ಸುಟ್ಟು ಕರಕಲಾಯ್ತು 17.7 ಕೋಟಿ ಬೆಲೆಯ ಸೂಪರ್ ಕಾರು..!

ಭಾರತದ ರಸ್ತೆಗಳಲ್ಲಿ ಸೂಪರ್ ಕಾರುಗಳನ್ನು ಕಾಣುವುದು ಬಲು ಅಪರೂಪ. ಸೂಪರ್ ಕಾರುಗಳ ಬೆಲೆ ಬಹಳ ದುಬಾರಿ ಎನ್ನುವುದು ಇದಕ್ಕೆ ಮುಖ್ಯ ಕಾರಣ. ಇದರ ಜೊತೆಗೆ ಈ ಕಾರುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ.

ಸುಟ್ಟು ಕರಕಲಾಯ್ತು 17.7 ಕೋಟಿ ಬೆಲೆಯ ಸೂಪರ್ ಕಾರು..!

ಇಷ್ಟ ಪಟ್ಟು ಖರೀದಿಸುವ ದುಬಾರಿ ಬೆಲೆಯ ಸೂಪರ್ ಕಾರುಗಳಿಗೆ ಬೆಂಕಿ ಬಿದ್ದರೆ ಹೇಗಾಗಬೇಡ. ಇದೇ ರೀತಿಯ ಘಟನೆಯೊಂದು ಜೆಕ್ ರಿಪಬ್ಲಿಕ್‍‍ನಲ್ಲಿ ನಡೆದಿದೆ. ರೂ.17.7 ಕೋಟಿ ಬೆಲೆಯ ಲ್ಯಾಂಬೋರ್ಗಿನಿ ಅವೆಂಟಡಾರ್ ಸೂಪರ್ ಕಾರಿಗೆ ಬೆಂಕಿ ಬಿದ್ದು ಸಂಪೂರ್ಣವಾಗಿ ಭಸ್ಮವಾಗಿದೆ.

ಸುಟ್ಟು ಕರಕಲಾಯ್ತು 17.7 ಕೋಟಿ ಬೆಲೆಯ ಸೂಪರ್ ಕಾರು..!

ಜೆಕ್ ರಿಪಬ್ಲಿಕ್‍‍ನ ಪ್ರಾಗ್ ನಗರದಲ್ಲಿರುವ ಸಬ್‍‍ವೇಯಲ್ಲಿ ಈ ಘಟನೆ ನಡೆದಿದೆ. ಜನವರಿ 16ರಂದು ಕಾರಿನ ಮಾಲೀಕರು ಈ ಕಾರ್ ಅನ್ನು ಡ್ರೈವ್ ಮಾಡಿಕೊಂಡು ಸಬ್‍‍ವೇನಲ್ಲಿ ಹೋಗುತ್ತಿದ್ದಾಗ ಏಕಾ‍ಏಕಿ ಕಾರಿಗೆ ಬೆಂಕಿ ಬಿದ್ದಿದೆ.

ಸುಟ್ಟು ಕರಕಲಾಯ್ತು 17.7 ಕೋಟಿ ಬೆಲೆಯ ಸೂಪರ್ ಕಾರು..!

ತಕ್ಷಣವೇ ಅಲ್ಲಿನ ಅಗ್ನಿ ಶಾಮಕ ವಿಭಾಗಕ್ಕೆ ಮಾಹಿತಿ ನೀಡಲಾಗಿದೆ. ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಆರಿಸುವಷ್ಟರಲ್ಲಿ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಹಲವು ಗಂಟೆಗಳ ನಂತರ ಬೆಂಕಿಯನ್ನು ಆರಿಸಲಾಗಿದೆ. ಈ ಘಟನೆಯ ಚಿತ್ರಗಳನ್ನು ಹೆಚ್‍‍ಝಡ್‍ಎಸ್ ಪ್ರಹಾದಿಂದ ಪಡೆಯಲಾಗಿದೆ.

ಸುಟ್ಟು ಕರಕಲಾಯ್ತು 17.7 ಕೋಟಿ ಬೆಲೆಯ ಸೂಪರ್ ಕಾರು..!

ಬೆಂಕಿಯನ್ನು ಆರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಘಟನೆಯ ವೀಡಿಯೊ ಫೇಸ್‍‍ಬುಕ್, ಟ್ವಿಟರ್ ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸುಟ್ಟು ಕರಕಲಾದ ಲ್ಯಾಂಬೋರ್ಗಿನಿ ಅವೆಂಟಡಾರ್ ಕಾರ್ ಅನ್ನು ಲಿಮಿಟೆಡ್ ಎಡಿಷನ್‍‍ನಲ್ಲಿ ಮಾರಾಟ ಮಾಡಲಾಗುತ್ತದೆ.

ಸುಟ್ಟು ಕರಕಲಾಯ್ತು 17.7 ಕೋಟಿ ಬೆಲೆಯ ಸೂಪರ್ ಕಾರು..!

ಈ ಕಾರು ಜೆಕ್ ರಿಪಬ್ಲಿಕ್ ದೇಶದವರಿಗೆ ಸೇರಿದ್ದಾಗಿದೆ. ಅವರು ಈ ಕಾರ್ ಅನ್ನು 2.5 ಮಿಲಿಯನ್ ಡಾಲರ್ ನೀಡಿ ಖರೀದಿಸಿದ್ದರು. ಭಾರತೀಯ ಮೌಲ್ಯದ ಪ್ರಕಾರ ಈ ಕಾರಿನ ಬೆಲೆ ರೂ.17.7 ಕೋಟಿಗಳಾಗುತ್ತದೆ. ದುಬಾರಿ ಬೆಲೆಯ ಈ ಸೂಪರ್ ಕಾರಿನಲ್ಲಿ 6.5 ಲೀಟರಿನ ವಿ12 ಎಂಜಿನ್ ಅಳವಡಿಸಲಾಗಿರುತ್ತದೆ. ಈ ಎಂಜಿನ್ 1,250 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸುತ್ತದೆ.

ಸುಟ್ಟು ಕರಕಲಾಯ್ತು 17.7 ಕೋಟಿ ಬೆಲೆಯ ಸೂಪರ್ ಕಾರು..!

ಈ ಕಾರು 0 - 100 ಕಿ.ಮೀವರೆಗಿನ ವೇಗವನ್ನು ಕೇವಲ 2.6 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ. ಈ ದುರ್ಘಟನೆಯಲ್ಲಿ ಯಾರೂ ಸತ್ತಿಲ್ಲ ಎಂಬುದು ಸಮಾಧಾನ ತರುವ ಸಂಗತಿಯಾಗಿದೆ. ದುಬಾರಿ ಬೆಲೆಯ ಈ ಕಾರಿಗೆ ಬೆಂಕಿ ಏಕೆ ಬಿತ್ತು ಎಂಬ ಪ್ರಶ್ನೆ ಕಾಡುವುದು ಸಹಜ. ಕಾರಿನಲ್ಲಿದ್ದ ತಾಂತ್ರಿಕ ಸಮಸ್ಯೆಯಿಂದಾಗಿ ಈ ಕಾರಿಗೆ ಬೆಂಕಿ ಬೀಳಲು ಕಾರಣ ಎಂಬ ಅಂಶ ಬೆಳಕಿಗೆ ಬಂದಿದೆ.

ಸುಟ್ಟು ಕರಕಲಾಯ್ತು 17.7 ಕೋಟಿ ಬೆಲೆಯ ಸೂಪರ್ ಕಾರು..!

ಈ ಕಾರಿನ ಮಾಲೀಕರು ಈ ಕಾರ್ ಅನ್ನು ಅತಿಯಾಗಿ ಮಾಡಿಫೈಗೊಳಿಸಿದ್ದು ಈ ದುರ್ಘಟನೆಗೆ ಕಾರಣವಾಗಿದೆ. ಕಾರಿನ ಮಾಲೀಕರು ಕಾರಿನ ಪವರ್ ಅನ್ನು 515 ಕಿ.ವ್ಯಾನಿಂದ 950 ಕಿ.ವ್ಯಾಗೆ ಏರಿಕೆ ಮಾಡಿದ್ದಾರೆ. ಕಾರಿನ ಮಾಡಿಫಿಕೇಷನ್‍‍ಗಳನ್ನು ಮನ್ಸೊರಿ ಎಂಬ ಕಂಪನಿಯು ಮಾಡಿದೆ.

ಸುಟ್ಟು ಕರಕಲಾಯ್ತು 17.7 ಕೋಟಿ ಬೆಲೆಯ ಸೂಪರ್ ಕಾರು..!

ಮನ್ಸೊರಿ ಜರ್ಮನಿಯಲ್ಲಿರುವ ವಿಶ್ವ ವಿಖ್ಯಾತ ಮಾಡಿಫಿಕೇಷನ್ ಕಂಪನಿಯಾಗಿದೆ. ಈ ಕಂಪನಿಯು ದುಬಾರಿ ಬೆಲೆಯ ಲಗ್ಷುರಿ ಕಾರುಗಳನ್ನು ಮಾಡಿಫೈಗೊಳಿಸುತ್ತದೆ. ಲಗ್ಷುರಿ ಕಾರುಗಳನ್ನು ಮಾತ್ರವಲ್ಲದೇ ಸೂಪರ್ ಕಾರ್ ಹಾಗೂ ಬೈಕ್‍‍ಗಳನ್ನು ಸಹ ಮಾಡಿಫೈಗೊಳಿಸುತ್ತದೆ.

ಸಾಮರ್ಥ್ಯವನ್ನು ಮೀರಿ ಮಾಡಿಫೈಗೊಂಡ ಕಾರಣಕ್ಕೆ ತಾಂತ್ರಿಕ ಸಮಸ್ಯೆಯುಂಟಾಗಿ ಕಾರಿಗೆ ಬೆಂಕಿ ಬಿದ್ದಿದೆ. ಈ ಘಟನೆಯ ಕುರಿತು ತನಿಖೆ ಪ್ರಗತಿಯಲ್ಲಿದೆ. ಭಾರತದಲ್ಲಿ ವಾಹನಗಳನ್ನು ಮಾಡಿಫೈಗೊಳಿಸುವುದನ್ನು ನಿಷೇಧಿಸಲಾಗಿದೆ.

ಸುಟ್ಟು ಕರಕಲಾಯ್ತು 17.7 ಕೋಟಿ ಬೆಲೆಯ ಸೂಪರ್ ಕಾರು..!

ನಿಷೇಧವಿದ್ದರೂ ಸಹ ಕಾನೂನುಬಾಹಿರವಾಗಿ ಕೆಲವರು ತಮ್ಮ ವಾಹನಗಳನ್ನು ಮಾಡಿಫೈಗೊಳಿಸುತ್ತಾರೆ. ಈ ಘಟನೆಯ ನಂತರವಾದರೂ ವಾಹನಗಳನ್ನು ಸಾಮರ್ಥ್ಯ ಮೀರಿ ಮಾಡಿಫೈ ಮಾಡಿಸುವವವರು ಎಚ್ಚೆತ್ತು ಕೊಳ್ಳುವುದು ಒಳಿತು.

Most Read Articles

Kannada
English summary
Lamborghini Aventador supercar catches fire. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X