ತಲೆ ಮೇಲೆ ಬೈಕ್ ಹೊತ್ತು ಬಸ್ಸಿನ ಮೇಲೆರಿದ ಕೂಲಿ ಕಾರ್ಮಿಕ

ಇಂಟರ್ ನೆಟ್'ನಲ್ಲಿ ಪ್ರತಿದಿನ ಹಲವಾರು ವೀಡಿಯೊಗಳನ್ನು ಅಪ್ ಲೋಡ್ ಮಾಡಲಾಗುತ್ತದೆ. ಅವುಗಳಲ್ಲಿ ಕೆಲವು ವೀಡಿಯೊಗಳು ವೈರಲ್ ಆಗುತ್ತವೆ. ಇತ್ತೀಚಿಗೆ ವೈರಲ್ ಆಗಿರುವ ವೀಡಿಯೊಗೆ ಸಾಮಾಜಿಕ ಜಾಲತಾಣಗಳ ಬಳಕೆದಾರರು ವಿಭಿನ್ನ ಅಭಿಪ್ರಾಯಗಳನ್ನು ನೀಡುತ್ತಿದ್ದಾರೆ.

ತಲೆ ಮೇಲೆ ಬೈಕ್ ಹೊತ್ತು ಬಸ್ಸಿನ ಮೇಲೆರಿದ ಕೂಲಿ ಕಾರ್ಮಿಕ

9 ಸೆಕೆಂಡುಗಳಿರುವ ಈ ವೀಡಿಯೊವನ್ನು ಅಜಯಿತಾ ಎಂಬ ಟ್ವಿಟರ್ ಬಳಕೆದಾರರು ಟ್ವೀಟ್ ಮಾಡಿದ್ದಾರೆ. ಈ ವೀಡಿಯೊದಲ್ಲಿ ಕಾರ್ಮಿಕನೊಬ್ಬ ಬೈಕ್ ಅನ್ನು ತನ್ನ ತಲೆಯ ಮೇಲೆ ಇಟ್ಟು ಕೊಂಡು ಏಣಿಯ ಸಹಾಯದಿಂದ ಬಸ್ಸಿನ ಮೇಲೆ ಏರುತ್ತಿರುವುದನ್ನು ಕಾಣಬಹುದು.

ತಲೆ ಮೇಲೆ ಬೈಕ್ ಹೊತ್ತು ಬಸ್ಸಿನ ಮೇಲೆರಿದ ಕೂಲಿ ಕಾರ್ಮಿಕ

ಈ ವೀಡಿಯೊದಲ್ಲಿ ಮತ್ತೊಬ್ಬ ಆತನಿಗೆ ಸಹಾಯ ಮಾಡುತ್ತಿರುವುದನ್ನು ಕಾಣಬಹುದು. ವೈರಲ್ ಆಗಿರುವ ಈ ವೀಡಿಯೊ ಇದುವರೆಗೂ ಟ್ವಿಟರ್‌ನಲ್ಲಿ 2.50 ಲಕ್ಷ ವೀಕ್ಷಣೆಗಳನ್ನು ಪಡೆದಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ತಲೆ ಮೇಲೆ ಬೈಕ್ ಹೊತ್ತು ಬಸ್ಸಿನ ಮೇಲೆರಿದ ಕೂಲಿ ಕಾರ್ಮಿಕ

ಭಾರತವು ನಿಜವಾಗಿಯೂ ಇನ್ ಕ್ರೆಡಿಬಲ್ ಆಗಿದ್ದು, ಈ ವ್ಯಕ್ತಿಯ ಧೈರ್ಯಕ್ಕೆ ಮಾತುಗಳು ಸಾಲುತ್ತಿಲ್ಲವೆಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಬೈಕ್ ಅನ್ನು ತಲೆ ಮೇಲೆ ಹೊತ್ತೊಯ್ದ ಈ ವ್ಯಕ್ತಿಯನ್ನು ಹಲವಾರು ಜನರು ಹೊಗಳಿದ್ದಾರೆ.

ತಲೆ ಮೇಲೆ ಬೈಕ್ ಹೊತ್ತು ಬಸ್ಸಿನ ಮೇಲೆರಿದ ಕೂಲಿ ಕಾರ್ಮಿಕ

ಇನ್ನೂ ಕೆಲವರು ಈ ವ್ಯಕ್ತಿಯನ್ನು ನೇಮಿಸಿಕೊಂಡ ಮಾಲೀಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೈಕು ಎತ್ತುವ ಈ ವ್ಯಕ್ತಿಯು ಪ್ರತಿದಿನ ಅಸಹಾಯಕ ನೋವನ್ನು ಅನುಭವಿಸಬೇಕಾಗುತ್ತದೆ ಎಂದು ಕೆಲವರು ಹೇಳಿದ್ದಾರೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ತಲೆ ಮೇಲೆ ಬೈಕ್ ಹೊತ್ತು ಬಸ್ಸಿನ ಮೇಲೆರಿದ ಕೂಲಿ ಕಾರ್ಮಿಕ

ಈ ವ್ಯಕ್ತಿಯು ತನ್ನನ್ನು ಹಾಗೂ ತನ್ನ ಕುಟುಂಬವನ್ನು ಪೋಷಿಸಲು ಈ ಕಾರ್ಯವನ್ನು ಮಾಡುತ್ತಿದ್ದಾನೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಈ ಕಾರ್ಮಿಕನು ಈ ಕೆಲಸವನ್ನು ಮಾಡಬಾರದು, ಈ ಕೆಲಸವನ್ನು ಆತ ಮುಂದುವರಿಸಿದರೆ, ಆತನ ಕುತ್ತಿಗೆಗೆ ತೊಂದರೆಯಾಗುತ್ತದೆ ಎಂದು ಹೇಳಿದ್ದಾರೆ.

ತಲೆ ಮೇಲೆ ಬೈಕ್ ಹೊತ್ತು ಬಸ್ಸಿನ ಮೇಲೆರಿದ ಕೂಲಿ ಕಾರ್ಮಿಕ

ಈ ವೀಡಿಯೊದಲ್ಲಿ ಬಳಸಲಾಗಿರುವ ಶೀರ್ಷಿಕೆ ಆ ಕೆಲಸಗಾರನನ್ನು ಗೇಲಿ ಮಾಡುವಂತಿದೆ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಖಾಲಿ ಹೊಟ್ಟೆ ಯಾವ ಕೆಲಸವನ್ನು ಬೇಕಾದರೂ ಮಾಡಿಸುತ್ತದೆ ಎಂದು ಕೆಲವರು ಹೇಳಿದ್ದಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ತಲೆ ಮೇಲೆ ಬೈಕ್ ಹೊತ್ತು ಬಸ್ಸಿನ ಮೇಲೆರಿದ ಕೂಲಿ ಕಾರ್ಮಿಕ

ಇನ್ನೊಬ್ಬರು ಹಸಿವಿನಿಂದ ದೂರವಿರಲು ಆತ ಈ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಿದರೆ, ಆತ ಈ ಕೆಲಸವನ್ನು ಮಾಡದಿದ್ದರೆ ಹೇಗೆ ಹಣ ಸಂಪಾದಿಸುತ್ತಾನೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ಈ ಹಿಂದೆ ಈ ರೀತಿಯ ಹಲವಾರು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಏನೇ ಆದರೂ ತಲೆಯ ಮೇಲೆ ಬೈಕ್ ಎತ್ತುವುದು ತುಂಬಾ ಅಪಾಯಕಾರಿ. ಇದರಿಂದ ತೊಂದರೆ ತಪ್ಪಿದ್ದಲ್ಲ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ತಲೆ ಮೇಲೆ ಬೈಕ್ ಹೊತ್ತು ಬಸ್ಸಿನ ಮೇಲೆರಿದ ಕೂಲಿ ಕಾರ್ಮಿಕ

ಸಾಮಾನ್ಯವಾಗಿ 100 ಸಿಸಿ ಬೈಕುಗಳು 130-150 ಕೆ.ಜಿ ತೂಕವನ್ನು ಹೊಂದಿರುತ್ತವೆ. ಈ ರೀತಿ ಬೈಕ್ ಎತ್ತುವಂತೆ ಹೇಳುವುದು ಮತ್ತೊಬ್ಬರ ಜೀವನದಲ್ಲಿ ಆಟವಾಡಿದಂತೆ. ಭಾರತದ ಹಲವು ನಗರಗಳ ಬಸ್ ನಿಲ್ದಾಣಗಳಲ್ಲಿ ಭಾರೀ ಸರಕುಗಳನ್ನು ಹೊತ್ತೊಯ್ಯುವ ಕಾರ್ಮಿಕರನ್ನು ಕಾಣಬಹುದು.

Most Read Articles

Kannada
English summary
Laborer carries bike on his head video goes viral. Read in Kannada.
Story first published: Wednesday, January 27, 2021, 12:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X