ಖರೀದಿಸಿದ ಕೆಲ ನಿಮಿಷಗಳಲ್ಲೇ ಅಪಘಾತಕ್ಕೀಡಾದ ಕೋಟಿ ಬೆಲೆಯ ಐಷಾರಾಮಿ ಕಾರು

ಹೊಸ ಕಾರುಗಳನ್ನು ಖರೀದಿಸುವ ಜನರು ಅವುಗಳನ್ನು ಬಹಳ ಮುತುವರ್ಜಿಯಿಂದ ನೋಡಿಕೊಳ್ಳುತ್ತಾರೆ. ಹೊಸ ಕಾರುಗಳ ಮೇಲೆ ಸಣ್ಣ ಗೆರೆ ಬಿದ್ದರೂ ನಿರಾಶೆಯಾಗುವುದು ಸಹಜ. ಆದರೆ ಕೆಲ ನಿಮಿಷಗಳ ಹಿಂದಷ್ಟೇ ಖರೀದಿಸಿದ ಕೋಟಿ ಬೆಲೆ ಬಾಳುವ ಕಾರು ಅಪಘಾತಕ್ಕೀಡಾದರೆ ಏನಾಗುತ್ತದೆ ಎಂಬುದು ಅದನ್ನು ಅನುಭವಿಸಿದವರಿಗಷ್ಟೇ ಗೊತ್ತು.

ಖರೀದಿಸಿದ ಕೆಲ ನಿಮಿಷಗಳಲ್ಲೇ ಅಪಘಾತಕ್ಕೀಡಾದ ಕೋಟಿ ಬೆಲೆಯ ಐಷಾರಾಮಿ ಕಾರು

ಇಂಗ್ಲೆಂಡ್‌ನ ವೆಸ್ಟ್ ಯಾರ್ಕ್‌ಷೈರ್ ನಗರದ ವ್ಯಕ್ತಿಯೊಬ್ಬರು ಲ್ಯಾಂಬೋರ್ಗಿನಿ ಹುರಾಕನ್ ಸ್ಪೋರ್ಟ್ಸ್ ಕಾರ್ ಖರೀದಿಸಿದ್ದಾರೆ. ಖರೀದಿಸಿದ ಕೆಲ ನಿಮಿಷಗಳಲ್ಲೇ ಆ ಕಾರು ನುಜ್ಜುಗುಜ್ಜಾಗಿತ್ತು. ಕಾರು ಖರೀದಿಸಿ ಮನೆಗೆ ಹೋಗುವಾಗ ವ್ಯಾನ್‌ ಡಿಕ್ಕಿ ಹೊಡೆದ ಕಾರಣಕ್ಕೆ ಕಾರಿನ ಹಿಂಭಾಗವು ಸಂಪೂರ್ಣವಾಗಿ ಹಾಳಾಗಿದೆ.

ಖರೀದಿಸಿದ ಕೆಲ ನಿಮಿಷಗಳಲ್ಲೇ ಅಪಘಾತಕ್ಕೀಡಾದ ಕೋಟಿ ಬೆಲೆಯ ಐಷಾರಾಮಿ ಕಾರು

ಅಪಘಾತವು ಎಷ್ಟು ಭೀಕರವಾಗಿತ್ತೆಂದರೆ ಕಾರಿನ ಹಿಂಭಾಗದ ಬಲಗಡೆಯ ವ್ಹೀಲ್ ಪೂರ್ತಿಯಾಗಿ ಹೊರಬಂದಿದೆ. ಈ ಕಾರ್ ಅನ್ನು ಕೇವಲ 20 ನಿಮಿಷಗಳ ಹಿಂದಷ್ಟೇ ಶೋರೂಂನಿಂದ ಖರೀದಿಸಿದ್ದಾಗಿ ಲ್ಯಾಂಬೋರ್ಗಿನಿ ಕಾರಿನ ಚಾಲಕ ಹೇಳಿದ್ದಾನೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಖರೀದಿಸಿದ ಕೆಲ ನಿಮಿಷಗಳಲ್ಲೇ ಅಪಘಾತಕ್ಕೀಡಾದ ಕೋಟಿ ಬೆಲೆಯ ಐಷಾರಾಮಿ ಕಾರು

ಅಪಘಾತದಲ್ಲಿ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ವ್ಯಾನ್ ಚಾಲಕನ ತಲೆಗೂ ಪೆಟ್ಟು ಬಿದ್ದಿದೆ. ಹೆದ್ದಾರಿ ಖಾಲಿಯಿದ್ದ ಕಾರಣಕ್ಕೆ ಬೇರೆ ಯಾವುದೇ ವಾಹನಗಳಿಗೂ ಹಾನಿಯಾಗಿಲ್ಲ. ಪ್ರಕರಣದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ.

ಖರೀದಿಸಿದ ಕೆಲ ನಿಮಿಷಗಳಲ್ಲೇ ಅಪಘಾತಕ್ಕೀಡಾದ ಕೋಟಿ ಬೆಲೆಯ ಐಷಾರಾಮಿ ಕಾರು

ಎರಡೂ ವಾಹನಗಳು ಹೆದ್ದಾರಿಯಲ್ಲಿ ಅತಿ ವೇಗದಲ್ಲಿ ಹೋಗುತ್ತಿದ್ದಾಗ, ಕಾರಿನಲ್ಲಿ ತೊಂದರೆಯುಂಟಾಗಿ ಇದ್ದಕ್ಕಿದಂತೆ ನಿಂತಿದೆ. ಏಕಾಏಕಿ ಕಾರು ನಿಂತ ಕಾರಣಕ್ಕೆ ವೇಗವಾಗಿ ಬರುತ್ತಿದ್ದ ವ್ಯಾನ್ ಹಿಂದಿನಿಂದ ಕಾರಿಗೆ ಡಿಕ್ಕಿ ಹೊಡೆದಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಖರೀದಿಸಿದ ಕೆಲ ನಿಮಿಷಗಳಲ್ಲೇ ಅಪಘಾತಕ್ಕೀಡಾದ ಕೋಟಿ ಬೆಲೆಯ ಐಷಾರಾಮಿ ಕಾರು

ಇನ್ನೂ ಲ್ಯಾಂಬೋರ್ಗಿನಿ ಹುರಾಕನ್ ಕಾರಿನ ಬಗ್ಗೆ ಹೇಳುವುದಾದರೆ, ಇದೊಂದು ಐಷಾರಾಮಿ ಸ್ಪೋರ್ಟ್ಸ್ ಕಾರ್ ಆಗಿದ್ದು, ಫೋಲ್ಡ್ ಮಾಡಬಹುದಾದ ರೂಫ್ ಹೊಂದಿದೆ. ರೂಫ್ ತೆರೆದಾಗ ಕೂಪ್ ಕಾರಿನಂತೆ ಕಂಡು ಬರುತ್ತದೆ. ಈ ಕಾರಿನಲ್ಲಿರುವ ಡಿಸೈನ್ ಹಾಗೂ ಫೀಚರ್‌ಗಳನ್ನು ಲ್ಯಾಂಬೋರ್ಗಿನಿ ಸ್ಪೈಡರ್‌ನಿಂದ ಪಡೆಯಲಾಗಿದೆ.

ಖರೀದಿಸಿದ ಕೆಲ ನಿಮಿಷಗಳಲ್ಲೇ ಅಪಘಾತಕ್ಕೀಡಾದ ಕೋಟಿ ಬೆಲೆಯ ಐಷಾರಾಮಿ ಕಾರು

ಈ ಕಾರಿನಲ್ಲಿರುವ 5.2-ಲೀಟರಿನ ವಿ 10 ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್, 610 ಬಿಎಚ್‌ಪಿ ಪವರ್ ಹಾಗೂ 560 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಲ್ಯಾಂಬೋರ್ಗಿನಿ ಹುರಾಕನ್ ಕಾರಿನ ಬೆಲೆ ಭಾರತದಲ್ಲಿ ಎಕ್ಸ್ ಶೋರೂಂ ದರದಂತೆ ರೂ.3 ಕೋಟಿಗಳಿಂದ ಆರಂಭವಾಗುತ್ತದೆ.

Most Read Articles

Kannada
English summary
Lamborghini Huracan Supercar met with an accident within 20 minutes of purchase. Read in Kannada.
Story first published: Saturday, June 27, 2020, 13:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X