317 ಕಿ.ಮೀ ವೇಗದಲ್ಲಿ ಚಲಿಸಿದ ಲ್ಯಾಂಬೊರ್ಗಿನಿ ಉರುಸ್ ಕಾರು

ರಾಷ್ಟ್ರೀಯ ಆಟೋಮೊಬೈಲ್ ಟೆಸ್ಟ್ ಟ್ರ್ಯಾಕ್ಸ್ ಸಂಸ್ಥೆ ಇತ್ತೀಚೆಗಷ್ಟೇ ಮಧ್ಯಪ್ರದೇಶದ ಪಿತಾಂಪುರದಲ್ಲಿ ಏಷ್ಯಾ ಖಂಡದ ಅತಿ ಉದ್ದದ ಹಾಗೂ ವೇಗದ ಟೆಸ್ಟ್ ಟ್ರ್ಯಾಕ್ ಅನ್ನು ಉದ್ಘಾಟನೆಗೊಳಿಸಿತ್ತು. ಈ ಟೆಸ್ಟ್ ಟ್ರ್ಯಾಕ್ ಅನ್ನು ಕೇಂದ್ರ ಸಚಿವರಾದ ಪ್ರಕಾಶ್ ಜಾವ್ದೇಕರ್ ​​ಉದ್ಘಾಟಿಸಿದ್ದರು.

317 ಕಿ.ಮೀ ವೇಗದಲ್ಲಿ ಚಲಿಸಿದ ಲ್ಯಾಂಬೊರ್ಗಿನಿ ಉರುಸ್ ಕಾರು

ಈ ಟೆಸ್ಟ್ ಟ್ರ್ಯಾಕ್'ನಲ್ಲಿ ಯಾವುದೇ ವೇಗ ನಿರ್ಬಂಧಗಳಿಲ್ಲ. ಕಾರುಗಳು ತಮ್ಮ ಗರಿಷ್ಠ ವೇಗದಲ್ಲಿ ಚಲಿಸಬಹುದು. ಇದಕ್ಕೆ ಸೂಕ್ತವಾದ ವಾತಾವರಣವನ್ನು ಇಲ್ಲಿ ನಿರ್ಮಿಸಲಾಗಿದೆ. ಹಲವು ಸೂಪರ್ ಕಾರು ಹಾಗೂ ಐಷಾರಾಮಿ ಕಾರುಗಳ ಮಾಲೀಕರು ಈಗಾಗಲೇ ಈ ಟೆಸ್ಟ್ ಟ್ರ್ಯಾಕ್ ಅನ್ನು ಬಳಸುತ್ತಿದ್ದಾರೆ.

317 ಕಿ.ಮೀ ವೇಗದಲ್ಲಿ ಚಲಿಸಿದ ಲ್ಯಾಂಬೊರ್ಗಿನಿ ಉರುಸ್ ಕಾರು

ಈ ಟೆಸ್ಟ್ ಟ್ರ್ಯಾಕ್'ನಲ್ಲಿ ಇತ್ತೀಚಿಗೆ ಲ್ಯಾಂಬೊರ್ಗಿನಿ ಉರುಸ್ ಕಾರೊಂದು 317 ಕಿ.ಮೀ ವೇಗದಲ್ಲಿ ಚಲಿಸಿರುವ ವೀಡಿಯೊ ವೈರಲ್ ಆಗಿದೆ. ಈ ವೀಡಿಯೊವನ್ನುಮಾಲ್ವಾಸುಪರ್ ಕಾರ್ಸ್ ಕ್ಲಬ್ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದೆ.

317 ಕಿ.ಮೀ ವೇಗದಲ್ಲಿ ಚಲಿಸಿದ ಲ್ಯಾಂಬೊರ್ಗಿನಿ ಉರುಸ್ ಕಾರು

ವೀಡಿಯೊದ ಆರಂಭದಲ್ಲಿಯೇ ಲ್ಯಾಂಬೊರ್ಗಿನಿ ಉರುಸ್ ಕಾರು 300 ಕಿ.ಮೀ ವೇಗದಲ್ಲಿ ಚಲಿಸುವುದನ್ನು ಕಾಣಬಹುದು. ಲ್ಯಾಂಬೊರ್ಗಿನಿ ಉರುಸ್ ಕಾರಿನ ಅಧಿಕೃತ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 190 ಮೈಲಿ ಅಂದರೆ 305 ಕಿ.ಮೀಗಳಾಗಿದೆ.

317 ಕಿ.ಮೀ ವೇಗದಲ್ಲಿ ಚಲಿಸಿದ ಲ್ಯಾಂಬೊರ್ಗಿನಿ ಉರುಸ್ ಕಾರು

ಈ ವೀಡಿಯೊದಲ್ಲಿರುವ ಲ್ಯಾಂಬೊರ್ಗಿನಿ ಉರುಸ್ ಕಾರು 305 ಕಿ.ಮೀ ವೇಗದಲ್ಲಿ ಚಲಿಸಿದ ನಂತರ ಚಾಲಕ 7 ನೇ ಗೇರ್‌ನಲ್ಲಿ ಕಾರನ್ನು ಚಾಲನೆ ಮಾಡಿದ್ದಾನೆ. ಇದರಿಂದಾಗಿ ಈ ಕಾರು 317 ಕಿ.ಮೀ ವೇಗದಲ್ಲಿ ಚಲಿಸಿದೆ.

317 ಕಿ.ಮೀ ವೇಗದಲ್ಲಿ ಚಲಿಸಿದ ಲ್ಯಾಂಬೊರ್ಗಿನಿ ಉರುಸ್ ಕಾರು

ಕಾರಿನ ಇನ್ಸ್'ಟ್ರೂಮೆಂಟ್ ಕ್ಲಸ್ಟರ್‌ನಲ್ಲಿ ಈ ವೇಗವನ್ನು ಕಾಣಬಹುದು. ಗಮನಿಸಬೇಕಾದ ಸಂಗತಿಯೆಂದರೆ ಕಾರಿನ ಅಧಿಕೃತ ವೇಗ ಹಾಗೂ ಇನ್ಸ್'ಟ್ರೂಮೆಂಟ್ ಕ್ಲಸ್ಟರ್ ತೋರಿಸಿದ ವೇಗದ ನಡುವೆ ವ್ಯತ್ಯಾಸವಿದೆ.

317 ಕಿ.ಮೀ ವೇಗದಲ್ಲಿ ಚಲಿಸಿದ ಲ್ಯಾಂಬೊರ್ಗಿನಿ ಉರುಸ್ ಕಾರು

ಇದು ಲ್ಯಾಂಬೊರ್ಗಿನಿ ಉರುಸ್ ಕಾರಿನ ಅನಧಿಕೃತ ಟಾಪ್ ಸ್ಪೀಡ್ ಆಗಿದೆ. ವಿವಿಧ ಕಂಪನಿಗಳು ಈ ಟೆಸ್ಟ್ ಟ್ರ್ಯಾಕ್ ಅನ್ನು ಬಳಸಲು ಆಸಕ್ತಿ ತೋರಿವೆ. ಇವುಗಳಲ್ಲಿ ಫೋಕ್ಸ್‌ವ್ಯಾಗನ್, ಫಿಯೆಟ್, ಲ್ಯಾಂಬೊರ್ಗಿನಿಯಂತಹ ಕಂಪನಿಗಳು ಸೇರಿವೆ.

317 ಕಿ.ಮೀ ವೇಗದಲ್ಲಿ ಚಲಿಸಿದ ಲ್ಯಾಂಬೊರ್ಗಿನಿ ಉರುಸ್ ಕಾರು

ಲ್ಯಾಂಬೊರ್ಗಿನಿ ಉರುಸ್ ಸೂಪರ್ ಕಾರು ಪ್ರಿಯರ ನೆಚ್ಚಿನ ಕಾರುಗಳಲ್ಲಿ ಒಂದಾಗಿದೆ. ಈ ಕಾರು ಭಾರತದ ರಸ್ತೆಗಳಲ್ಲಿ ಚಾಲನೆ ಮಾಡಲು ಸೂಕ್ತವಾದ ಲ್ಯಾಂಬೊರ್ಗಿನಿ ಕಂಪನಿಯ ಕಾರ್ ಆಗಿದೆ.

ಭಾರತದ ಹಲವು ಭಾಷೆಯ ಚಿತ್ರ ನಟರು ಲ್ಯಾಂಬೊರ್ಗಿನಿ ಉರುಸ್ ಕಾರ್ ಅನ್ನು ಹೊಂದಿದ್ದಾರೆ ಎಂಬುದು ಗಮನಾರ್ಹ. ಲ್ಯಾಂಬೊರ್ಗಿನಿ ಉರುಸ್ ಕಾರಿನಲ್ಲಿ 4.0 ಲೀಟರ್ ವಿ 8 ಟ್ವಿನ್ ಟರ್ಬೊ ಎಂಜಿನ್ ಅಳವಡಿಸಲಾಗಿದೆ.

317 ಕಿ.ಮೀ ವೇಗದಲ್ಲಿ ಚಲಿಸಿದ ಲ್ಯಾಂಬೊರ್ಗಿನಿ ಉರುಸ್ ಕಾರು

ಈ ಎಂಜಿನ್ ಗರಿಷ್ಠ 647 ಬಿ‌ಹೆಚ್‌ಪಿ ಪವರ್ ಹಾಗೂ 850 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 8 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್'ಮಿಷನ್'ನೊಂದಿಗೆ ಜೋಡಿಸಲಾಗಿದೆ. ಈ ಕಾರು ಸುಮಾರು 2.2 ಟನ್ ತೂಕವನ್ನು ಹೊಂದಿದೆ.

Most Read Articles

Kannada
English summary
Lamborghini Urus car moves at the speed of 317 kmph. Read in Kannada.
Story first published: Thursday, July 29, 2021, 12:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X