ಸಾವಿನಂಚಿನಿಂದ ಬಚಾವ್ ಆದ ಕೆಟಿ‍ಎಂ ಬೈಕ್ ಸವಾರ

ವಾಹನ ಚಲಾಯಿಸುವುದನ್ನು ಕಲಿಯುವಾಗ ನೀವು ಎರಡು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡರೆ ಭಾರತದಲ್ಲಿ ಚಾಲನೆ ಮಾಡುವುದು ಸುಲಭ. ಮೊದಲಿಗೆ, ನೀವು ಜವಾಬ್ದಾರಿಯುತವಾಗಿ ವಾಹನ ಚಲಾಯಿಸಬೇಕು, ಸಂಚಾರ ನಿಯಮಗಳನ್ನು ಪಾಲಿಸಬೇಕು ಹಾಗೂ ಚಾಲನೆ ಮಾಡುವಾಗ ಅಥವಾ ಸವಾರಿ ಮಾಡುವಾಗ ಯಾವುದೇ ಸಣ್ಣ ಪುಟ್ಟ ತಪ್ಪುಗಳನ್ನು ಮಾಡಬಾರದು. ಇದರ ಜೊತೆಗೆ, ಅಪಘಾತಕ್ಕೆ ಕಾರಣವಾಗುವ ಬೇರೆ ವಾಹನಗಳ ಚಾಲಕರು ಹಾಗೂ ಸವಾರರನ್ನು ನೀವು ಗಮನಿಸುತ್ತಿರಬೇಕು.

ಸಾವಿನಂಚಿನಿಂದ ಬಚಾವ್ ಆದ ಕೆಟಿ‍ಎಂ ಬೈಕ್ ಸವಾರ

ಇವುಗಳನ್ನು ಮನಸ್ಸಿನಲ್ಲಿಟ್ಟುಕೊಂಡರೆ ರಸ್ತೆಯಲ್ಲಿ ಉತ್ತಮವಾಗಿ ಚಾಲನೆ ಮಾಡಬಹುದು. ಆದರೂ ಪ್ರತಿದಿನ ರಸ್ತೆಯಲ್ಲಿ ಸಣ್ಣ ಪುಟ್ಟ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ರೆಫೀ ಅವರ ವೀಡಿಯೊ ಇದೇ ರೀತಿಯ ಪ್ರಕರಣವನ್ನು ತೋರಿಸುತ್ತದೆ. ಈ ವೀಡಿಯೋದಲ್ಲಿ ಅತಿಯಾದ ವೇಗದಲ್ಲಿದ್ದ ಕೆಟಿಎಂ ಬೈಕ್, ಇನ್ನೇನು ಸ್ವಿಫ್ಟ್ ಕಾರಿಗೆ ಗುದ್ದಿತು ಎನ್ನುವಷ್ಟರಲ್ಲಿ ಪಾರಾಯಿತು. ಸ್ವಿಫ್ಟ್ ಕಾರು ಇದ್ದಕ್ಕಿದ್ದಂತೆ ಲೇನ್ ಬದಲಿಸಿ ಪಕ್ಕಕ್ಕೆ ಬಂತು.

ಕೆಟಿ‍ಎಂ ಬೈಕ್ ಸವಾರನ ಹೆಲ್ಮೆಟ್‌ನಲ್ಲಿ ಇರಿಸಲಾಗಿದ್ದ ಆಕ್ಷನ್ ಕ್ಯಾಮ್ ಮೂಲಕ ವೀಡಿಯೊವನ್ನು ರೆಕಾರ್ಡ್ ಮಾಡಲಾಗಿದೆ. ಈ ವೀಡಿಯೋ ಸಾಮಾನ್ಯ ಭಾರತೀಯ ರಸ್ತೆಯೊಂದಿಗೆ ಪ್ರಾರಂಭವಾಗುತ್ತದೆ. ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳು ಚಲಿಸುತ್ತಿರುವುದನ್ನು ಕಾಣಬಹುದು. ಆರ್‌ಸಿ ಸರಣಿಯ ಬೈಕ್ ಅನ್ನು ಸವಾರಿ ಮಾಡುತ್ತಿರುವ ಸವಾರ, ವಾಹನಗಳ ಸಂಚಾರವಿರುವ ರಸ್ತೆಯಲ್ಲಿ ಗಂಟೆಗೆ 80 ಕಿ.ಮೀಗೂ ಅಧಿಕ ವೇಗದಲ್ಲಿ ಹೋಗುತ್ತಿದ್ದಾನೆ. ಸ್ವಲ್ಪ ಮುಂದೆ ಹೋದ ನಂತರ, ಬೈಕ್ ಸವಾರ ಮಾರುತಿ ಸುಜುಕಿ ಸ್ವಿಫ್ಟ್ ಅನ್ನು ಓವರ್‍‍ಟೇಕ್ ಮಾಡಲು ನೋಡುತ್ತಾನೆ.

ಸಾವಿನಂಚಿನಿಂದ ಬಚಾವ್ ಆದ ಕೆಟಿ‍ಎಂ ಬೈಕ್ ಸವಾರ

ಎಡವಟ್ಟು ಆಗಿದ್ದೇ ಇಲ್ಲಿ. ಬೈಕ್ ಸವಾರ ಸ್ವಿಫ್ಟ್ ಕಾರ್ ಅನ್ನು ಓವರ್‍‍ಟೇಕ್ ಮಾಡಲು ಯತ್ನಿಸುತ್ತಿದ್ದಂತೆ, ಸ್ವಿಫ್ಟ್ ಕಾರಿನ ಚಾಲಕ ಕೂಡ ತನ್ನ ಮುಂದಿದ್ದ ವಾಹನವನ್ನು ಓವರ್‍‍ಟೇಕ್ ಮಾಡಲು ಕಾರ್ ಅನ್ನು ಪಕ್ಕಕ್ಕೆ ಎಳೆಯುತ್ತಾನೆ. ಇದು ಕೆಟಿಎಂ ಬೈಕ್ ಸವಾರನನ್ನು ಆತಂಕಕ್ಕೆ ತಳ್ಳುತ್ತದೆ. ಅದೃಷ್ಟವಶಾತ್, ಬೈಕ್ ಸವಾರ ತನ್ನ ಬೈಕ್ ಅನ್ನು ರಸ್ತೆಯ ಪಕ್ಕಕ್ಕೆ ತೆಗೆದುಕೊಳ್ಳುತ್ತಾನೆ. ಎದುರುಗಡೆಯಿಂದ ಯಾವುದೇ ವಾಹನಗಳು ಬರದೇ ಇದ್ದ ಕಾರಣಕ್ಕೆ ಬೈಕ್ ಸವಾರ ಬಚಾವ್ ಆಗುತ್ತಾನೆ.

ಸಾವಿನಂಚಿನಿಂದ ಬಚಾವ್ ಆದ ಕೆಟಿ‍ಎಂ ಬೈಕ್ ಸವಾರ

ಈ ವೀಡಿಯೊದಲ್ಲಿ ಎರಡೂ ವಾಹನಗಳು ಯಾವ ವೇಗದಲ್ಲಿ ಚಲಿಸುತ್ತಿವೆ ಎಂಬುದನ್ನು ಗಮನಿಸಬೇಕು. ಇದು ಬೈಕ್ ಸವಾರನಿಗೆ ಮಾರಣಾಂತಿಕತೆಯೊಂದಿಗೆ ಕೆಟ್ಟ ಪರಿಸ್ಥಿತಿಗೆ ಕಾರಣವಾಗಬಹುದು. ಈ ಅಪಘಾತದಿಂದ ಬಚಾವ್ ಆದಾಗ ಯಾರನ್ನಾದರೂ ದೂಷಿಸುವ ಮೊದಲು, ಕೆಟಿಎಂ ಬೈಕ್ ಚಾಲಕ ಹಾಗೂ ಸ್ವಿಫ್ಟ್ ಕಾರಿನ ಡ್ರೈವರ್ ಇಬ್ಬರೂ ಇಲ್ಲಿ ತಪ್ಪು ಮಾಡಿದ್ದಾರೆ. ಬೇರೆ ವಾಹನಗಳು ನಿಧಾನವಾಗಿ ಚಲಿಸುತ್ತಿದ್ದರೂ ಬೈಕ್ ಸವಾರನು ವೇಗವಾಗಿ ಬೈಕ್ ಚಲಾಯಿಸುತ್ತಿದ್ದನು.

ಸಾವಿನಂಚಿನಿಂದ ಬಚಾವ್ ಆದ ಕೆಟಿ‍ಎಂ ಬೈಕ್ ಸವಾರ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಇದರ ಜೊತೆಗೆ ಎದುರಿನ ಲೇನ್‌ನಲ್ಲಿಯೇ ಹೋಗುತ್ತಿದ್ದ. ಟೂ ವೇ ರಸ್ತೆಯಲ್ಲಿ ರಾಂಗ್ ಸೈಡಿನಲ್ಲಿ ಬೈಕ್ ಚಾಲನೆ ಮಾಡುವುದು ತೀರಾ ಅಪಾಯಕರ. ಸ್ವಿಫ್ಟ್ ಚಾಲಕನು, ಕಾರಿನ ಹಿಂದೆ ಬರುತ್ತಿರುವವರಿಗೆ ತಿಳಿಸಲು ಯಾವುದೇ ಇಂಡಿಕೇಟರ್‍‍ಗಳನ್ನು ಬಳಸದೆ ಏಕಾ‍ಏಕಿ ಲೇನ್‌ ಬದಲಿಸಿದನು. ಇದರ ಜೊತೆಗೆ, ಕಾರ್ ಡ್ರೈವರ್ ಸಹ ಚಲಿಸುವ ಮೊದಲು ತನ್ನ ಒಆರ್‍‍ವಿಎಂ ಅನ್ನು ಸಹ ಪರೀಕ್ಷಿಸಿಲ್ಲ. ಅವನು ಹಾಗೆ ಮಾಡಿದ್ದರೆ, ಕೆಟಿಎಂ ಬೈಕ್ ಸವಾರನು ಕಾರಿನ ಕಡೆಗೆ ವೇಗವಾಗಿ ಬರುತ್ತಿರುವುದನ್ನು ಗಮನಿಸಬಹುದಿತ್ತು.

ಸಾವಿನಂಚಿನಿಂದ ಬಚಾವ್ ಆದ ಕೆಟಿ‍ಎಂ ಬೈಕ್ ಸವಾರ

ಬಹುತೇಕ ಜನರು ಸಾಮಾನ್ಯವಾಗಿ ಲೇನ್‌ಗಳನ್ನು ಬದಲಾಯಿಸುವ ಮೊದಲು ಒಆರ್‌ವಿಎಂ ಅನ್ನು ಪರಿಶೀಲಿಸುತ್ತಾರೆ, ಅದು ಅನಿವಾರ್ಯವೂ ಹೌದು. ವಾಹನದ ಪಕ್ಕದಲ್ಲಿರುವ ಅಥವಾ ವಾಹನದ ತುಂಬಾ ಹಿಂದಿರುವ ವಾಹನಗಳು ಒಆರ್‌ವಿಎಂನಲ್ಲಿ ಕಾಣುವುದಿಲ್ಲ. ಬೈಕ್ ಸವಾರನು ಸವಾರಿ ಮಾಡುವಾಗ ಸ್ವಲ್ಪ ಎಚ್ಚರ ತಪ್ಪಿದ್ದರೆ ಅಥವಾ ರಸ್ತೆ ಎದುರಿನಲ್ಲಿ ಬೇರೆ ವಾಹನಗಳು ಬಂದಿದ್ದರೆ ಭಾರಿ ಅನಾಹುತ ಸಂಭವಿಸುತ್ತಿತ್ತು.

ಸಾವಿನಂಚಿನಿಂದ ಬಚಾವ್ ಆದ ಕೆಟಿ‍ಎಂ ಬೈಕ್ ಸವಾರ

ಸ್ವಿಫ್ಟ್ ಕಾರು ಬಸ್ಸಿನ ಹಿಂದೆ ನಿಧಾನವಾಗಿ ಹೋಗುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಇದರಿಂದ ಕಾರು ಬಸ್ ಅನ್ನು ಓವರ್‍‍ಟೇಕ್ ಮಾಡಲಿದೆ ಎಂಬುದನ್ನು ತಿಳಿಯಬಹುದು. ಆದರೆ ಲೇನ್‌ಗಳನ್ನು ಬದಲಿಸಿ ಓವರ್‍‍ಟೇಕ್ ಮಾಡುವ ಮೊದಲು ಇಂಡಿಕೇಟರ್‍‍ಗಳನ್ನು ಸ್ವಿಫ್ಟ್ ಕಾರಿನ ಚಾಲಕನು ಬಳಸಬೇಕಿತ್ತು. ಸರಳವಾಗಿ ಹೇಳುವುದಾದರೆ, ನೀವು ಚಾಲನೆ ಮಾಡುತ್ತಿರುವಾಗ ನೀವು ರಸ್ತೆಯಲ್ಲಿರುವ ಬೇರೆ ವಾಹನಗಳ ಚಾಲಕರನ್ನು ಸಹ ಗಮನಿಸುತ್ತಿರಬೇಕು. ಇಲ್ಲದ್ದಿದ್ದರೆ ಬೇರೆಯವರು ಮಾಡಿದ ತಪ್ಪುಗಳಿಗೆ ನೀವು ಭಾರೀ ಬೆಲೆ ತೆರಬೇಕಾಗುತ್ತದೆ.

ಸಾವಿನಂಚಿನಿಂದ ಬಚಾವ್ ಆದ ಕೆಟಿ‍ಎಂ ಬೈಕ್ ಸವಾರ

ನೀವು ಬಲಶಾಲಿಯಾದ, ಹೆಚ್ಚು ತಾಂತ್ರಿಕವಾದ ವಾಹನವನ್ನು ಚಲಾಯಿಸುತ್ತಿದ್ದರೂ ಸಹ ಮಿತ ವೇಗದಲ್ಲಿ ಸುರಕ್ಷಿತವಾಗಿ ಸವಾರಿ ಮಾಡಿ. ಸವಾರಿಯನ್ನು ರಸ್ತೆ ಹಾಗೂ ಸಂಚಾರ ಪರಿಸ್ಥಿತಿಗಳಿಗೆ ಅನುಗುಣವಾಗಿ ಮಾಡಬೇಕೇ ಹೊರತು, ವಾಹನವು ಉತ್ಪಾದಿಸುವ ಪವರ್‍‍ಗೆ ಅನುಗುಣವಾಗಿ ವಾಹನ ಚಾಲನೆ ಮಾಡದಿರಿ. ಕಾರನ್ನು ಚಾಲನೆ ಮಾಡುವಾಗ, ಲೇನ್‌ಗಳನ್ನು ಬದಲಾಯಿಸುವ ಮೊದಲು ಯಾವಾಗಲೂ ಇಂಡಿಕೇಟರ್‍‍ಗಳನ್ನು ಬಳಸಿ. ಹಿಂದೆ ಬರುತ್ತಿರುವ ವಾಹನಗಳನ್ನು ನೋಡಲು ಒ‍ಆರ್‍‍ವಿ‍ಎಂಗಳನ್ನು ಪರಿಶೀಲಿಸಿ.

Source: Reffy/YouTube

Most Read Articles

Kannada
Read more on ಅಪಘಾತ accident
English summary
KTM RC rider’s near miss shows why SPEEDING is so dangerous on Indian highways - Read in kannada
Story first published: Saturday, July 27, 2019, 13:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X