹ ಸಮಸ್ಯೆಯನ್ನು ಬಹುಬೇಗ ಪರಿಹರಿಸಬೇಕು ಎನ್ನುವುದು ದೀಪಕ್ ಅವರ ನೋವಿನ ನುಡಿಯಾಗಿದೆ.

ಇನ್ನು ಬೆಂಗಳೂರು ಆನ್ ರೋಡ್ ಬೆಲೆಗಳ ಪ್ರಕಾರ ಡ್ಯೂಕ್ 390 ಬೈಕ್‌ಗಳು 2.36 ಲಕ್ಷಕ್ಕೆ ಲಭ್ಯವಿದ್ದು, ವಿನೂತನ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ಈ ಬೈಕಿನಲ್ಲಿ ಹಲವು ಸಮಸ್ಯೆಗಳಿರುವುದು ಕೆಟಿಎಂ ಆಯ್ಕೆಗೆ ಹಿಂದೇಟು ಹಾಕುವಂತಾಗಿದೆ.

Most Read Articles

Kannada
Read more on ktm off beat
English summary
New KTM 390 Duke Issues; Owner Records Video — No Response From KTM Dealership.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X