ಹೆದ್ದಾರಿಯಲ್ಲಿ ಚಲಿಸುವಾಗಲೇ ಬೆಂಕಿಗಾಹುತಿಯಾದ ಐಷಾರಾಮಿ ಕಾರು

ರಸ್ತೆಯಲ್ಲಿ ಚಲಿಸುತ್ತಿರುವ ಕಾರು ಬೆಂಕಿಗಾಹುತಿಯಾಗುವುದು ನಮ್ಮ ದೇಶದಲ್ಲಿ ಅಪರೂಪ. ಆದರೆ ವಿದೇಶಗಳಲ್ಲಿ ಈ ರೀತಿಯ ಪ್ರಕರಣಗಳು ಪದೇ ಪದೇ ವರದಿಯಾಗುತ್ತವೆ. ಇತ್ತೀಚಿಗೆ ಅಮೆರಿಕಾ ಹಾಗೂ ಚೀನಾದಲ್ಲಿ ಟೆಸ್ಲಾ ಕಂಪನಿಯ ಎಲೆಕ್ಟ್ರಿಕ್ ಕಾರುಗಳು ಬೆಂಕಿಗಾಹುತಿಯಾಗಿದ್ದವು.

ಹೆದ್ದಾರಿಯಲ್ಲಿ ಚಲಿಸುವಾಗಲೇ ಬೆಂಕಿಗಾಹುತಿಯಾದ ಐಷಾರಾಮಿ ಕಾರು

ಈಗ ತೈವಾನ್'ನಲ್ಲಿಯೂ ಇದೇ ರೀತಿಯ ಸುದ್ದಿಯೊಂದು ವರದಿಯಾಗಿದೆ. ಆದರೆ ಈ ಬಾರಿ ದುಬಾರಿ ಬೆಲೆಯ ಲ್ಯಾಂಬೊರ್ಗಿನಿ ಉರುಸ್ ಐಷಾರಾಮಿ ಕಾರು ಬೆಂಕಿಗಾಹುತಿಯಾಗಿದೆ. ಈ ಘಟನೆಗೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೆದ್ದಾರಿಯಲ್ಲಿ ಚಲಿಸುವಾಗಲೇ ಬೆಂಕಿಗಾಹುತಿಯಾದ ಐಷಾರಾಮಿ ಕಾರು

ಲ್ಯಾಂಬೊರ್ಗಿನಿ ಉರುಸ್ ಕಾರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಅದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಾರಿನ ಮಾಲೀಕರು ತಕ್ಷಣವೇ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಹೆದ್ದಾರಿಯಲ್ಲಿ ಚಲಿಸುವಾಗಲೇ ಬೆಂಕಿಗಾಹುತಿಯಾದ ಐಷಾರಾಮಿ ಕಾರು

ರಸ್ತೆಯಲ್ಲಿ ಕಾರು ಉರಿಯುತ್ತಿರುವುದನ್ನು ನೋಡಿದ ಲಾರಿ ಚಾಲಕನೊಬ್ಬ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾನೆ. ಆದರೆ ಆತನ ಶ್ರಮ ವ್ಯರ್ಥವಾಗಿದೆ. ಈ ರಸ್ತೆಯ ಉದ್ದಕ್ಕೂ ಸುಟ್ಟುಹೋದ ಕಾರಿನ ಲೋಹಗಳು ಹಾಗೂ ಪ್ಲಾಸ್ಟಿಕ್‌ಗಳು ತುಂಬಿ ಹರಿದಾಡುತ್ತಿದ್ದವು.

ಹೆದ್ದಾರಿಯಲ್ಲಿ ಚಲಿಸುವಾಗಲೇ ಬೆಂಕಿಗಾಹುತಿಯಾದ ಐಷಾರಾಮಿ ಕಾರು

ಅಪಘಾತದಲ್ಲಿ ಈ ಲ್ಯಾಂಬೊರ್ಗಿನಿ ಉರುಸ್ ಕಾರ್ ಅನ್ನು ಚಾಲನೆ ಮಾಡುತ್ತಿದ್ದ 29 ವರ್ಷದ ಕಾರು ಮಾಲೀಕರು ಯಾವುದೇ ಗಾಯಗಳಾಗದೇ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಲ್ಯಾಂಬೊರ್ಗಿನಿ ಕಾರನ್ನು ಅವರು 8 ತಿಂಗಳ ಹಿಂದೆ ಖರೀದಿಸಿದ್ದರು.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಹೆದ್ದಾರಿಯಲ್ಲಿ ಚಲಿಸುವಾಗಲೇ ಬೆಂಕಿಗಾಹುತಿಯಾದ ಐಷಾರಾಮಿ ಕಾರು

ಕಾರು ಮಾಲೀಕರಿಗೂ ಸಹ ಬೆಂಕಿಗೆ ಕಾರಣವೇನೆಂದು ತಿಳಿದಿಲ್ಲ. ತೈವಾನೀಸ್ ಶಾಂಘುವಾ ಕೌಂಟಿ ಅಗ್ನಿಶಾಮಕ ಇಲಾಖೆಯ ಪ್ರಾಥಮಿಕ ತನಿಖೆಯ ಪ್ರಕಾರ ಶಾರ್ಟ್ ಸರ್ಕ್ಯೂಟ್'ನಿಂದಾಗಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಹೇಳಲಾಗಿದೆ.

ಹೆದ್ದಾರಿಯಲ್ಲಿ ಚಲಿಸುವಾಗಲೇ ಬೆಂಕಿಗಾಹುತಿಯಾದ ಐಷಾರಾಮಿ ಕಾರು

ಇಂಧನವನ್ನು ಹೆಚ್ಚು ತುಂಬಿಸಿದ್ದ ಕಾರಣಕ್ಕೂ ಬೆಂಕಿ ಅನಾಹುತ ಸಂಭವಿಸಿರ ಬಹುದು. ಇದರಿಂದ ಉರುಸ್ ಕಾರಿನ ಸುರಕ್ಷತೆ ಬಗ್ಗೆ ಅನುಮಾನ ಪಡುವುದು ಸರಿಯಲ್ಲ. ಉರುಸ್, ಲ್ಯಾಂಬೊರ್ಗಿನಿ ಕಂಪನಿಯ ಹೆಚ್ಚು ಮಾರಾಟವಾಗುವ ಕಾರು ಮಾದರಿಯಾಗಿದೆ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಹೆದ್ದಾರಿಯಲ್ಲಿ ಚಲಿಸುವಾಗಲೇ ಬೆಂಕಿಗಾಹುತಿಯಾದ ಐಷಾರಾಮಿ ಕಾರು

2020ರ ವೇಳೆಗೆ ಲ್ಯಾಂಬೊರ್ಗಿನಿ ಕಾರುಗಳ ಮಾರಾಟದಲ್ಲಿ 59.1%ನಷ್ಟು ಉರುಸ್ ಕಾರುಗಳು ಇದ್ದವು. ಕಳೆದ ವರ್ಷ ವಿಶ್ವಾದ್ಯಂತ ಒಟ್ಟು 4,391 ಯುನಿಟ್ ಉರುಸ್ ಕಾರುಗಳು ಮಾರಾಟವಾಗಿವೆ.

ಹೆದ್ದಾರಿಯಲ್ಲಿ ಚಲಿಸುವಾಗಲೇ ಬೆಂಕಿಗಾಹುತಿಯಾದ ಐಷಾರಾಮಿ ಕಾರು

ಉರುಸ್ ಕಾರಿನಲ್ಲಿ 4.0-ಲೀಟರ್, ಡ್ಯುಯಲ್-ಟರ್ಬೊ ವಿ 8 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್'ನೊಂದಿಗೆ 8 ಸ್ಪೀಡ್ ಝಡ್ಎಫ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಜೋಡಿಸಲಾಗಿದೆ.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಈ ಎಂಜಿನ್ 647 ಬಿ‌ಹೆಚ್‌ಪಿ ಪವರ್ ಹಾಗೂ 850 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಲ್ಯಾಂಬೊರ್ಗಿನಿ ಉರುಸ್ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 190 ಕಿ.ಮೀಗಳಾಗಿದೆ.

ಹೆದ್ದಾರಿಯಲ್ಲಿ ಚಲಿಸುವಾಗಲೇ ಬೆಂಕಿಗಾಹುತಿಯಾದ ಐಷಾರಾಮಿ ಕಾರು

ಈ ಕಾರು ಕೇವಲ 3.5 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಲ್ಯಾಂಬೊರ್ಗಿನಿ ಉರುಸ್ ಕಾರಿನ ಬೆಲೆ ತೈವಾನ್‌ನಲ್ಲಿ 9.99 ಮಿಲಿಯನ್ ಡಾಲರ್'ಗಳಾಗಿದೆ. ಅಂದರೆ ಭಾರತದ ರೂಪಾಯಿ ಮೌಲ್ಯದಲ್ಲಿ ರೂ.2.63 ಕೋಟಿಗಳಾಗಿದೆ.

Most Read Articles

Kannada
English summary
Lamborghini Urus car catches fire while moving in highway. Read in Kannada.
Story first published: Saturday, May 8, 2021, 17:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X