Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬೆಂಗಳೂರಿನ ಉದ್ಯಮಿ ಮದುವೆಮನೆಯಲ್ಲಿ ಐಷಾರಾಮಿ ಕಾರುಗಳ ಕಲರವ..!
ಭಾರತದಲ್ಲಿ ನಡೆಯುವ ಮದುವೆಗಳು ವರ್ಣರಂಜಿತವಾಗಿರುವ ಕಾರಣ ವಿಶ್ವದೆಲ್ಲೆಡೆ ಜನಪ್ರಿಯತೆಯನ್ನು ಪಡೆದಿವೆ. ಭಾರತದಲ್ಲಿ ನಡೆಯುವ ಮದುವೆಗಳಲ್ಲಿ ತಮ್ಮ ಶ್ರೀಮಂತಿಕೆಯನ್ನು ಬೇರೆಯವರಿಗೆ ತೋರಿಸಲಾಗುತ್ತದೆ. ಅನೇಕ ಸೆಲೆಬ್ರಿಟಿಗಳ ಮದುವೆಗಳಲ್ಲಿ ನೂರಾರು ಐಷಾರಾಮಿ ಕಾರುಗಳನ್ನು ನೋಡಿದ್ದೇವೆ.

ಈಗ ನಾವು ಹೇಳುತ್ತಿರುವ ಮದುವೆಯು ನಡೆದಿರುವುದು ಕರ್ನಾಟಕದಲ್ಲಿ. ಅದೂ ಸಹ ನಮ್ಮ ಬೆಂಗಳೂರಿನಲ್ಲಿ. ಈ ಮದುವೆಗಾಗಿ ದುಬಾರಿ ಬೆಲೆಯ ಕಾರುಗಳನ್ನು ಅಲಂಕರಿಸಲಾಗಿತ್ತು. ಅತಿ ದುಬಾರಿ ಸೂಪರ್ಕಾರ್ ಆದ ಲ್ಯಾಂಬೊರ್ಗಿನಿ ಅವೆಂಟಡೊರ್ ಎಸ್ವಿಜೆಯನ್ನು ಸಹ ಅಲಂಕರಿಸಲಾಗಿತ್ತು. ಸೂಪರ್ಕಾರ್ಸ್ಇನ್ ಬೆಂಗಳೂರು ಬಿಡುಗಡೆ ಮಾಡಿರುವ ವೀಡಿಯೊದಲ್ಲಿ ವರ್ಣರಂಜಿತವಾಗಿ ಅಲಂಕರಿಸಿರುವ ಕಾರುಗಳನ್ನು ಕಾಣಬಹುದು.
ಎಲ್ಲಾ ಕಾರುಗಳನ್ನು ಸಾಲಾಗಿ ನಿಲ್ಲಿಸಿ ಹೂವುಗಳಿಂದ ಅಲಂಕರಿಸಲಾಗಿತ್ತು. ಲ್ಯಾಂಬೊರ್ಗಿನಿ ಅವೆಂಟಡೊರ್ ಎಸ್ವಿಜೆ ಕಾರು ಭಾರತದಲ್ಲಿ ಮಾತ್ರವಲ್ಲದೇ ಇಡೀ ಪ್ರಪಂಚದಲ್ಲಿಯೇ ಸೀಮಿತ ಸಂಖ್ಯೆಯ ಜನರು ಹೊಂದಿರುವ ಕಾರ್ ಆಗಿದೆ.

ಪ್ರಪಂಚದಲ್ಲಿ ಈವರೆಗೆ ಕೇವಲ 900 ಲ್ಯಾಂಬೊರ್ಗಿನಿ ಅವೆಂಟಡೊರ್ ಎಸ್ವಿಜೆ ಕಾರುಗಳನ್ನು ಮಾರಾಟ ಮಾಡಲಾಗಿದ್ದು, ಭಾರತದಲ್ಲಿ ಕೇವಲ ಮೂರು ಕಾರುಗಳನ್ನು ಮಾರಾಟ ಮಾಡಲಾಗಿದೆ. ಈ ವೀಡಿಯೊದಲ್ಲಿ ಕೆಂಪು ಬಣ್ಣದಲ್ಲಿರುವ ಕಾರ್ ಅನ್ನು ಮದುವೆಗಾಗಿ ಅಲಂಕರಿಸಿರುವುದನ್ನು ಕಾಣಬಹುದು.

ಲ್ಯಾಂಬೊರ್ಗಿನಿ ಅವೆಂಟಡೊರ್ ಎಸ್ವಿಜೆ ಕಾರು ಅನೇಕ ಬಗೆಯ ಆಯ್ಕೆಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ಈ ಕಾರಿನ ಮೂಲ ಮಾದರಿಯ ಬೆಲೆಯು ರೂ.8.5 ರಿಂದ 9 ಕೋಟಿಗಳಾಗಿದ್ದು, ಎಲ್ಲಾ ತೆರಿಗೆಗಳನ್ನು ಪಾವತಿಸಿ ರಸ್ತೆಗಿಳಿದ ನಂತರ ರೂ.12 ಕೋಟಿಗಳಾಗಲಿದ್ದು, ಈ ಕಾರ್ ಅನ್ನು ದುಬಾರಿ ಕಾರುಗಳಲ್ಲಿ ಒಂದನ್ನಾಗಿಸಿದೆ. ಈ ಕಾರ್ ಅನ್ನು ಈ ವರ್ಷದ ಆರಂಭದಲ್ಲಿ ಭಾರತಕ್ಕೆ ಆಮದು ಮಾಡಿಕೊಳ್ಳಲಾಗಿದ್ದು, ಇದುವರೆಗೂ ಮೂರು ಕಾರುಗಳನ್ನು ಮಾರಾಟ ಮಾಡಲಾಗಿದೆ.

ಅರಾನಿಕೊ ಅರ್ಗೊಸ್ ಆರೇಂಜ್ ಬಣ್ಣವನ್ನು ಹೊಂದಿರುವ ಈ ಕಾರು ಹೆಚ್ಚು ಅಗ್ರೇಸಿವ್ ಆಗಿ ಕಾಣಿಸುತ್ತದೆ. ಲ್ಯಾಂಬೊರ್ಗಿನಿ ಅವೆಂಟಡೊರ್ ಎಸ್ವಿಜೆ ದೇಶಿಯ ಮಾರುಕಟ್ಟೆಯಲ್ಲಿರುವ ಅತಿ ವೇಗದ ಕಾರ್ ಆಗಿದೆ.

ಎಸ್ವಿಜೆ ಎಂಬುದು ಸೂಪರ್ ವೆಲೊಸ್ ಜೊಟಾದ ಸಂಕ್ಷಿಪ್ತ ರೂಪವಾಗಿದೆ. ಸೂಪರ್ ವೆಲೊಸ್ ಎಂದರೆ ಅತಿ ವೇಗ ಎಂದಾಗಿದ್ದು, ಜೊಟಾ ಎಂಬುದು 1970 ದಶಕದಲ್ಲಿದ್ದ ಲ್ಯಾಂಬೊರ್ಗಿನಿ ಮಿಯುರಾ ಕಾರಿಗೆ ನೀಡಿರುವ ಗೌರವವಾಗಿದೆ.
MOST READ: ಟ್ಯೂಬ್ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್ಲೆಸ್ ಟಯರ್ ಸದ್ದು ಶುರು

ಲ್ಯಾಂಬೊರ್ಗಿನಿ ಅವೆಂಟಡೊರ್ ಎಸ್ವಿಜೆ ಹೆಚ್ಚಿನ ವೇಗವನ್ನು ಹೊಂದಿದೆ. ಈ ಕಾರಿನಲ್ಲಿ 6.5 ಲೀಟರಿನ ಎಂಜಿನ್ ಅಳವಡಿಸಲಾಗಿದ್ದು, 770 ಬಿಹೆಚ್ಪಿ ಹಾಗೂ 720 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 7 ಸ್ಪೀಡಿನ ಸಿಂಗಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಎಲ್ಲಾ ವ್ಹೀಲ್ಗಳನ್ನೂ ಚಲಾಯಿಸುತ್ತದೆ.

ಲ್ಯಾಂಬೊರ್ಗಿನಿ ಅವೆಂಟಡೊರ್ ಎಸ್ವಿಜೆ ಕಾರು 0-100 ಕಿ.ಮೀ ಅನ್ನು 2.8 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ. ಲ್ಯಾಂಬೊರ್ಗಿನಿ ಅವೆಂಟಡೊರ್ ಕಾರಿಗಿಂತ 0.1 ಸೆಕೆಂಡ್ ವೇಗವನ್ನು ಹೊಂದಿದೆ. ಈ ಕಾರಿನ ವೇಗವನ್ನು ಪ್ರತಿ ಗಂಟೆಗೆ 349 ಕಿ.ಮೀಗಳಿಗೆ ನಿಗದಿಪಡಿಸಲಾಗಿದೆ.
MOST READ: ಮ್ಯಾನುವಲ್ ಕಾರ್ ಡ್ರೈವಿಂಗ್ ಮಾಡದಿದ್ರೆ ಲೈಸೆನ್ಸ್ ಸಿಗೋದಿಲ್ಲ

ಈ ವೀಡಿಯೊದಲ್ಲಿರುವ ಸೂಪರ್ಕಾರು ಹಗುರವಾದ ಭಾರವನ್ನು ಹೊಂದಿರುವ, ಕಾರ್ಬನ್ ಫೈಬರ್ ಹಾಗೂ ಅಲ್ಯುಮಿನಿಯಂನಿಂದ ತಯಾರಿಸಿರುವ ನಿರಿಯೊ ವ್ಹೀಲ್ಗಳನ್ನು ಹೊಂದಿದೆ. ರಿಮ್ಗಳಲ್ಲಿ ಪಿರೆಲಿ ಪಿ ಝೀರೊ ಕೊರ್ಸಾ ಟಯರ್ಗಳನ್ನು ಅಳವಡಿಸಲಾಗಿದೆ.

ಲ್ಯಾಂಬೊರ್ಗಿನಿ ಅವೆಂಟಡೊರ್ ಎಸ್ವಿಜೆ ಕಾರಿನ ಜೊತೆಗೆ ಈ ವೀಡಿಯೊದಲ್ಲಿ ರೊಲ್ಸ್ ರಾಯ್ಸ್ ಘೋಸ್ಟ್, ಲ್ಯಾಂಬೊರ್ಗಿನಿ ಉರುಸ್, ಮಸೆರಟಿ ಕ್ವಾಟ್ರೊಪೊರ್ಟ್. ಲ್ಯಾಂಡ್ ರೋವರ್ ರೇಂಜ್ ರೋವರ್ ಸ್ಪೋರ್ಟ್, ಮರ್ಸಿಡಿಸ್ ಬೆಂಝ್ ಇ ಕ್ಲಾಸ್, ಬಿಎಂಡಬ್ಲ್ಯು 5, ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಮುಂತಾದ ಕಾರುಗಳಿವೆ.
MOST READ: ನೆಚ್ಚಿನ ಕಾರಿಗೆ ಗುದ್ದಿದ ಮಹಿಳೆಗೆ ಗೂಸಾ ನೀಡಿದ ಅಮೇರಿಕಾ ನಟ

ಭಾರತದಲ್ಲಿ ನಡೆಯುವ ಮದುವೆಗಳಲ್ಲಿ ಅಲಂಕೃತವಾಗಿರುವ ಕಾರುಗಳ ಜೊತೆಯಲ್ಲಿ ಬೇರೆ ಕಾರುಗಳು ಹೋಗುವುದು ಸಾಮಾನ್ಯವಾದ ಸಂಗತಿಯಾಗಿದೆ. ಆದರೆ ಇಷ್ಟೊಂದು ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಬಳಸುತ್ತಿರುವುದು ಬಹುಶಃ ಇದೇ ಮೊದಲು.
Source: SupercarsInBangalore