ಹಾರರ್ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿರುವ ಕಾರುಗಳಿವು

ಹಾರರ್ ಸಿನಿಮಾಗಳಲ್ಲಿ ಪ್ರೇಕ್ಷಕರಲ್ಲಿ ಭೀತಿಯನ್ನುಂಟು ಮಾಡಲು ಸಾಮಾನ್ಯವಾಗಿ ಹಳೆಯ ಮನೆ ಅಥವಾ ಶಿಥಿಲಗೊಂಡ ಬಂಗಲೆಗಳನ್ನು ತೋರಿಸಲಾಗುತ್ತದೆ. ಇವುಗಳನ್ನು ನೋಡುತ್ತಲೇ ಕೆಲವು ಪ್ರೇಕ್ಷಕರ ಮನಸ್ಸಿನಲ್ಲಿ ಭೀತಿಯುಂಟಾಗುತ್ತದೆ. ಇದರ ಜೊತೆಗೆ ಭೀತಿಯನ್ನುಂಟು ಮಾಡುವ ಸಂಗೀತವನ್ನು ಸಹ ಬಿತ್ತರಿಸಲಾಗುತ್ತದೆ. ಅಂತೆಯೇ ಹಾರರ್ ಸಿನಿಮಾಗಳಲ್ಲಿ ಕೆಲವು ನಿರ್ದಿಷ್ಟ ಕಂಪನಿಗಳ ಕಾರುಗಳು ಬಳಕೆಯಾಗುವುದನ್ನು ಕಾಣಬಹುದು.

ಹಾರರ್ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿರುವ ಕಾರುಗಳಿವು

ಈಗ ಬ್ರಿಸ್ಟಲ್ ಸ್ಟ್ರೀಟ್ ಮೋಟಾರ್ಸ್ ಲೇಖನವೊಂದನ್ನು ಪೋಸ್ಟ್‌ ಮಾಡಿದೆ. ಈ ಪೋಸ್ಟ್ ನಲ್ಲಿ ಹಾಲಿವುಡ್ ಹಾರರ್ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡ ಕಾರುಗಳ ಪಟ್ಟಿಯನ್ನು ನೀಡಲಾಗಿದೆ. Ford ಕಂಪನಿಯ F - 150 ಕಾರು ಹಾರರ್ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡ ಕಾರುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಕಾರನ್ನು ಬಹುತೇಕ ಹಾಲಿವುಡ್ ಸಿನಿಮಾ ನಿರ್ದೇಶಕರು ತಮ್ಮ ಹಾರರ್ ಸಿನಿಮಾಗಳಲ್ಲಿ ಬಳಸುತ್ತಾರೆ.

ಹಾರರ್ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿರುವ ಕಾರುಗಳಿವು

ಅಂದ ಹಾಗೆ Ford F -150 ಕಾರ್ ಅನ್ನು 50 ಹಾರರ್ ಸಿನಿಮಾಗಳಲ್ಲಿ 13 ಬಾರಿ ಬಳಸಲಾಗಿದೆ. Ford F -150 ಕಾರಿನ ನಂತರ Ford ಕಂಪನಿಯ ಕ್ರೌನ್ ವಿಕ್ಟೋರಿಯಾ ಕಾರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿದೆ. ಈ ಕಾರು 50 ಹಾರರ್ ಸಿನಿಮಾಗಳಲ್ಲಿ 9 ಬಾರಿ ಕಾಣಿಸಿಕೊಂಡಿದೆ. ಈ ರೀತಿ ಒಟ್ಟು 690 ಕಾರುಗಳನ್ನು 50 ಅತ್ಯುತ್ತಮ ಹಾರರ್ ಸಿನಿಮಾಗಳಿಂದ ಪಟ್ಟಿ ಮಾಡಲಾಗಿದೆ.

ಹಾರರ್ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿರುವ ಕಾರುಗಳಿವು

ಆದರೆ ಎಲ್ಲಕ್ಕಿಂತ ಹೆಚ್ಚಾಗಿ, ಫೋರ್ಡ್ ಎಫ್ - 150 ಹಾರರ್ ಸಿನಿಮಾಗಳಿಗೆ ಸೂಕ್ತವಾದ ಕಾರ್ ಆಗಿದೆ. ಈ ಕಾರ್ ಅನ್ನು ಸ್ಟೆಫನ್ ಕಿಂಗ್ಸ್ ರವರ ಮ್ಯಾಕ್ಸಿಮಮ್ ಓವರ್‌ಡ್ರೈವ್‌ ಸಿನಿಮಾದ ಆರಂಭಿಕ ದೃಶ್ಯದಲ್ಲಿ ಬ್ರಾಂಡಿಸ್ ಚಾಲನೆ ಮಾಡುವಾಗ ಬೇರೆ ಬೇರೆ ರೀತಿಯಲ್ಲಿ ತೋರಿಸಲಾಗಿದೆ. Chevrolet C / K ಸರಣಿಯ ಕಾರು ಸಹ ಹಲವು ಹಾರರ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದೆ.

ಹಾರರ್ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿರುವ ಕಾರುಗಳಿವು

ಈ ಕಾರು ಹೆಚ್ಚಿನ ಹಾರರ್ ಸಿನಿಮಾಗಳಲ್ಲಿ ಕಾಣಿಸಿಕೊಂಡ ಕಾರುಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇದರ ನಂತರ ನಾಲ್ಕನೇ ಸ್ಥಾನದಲ್ಲಿ ಕ್ಯಾಡಿಲಾಕ್ ಫ್ಲೀಟ್ ವುಡ್ ಕಾರು ಹಾಗೂ ಐದನೇ ಸ್ಥಾನದಲ್ಲಿ ಫೋರ್ಡ್ ಕಸ್ಟಮ್ ಕಾರುಗಳಿವೆ. ಕ್ಯಾಡಿಲಾಕ್ ಫ್ಲೀಟ್‌ವುಡ್ ಕಾರು 50 ಸಿನಿಮಾದಲ್ಲಿ ಎಂಟು ಬಾರಿ ಕಾಣಿಸಿಕೊಂಡಿದೆ. ಕ್ಯಾಡಿಲಾಕ್ ಕಾರ್ ಅನ್ನು ಹೆಚ್ಚಾಗಿ ಈ ಸಿನಿಮಾಗಳಲ್ಲಿ ಪೊಲೀಸ್ ಕಾರು ಹಾಗೂ ಟ್ಯಾಕ್ಸಿಗಳಂತೆ ಬಳಸಲಾಗಿದೆ.

ಹಾರರ್ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿರುವ ಕಾರುಗಳಿವು

Volkswagen Beetle ಕಾರು 50 ಹಾರರ್ ಸಿನಿಮಾಗಳಲ್ಲಿ ಏಳು ಬಾರಿ ಕಾಣಿಸಿಕೊಂಡಿದೆ ಎಂಬುದು ಗಮನಾರ್ಹ. ಈ ಕಾರಿನ ಜನಪ್ರಿಯ ದೃಶ್ಯಗಳಲ್ಲಿ, ಕುಟುಂಬವೊಂದು ಬೀಟಲ್ ಕಾರ್ ಅನ್ನು ದಿ ಶೈನಿಂಗ್‌ನಲ್ಲಿರುವ ಓವರ್‌ಲುಕ್ ಹೋಟೆಲ್‌ಗೆ ಕೊಂಡೊಯ್ದಾಗ ಜಾಕ್ ಟೊರನ್ಸ್ ತನ್ನ ಐದು ವರ್ಷದ ಮಗನ ಬಳಿ ದೆವ್ವದ ಬಗ್ಗೆ ಚರ್ಚಿಸುತ್ತಾನೆ. Beetle ಕಾರಿನಂತೆ Ford Custom ಹಾಗೂ Ford LTD Country Square ಕಾರುಗಳು ಬಳಕೆಯಾಗಿವೆ.

ಹಾರರ್ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿರುವ ಕಾರುಗಳಿವು

ಈ ಪಟ್ಟಿಯ ಕೊನೆಯ ಮೂರು ಸ್ಥಾನಗಳಲ್ಲಿ Ford ಕಾರುಗಳು ಸ್ಥಾನ ಪಡೆದಿವೆ. ಫೋರ್ಡ್ ಕಾರುಗಳು 50 ಹಾರರ್ ಸಿನಿಮಾಗಳಲ್ಲಿ ಒಟ್ಟಾರೆಯಾಗಿ 113 ಬಾರಿ ಕಾಣಿಸಿಕೊಂಡಿವೆ. ಈ ಟಾಪ್ 10 ಪಟ್ಟಿಯ ಕೊನೆಯ ಮೂರು ಸ್ಥಾನಗಳಲ್ಲಿ Ford Escort, Ford Mustang ಹಾಗೂ Ford Transit ಕಾರುಗಳಿವೆ. ಈ ಕಾರುಗಳು 50 ಸಿನಿಮಾಗಳಲ್ಲಿ ತಲಾ ಆರು ಬಾರಿ ಕಾಣಿಸಿಕೊಂಡಿವೆ.

ಹಾರರ್ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿರುವ ಕಾರುಗಳಿವು

ಇನ್ನು ಕಾರುಗಳ ಎಕ್ಸಾಸ್ಟ್ ಪೈಪ್ ನಿಂದ ಹೊಗೆ ಹೊರ ಬರುವುದು ಸಹಜ ಪ್ರಕ್ರಿಯೆಯಾಗಿದೆ. ಹೊಗೆ ವಾಹನಗಳ ಇಂಧನ ದಹನದ ಒಂದು ಉಪ ಉತ್ಪನ್ನವಾಗಿದೆ. ಎಲೆಕ್ಟ್ರಿಕ್ ಕಾರು ಚಾಲನೆ ಮಾಡಿದರೆ ಮಾತ್ರ ಹೊಗೆ ಬರುವುದಿಲ್ಲ. ಸಾಮಾನ್ಯ ಪೆಟ್ರೋಲ್ ಅಥವಾ ಡೀಸೆಲ್ ಕಾರುಗಳನ್ನು ಚಾಲನೆ ಮಾಡಿದರೆ ನಿರ್ದಿಷ್ಟ ಪ್ರಮಾಣದಲ್ಲಿ ಹೊಗೆ ಹೊರ ಬರುತ್ತದೆ. ಒಂದು ವೇಳೆ ಕಾರು ಹೆಚ್ಚು ಹೊಗೆಯನ್ನು ಹೊರಸೂಸಿದರೆ, ಅದು ಒಳ್ಳೆಯ ಸಂಕೇತವಲ್ಲ.

ಹಾರರ್ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿರುವ ಕಾರುಗಳಿವು

ಅದರಲ್ಲೂ ಎಕ್ಸಾಸ್ಟ್ ಪೈಪ್ ನಿಂದ ಹೊರ ಬರುವ ಹೊಗೆ ಬೇರೆ ಬೇರೆ ಬಣ್ಣಗಳಲ್ಲಿ ಕಾಣಿಸಿಕೊಂಡರೆ ಕಾರಿನಲ್ಲಿ ಸಮಸ್ಯೆ ಇದೆ ಎಂದರ್ಥ. ಕಾರುಗಳು ಕಪ್ಪು ಬಣ್ಣದಲ್ಲಿ ಮಾತ್ರವಲ್ಲದೆ ಬಿಳಿ ಹಾಗೂ ನೀಲಿ ಬಣ್ಣಗಳಲ್ಲಿಯೂ ಹೊಗೆಯನ್ನು ಹೊರಸೂಸುತ್ತವೆ. ಕಾರಿನಿಂದ ಹೊರ ಬರುವ ಹೊಗೆಯ ಬಣ್ಣದ ಮೂಲಕ ಕಾರಿನಲ್ಲಿ ಏನು ಸಮಸ್ಯೆಯಾಗಿದೆ ಎಂಬುದನ್ನು ಊಹಿಸಬಹುದು. ಆದರೆ ಹಲವರಿಗೆ ಈ ಸಂಗತಿಗಳು ತಿಳಿದಿಲ್ಲ.

ಹಾರರ್ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿರುವ ಕಾರುಗಳಿವು

ಸಾಮಾನ್ಯವಾಗಿ ಎಕ್ಸಾಸ್ಟ್ ಪೈಪ್ ನಿಂದ ಕಪ್ಪು ಹೊಗೆ ಬಂದರೆ ಚಿಂತಿಸುವ ಅಗತ್ಯವಿಲ್ಲ. ಅದನ್ನು ಮೀರಿದ ಯಾವುದೇ ಸಮಸ್ಯೆ ಇದ್ದರೂ, ಅದನ್ನು ಸುಲಭವಾಗಿ ಸರಿ ಪಡಿಸಬಹುದು. ಡೀಸೆಲ್ ಎಂಜಿನ್ ಹೊಂದಿರುವ ಕಾರುಗಳು ಕಪ್ಪು ಹೊಗೆ ಉತ್ಪಾದಿಸುವುದು ಸಾಮಾನ್ಯ ಸಂಗತಿ. ಕಳೆದ ಕೆಲವು ವರ್ಷಗಳವರೆಗೆ ಡೀಸೆಲ್ ಕಾರುಗಳ ಎಕ್ಸಾಸ್ಟ್ ಸಿಸ್ಟಂನಿಂದ ಕಪ್ಪು ಹೊಗೆ ಹೊರ ಬರುವುದು ಸಹಜವಾಗಿತ್ತು.

ಸ್ಥಾನ ಕಾರುಗಳ ಹೆಸರು ಕಾಣಿಸಿಕೊಂಡಿರುವ ಸಂಖ್ಯೆ
1 Ford F-Series 13
2 Ford Crown Victoria 9
3 Chevrolet C/K 8
4 Cadillac Fleetwood 8
5 Ford Custom 7
6 Ford LTD Country Squire 7
7 Volkswagen Beetle 7
8 Ford Escort 6
9 Ford Mustang 6
10 Ford Transit 6
ಹಾರರ್ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿರುವ ಕಾರುಗಳಿವು

ಆದರೆ ಇತ್ತೀಚಿಗೆ ಬಿಡುಗಡೆಯಾಗುವ ಡೀಸೆಲ್ ಕಾರುಗಳಲ್ಲಿ, ಡೀಸೆಲ್ ಪಾರ್ಟಿಕುಲೇಟ್ ಫಿಲ್ಟರ್ (ಡಿಪಿಎಫ್) ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ. ಈ ಡಿಪಿಎಫ್ ಕಾರಿನಿಂದ ಹೊರ ಹೋಗುವ ಹೊಗೆ ಕಣಗಳನ್ನು ಸೆರೆಹಿಡಿಯುತ್ತದೆ. ಇದರಿಂದ ಎಕ್ಸಾಸ್ಟ್ ಪೈಪ್ ಮೂಲಕ ಶುದ್ಧವಾದ ಹೊಗೆ ಹೊರಬರುತ್ತದೆ. ಹಾಗಾಗಿ ಡೀಸೆಲ್ ಎಂಜಿನ್ ಇರುವ ಕಾರುಗಳಿಂದ ಹೊಗೆ ಬಂದರೆ, ಕಾರು ಮಾಲೀಕರು ಚಿಂತಿಸಬೇಕಾಗಿಲ್ಲ.

Most Read Articles

Kannada
English summary
List of cars most appeared in hollywood horror movies details
Story first published: Thursday, October 21, 2021, 16:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X