ಆಂಬ್ಯುಲೆನ್ಸ್ ಒಳಗಿದ್ದ ಪ್ರಾಣವನ್ನು ಉಳಿಸಲು ಈ ಪೊಲೀಸ್ ಮಾಡಿದ ಕೆಲಸ ಏನು ಗೊತ್ತಾ.?

ಭಾರತೀಯ ರಸ್ತೆಗಳಲ್ಲಿ ಟ್ರಾಫಿಕ್ ಬಗ್ಗೆ ಎಷ್ಟು ಹೇಳಿದ್ರು ಸಾಕಾಗದು. ಯಾಕಂದ್ರೆ ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗಲು ಮನೆ ಬಿಟ್ರೆ ಎಷ್ಟು ಹೊತ್ತಿಗೆ ಹೋಗಿ ಆಫಿಸ್ ತಲುಪುತ್ತೇವೋ ಎಂದು ಯಾರಿಗೂ ತಿಳಿಯುದಿಲ್ಲ. ಅದರಲ್ಲಿಯೂ ನಮ್ಮ ಬೆಂಗಳೂರಿನಲ್ಲಿರುವ ಸಿಲ್ಕ್ ಬೋರ್ಡ್ ಜಂಕ್ಷನ್, ಕೆಆರ್ ಪುರಂ ಮತ್ತು ಇನ್ನಿತರೆ ಏರಿಯಾದಲ್ಲಿರುವ ಟ್ರಾಫಿಕ್ ಸಮಸ್ಯೆಯ ಬಗ್ಗೆ ಆ ಮಾರ್ಗದಲ್ಲಿ ಪ್ರಯಾಣಿಸುವವರಿಗೆ ಮಾತ್ರ ಗೊತ್ತು.

ಆಂಬ್ಯುಲೆನ್ಸ್ ಒಳಗಿದ್ದ ಪ್ರಾಣವನ್ನು ಉಳಿಸಲು ಈ ಪೊಲೀಸ್ ಮಾಡಿದ ಕೆಲಸ ಏನು ಗೊತ್ತಾ.?

ಆದರೆ ಇಂತಹ ಟ್ರಾಫಿಕ್ ಸಮಸ್ಯೆಯಲ್ಲಿ ಆಂಬ್ಯುಲೆನ್ಸ್ ಬಂದರೆ ಅಷ್ಟೆ. ಅದನ್ನು ಮುಂದೆ ಕಳುಹಿಸಲು ಟ್ರಾಫಿಕ್ ಪೊಲೀಸರು ಮತ್ತು ವಾಹನ ಚಾಲಕರು ಪಡುವ ಹರಸಾಹಸ ಅಷ್ಟಿಷ್ಟಲ್ಲ. ಇಂದು ನಾವು ಹೇಳಲು ಹೊರಟಿರುವ ಘಟನೆ ಕೂಡಾ ಇಂತದ್ದೆ. ಕೇರಳದಲ್ಲಿನ ಪೊಲೀಸ್ ಅಧಿಕಾರಿಯೊಬ್ಬ ಟ್ರಾಫಿಕ್‍‍ನಿಂದ ತುಂಬಿರುವ ರಸ್ತೆಯಲ್ಲಿ ಆಂಬ್ಯುಲೆನ್ಸ್ ಅನ್ನು ಮುಂದೆ ಕಳುಹಿಸಲು ಪಟ್ಟ ಶ್ರಮ ಅಷ್ಟಿಷ್ಟಲ್ಲ.

ಆಂಬ್ಯುಲೆನ್ಸ್ ಒಳಗಿದ್ದ ಪ್ರಾಣವನ್ನು ಉಳಿಸಲು ಈ ಪೊಲೀಸ್ ಮಾಡಿದ ಕೆಲಸ ಏನು ಗೊತ್ತಾ.?

ಕೇವಲ ಆಂಬ್ಯುಲೆನ್ಸ್ ಮಾತ್ರವಲ್ಲದೇ ನೂರಕ್ಕು ಹೆಚ್ಚು ವಾಹನಗಳು ತುಂಬಿಕೊಂದಿರುವ ಬಹುತೇಕ ರಸ್ತೆಗಳಲ್ಲಿ ಅಗ್ನಿ ಶಾಮಕ ವಾಹನವು ಸಹ ಮುನ್ನುಗ್ಗಲು ಅಷ್ಟೆ ಕಷ್ಟಪಡಬೇಕು. ಆದ್ರೆ ಕೇರಳದ ಈ ಪೊಲೀಸ್ ಪೇದೆ ವಾಹನಗಳಿಂದ ತುಂಬಿದ ರಸ್ತೆಯಲ್ಲಿ ಬಂದ ಆಂಬ್ಯುಲೆನ್ಸ್ ಅನ್ನು ಹೇಗೆ ಮುಂದು ಹೋಗಲು ದಾರಿ ಮಾಡಿಸಿಕೊಟ್ಟಿದ್ದಾರೆ ಗೊತ್ತಾ.?

ಆಂಬ್ಯುಲೆನ್ಸ್ ಒಳಗಿದ್ದ ಪ್ರಾಣವನ್ನು ಉಳಿಸಲು ಈ ಪೊಲೀಸ್ ಮಾಡಿದ ಕೆಲಸ ಏನು ಗೊತ್ತಾ.?

ಕೇರಳದ ಕೊಟ್ಟಾಯಂನಲ್ಲಿ ಈ ಘಟನೆ ನಡೆದಿದ್ದು, ಆಂಬ್ಯುಲೆನ್ಸ್ ಒಂದು ದೊಡ್ಡ ಬಸ್‍ಗಳು ಮತ್ತು ಕಾರುಗಳಿಂದ ತುಂಬಿರುವ ರಸ್ತೆಯಲ್ಲಿ ಮುನ್ನುಗ್ಗಲು ಹರಸಾಹಸ ಪಡುತ್ತಿರುವಾಗ ಸಹಾಯಕ್ಕೆ ಬಂದ ಪೊಲೀಸ್ ಪೇದೆ ಟ್ರಾಫಿಕ್ ಅನ್ನು ಕ್ಲಿಯರ್ ಮಾಡಲು ಮುಂದಾದರು.

ಆಂಬ್ಯುಲೆನ್ಸ್ ಒಳಗಿದ್ದ ಪ್ರಾಣವನ್ನು ಉಳಿಸಲು ಈ ಪೊಲೀಸ್ ಮಾಡಿದ ಕೆಲಸ ಏನು ಗೊತ್ತಾ.?

ಈ ವಿಡಿಯೋವನ್ನು ಆಂಬ್ಯುಲೆನ್ಸ್ ನಲ್ಲಿನ ಡ್ಯಾಶ್‍‍ಬೋರ್ಡ್‍ನಲ್ಲಿನ ಕ್ಯಾಮೆರಾದಿಂದ ರೆಕಾರ್ಡ್ ಮಾಡಲಾಗಿದ್ದು, ಆಂಬ್ಯುಲೆನ್ಸ್ ಮುಂದೆ ಸಾಗಲು ಅಡ್ಡವಾಗಿದ್ದ ವಾಹನಗಳನ್ನು ಬಹುಬೇಗ ಪಕ್ಕಕ್ಕೆ ಸರಿಯುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ.

ಆಂಬ್ಯುಲೆನ್ಸ್ ಒಳಗಿದ್ದ ಪ್ರಾಣವನ್ನು ಉಳಿಸಲು ಈ ಪೊಲೀಸ್ ಮಾಡಿದ ಕೆಲಸ ಏನು ಗೊತ್ತಾ.?

ಈ ಸಾಹಸವನ್ನು ಮಾಡಲು ಮುಂದಾದ ಪೊಲೀಸನ್ನು ರಜೀತ್ ಕುಮಾರ್ ರಾಧಾಕೃಷ್ಣ ಎಂದು ಗುರುತಿಸಲಾಗಿದ್ದು, ಟ್ರಾಫಿಕ್ ನಿಂದ ತುಂಬಿರುವ ರಸ್ತೆಯಲ್ಲಿ ಆಂಬ್ಯುಲೆನ್ಸ್ ಗೆ ದಾರಿ ಮಾಡಿಕೊಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕೇವಲ ಆ ಪೊಲೀಸ್ ಮಾತ್ರವಲ್ಲದೇ ಆಂಬ್ಯುಲೆನ್ಸ್ ಚಾಲಕನು ಕೂಡಾ ಅಷ್ಟೆ ಸುರಕ್ಷಿತವಾಗಿ ಆ ಕಿರಿದಾದ ರಸ್ತೆಯಲ್ಲಿ ಡ್ರೈವ್ ಮಾಡಿಕೊಂಡು ಹೋಗಿದ್ದಾರೆ. ಆಂಬ್ಯುಲೆನ್ಸ್ ನಲ್ಲಿದ್ದ ಜೀವವನ್ನು ರಕ್ಷಿಸಲು ಮಾಡಿದ ಆ ಪೊಲೀಸ್ ಮತ್ತು ಆಂಬ್ಯುಲೆನ್ಸ್ ಚಾಲಕನ ರೈಡಿಂಗ್ ಕೌಶಲ್ಯದ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Most Read Articles

Kannada
English summary
Legendary Kerala cop makes an ambulance escape a massive traffic jam. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X