ಪಾರ್ಕಿಂಗ್ ವೇಳೆ ಮಹಿಳೆಯ ಎಡವಟ್ಟು- ಮೊದಲ ಮಹಡಿಯಿಂದ ಲೆಕ್ಸಸ್ ಕಾರು ಜಂಪ್..!

ಕೇವಲ ಕಾರುಗಳನ್ನು ಖರೀದಿ ಮಾಡಿದರೆ ಸಾಲದು ಅದನ್ನು ಸರಿಯಾಗಿ ನಿರ್ವಹಣೆ ಮಾಡುವುದು ಕೂಡಾ ಅಷ್ಟೇ ಮುಖ್ಯ. ಯಾಕೆಂದ್ರೆ ಪಾರ್ಕಿಂಗ್‌ನಲ್ಲಿ ಕಾರು ನಿಲುಗಡೆ ಮಾಡಲು ಬಂದಿದ್ದ ಮಹಿಳೆಯೊಬ್ಬರು ಮಾಡಿದ ಎಡವಟ್ಟಿನಿಂದ ಕಾರು ಎರಡನೇ ಮಹಡಿಯಿಂದ ಕೆಳಕ್ಕೆ ಧುಮಿಕಿರುವ ಘಟನೆ ನಡೆದಿದೆ.

ಪಾರ್ಕಿಂಗ್ ವೇಳೆ ಮಹಿಳೆಯ ಎಡವಟ್ಟು- ಮೊದಲ ಮಹಡಿಯಿಂದ ಲೆಕ್ಸಸ್ ಕಾರು ಜಂಪ್..!

ಹೌದು, ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಪಾರ್ಕಿಂಗ್ ಸಮಸ್ಯೆಯು ಒಂದು ದೊಡ್ಡ ಸವಾಲಾಗಿ ಪರಿಣಮಿಸುತ್ತಿದ್ದು, ಲಭ್ಯವಿರುವ ಸ್ಥಳದಲ್ಲೇ ಸರಿಯಾದ ರೀತಿಯಲ್ಲಿ ಪಾರ್ಕಿಂಗ್ ಮಾಡುವುದು ಕೂಡಾ ಒಂದು ಕಲೆ ಅಂದ್ರೆ ತಪ್ಪಾಗುವುದಿಲ್ಲ. ಇದಕ್ಕೆ ಕಾರಣ, ಪಾರ್ಕಿಂಗ್‌ ಸಂದರ್ಭದಲ್ಲಿ ಸ್ವಲ್ಪವೇ ಸ್ವಲ್ಪ ಹೆಚ್ಚು ಕಡಿಮೆ ಮಾಡಿದ್ರು ಕೂಡಾ ಹಾನಿ ತಪ್ಪಿದ್ದಲ್ಲ.

ಪಾರ್ಕಿಂಗ್ ವೇಳೆ ಮಹಿಳೆಯ ಎಡವಟ್ಟು- ಮೊದಲ ಮಹಡಿಯಿಂದ ಲೆಕ್ಸಸ್ ಕಾರು ಜಂಪ್..!

ಹೀಗೆ ಮಹಿಳೆಯೊಬ್ಬರು ಕೂಡಾ ಕಾರು ಪಾರ್ಕಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಮಾಡಿದ ಎಡವಟ್ಟಿನಿಂದಾಗಿ ದುಬಾರಿ ಬೆಲೆಯ ಲೆಕ್ಸಸ್ ಎನ್ಎಕ್ಸ್ 300ಹೆಚ್ ಕಾರು 2ನೇ ಮಹಡಿದಿಂದ ಧುಮಿಕಿರುವ ಘಟನೆ ನಡೆದಿದ್ದು, ಅದೃಷ್ಟವಶಾತ್ ಕಾರು ಚಾಲನೆ ಮಾಡುತ್ತಿದ್ದ ಮಹಿಳೆ ಪ್ರಾಣಪಾಯದಿಂದ ಪಾರಾಗಿದ್ದಾಳೆ.

ಪಾರ್ಕಿಂಗ್ ವೇಳೆ ಮಹಿಳೆಯ ಎಡವಟ್ಟು- ಮೊದಲ ಮಹಡಿಯಿಂದ ಲೆಕ್ಸಸ್ ಕಾರು ಜಂಪ್..!

ದಕ್ಷಿಣ ಫ್ಲೋರಿಡಾದ ಮಿಯಾಮಿ ನಗರದಲ್ಲಿ ಈ ಘಟನೆ ನಡೆದಿದ್ದು, ಬಹುಮಡಿಯ ಕಟ್ಟಡದಲ್ಲಿ ಲೈನ್ ಪ್ರಕಾರ ಪಾರ್ಕಿಂಗ್ ಮಾಡುತ್ತಿದ್ದ ಮಹಿಳೆಯು ಬ್ರೇಕ್ ಒತ್ತುವ ಬದಲು ಎಕ್ಸಲೇಟರ್ ಒತ್ತಿದ ಪರಿಣಾಮ ಪಾರ್ಕಿಂಗ್ ಸ್ಲಾಟ್‌ನಿಂದ ಲೆಕ್ಸಸ್ ಕಾರು ಕೆಳಕ್ಕೆ ಜಿಗಿದಿದೆ.

ಪಾರ್ಕಿಂಗ್ ವೇಳೆ ಮಹಿಳೆಯ ಎಡವಟ್ಟು- ಮೊದಲ ಮಹಡಿಯಿಂದ ಲೆಕ್ಸಸ್ ಕಾರು ಜಂಪ್..!

ಆದ್ರೆ ಕಾರು ಮೊಗಚಿ ಕೆಳಗೆ ಬೀಳುವಷ್ಟರಲ್ಲಿ ಕಾರಿನ ರೂಫ್ ಟಾಫ್ ಕಟ್ಟದ ಸಿಲ್ಲಿಂಗ್‌ಗೆ ತಾಗಿ ಕಳಕ್ಕೆ ಬೀಳದೇ ಹಾಗೆಯೇ ನಿಂತಿತ್ತು. ಈ ವೇಳೆ ಕಾರಿನಲ್ಲೇ ಇದ್ದ ಮಹಿಳೆಯನ್ನು ಸ್ಥಳೀಯ ಪೊಲೀಸರು ರಕ್ಷಣೆ ಮಾಡಿದ್ದು, ಕ್ರೇನ್ ಮೂಲಕ ಕಟ್ಟದ ಸಿಲ್ಲಿಂಗ್‌ಗೆ ಅಡ್ಡಲಾಗಿ ನಿಂತಿದ್ದ ಕಾರನ್ನು ಹೊರತೆಗೆದಿದ್ದಾರೆ.

ಮೊಚಗಿ ಬೀಳುವ ಹಂತದಲ್ಲಿರುವ ಕಾರಿನಿಂದ ಮಹಿಳೆ ರಕ್ಷಣೆಯ ವಿಡಿಯೋ ಇಲ್ಲಿದೆ ನೋಡಿ.

ಪಾರ್ಕಿಂಗ್ ವೇಳೆ ಮಹಿಳೆಯ ಎಡವಟ್ಟು- ಮೊದಲ ಮಹಡಿಯಿಂದ ಲೆಕ್ಸಸ್ ಕಾರು ಜಂಪ್..!

ಒಂದು ವೇಳೆ ಕಾರು ಸಂಪೂರ್ಣವಾಗಿ ಮೊಗಚಿ ಕಳೆಗೆ ಬಿದ್ದಿದ್ದರೆ ಮಹಿಳೆಯು ಪ್ರಾಣಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿತ್ತು. ಆದ್ರೆ ಘಟನೆ ನಂತರ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಯು ಯಾವುದೇ ಅವಘಡ ಸಂಭಸಿದಂತೆ ಮುನ್ನಚ್ಚೆರಿಕೆ ವಹಿಸಿ ಮಹಿಳೆಯನ್ನು ಕಾರಿನ ಹೊರಗೆ ಕರೆತಂದಿದ್ದಾರೆ.

MOST READ: ಟಾಪ್ ಸ್ಪೀಡ್ ಶೋಕಿ- ಯುಟ್ಯೂಬ್‌ನಲ್ಲಿ ಲೈವ್ ಮಾಡಿ ಜೈಲು ಸೇರಿದ ಫೋರ್ಡ್ ಮಸ್ಟಾಂಗ್ ಮಾಲೀಕ..!

ಪಾರ್ಕಿಂಗ್ ವೇಳೆ ಮಹಿಳೆಯ ಎಡವಟ್ಟು- ಮೊದಲ ಮಹಡಿಯಿಂದ ಲೆಕ್ಸಸ್ ಕಾರು ಜಂಪ್..!

ಹೀಗಾಗಿ ಪಾರ್ಕಿಂಗ್ ಮಾಡುವ ಸಂದರ್ಭದಲ್ಲಿ ತುಂಬಾ ಎಚ್ಚರಿಕೆ ವಹಿಸುವ ಅವಶ್ಯಕತೆಯಿದ್ದು, ಚಾಲನೆಯಲ್ಲಿ ಎಷ್ಟೇ ಪರಿಣಿತಿ ಹೊಂದಿದ್ದರೂ ಕೂಡಾ ಕಿರಿದಾದ ಪಾರ್ಕಿಂಗ್ ಸ್ಥಳಗಳಲ್ಲಿ ಸರಿಯಾಗಿ ವಾಹನಗಳನ್ನು ನಿಲ್ಲಿಸುವುದನ್ನು ಮರೆಯಬಾರದು.

ಪಾರ್ಕಿಂಗ್ ವೇಳೆ ಮಹಿಳೆಯ ಎಡವಟ್ಟು- ಮೊದಲ ಮಹಡಿಯಿಂದ ಲೆಕ್ಸಸ್ ಕಾರು ಜಂಪ್..!

ಒಂದು ವೇಳೆ ನೀವು ಪಾರ್ಕಿಂಗ್ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲುಗಡೆ ಮಾಡಿದ್ದಲ್ಲಿ ಇತರೆ ವಾಹನಗಳಿಂದಲೂ ಹಾನಿಯಾಗುವ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ಅವಘಡಗಳಿಲ್ಲದೇ ಪಾರ್ಕಿಂಗ್ ಮಾಡುವುದು ಕೂಡಾ ಕಲೆಯೇ ಆಗಿದೆ.

Source: Miami-Dade Fire Rescue

Most Read Articles

Kannada
English summary
Lexus NX Dangles Precariously Out Of Second Storey Parking Garage With Driver Inside. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X