ಕಳುವಾಗಿದ್ದ ದುಬಾರಿ ಬೆಲೆಯ ಐಷಾರಾಮಿ ಕಾರು ಪುನಃ ಮಾಲೀಕನ ಕೈಗೆ ಸಿಕ್ಕಿದ್ದು ಹೇಗೆ?

ಎಲ್ಲಾ ದೇಶಗಳಲ್ಲೂ ಕಾರು ಕಳ್ಳತನ ಪ್ರಕರಣಗಳು ಸರ್ವೇ ಸಾಮಾನ್ಯ. ಹೊರ ದೇಶಗಳಲ್ಲಿ ಹೆಚ್ಚಾಗಿ ದುಬಾರಿ ಬೆಲೆಯ ಐಷಾರಾಮಿ ಕಾರುಗಳ ಕಳ್ಳತನವಾಗುತ್ತದೆ. ಆದರೆ ಭಾರತದಲ್ಲಿ ಸೂಪರ್ ಕಾರುಗಳ ಕಳ್ಳತನವಾಗುವುದು ಅಪರೂಪ.

ಕಳುವಾಗಿದ್ದ ದುಬಾರಿ ಬೆಲೆಯ ಐಷಾರಾಮಿ ಕಾರು ಪುನಃ ಮಾಲೀಕನ ಕೈ ಸೇರಿದ್ದು ಹೀಗೆ

ಐಷಾರಾಮಿ ಕಾರುಗಳನ್ನು ಕದ್ದ ನಂತರ ಅವುಗಳ ಮಾರಾಟ ಮಾಡಲು ಹೆಣಗಾಡ ಬೇಕಾಗುತ್ತದೆ. ಹೀಗಾಗಿ ಭಾರತದಲ್ಲಿ ಹೆಚ್ಚೆಂದರೆ ಟೊಯೊಟಾ ಇನೋವಾ ಕ್ರಿಸ್ಟಾದಂತಹ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಳ್ಳತನವಾಗುತ್ತವೆ. ಆದರೆ ವಿದೇಶಗಳ ಕಥೆಯೇ ಬೇರೆ. ಅಮೆರಿಕಾದಂತಹ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ದುಬಾರಿ ಬೆಲೆಯ ಐಷಾರಾಮಿ ಕಾರುಗಳೇ ಹೆಚ್ಚು ಕಳುವಾಗುತ್ತವೆ.

ಕಳುವಾಗಿದ್ದ ದುಬಾರಿ ಬೆಲೆಯ ಐಷಾರಾಮಿ ಕಾರು ಪುನಃ ಮಾಲೀಕನ ಕೈ ಸೇರಿದ್ದು ಹೀಗೆ

ಈಗ ಇದೇ ರೀತಿಯ ಮತ್ತೊಂದು ಘಟನೆ ಅಮೆರಿಕಾದ ಫ್ಲೋರಿಡಾ ರಾಜ್ಯದಿಂದ ವರದಿಯಾಗಿದೆ. ವ್ಯಕ್ತಿಯೊಬ್ಬರು ಕಳುವಾಗಿದ್ದ ತಮ್ಮ ಲ್ಯಾಂಬೊರ್ಗಿನಿ ಉರುಸ್ ಕಾರ್ ಅನ್ನು ಮರಳಿ ಪಡೆಯಲು ಯಶಸ್ವಿಯಾಗಿದ್ದಾರೆ.

ಕಳುವಾಗಿದ್ದ ದುಬಾರಿ ಬೆಲೆಯ ಐಷಾರಾಮಿ ಕಾರು ಪುನಃ ಮಾಲೀಕನ ಕೈ ಸೇರಿದ್ದು ಹೀಗೆ

ಫ್ಲೋರಿಡಾದ ಮಿಯಾಮಿಯ ನಿವಾಸಿಯಾದ ಕ್ರಿಸ್ ಸ್ಯಾಂಡರ್ಸ್ ಎಂಬುವವರ 2 ಲಕ್ಷ ಅಮೆರಿಕನ್ ಡಾಲರ್ ಅಂದರೆ ಸುಮಾರು ರೂ.1.46 ಕೋಟಿ ಬೆಲೆಯ ಲ್ಯಾಂಬೊರ್ಗಿನಿ ಉರುಸ್ ಕಾರನ್ನು ಅವರ ಮನೆಯಿಂದ ಕಳವು ಮಾಡಲಾಗಿತ್ತು.

ಕಳುವಾಗಿದ್ದ ದುಬಾರಿ ಬೆಲೆಯ ಐಷಾರಾಮಿ ಕಾರು ಪುನಃ ಮಾಲೀಕನ ಕೈ ಸೇರಿದ್ದು ಹೀಗೆ

ಕಾರು ಕಳ್ಳತನವಾಗಿರುವುದು ತಮ್ಮ ಗಮನಕ್ಕೆ ಬಂದ ಕೂಡಲೇ ಅವರು ಕಾರನ್ನು ಹಲವು ಸ್ಥಳಗಳಲ್ಲಿ ಹುಡುಕಿದ್ದಾರೆ. ಆದರೂ ಕಾರು ಪತ್ತೆಯಾಗಿಲ್ಲ. ಕಳೆದ ಜೂನ್ 8ರಂದು ಕ್ರಿಸ್ ಸ್ಯಾಂಡರ್ಸ್ ಮನೆಯಲ್ಲಿದ್ದಾಗ ತಮ್ಮ ಕಪ್ಪು ಬಣ್ಣದ ಉರುಸ್ ಕಾರು ರಸ್ತೆಯಲ್ಲಿ ಸಾಗುತ್ತಿರುವುದನ್ನು ಗಮನಿಸಿದ್ದಾರೆ.

ಕಳುವಾಗಿದ್ದ ದುಬಾರಿ ಬೆಲೆಯ ಐಷಾರಾಮಿ ಕಾರು ಪುನಃ ಮಾಲೀಕನ ಕೈ ಸೇರಿದ್ದು ಹೀಗೆ

ಕೂಡಲೇ ತಮ್ಮ ಸ್ಕೂಟರಿನಲ್ಲಿ ಕಾರ್ ಅನ್ನು ಹಿಂಬಾಲಿಸಿದ್ದಾರೆ. ಉರುಸ್ ಕಾರು ವಿಶ್ವದ ಅತಿ ವೇಗದ ಸೂಪರ್‌ಕಾರ್‌ಗಳಲ್ಲಿ ಒಂದಾಗಿದೆ. ಉರುಸ್ ಕಾರು ಕೇವಲ 3.6 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಅಕ್ಸಲರೇಟ್ ಮಾಡುತ್ತದೆ.

ಕಳುವಾಗಿದ್ದ ದುಬಾರಿ ಬೆಲೆಯ ಐಷಾರಾಮಿ ಕಾರು ಪುನಃ ಮಾಲೀಕನ ಕೈ ಸೇರಿದ್ದು ಹೀಗೆ

ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 305 ಕಿ.ಮೀಗಳಾಗಿದೆ. ಕಾರು ಚಾಲನೆ ಮಾಡುತ್ತಿದ್ದ ಕಳ್ಳ ಕಾರನ್ನು ವೇಗವಾಗಿ ಚಾಲನೆ ಮಾಡಿದ್ದಾನೆ. ಆದರೂ ಕ್ರಿಸ್ ಸ್ಯಾಂಡರ್ಸ್ ಸ್ಕೂಟರಿನಲ್ಲಿಯೇ ಕಾರ್ ಅನ್ನು ವೇಗವಾಗಿ ಬೆನ್ನಟ್ಟಿದ್ದಾರೆ.

ಹಲವು ದೂರ ಸಾಗಿದ ನಂತರ ಕೊನೆಗೂ ತಮ್ಮ ಕಾರ್ ಅನ್ನು ಮರಳಿ ಪಡೆಯಲು ಯಶಸ್ವಿಯಾಗಿದ್ದಾರೆ. 14 ವರ್ಷದ ಬಾಲಕನೊಬ್ಬ ಕ್ರಿಸ್ ಸ್ಯಾಂಡರ್ಸ್‌ರವರ ಉರುಸ್ ಕಾರನ್ನು ಕಳುವು ಮಾಡಿದ್ದ ಎಂದು ಫ್ಲೋರಿಡಾ ಪೊಲೀಸರು ತಿಳಿಸಿದ್ದಾರೆ.

ಕಳುವಾಗಿದ್ದ ದುಬಾರಿ ಬೆಲೆಯ ಐಷಾರಾಮಿ ಕಾರು ಪುನಃ ಮಾಲೀಕನ ಕೈ ಸೇರಿದ್ದು ಹೀಗೆ

ಕ್ರಿಸ್ ಸ್ಯಾಂಡರ್ಸ್'ರವರ ಮನೆಯಿಂದ ಕಾರನ್ನು ಕಳವು ಮಾಡುವಾಗ ಸಿಸಿಟಿವಿ ದೃಶ್ಯದಲ್ಲಿದ್ದ ವ್ಯಕ್ತಿ ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿ ಒಬ್ಬನೇ ಆಗಿರುವುದು ಪೊಲೀಸರ ತನಿಖೆಯಿಂದ ಪತ್ತೆಯಾಗಿದೆ. ಇದರಿಂದ ಕಾರು ಚಾಲನೆ ಮಾಡುತ್ತಿದ್ದ ಬಾಲಕನೇ ಕಾರು ಕದ್ದಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ.

Most Read Articles

Kannada
English summary
Lamborghini Urus car owner chases thief on scooter. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X