ಐಷಾರಾಮಿ ದೋಣಿ ಅಭಿವೃದ್ಧಿಪಡಿಸಿದ ಖ್ಯಾತ ಕಾರು ತಯಾರಕ ಕಂಪನಿ

ಇಟಲಿ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಲ್ಯಾಂಬೊರ್ಗಿನಿ ಐಷಾರಾಮಿ ವಿಹಾರ ನೌಕೆಯನ್ನು ಅಭಿವೃದ್ಧಿಪಡಿಸಿದೆ. ಕಂಪನಿಯು ದೋಣಿ ತಯಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಇದೇ ಮೊದಲ ಬಾರಿಯಲ್ಲ.

ಐಷಾರಾಮಿ ದೋಣಿ ಅಭಿವೃದ್ಧಿಪಡಿಸಿದ ಖ್ಯಾತ ಕಾರು ತಯಾರಕ ಕಂಪನಿ

ಕಂಪನಿಯು ಕಳೆದ ಕೆಲವು ವರ್ಷಗಳಿಂದ ಹೆಚ್ಚು ಸಾಮರ್ಥ್ಯದ ದೋಣಿಗಳ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ. ಲ್ಯಾಂಬೊರ್ಗಿನಿ ಕಂಪನಿಯು ದೋಣಿಗಳ ಉತ್ಪಾದನೆಗೆ ಇಟಲಿ ಸೀ ಗ್ರೂಪ್'ನೊಂದಿಗೆ ಸಹ ಭಾಗಿತ್ವ ಮಾಡಿ ಕೊಂಡಿದೆ.

ಐಷಾರಾಮಿ ದೋಣಿ ಅಭಿವೃದ್ಧಿಪಡಿಸಿದ ಖ್ಯಾತ ಕಾರು ತಯಾರಕ ಕಂಪನಿ

ಈ ಎರಡು ಕಂಪನಿಗಳು ಜೊತೆಯಾಗಿ ಲ್ಯಾಂಬೊರ್ಗಿನಿ 63 ಎಂಬ ಹೈಸ್ಪೀಡ್ ಐಷಾರಾಮಿ ದೋಣಿಯನ್ನು ಉತ್ಪಾದಿಸಿವೆ. ಲ್ಯಾಂಬೊರ್ಗಿನಿ ಕಂಪನಿಯು 1963 ರಿಂದ ಐಷಾರಾಮಿ ಕಾರುಗಳ ಉತ್ಪಾದನೆಯಲ್ಲಿ ತೊಡಗಿದೆ.

ಐಷಾರಾಮಿ ದೋಣಿ ಅಭಿವೃದ್ಧಿಪಡಿಸಿದ ಖ್ಯಾತ ಕಾರು ತಯಾರಕ ಕಂಪನಿ

ಈ ಕಾರಣಕ್ಕೆ ಐಷಾರಾಮಿ ದೋಣಿಗೆ ಲ್ಯಾಂಬೊರ್ಗಿನಿ 63 ಎಂಬ ಹೆಸರನ್ನಿಡಲಾಗಿದೆ. ಸುಮಾರು 3.5 ಮಿಲಿಯನ್ ಡಾಲರ್ ವೆಚ್ಚದಲ್ಲಿ ಈ ದೋಣಿಯನ್ನು ನಿರ್ಮಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಈ ದೋಣಿಯು ತೇಲುವ ಅರಮನೆಯಂತೆ ಕಾಣುತ್ತದೆ.

ಐಷಾರಾಮಿ ದೋಣಿ ಅಭಿವೃದ್ಧಿಪಡಿಸಿದ ಖ್ಯಾತ ಕಾರು ತಯಾರಕ ಕಂಪನಿ

ಈ ಲ್ಯಾಂಬೊರ್ಗಿನಿ ದೋಣಿ ಕಂಪನಿಯ ಐಷಾರಾಮಿ ಕಾರುಗಳಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ. ಈ ದೋಣಿಯಲ್ಲಿ ಲ್ಯಾಂಬೊರ್ಗಿನಿ ಕಂಪನಿಯ ಕಾರುಗಳಿಗಿಂತ ಹೆಚ್ಚು ಫೀಚರ್'ಗಳನ್ನು ಅಳವಡಿಸಲಾಗಿದೆ ಎಂಬುದು ಗಮನಾರ್ಹ.

ಐಷಾರಾಮಿ ದೋಣಿ ಅಭಿವೃದ್ಧಿಪಡಿಸಿದ ಖ್ಯಾತ ಕಾರು ತಯಾರಕ ಕಂಪನಿ

ಈ ದೋಣಿಯಲ್ಲಿ ವಿಶಾಲವಾದ ಕ್ಯಾಬಿನ್, ಸೂರ್ಯನ ಬೆಳಕು ಸುಲಭವಾಗಿ ಒಳ ಪ್ರವೇಶಿಸಲು ತೆರೆಯುವಿಕೆ, ಐಷಾರಾಮಿ ಸೀಟುಗಳು, ದೊಡ್ಡ ಟಿವಿ ಸೆಟ್ ಸೇರಿದಂತೆ ವಿವಿಧ ಫೀಚರ್'ಗಳನ್ನು ನೀಡಲಾಗಿದೆ.

ಐಷಾರಾಮಿ ದೋಣಿ ಅಭಿವೃದ್ಧಿಪಡಿಸಿದ ಖ್ಯಾತ ಕಾರು ತಯಾರಕ ಕಂಪನಿ

ಲ್ಯಾಂಬೊರ್ಗಿನಿ 63 ದೋಣಿಯು ಮಿನಿ ಬಾರ್ ಅನ್ನು ಸಹ ಹೊಂದಿದೆ. ಇದರಿಂದ ಈ ದೋಣಿಯಲ್ಲಿ ಮೋಜು, ಮಸ್ತಿ ಮಾಡಬಹುದು. ಈ ದೋಣಿಯನ್ನು ಶ್ರೀಮಂತರಿಗಾಗಿಯೇ ವಿನ್ಯಾಸಗೊಳಿಸಲಾಗಿದೆ.

ಐಷಾರಾಮಿ ದೋಣಿ ಅಭಿವೃದ್ಧಿಪಡಿಸಿದ ಖ್ಯಾತ ಕಾರು ತಯಾರಕ ಕಂಪನಿ

ಈ ದೋಣಿಯ ವಿನ್ಯಾಸ ಹಾಗೂ ದೋಣಿಯಲ್ಲಿರುವ ಸೌಕರ್ಯಗಳು ಎದ್ದು ಕಾಣುತ್ತವೆ. ಈ ದೋಣಿಯಲ್ಲಿ ವರ್ಡೆ ಕಿಯಾನ್ ಬಣ್ಣವನ್ನು ಬಳಸಲಾಗಿದೆ. ಲ್ಯಾಂಬೊರ್ಗಿನಿ ಕಂಪನಿಯು ಇದೇ ಬಣ್ಣವನ್ನು ತನ್ನ ಸೀಮಿತ ಆವೃತ್ತಿಯ ಸಿಯಾನ್ ಎಫ್‌ಕೆಬಿ 37 ಕಾರಿನಲ್ಲೂ ಬಳಸಿದೆ.

ಐಷಾರಾಮಿ ದೋಣಿ ಅಭಿವೃದ್ಧಿಪಡಿಸಿದ ಖ್ಯಾತ ಕಾರು ತಯಾರಕ ಕಂಪನಿ

ಲ್ಯಾಂಬೊರ್ಗಿನಿ ಕಂಪನಿಯು ಈ ದೋಣಿಯನ್ನು ಸ್ಲಿಮ್ ವಿನ್ಯಾಸದಲ್ಲಿ ತಯಾರಿಸಿದೆ. ಆದರೂ ಈ ದೋಣಿ ಹೆಚ್ಚು ವಿಶಾಲವಾಗಿದೆ. ಈ ದೋಣಿ ಲ್ಯಾಂಬೊರ್ಗಿನಿಯ ಅವೆಂಟಡಾರ್ ಕಾರಿನಲ್ಲಿರುವ ಕೆಲವು ಫೀಚರ್'ಗಳನ್ನು ಹೊಂದಿದೆ.

ಐಷಾರಾಮಿ ದೋಣಿ ಅಭಿವೃದ್ಧಿಪಡಿಸಿದ ಖ್ಯಾತ ಕಾರು ತಯಾರಕ ಕಂಪನಿ

ಈ ದೋಣಿಯಲ್ಲಿ ಅವೆಂಟಡಾರ್ ಕಾರಿನಲ್ಲಿರುವಂತಹ ಸ್ಟೀಯರಿಂಗ್ ವ್ಹೀಲ್, ಕ್ಯಾಬಿನ್ ಇಂಟೀರಿಯರ್ ಸ್ಟೈಲ್ ಹಾಗೂ ಸೀಟ್ ಬೆಲ್ಟ್‌ಗಳನ್ನು ನೀಡಲಾಗಿದೆ. ಈ ದೋಣಿಯ ಬಾಡಿ ಕಾರ್ಬನ್ ಫೈಬರ್'ನಿಂದ ಮಾಡಲ್ಪಟ್ಟಿದೆ.

ಐಷಾರಾಮಿ ದೋಣಿ ಅಭಿವೃದ್ಧಿಪಡಿಸಿದ ಖ್ಯಾತ ಕಾರು ತಯಾರಕ ಕಂಪನಿ

ಈ ಬಾಡಿ ಹಗುರವಾಗಿದ್ದು, ಹೆಚ್ಚು ಗಟ್ಟಿಮುಟ್ಟಾಗಿದೆ. ಈ ದೋಣಿಯಲ್ಲಿ ಮ್ಯಾನ್ ವಿ 12 ಡೀಸೆಲ್ ಮೋಟರ್ ಅಳವಡಿಸಲಾಗಿದೆ. ಈ ಮೋಟರ್ ಗರಿಷ್ಠ 2,000 ಬಿ‌ಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಈ ದೋಣಿಯ ಟಾಪ್ ಸ್ಪೀಡ್ 60 ಕ್ನಾಟ್'ಗಳಾಗಿದೆ.

Most Read Articles

Kannada
English summary
Lamborghini develops high speed luxury yacht. Read in Kannada.
Story first published: Thursday, July 15, 2021, 16:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X