ಗಾಯಗೊಂಡಿದ್ದ ನಾಯಿ ಮರಿ ರಕ್ಷಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಯುವತಿ

ಭಾರತದ ಹೆದ್ದಾರಿಗಳಲ್ಲಿ ಸಂಚರಿಸುವುದು ಸುರಕ್ಷಿತವಲ್ಲ ಎಂಬುದು ಆಗಾಗ ಕೇಳಿ ಬರುವ ಮಾತು. ಬಹುತೇಕ ಹೆದ್ದಾರಿಗಳು ಜನ ವಸತಿ ಪ್ರದೇಶಗಳಿಂದ ದೂರವಿರುತ್ತವೆ. ಈ ಕಾರಣಕ್ಕೆ ಹೆದ್ದಾರಿಗಳಲ್ಲಿ ಸಂಚರಿಸುವವರು ಅನಿರೀಕ್ಷಿತ ಘಟನೆಗಳನ್ನು ಎದುರಿಸುವ ಸಾಧ್ಯತೆಗಳು ಹೆಚ್ಚು.

ಗಾಯಗೊಂಡಿದ್ದ ನಾಯಿ ಮರಿಯನ್ನು ರಕ್ಷಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಯುವತಿ

ಇದಕ್ಕೆ ಪುಷ್ಟಿ ನೀಡುವಂತಹ ಘಟನೆಯೊಂದು ಇತ್ತೀಚಿಗೆ ಮಹಾರಾಷ್ಟ್ರದಲ್ಲಿ ನಡೆದಿದೆ. ರೈಡರ್ ಗರ್ಲ್ ವಿಶಾಖಾ ಎಂಬ ಯೂಟ್ಯೂಬ್ ಚಾನೆಲ್'ನ ವಿಶಾಖಾ ಎಂಬ ಯುವತಿ ಹೆದ್ದಾರಿಯಲ್ಲಿ ಕುಡುಕರಿಂದ ಕಿರುಕುಳ ಅನುಭವಿಸಿದ್ದಾಳೆ. ಮುಂಬೈ ಮೂಲದ ವಿಶಾಖಾ ಇತ್ತೀಚೆಗೆ ಮುಂಬೈನಿಂದ ಬೆಳಗಾವಿಗೆ ಕೆಟಿಎಂ 390 ಡ್ಯೂಕ್ ಬೈಕಿನಲ್ಲಿ ಪ್ರಯಾಣಿಸುತ್ತಿದ್ದಳು.

ಗಾಯಗೊಂಡಿದ್ದ ನಾಯಿ ಮರಿಯನ್ನು ರಕ್ಷಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಯುವತಿ

ಈ ಪ್ರಯಾಣದ ವೇಳೆ ಆಕೆ ರಸ್ತೆಬದಿಯ ನಾಯಿಗಳಿಗೆ ಆಹಾರವನ್ನು ನೀಡಲು ನಿರ್ಧರಿಸಿದ್ದಳು. ಈ ಕಾರಣಕ್ಕೆ ಹೆದ್ದಾರಿಯಲ್ಲಿರುವ ಅಂಗಡಿಯಲ್ಲಿ ಬಿಸ್ಕೆಟ್ ಪ್ಯಾಕ್‌ಗಳನ್ನು ಖರೀದಿಸಿ ಅವುಗಳನ್ನು ನಾಯಿಗಳಿಗೆ ನೀಡಲು ಶುರು ಮಾಡಿದಳು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಗಾಯಗೊಂಡಿದ್ದ ನಾಯಿ ಮರಿಯನ್ನು ರಕ್ಷಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಯುವತಿ

ಕೆಲವು ಬಿಸ್ಕೆಟ್ ಪಾಕೆಟ್‌ಗಳನ್ನು ತೆಗೆದು ಅಲ್ಲಿದ್ದ ವಿದ್ಯುತ್ ಕಂಬಗಳ ಕೆಳಗೆ ಇಟ್ಟಿದ್ದಾಳೆ. ಸ್ವಲ್ಪ ಸಮಯದ ನಂತರ ನಾಯಿಗಳು ಆ ಬಿಸ್ಕೆಟ್'ಗಳನ್ನು ಶುರು ಮಾಡಿದಳು. ಆಕೆ ಅಲ್ಲಿಂದ ಹೊರಡುವ ವೇಳೆ ಆಕೆಗೆ ನಾಯಿ ಬೊಗಳುವ ಶಬ್ದ ಕೇಳಿ ಬಂದಿದೆ.

ಗಾಯಗೊಂಡಿದ್ದ ನಾಯಿ ಮರಿಯನ್ನು ರಕ್ಷಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಯುವತಿ

ವಿಶಾಖಾ ಬೈಕ್‌ ಅನ್ನು ರಸ್ತೆ ಬದಿ ನಿಲ್ಲಿಸಿ ನಾಯಿ ಬೊಗಳುತ್ತಿದ್ದ ಸ್ಥಳಕ್ಕೆ ತೆರಳಿದ್ದಾಳೆ. ಆ ಸ್ಥಳದಲ್ಲಿ ನಾಯಿಮರಿಯೊಂದು ಮಲಗಿದ್ದರೆ ಅದರ ಸುತ್ತಲೂ ಕೆಲವು ಯುವಕರಿದ್ದರು. ಅವರಲ್ಲಿ ಬಹುತೇಕರು ಕುಡಿದಿದ್ದರು ಎಂದು ಹೇಳಲಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಗಾಯಗೊಂಡಿದ್ದ ನಾಯಿ ಮರಿಯನ್ನು ರಕ್ಷಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಯುವತಿ

ಆ ಯುವಕರು ನಾಯಿಗೆ ಕಾರು ಡಿಕ್ಕಿ ಹೊಡೆದಿರುವ ಕಾರಣಕ್ಕೆ ಗಾಯಗೊಂಡಿದೆ ಎಂದು ಹೇಳಿದ್ದಾರೆ. ನಂತರ ವಿಶಾಖಾ ತನ್ನ ಬೈಕ್ ಇದ್ದ ಸ್ಥಳಕ್ಕೆ ತೆರಳಿ ಕೆಲವು ಟಿಶ್ಯೂ ಪೇಪರ್‌ಗಳನ್ನು ತಂದಿದ್ದಾಳೆ.

ಗಾಯಗೊಂಡಿದ್ದ ನಾಯಿ ಮರಿಯನ್ನು ರಕ್ಷಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಯುವತಿ

ಅವುಗಳಿಂದ ನಾಯಿಯ ಮೈಯಿಂದ ಸೋರುತ್ತಿದ್ದ ರಕ್ತವನ್ನು ಒರೆಸಿದ್ದಾಳೆ. ಹೆಚ್ಚು ಗಾಯವಾಗಿದ್ದರಿಂದ ನಾಯಿ ಮರಿ ನೋವಿನಿಂದ ಕಿರುಚಾಡಿದೆ. ವಿಶಾಖಾ ನಾಯಿ ಮರಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದ್ದಾಳೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಗಾಯಗೊಂಡಿದ್ದ ನಾಯಿ ಮರಿಯನ್ನು ರಕ್ಷಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಯುವತಿ

ಪ್ರಾಣಿ ದಯಾ ಸಂಘಕ್ಕೆ ಕರೆ ಮಾಡಿದರೂ ಯಾವುದೇ ಪ್ರಯೋಜನವಾಗದ ಕಾರಣಕ್ಕೆ ವಿಶಾಖಾ ನಾಯಿಯನ್ನು ತನ್ನೊಂದಿಗೆ ಕರೆದುಕೊಂಡು ಹೋಗಲು ತೀರ್ಮಾನಿಸಿದ್ದಾಳೆ. ಆ ಯುವಕರು ಬೆಳಗಾವಿಯಲ್ಲಿ ಪಶುವೈದ್ಯರು ಇದ್ದಾರೆ ಎಂದು ತಿಳಿಸುತ್ತಾರೆ.

ಗಾಯಗೊಂಡಿದ್ದ ನಾಯಿ ಮರಿಯನ್ನು ರಕ್ಷಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಯುವತಿ

ಅಲ್ಲಿದ್ದ ಕೆಲವು ಯುವಕರು ವಿಶಾಖಾಳಿಗೆ ಕಿರುಕುಳ ನೀಡಲು ಮುಂದಾಗಿದ್ದಾರೆ. ಮದ್ಯದ ಅಮಲಿನಲ್ಲಿದ್ದ ಯುವಕರು ನಾಯಿಮರಿಯನ್ನು ಅಲ್ಲಿಯೇ ಬಿಡುವಂತೆವಿಶಾಖಾಳನ್ನು ಒತ್ತಾಯಿಸಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಗಾಯಗೊಂಡಿದ್ದ ನಾಯಿ ಮರಿಯನ್ನು ರಕ್ಷಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಯುವತಿ

ನಾಯಿಯನ್ನು ಕಸಿದುಕೊಳ್ಳುವ ಪ್ರಯತ್ನದಲ್ಲಿ ಯುವಕನೊಬ್ಬ ಚಾಕು ತೋರಿಸಿದನೆಂದು ವಿಶಾಖಾ ವೀಡಿಯೊದಲ್ಲಿ ಹೇಳಿದ್ದಾಳೆ. ಗಾಬರಿಗೊಂಡ ವಿಶಾಖಾ 100ಗೆ ಕರೆ ಮಾಡಿದ್ದಾಳೆ. ಆದರೆ ಪೊಲೀಸರು ಆಕೆಯ ಸಹಾಯಕ್ಕೆ ಮುಂದಾಗಿಲ್ಲ.

ಗಾಯಗೊಂಡಿದ್ದ ನಾಯಿ ಮರಿಯನ್ನು ರಕ್ಷಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಯುವತಿ

ಭಯದಲ್ಲಿದ್ದ ವಿಶಾಖಾ ರಸ್ತೆಯಲ್ಲಿ ಹೋಗುವವರ ನೆರವು ಕೋರಿದ್ದಾಳೆ. ಆದರೆ ಯಾರೊಬ್ಬರೂ ಆಕೆಯ ನೆರವಿಗೆ ಧಾವಿಸಿಲ್ಲ. ಇದು ವಿಶಾಖಾಗೆ ಮತ್ತಷ್ಟು ಭಯ ಹುಟ್ಟಿಸಿದೆ. ಯಾವುದೇ ಕಾರಣಕ್ಕೆ ನಾಯಿಮರಿಯನ್ನು ಬಿಟ್ಟು ಹೋಗಬಾರದೆಂದು ಆಕೆ ತೀರ್ಮಾನಿಸಿದ್ದಳು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಗಾಯಗೊಂಡಿದ್ದ ನಾಯಿ ಮರಿಯನ್ನು ರಕ್ಷಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಯುವತಿ

ಯುವಕನೊಬ್ಬ ಆಕೆಯ ನೆರವಿಗೆ ಬಂದರೂ ಅಲ್ಲಿದ್ದ ಕುಡುಕರು ಆತನನ್ನು ಓಡಿಸಿದ್ದಾರೆ. ವಿಶಾಖಾ ತನ್ನ ಬೈಕಿನಲ್ಲಿ ಹೋಗುವ ವೇಳೆ ಆ ಯುವಕರು ಆಕೆಯನ್ನು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾರೆ.

ಈ ವೇಳೆ ಇಬ್ಬರು ಟೋಲ್ ಸಿಬ್ಬಂದಿಗಳು ವಿಶಾಖಾ ನೆರವಿಗೆ ಧಾವಿಸಿ ಆಕೆಯನ್ನು ಪ್ರಾಣಿ ದಯಾ ಸಂಘದ ಕಾರ್ಯಕರ್ತರ ಬಳಿಗೆ ಕರೆದೊಯ್ದಿದ್ದಾರೆ. ನಾಯಿಮರಿಯನ್ನು ಸುರಕ್ಷಿತವಾಗಿ ಅವರಿಗೆ ಹಸ್ತಾಂತರಿಸಿದ ನಂತರ ವಿಶಾಖಾ ಅಲ್ಲಿಂದ ಹೊರಟಿದ್ದಾಳೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಗಾಯಗೊಂಡಿದ್ದ ನಾಯಿ ಮರಿಯನ್ನು ರಕ್ಷಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಯುವತಿ

ವಿಶಾಖಾ ಎದುರಿಸಿದ್ದು ತೀರಾ ಅಪಾಯಕಾರಿ ಪರಿಸ್ಥಿತಿ. ಹೆದ್ದಾರಿಗಳಲ್ಲಿ ಈ ಪರಿಸ್ಥಿತಿಗಳು ಎದುರಾಗುವುದರಿಂದ ಏಕಾಂಗಿಯಾಗಿ ಪ್ರಯಾಣಿಸುವುದು ಒಳ್ಳೆಯದಲ್ಲ. ಯಾವುದೇ ತೊಂದರೆಯಾಗದೇ ವಿಶಾಖಾ ಪಾರಾಗಿದ್ದು ನಿಜಕ್ಕೂ ಸಮಾಧಾನಕರ ಸಂಗತಿ.

ಚಿತ್ರಕೃಪೆ: ರೈಡರ್ ಗರ್ಲ್ ವಿಶಾಖಾ

Most Read Articles

Kannada
English summary
KTM girl rider gets into trouble while saving an injured pup. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X