ಜುಲೈ 1ರಿಂದ ಬದಲಾಗಲಿದೆ ಲರ್ನರ್ ಲೈಸೆನ್ಸ್ ಪಡೆಯುವ ವಿಧಾನ

ಯಾವುದೇ ವಾಹನ ಚಾಲನೆ ಮಾಡಲು ಡ್ರೈವಿಂಗ್ ಲೈಸೆನ್ಸ್ ಅಗತ್ಯವಿರುತ್ತದೆ. ಡ್ರೈವಿಂಗ್ ಲೈಸೆನ್ಸ್ ಹೊಂದಿಲ್ಲದೇ ವಾಹನ ಚಾಲನೆ ಮಾಡುವವರಿಗೆ ಹೊಸ ಮೋಟಾರು ವಾಹನ ಕಾಯ್ದೆಯನ್ವಯ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತದೆ.

ಜುಲೈ 1ರಿಂದ ಬದಲಾಗಲಿದೆ ಲರ್ನರ್ ಲೈಸೆನ್ಸ್ ಪಡೆಯುವ ವಿಧಾನ

ಡ್ರೈವಿಂಗ್ ಲೈಸೆನ್ಸ್ ಪಡೆಯುವುದಕ್ಕೆ ಮುನ್ನ ಲರ್ನರ್ ಲೈಸೆನ್ಸ್ ಪಡೆಯುವುದು ಕಡ್ಡಾಯ. ಲರ್ನರ್ ಲೈಸೆನ್ಸ್ ಪಡೆಯುವ ನಿಯಮಗಳು ಮುಂದಿನ ತಿಂಗಳಿನಿಂದ ಅಂದರೆ ಜುಲೈ 1ರಿಂದ ಬದಲಾಗಲಿವೆ. ಈ ಬದಲಾವಣೆಯ ನಂತರ ಲರ್ನರ್ ಲೈಸೆನ್ಸ್ ಪಡೆಯಲು ಆರ್‌ಟಿಒಗೆ ಹೋಗುವ ಅವಶ್ಯಕತೆಯಿಲ್ಲ.

ಜುಲೈ 1ರಿಂದ ಬದಲಾಗಲಿದೆ ಲರ್ನರ್ ಲೈಸೆನ್ಸ್ ಪಡೆಯುವ ವಿಧಾನ

ಇನ್ನು ಮುಂದೆ ಲರ್ನರ್ ಲೈಸೆನ್ಸ್ ಅನ್ನು ಆನ್‌ಲೈನ್‌ ಮೂಲಕವೇ ಪಡೆಯಬಹುದು. ನಂತರ ಬಯಸಿದಾಗಲೆಲ್ಲಾ ಪ್ರಿಂಟ್ ಮಾಡಿಕೊಳ್ಳಬಹುದು. ಈ ಸೌಲಭ್ಯವನ್ನು ಜನರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಲು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ಮುಂದಾಗಿದೆ.

ಜುಲೈ 1ರಿಂದ ಬದಲಾಗಲಿದೆ ಲರ್ನರ್ ಲೈಸೆನ್ಸ್ ಪಡೆಯುವ ವಿಧಾನ

ಇದಕ್ಕಾಗಿ ಇಲಾಖೆಯು ಸಾರಥಿ ಸಾಫ್ಟ್‌ವೇರ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಈ ಬದಲಾವಣೆಯ ನಂತರ ಲರ್ನರ್ ಲೈಸೆನ್ಸ್ ಪಡೆಯುವುದು ಸುಲಭವಾಗಲಿದೆ. ಮನೆಯಲ್ಲೇ ಕುಳಿತು ಈ ಸೌಲಭ್ಯದ ಪ್ರಯೋಜನವನ್ನು ಪಡೆಯಬಹುದು.

ಜುಲೈ 1ರಿಂದ ಬದಲಾಗಲಿದೆ ಲರ್ನರ್ ಲೈಸೆನ್ಸ್ ಪಡೆಯುವ ವಿಧಾನ

ಆನ್‌ಲೈನ್ ಮೂಲಕ ಲರ್ನರ್ ಲೈಸೆನ್ಸ್ ಪಡೆಯಲು, ಆಯಾ ರಾಜ್ಯದ ಸಾರಿಗೆ ವಿಭಾಗದ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಇದರ ಜೊತೆಗೆhttps://parivahan.gov.in ಅಥವಾ sarathiservice/newLLDet.do ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

ಜುಲೈ 1ರಿಂದ ಬದಲಾಗಲಿದೆ ಲರ್ನರ್ ಲೈಸೆನ್ಸ್ ಪಡೆಯುವ ವಿಧಾನ

ಆನ್‌ಲೈನ್ ಮೂಲಕ ಲರ್ನರ್ ಲೈಸೆನ್ಸ್ ಪಡೆಯಲು, ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಬೇಕಾಗುತ್ತದೆ. ಅರ್ಜಿಯನ್ನು ಪರಿಶೀಲನೆಯ ನಂತರ ಲರ್ನರ್ ಲೈಸೆನ್ಸ್ ಪಡೆಯಲು ನಿಗದಿ ಪಡಿಸಿರುವ ಶುಲ್ಕವನ್ನು ಪಾವತಿಸಬೇಕು.

ಜುಲೈ 1ರಿಂದ ಬದಲಾಗಲಿದೆ ಲರ್ನರ್ ಲೈಸೆನ್ಸ್ ಪಡೆಯುವ ವಿಧಾನ

ಕೆಲವು ದಿನಗಳ ನಂತರ ಲರ್ನರ್ ಲೈಸೆನ್ಸ್ ಅರ್ಜಿಯ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಲರ್ನರ್ ಲೈಸೆನ್ಸ್ ಪಡೆಯಲು ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಯನ್ನು ಆನ್‌ಲೈನ್ ಮೂಲಕ ನಡೆಸಲಾಗುತ್ತದೆ.

ಜುಲೈ 1ರಿಂದ ಬದಲಾಗಲಿದೆ ಲರ್ನರ್ ಲೈಸೆನ್ಸ್ ಪಡೆಯುವ ವಿಧಾನ

ನಿಗದಿ ಪಡಿಸಿದ ದಿನದಂದು ಈ ಆನ್‌ಲೈನ್ ಪರೀಕ್ಷೆಯನ್ನು ಮನೆಯಿಂದ ಅಥವಾ ಯಾವುದೇ ಸೈಬರ್ ಕೆಫೆಯಿಂದ ತೆಗೆದುಕೊಳ್ಳಬಹುದು. ಈ ಆನ್‌ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಾತ್ರ ಲರ್ನರ್ ಲೈಸೆನ್ಸ್ ನೀಡಲಾಗುತ್ತದೆ.

ಜುಲೈ 1ರಿಂದ ಬದಲಾಗಲಿದೆ ಲರ್ನರ್ ಲೈಸೆನ್ಸ್ ಪಡೆಯುವ ವಿಧಾನ

ನಂತರ ಲರ್ನರ್ ಲೈಸೆನ್ಸ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದು ಕೊಳ್ಳಬಹುದು. ಸಾರಿಗೆ ಇಲಾಖೆಯ ಮಾಹಿತಿಗಳ ಪ್ರಕಾರ, ಈ ಸೌಲಭ್ಯವು ಸದ್ಯಕ್ಕೆ ಉತ್ತರ ಪ್ರದೇಶದ ಎಲ್ಲಾ ಜಿಲ್ಲೆಗಳಲ್ಲಿ ಲಭ್ಯವಿರಲಿದೆ. ಶೀಘ್ರದಲ್ಲಿಯೇ ಈ ಸೇವೆಯನ್ನು ದೇಶದ ಇತರ ರಾಜ್ಯಗಳಿಗೂ ವಿಸ್ತರಿಸಲಾಗುವುದು.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Learners license process to change from July 1st. Read in Kannada.
Story first published: Saturday, June 12, 2021, 16:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X