ಪೊಲೀಸ್ ಪಡೆಗೆ ಸೇರ್ಪಡೆಗೊಂಡ ಅತ್ಯಾಧುನಿಕ ಸೂಪರ್ ಕಾರು

ವಿಶ್ವದ ಅನೇಕ ದೇಶಗಳು ತಮ್ಮ ಪೊಲೀಸ್ ಪಡೆಗಳಲ್ಲಿ ಸೂಪರ್ ಕಾರುಗಳನ್ನು ಸೇರಿಸಿಕೊಂಡಿವೆ. ಪೊಲೀಸ್ ಪಡೆಗಳಲ್ಲಿರುವ ಸೂಪರ್ ಕಾರುಗಳ ಬಗ್ಗೆ ಹೇಳುವುದಾದರೆ ಸೌದಿ ಅರೇಬಿಯಾ ಪೊಲೀಸ್ ಪಡೆಯು ಮೊದಲು ನೆನಪಿಗೆ ಬರುತ್ತದೆ.

ಪೊಲೀಸ್ ಪಡೆಗೆ ಸೇರ್ಪಡೆಗೊಂಡ ಅತ್ಯಾಧುನಿಕ ಸೂಪರ್ ಕಾರು

ಸೌದಿ ಅರೇಬಿಯಾ ಸರ್ಕಾರವು ತನ್ನ ಪೊಲೀಸ್ ಪಡೆಯಲ್ಲಿ ಲ್ಯಾಂಬೊರ್ಗಿನಿ, ಫೆರಾರಿ ಹಾಗೂ ಬುಗಾಟ್ಟಿಯಂತಹ ಐಷಾರಾಮಿ ಕಾರುಗಳನ್ನು ಸೇರ್ಪಡೆಗೊಳಿಸಿದೆ. ಈಗ ಜಪಾನ್ ಪೊಲೀಸರು ತಮ್ಮ ಪೊಲೀಸ್ ಪಡೆಯಲ್ಲಿ ಲೆಕ್ಸಸ್ ಎಲ್‌ಸಿ 500 ಸೂಪರ್ ಕಾರನ್ನು ಸೇರ್ಪಡೆಗೊಳಿಸಿಕೊಂಡಿದ್ದಾರೆ. ಜಪಾನ್ ಪೊಲೀಸರು ಈಗಾಗಲೇ ನಿಸ್ಸಾನ್ ಜಿಟಿ-ಆರ್ ಕಾರನ್ನು ಬಳಸುತ್ತಿದ್ದಾರೆ.

ಪೊಲೀಸ್ ಪಡೆಗೆ ಸೇರ್ಪಡೆಗೊಂಡ ಅತ್ಯಾಧುನಿಕ ಸೂಪರ್ ಕಾರು

ಇನ್ನು ಮುಂದೆ ಜಪಾನ್ ಪೊಲೀಸರು ಲೆಕ್ಸಸ್ ಎಲ್‌ಸಿ 500 ಕಾರನ್ನು ಸಹ ಬಳಸಲಿದ್ದಾರೆ. ನಗರಗಳ ಸಂಚಾರ ಉಲ್ಲಂಘನೆಯ ಮೇಲೆ ಕಣ್ಣಿಡಲು ಈ ಕಾರನ್ನು ಮೊಬೈಲ್ ಸಂಚಾರ ಘಟಕವಾಗಿ ಬಳಸಲಾಗುತ್ತದೆ. ಈ ಕಾರನ್ನು ಅಪರಾಧಿಗಳನ್ನು ಹಿಡಿಯಲು ಹಾಗೂ ಬೆನ್ನಟ್ಟಲು ಬಳಸಲಾಗುತ್ತದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಪೊಲೀಸ್ ಪಡೆಗೆ ಸೇರ್ಪಡೆಗೊಂಡ ಅತ್ಯಾಧುನಿಕ ಸೂಪರ್ ಕಾರು

ಈ ಕಾರಿನ ಬೆಲೆ 17.4 ಮಿಲಿಯನ್ ಯೆನ್ ಗಳಾಗಿದೆ. ಅಂದರೆ 1,64,800 ಅಮೆರಿಕನ್ ಡಾಲರ್ ಗಳಾಗಿದೆ. ಲೆಕ್ಸಸ್ ಕಂಪನಿಯು ಈ ಸೂಪರ್ ಕಾರನ್ನು ಜಪಾನ್ ಪೊಲೀಸ್ ಇಲಾಖೆಗಾಗಿ ಅಭಿವೃದ್ಧಿಪಡಿಸಿದೆ. ಕಂಪನಿಯು ಈ ಕಾರನ್ನು ಪೊಲೀಸ್ ಬಳಕೆಗಾಗಿ ಪ್ರತ್ಯೇಕವಾಗಿ ಮಾಡಿಫೈ ಮಾಡಿದೆ.

ಪೊಲೀಸ್ ಪಡೆಗೆ ಸೇರ್ಪಡೆಗೊಂಡ ಅತ್ಯಾಧುನಿಕ ಸೂಪರ್ ಕಾರು

ಈ ಕಾರಿನಲ್ಲಿ ಪೊಲೀಸ್ ಉಪಕರಣಗಳನ್ನು ಅಳವಡಿಸಲಾಗಿದೆ. ಈ ಕಾರು ಕಪ್ಪು ಹಾಗೂ ಬಿಳಿ ಡ್ಯುಯಲ್ ಟೋನ್ ಬಣ್ಣವನ್ನು ಹೊಂದಿದೆ. ಇದರ ಜೊತೆಗೆ ಈ ಕಾರಿನಲ್ಲಿ ಸೈರನ್ ಹಾಗೂ ಫ್ಲ್ಯಾಷ್ ಲೈಟ್‌ಗಳನ್ನು ಸಹ ಅಳವಡಿಸಲಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಪೊಲೀಸ್ ಪಡೆಗೆ ಸೇರ್ಪಡೆಗೊಂಡ ಅತ್ಯಾಧುನಿಕ ಸೂಪರ್ ಕಾರು

ಲೆಕ್ಸಸ್ ಎಲ್‌ಸಿ 500 ಕಾರಿನಲ್ಲಿ 5.0-ಲೀಟರಿನ ನ್ಯಾಚುರಲಿ ಆಸ್ಪಿರೇಟೆಡ್ ವಿ 8 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 471 ಬಿಹೆಚ್‌ಪಿ ಪವರ್ ಹಾಗೂ 540 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 10-ಸ್ಪೀಡಿನ ಡೈರೆಕ್ಟ್ ಶಿಫ್ಟ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಿಸಲಾಗಿದೆ.

ಪೊಲೀಸ್ ಪಡೆಗೆ ಸೇರ್ಪಡೆಗೊಂಡ ಅತ್ಯಾಧುನಿಕ ಸೂಪರ್ ಕಾರು

ಬಲಶಾಲಿ ಎಂಜಿನ್ ಹೊಂದಿರುವ ಈ ಕಾರು ಹೆಚ್ಚಿನ ಪರ್ಫಾಮೆನ್ಸ್ ನೀಡುತ್ತದೆ. ವೇಗವಾಗಿ ಚಲಿಸುವ ಈ ಕಾರಿನ ಸಹಾಯದಿಂದ ಅಪರಾಧಿಗಳನ್ನು ಪೊಲೀಸರು ಸುಲಭವಾಗಿ ಹಿಡಿಯಬಹುದು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಪೊಲೀಸ್ ಪಡೆಗೆ ಸೇರ್ಪಡೆಗೊಂಡ ಅತ್ಯಾಧುನಿಕ ಸೂಪರ್ ಕಾರು

ಈ ಕಾರು ಕೇವಲ 4.7 ಸೆಕೆಂಡುಗಳಲ್ಲಿ 0-60 ಕಿಮೀ ವೇಗವನ್ನು ಆಕ್ಸಲರೇಟ್ ಮಾಡಿದರೆ, 100 ಕಿಲೋಮೀಟರ್ ವೇಗವನ್ನು ಕೇವಲ 11 ಸೆಕೆಂಡುಗಳಲ್ಲಿ ಆಕ್ಸಲರೇಟ್ ಮಾಡುತ್ತದೆ. ಲೆಕ್ಸಸ್ ಎಲ್‌ಸಿ 500 ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 270 ಕಿ.ಮೀಗಳಾಗಿದೆ.

ಪೊಲೀಸ್ ಪಡೆಗೆ ಸೇರ್ಪಡೆಗೊಂಡ ಅತ್ಯಾಧುನಿಕ ಸೂಪರ್ ಕಾರು

ಈ ಸೂಪರ್ ಕಾರು ಹೈಬ್ರಿಡ್ ಎಂಜಿನ್‌ನಲ್ಲಿಯೂ ಮಾರಾಟವಾಗುತ್ತದೆ. ಹೈಬ್ರಿಡ್ ಮಾದರಿಯು 3.5-ಲೀಟರಿನ ವಿ 6 ಪೆಟ್ರೋಲ್ ಎಂಜಿನ್ ಹಾಗೂ 132 ಕಿ.ವ್ಯಾ ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದೆ. ಈ ಮಾದರಿಯು 500 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

Most Read Articles

Kannada
English summary
Lexus LC 500 supercar included to Japan police fleet. Read in Kannada.
Story first published: Sunday, October 25, 2020, 10:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X