Just In
- 1 hr ago
ವಾರದ ಸುದ್ದಿಗಳು: ಎಕ್ಸ್ಯುವಿ700 ಮಾದರಿಗೆ ಸೇಫರ್ ಚಾಯ್ಸ್ ಪ್ರಶಸ್ತಿ, ಸುರಕ್ಷತೆಯಲ್ಲಿ ಮುಗ್ಗರಿಸಿದ ಕಿಯಾ ಕಾರೆನ್ಸ್..
- 15 hrs ago
ಶೀಘ್ರದಲ್ಲಿ ಜಾರಿಗೆ ಬರಲಿದೆ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗೆ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
- 16 hrs ago
ಭಾರತದಲ್ಲಿ ಹೊಸ ಕವಾಸಕಿ ನಿಂಜಾ 400 ಸೂಪರ್ಸ್ಪೋರ್ಟ್ ಬೈಕ್ ಬಿಡುಗಡೆ
- 17 hrs ago
ಭಾರತೀಯ ಕಾರುಗಳಿಗೆ ವಿದೇಶಗಳಲ್ಲಿ ಬೇಡಿಕೆ ಹೆಚ್ಚಳ: ಮೇ ತಿಂಗಳಲ್ಲಿ ಅತಿ ಹೆಚ್ಚು ರಫ್ತಾಗಿರುವ ಕಾರುಗಳಿವು!
Don't Miss!
- News
ಕಬ್ಬನ್ ಪಾರ್ಕ್ನಲ್ಲಿ ನಾಯಿಗಳ ವಾಯುವಿಹಾರಕ್ಕೆ ನಿಷೇಧ ಹೇರಿದ ಸರ್ಕಾರ
- Movies
ನವೀನ್ ಸಜ್ಜು ಮೈಸೂರು ಮನೆ ಹೇಗಿದೆ ಗೊತ್ತಾ?
- Technology
LED ಡಿಸ್ಪ್ಲೇ ಹೊಂದಿರುವ ಅತ್ಯುತ್ತಮ ಪವರ್ಬ್ಯಾಂಕ್ಗಳ ಲಿಸ್ಟ್ ಇಲ್ಲಿದೆ!
- Lifestyle
ಜೂನ್ 26 ರಿಂದ ಜುಲೈ 2ರ ವಾರ ಭವಿಷ್ಯ: ಈ ರಾಶಿಯ ವ್ಯಾಪಾರಿಗಳು ಜಾಗರೂಕತೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ
- Finance
ಜೂನ್ 26: ಕಚ್ಚಾತೈಲ ದರ ಚೇತರಿಕೆ, ಭಾರತದಲ್ಲಿ ಇಂಧನ ದರ ಆಗಿಲ್ಲ ಏರಿಕೆ!
- Sports
Ind vs Eng: ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾಗೆ ಕೊರೊನಾ ವೈರಸ್
- Education
SSC MTS Admit Card 2022 : ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಮಹಿಳೆಯರು ರಾತ್ರಿಯಲ್ಲಿ ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸಬಹುದೇ?: ಈ ಸೌಲಭ್ಯಗಳು ನಿಮಗೆ ಮಾತ್ರ!
ವಿಶ್ವದ ಅತಿದೊಡ್ಡ ರೈಲ್ವೇ ಮಾರ್ಗಗಳನ್ನು ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು. ನಿತ್ಯ ಕೋಟ್ಯಾಂತರ ಜನರು ಭಾರತೀಯ ರೈಲ್ವೇ ಸೇವೆಯನ್ನು ಪಡೆಯುತ್ತಿದ್ದಾರೆ. ಜೊತೆಗೆ ಲಕ್ಷಾಂತರ ಮಂದಿಗೆ ರೈಲ್ವೇ ಇಲಾಖೆ ಉದ್ಯೋಗ ಕಲ್ಪಿಸಿದೆ.

ಪ್ರಮುಖ ಸಾರ್ವಜನಿಕ ಸಾರಿಗೆಯಾಗಿರುವ ರೈಲು ಭಾರತದಲ್ಲಿ ಸಾವಿರಾರು ಕಿ.ಮೀ ಪ್ರಯಾಣಿಸಿ ಸಾರ್ವಜನಿಕರನ್ನು ಗಮ್ಯ ಸ್ಥಳಗಳಿಗೆ ತಲುಪಿಸುತ್ತಿದೆ. ಇದಕ್ಕಾಗಿ ಭಾರತದಲ್ಲಿ ಪ್ರತಿದಿನ ಸಾವಿರಾರು ರೈಲುಗಳು ಸಂಚರಿಸುತ್ತವೆ. ಪ್ರತಿದಿನ ಲಕ್ಷಾಂತರ ಜನರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳುತ್ತಾರೆ. ಈ ರೈಲುಗಳು ಇಲ್ಲದಿದ್ದರೆ ಭಾರತದ ಅಭಿವೃದ್ಧಿಯೇ ಪ್ರಶ್ನೆಯಾಗುತ್ತಿತ್ತು.

ಆದರೆ ರೈಲ್ವೇ ಇಲಾಖೆ ಸಾರ್ವಜನಿಕರ ಅನುಕೂಲಕ್ಕಾಗಿ ಮಾಡಿರುವ ಹಲವು ಕಾನೂನುಗಳು ಎಷ್ಟೋ ಮಂದಿಗೆ ತಿಳಿದೇ ಇಲ್ಲ. ಅದರಲ್ಲೂ ಮಹಿಳೆಯರು ರೈಲುಗಳಲ್ಲಿ ಸುರಕ್ಷಿತವಾಗಿ ಪ್ರಯಾಣಿಸಲು ರೈಲ್ವೇ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ. ಈ ಬಗ್ಗೆ ಲೇಖನದಲ್ಲಿ ತಿಳಿದುಕೊಳ್ಳೋಣ...

ಭಾರತದಲ್ಲಿ ದೂರದ ಪ್ರಯಾಣ ಮಾಡುವ ರೈಲುಗಳು ಹೆಚ್ಚಾಗಿ ರಾತ್ರಿಯಲ್ಲಿ ಸಂಚರಿಸುತ್ತವೆ. ಇಂತಹ ರೈಲುಗಳಲ್ಲಿ ಸ್ಲೀಪರ್ ಕೋಚ್ ಸೌಲಭ್ಯವಿರುವುದರಿಂದ ಹೆಚ್ಚಿನ ಪ್ರಯಾಣಿಕರು ರಾತ್ರಿಯಲ್ಲಿ ಪ್ರಯಾಣಿಸಲು ಬಯಸುತ್ತಾರೆ. ರಾತ್ರಿ ಪ್ರಯಾಣ ಎಷ್ಟು ಮಧುರವೋ ಅಷ್ಟೇ ಅಪಾಯಕಾರಿ.

ರೈಲು ನಿಲ್ದಾಣಗಳು ಸಾಮಾನ್ಯವಾಗಿ ನಗರದ ಹೊರ ವಲಯದಲ್ಲಿರುತ್ತವೆ. ಈ ಹಿಂದೆ ಹಲವು ಸಂದರ್ಭಗಳಲ್ಲಿ ರೈಲು ನಿಲ್ದಾಣಗಳಲ್ಲಿ ರಾತ್ರಿ ವೇಳೆ ಅಪರಾಧ ಕೃತ್ಯಗಳು ನಡೆದಿವೆ. ಹಾಗಾಗಿ ರಾತ್ರಿ ರೈಲಿನಲ್ಲಿ ಮಹಿಳೆಯರು ಒಂಟಿಯಾಗಿ ಪ್ರಯಾಣಿಸುವುದು ತುಂಬಾ ಅಪಾಯಕಾರಿ.

ಈ ದೃಷ್ಟಿಯಿಂದ ಭಾರತೀಯ ರೈಲ್ವೇ ಕಾಯಿದೆ 1989 ಮಹಿಳೆಯರಿಗೆ ಹಲವಾರು ರಿಯಾಯಿತಿಗಳನ್ನು ಒದಗಿಸುತ್ತದೆ. ರೈಲಿನಲ್ಲಿ ಮಹಿಳೆಯರು ಸುರಕ್ಷಿತವಾಗಿ ಪ್ರಯಾಣಿಸಲು ಕಾನೂನು ಏನು ಹೇಳುತ್ತದೆ ಎಂದರೆ, ಎಲ್ಲಾ ರೈಲುಗಳಲ್ಲಿ ಮಹಿಳೆಯರು ಒಂಟಿಯಾಗಿ ಪ್ರಯಾಣಿಸಲು ಪ್ರತ್ಯೇಕ ಕಂಪಾರ್ಟ್ಮೆಂಟ್ ಇರಲಿದೆ.

ಈ ಕಂಪಾರ್ಟ್ಮೆಂಟ್ಗೆ ಪುರುಷರಿಗೆ ಪ್ರವೇಶವಿಲ್ಲ. ಆ ಪೆಟ್ಟಿಗೆಯಲ್ಲಿ ಮಹಿಳೆಯರು ಮಾತ್ರ ಪ್ರಯಾಣಿಸಬೇಕು. ಆ ರೈಲಿನಲ್ಲಿ ಟಿಕೆಟ್ ಪರೀಕ್ಷಕ ಪುರುಷನಾಗಿದ್ದರೆ, ರೈಲು ನಿಲ್ದಾಣದಲ್ಲಿ ಮಹಿಳೆಯರು ರೈಲಿನಿಂದ ಇಳಿದಾಗ ಮಾತ್ರ ಟಿಕೆಟ್ ಪರಿಶೀಲಿಸಬೇಕು. ರೈಲು ಚಾಲನೆಯಲ್ಲಿರುವಾಗ ಮಹಿಳೆಯರ ಕಂಪಾರ್ಟ್ಮೆಂಟ್ನಲ್ಲಿ ಪುರುಷ ಟಿಕೆಟ್ ಪರಿವೀಕ್ಷಕರು ಇರಬಾರದು.

ಭಾರತೀಯ ರೈಲ್ವೇ ಕಾಯಿದೆ, 1989 ರ ಸೆಕ್ಷನ್ 139 ರ ಪ್ರಕಾರ, ಒಬ್ಬ ಮಹಿಳೆ ರಾತ್ರಿಯಲ್ಲಿ ಒಬ್ಬಂಟಿಯಾಗಿ ಅಥವಾ ಮಗುವಿನೊಂದಿಗೆ ರೈಲಿನಲ್ಲಿ ಪುರುಷ ಸಂಗಾತಿಯಿಲ್ಲದೆ ಪ್ರಯಾಣಿಸಿದರೆ ಮತ್ತು ರೈಲು ಪ್ರಯಾಣಕ್ಕೆ ಟಿಕೆಟ್ ಇಲ್ಲದಿದ್ದರೆ, ಟಿಕೆಟ್ ಪರಿವೀಕ್ಷಕರು ಆ ಮಹಿಳೆಯನ್ನು ಇಳಿಯಲು ಆದೇಶಿಸುವಂತಿಲ್ಲ. ಜೊತೆಗೆ ಆ ಮಹಿಳೆ ರೈಲಿನಲ್ಲಿ ಟಿಕೆಟ್ ಇಲ್ಲದೆ ತನ್ನ ಗಮ್ಯಸ್ಥಾನಕ್ಕೆ ಹೋಗಬಹುದು.

ಅದೇ ಸಮಯದಲ್ಲಿ, ಯಾವುದೇ ರೈಲು ನಿಲ್ದಾಣದಲ್ಲಿ ಮಹಿಳಾ ರೈಲ್ವೆ ಪೊಲೀಸರು ಭದ್ರತಾ ಕರ್ತವ್ಯದಲ್ಲಿದ್ದರೆ, ಟಿಕೆಟ್ ಇಲ್ಲದ ಅಪರಾಧಕ್ಕಾಗಿ ಮಹಿಳೆಯನ್ನು ಅವರಿಗೆ ಒಪ್ಪಿಸಬಹುದು. ಆದರೆ ರೈಲ್ವೆ ಮಹಿಳಾ ಪೊಲೀಸರು ರಾತ್ರಿ ವೇಳೆ ರೈಲು ನಿಲ್ದಾಣಗಳಲ್ಲಿ ಕೆಲಸ ಮಾಡುವುದಿಲ್ಲ ಎಂಬುದು ಉಲ್ಲೇಖಾರ್ಹ.

ಅದೇ ರೀತಿ, ಭಾರತೀಯ ರೈಲ್ವೇ ಕಾಯಿದೆಯ ಸೆಕ್ಷನ್ 311ರ ಅಡಿಯಲ್ಲಿ, ರೈಲಿನಲ್ಲಿ ಮಹಿಳೆಯರಿಗೆ ಮೀಸಲಿಟ್ಟ ಕಂಪಾರ್ಟ್ಮೆಂಟ್ ಹತ್ತಿದ ಭಾರತೀಯ ಸೈನಿಕನ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಾಗುವುದಿಲ್ಲ. ಮುಂದಿನ ರೈಲು ನಿಲ್ದಾಣದಲ್ಲಿ ಇಳಿದು ಇನ್ನೊಂದು ಭೋಗಿ ಹತ್ತುವಂತೆ ಹೇಳಿದರೆ ಸಾಕು.

ಭಾರತೀಯ ರೈಲ್ವೆ ಕಾಯಿದೆಯ ಸೆಕ್ಷನ್ 162ರ ಪ್ರಕಾರ, ಮಹಿಳೆಯರಿಗೆ ಮೀಸಲಾದ ಕಂಪಾರ್ಟ್ಮೆಂಟ್ನಲ್ಲಿ ಮಹಿಳೆಯರು ಮತ್ತು ಮಕ್ಕಳು ಮಾತ್ರ ರೈಲುಗಳಲ್ಲಿ ಪ್ರಯಾಣಿಸಬಹುದು. ಗಂಡು ಮಕ್ಕಳು 12 ವರ್ಷ ವಯಸ್ಸಿನವರೆಗೆ ಪ್ರಯಾಣಿಸಬಹುದು. ಮಹಿಳೆಯರ ಪೆಟ್ಟಿಗೆಯಲ್ಲಿ 12 ವರ್ಷಕ್ಕಿಂತ ಮೇಲ್ಪಟ್ಟ ಹುಡುಗರನ್ನು ಅನುಮತಿಸಲಾಗುವುದಿಲ್ಲ.

ಇಷ್ಟು ಮಾತ್ರವಲ್ಲದೆ, ಪ್ರಸ್ತುತ ಭಾರತದಾದ್ಯಂತ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಒದಗಿಸಲಾದ ವಿಶ್ರಾಂತಿ ಕೊಠಡಿಗಳಲ್ಲಿ 24 ಗಂಟೆಗಳ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇರುವಂತೆ ಆದೇಶಿಸಲಾಗಿದೆ. ಅದರಂತೆ ರೈಲು ನಿಲ್ದಾಣದಲ್ಲಿ ತಂಗುದಾಣವಿದ್ದರೆ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಆದೇಶಿಸಲಾಗಿದೆ. ಇದನ್ನೂ ಮಹಿಳೆಯರ ರಕ್ಷಣೆಗಾಗಿ ಮಾಡಲಾಗಿದೆ.