ಪ್ರಪಂಚದಲ್ಲಿ ಅತಿ ಹೆಚ್ಚು ದೂರ ಪ್ರಯಾಣಿಸುವ ವಿಮಾನಗಳು ಯಾವವು?

ಕೆಲವೇ ವರ್ಷಗಳ ಹಿಂದಷ್ಟೇ ಶ್ರೀಮಂತರು ಮಾತ್ರ ವಿಮಾನಗಳಲ್ಲಿ ಓಡಾಡಲು ಸಾಧ್ಯ ಎನ್ನುವ ಮಾತುಗಳಿದ್ದವು. ಆದ್ರೆ ಇದೀಗ ಪರಿಸ್ಥಿತಿ ಬದಲಾಗಿದೆ. ವ್ಯಾಪಾರ, ಉದ್ಯೋಗ ಮತ್ತು ಪ್ರವಾಸ ನಿಮಿತ್ತ ಎಲ್ಲಾ ವರ್ಗದ ಜನರು ಸಹ ವಿಮಾನಯಾನದತ್ತ ವಾಲುತ್ತಿದ್ದಾರೆ.

By Rahul Ts

ಇತ್ತೀಚೆಗೆ ವಿಮಾನಯಾನದಲ್ಲಿ ಹೊಸ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿದ್ದು, ಒಂದು ಖಂಡದಿಂದ ಮತ್ತೊಂದು ಖಂಡಕ್ಕೆ ಪ್ರವಾಸ ಕೈಗೊಳ್ಳುವುದು ತುಂಬಾ ಸುಲಭವಾಗುತ್ತಿದೆ. ಇನ್ನು ದೇಶಿಯ ವಿಮಾನಯಾನ ಕ್ಷೇತ್ರವು ಕೂಡಾ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ಈ ಹಿನ್ನೆಲೆ ಅತಿ ಹೆಚ್ಚು ದೂರ ಪ್ರಯಾಣಿಸುವ ವಿಮಾನಗಳ ಕುರಿತು ನಾವಿಲ್ಲಿ ಚರ್ಚಿಸುತ್ತಿದ್ದೇವೆ.

ಪ್ರಪಂಚದಲ್ಲಿ ಅತಿ ಹೆಚ್ಚು ದೂರ ಪ್ರಯಾಣಿಸುವ ವಿಮಾನಗಳು ಯಾವವು?

10. ಎಮಿರೇಟ್ಸ್ ಏರ್‍‍ಲೈನ್ : ದುಬೈ ಟು ಲಾಸ್ ಏಂಜಲೀಸ್

ಅತಿಹೆಚ್ಚು ಪ್ರಯಾಣಿಸುವ ವಿಮಾನಯಾನ ಸೇವೆಗಳಲ್ಲಿ ಎಮಿರೇಟ್ಸ್ ಏರ್‍‍ಲೈನ್ ಕೂಡಾ ಒಂದು. ಎಮಿರೇಟ್ಸ್ ವಿಮಾನವು ದುಬೈನಿಂದ ಲಾಸ್ ಏಂಜಲೀಸ್ ನಗರ ತಲುಪಲು ಸುಮಾರು 13,420 ಕಿಲೋಮೀಟರ್ ಚಲಿಸಬೇಕಾಗಿದ್ದು, ಇದಕ್ಕಾಗಿ ಏ‍ರ್‍‍ಬಸ್ ಎ380ನಲ್ಲಿ 16 ಗಂಟೆಗಳ ಕಾಲ ಪ್ರಯಾಣಿಸಬೇಕಾಗುತ್ತದೆ.

ಪ್ರಪಂಚದಲ್ಲಿ ಅತಿ ಹೆಚ್ಚು ದೂರ ಪ್ರಯಾಣಿಸುವ ವಿಮಾನಗಳು ಯಾವವು?

9. ಇತಿಹಾದ್ ಜೆಟ್ ಏರ್‍‍ವೇಸ್- ಅಬುದಾಬಿ ಟು ಲಾಸ್ ಏಂಜಲೀಸ್

ಬೋಯಿಂಗ್ 777-200ಎಲ್ಆರ್ ವಿಮಾನವು ಅಬುದಾಬಿಯಿಂದ ಲಾಸ್ ಏಂಜಲೀಸ್ ತಲುಪಲು ಸುಮಾರು 13,503 ಕಿ.ಮೀ ಚಲಿಸಬೇಕಾಗಿದ್ದು, 16 ಗಂಟೆ 30 ನಿಮಿಷಗಳ ಕಾಲ ಪ್ರಯಾಣಿಸಬೇಕಾಗುತ್ತದೆ.

ಪ್ರಪಂಚದಲ್ಲಿ ಅತಿ ಹೆಚ್ಚು ದೂರ ಪ್ರಯಾಣಿಸುವ ವಿಮಾನಗಳು ಯಾವವು?

8. ಡೆಲ್ಟಾ ಏರ್‍‍ಲೈನ್ಸ್: ಜೊಹಾನ್ಸ್‌ಬರ್ಗ್‌ ಟು ಅಟ್ಲಾಂಟ್

ಬೋಯಿಂಗ್ 777-200ಎಲ್ಆರ್ ಎಂಬ ಹೆಸರಿನ ಈ ವಿಮಾನವು ದಕ್ಷಿಣ ಆಫ್ರಿಕಾದ ಡೆನ್ಸ್ ಕಾಡುಗಳು ದಾಟಿ ಅಟ್ಲಾಂಟ್ ತಲುಪಲು ಸುಮಾರು 13,576 ಕಿ.ಮೀ ಚಲಿಸಬೇಕಾಗಿದ್ದು, 16 ಗಂಟೆ 50 ನಿಮಿಷ ಪ್ರಯಾಣಿಸಬೇಕಾಗುತ್ತದೆ.

ಪ್ರಪಂಚದಲ್ಲಿ ಅತಿ ಹೆಚ್ಚು ದೂರ ಪ್ರಯಾಣಿಸುವ ವಿಮಾನಗಳು ಯಾವವು?

7. ಯುನೈಟೆಡ್ ಏರ್‍‍ಲೈನ್ಸ್ - ಸ್ಯಾನ್ ಫ್ರಾನ್ಸಿಸ್ಕೊ ಟು ಸಿಂಗಾಪುರ್

ಬೋಯಿಂಗ್ 787-9 ಎಂಬ ಹೆಸರಿನ ಈ ವಿಮಾನವು ಬಿಜಿನೆಸ್ ಟ್ರಿಪ್ ಗಾಗಿ ವಿಶೇಷವಾಗಿ ಸಿದ್ದವಾಗಿದ್ದು, ಹಾಗೆಯೇ ಇದು ಸ್ಯಾನ್ ಫ್ರಾನ್ಸಿಸ್ಕೊ ನಿಂದ ಸಿಂಗಾಪುರ್ ತಲುಪಲು ಸುಮಾರು 13,594 ಕಿಲೋಮೀಟರ್ ಚಲಿಸಬೇಕಾಗುತ್ತೆ. ನಿರ್ದಿಷ್ಟ ಸ್ಥಾನವನ್ನು ತಲುಪಲು ಸುಮಾರು 17 ಗಂಟೆಗಳ ಕಾಲ ಪ್ರಯಾಣಿಸಬೇಕಾಗುತ್ತದೆ.

ಪ್ರಪಂಚದಲ್ಲಿ ಅತಿ ಹೆಚ್ಚು ದೂರ ಪ್ರಯಾಣಿಸುವ ವಿಮಾನಗಳು ಯಾವವು?

6. ಕ್ವಾಂಟಾಸ್ ಏರ್‍‍ವೇಸ್: ಡಲ್ಲಾಸ್ - ಸಿಡ್ನಿ

ಕ್ವಾಂಟಾಸ್ ಏರ್ವೇಸ್ ಎಂಬುದು ಆಸ್ಟ್ರೇಲಿಯಾದ ಫ್ಲ್ಯಾಗ್ ಕ್ಯಾರಿಯರ್ ವಿಮಾನಯಾನ ಸಂಸ್ಥೆಯಾಗಿದೆ. ಏರ್‍‍ಬಸ್ ಎ380 ಎಂಬ ಈ ವಿಮಾನವು ದಲ್ಲಾಸ್ ನಿಂದ ಸಿಡ್ನಿ ನಗರವನ್ನು ತಲುಪಸು ಸುಮಾರು 13,804 ಸಾವಿರ ಕಿಲೋ ಮೀಟರ್ ಚಲಿಸಬೇಕಾಗಿದ್ದು, ನಿರ್ದಿಷ್ಟ ಸ್ಥಾನವನ್ನು ತಲುಪಲು 17 ಗಂಟೆ 15 ನಿಮಿಷದ ವರೆಗು ಪ್ರಯಾಣಿಸಬೇಕಂತೆ.

ಪ್ರಪಂಚದಲ್ಲಿ ಅತಿ ಹೆಚ್ಚು ದೂರ ಪ್ರಯಾಣಿಸುವ ವಿಮಾನಗಳು ಯಾವವು?

5. ಯುನೈಟೆಡ್ ಏರ್‍‍‍ಲೈನ್ಸ್: ಹೊಸ್ಟನ್ ಟು ಸಿಡ್ನಿ

ಸಿಡ್ನಿಯಿಂದ ಹೊರಡುವ ಬೋಯಿಂಗ್ 787-9 ವಿಮಾನವು ತಮ್ಮ ನಿರ್ದಿಷ್ಟ ಸ್ಥಾನವನ್ನು ತಲುಪಲು 13,834 ಕಿಲೋಮೀಟರ್ ಪ್ರಯಾಣಿಸಬೇಕಾದ್ದು, ಇದಕ್ಕಾಗಿ ಬರೋಬ್ಬರಿ 17 ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ.

ಪ್ರಪಂಚದಲ್ಲಿ ಅತಿ ಹೆಚ್ಚು ದೂರ ಪ್ರಯಾಣಿಸುವ ವಿಮಾನಗಳು ಯಾವವು?

4. ಯುನೈಟೆಡ್ ಏರ್‍‍‍ಲೈನ್ಸ್: ಲಾಸ್ ಏಂಜಲೀಸ್ ಟು ಸಿಂಗಾಪುರ್

ಬೋಯಿಂಗ್ 787-9 ವಿಮಾನವು ಉತ್ತರ ಅಮೆರಿಕಾದಿಂದ ಆಗ್ನೇಯಾ ಏಷಿಯಾವನ್ನು ತಲುಪಲು ಸುಮಾರು 14,114 ಕಿಲೋಮೀಟರ್ ಚಲಿಸಬೇಕಾಗಿದ್ದು, 17 ಗಂಟೆ 50 ನಿಮಿಷಗಳ ಕಾಲ ಪ್ರಯಾಣಿಸಬೇಕಾಗುತ್ತದೆ.

ಪ್ರಪಂಚದಲ್ಲಿ ಅತಿ ಹೆಚ್ಚು ದೂರ ಪ್ರಯಾಣಿಸುವ ವಿಮಾನಗಳು ಯಾವವು?

3. ಎಮಿರೇಟ್ಸ್ ಏರ್‍‍ಲೈನ್ : ಔಕ್‍ಲ್ಯಾಂಡ್ - ದುಬೈ

ಏರ್‍‍‍ಬಸ್ ಎ380 ವಿಮಾನವು ಔಕ್‍ಲ್ಯಾಂಡ್ ನಿಂದ ದುಬೈ ತಲುಪಲು ಸುಮಾರು 14,201 ಕಿಲೋಮೀಟರ್ ಚಲಿಸಬೇಕಾಗಿದ್ದು, 17 ಗಂಟೆ 5 ನಿಮಿಷಗಳ ಕಾಲ ಪ್ರಯಾಣಿಸಬೇಕಾಗುತ್ತದೆ. ಇದಲ್ಲದೇ ಈ ವಿಮಾನವು ಅತಿ ಹೆಚ್ಚು ದೂರ ಪ್ರಯಾಣಿಸಿವ ವಿಮಾನಗಳಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

ಪ್ರಪಂಚದಲ್ಲಿ ಅತಿ ಹೆಚ್ಚು ದೂರ ಪ್ರಯಾಣಿಸುವ ವಿಮಾನಗಳು ಯಾವವು?

2. ಕ್ವಾಂಟಾಸ್ : ಪರ್ತ ಟು ಲಂಡನ್

ಬೋಯಿಂಗ್ 787-9 ಜೆಟ್ ಪರ್ತನಿಂದ ಲಂಡನ್ ತಲುಪಲು ಸುಮಾರು 14,500 ಕಿಲೋಮೀಟರ್ ಚಲಿಸಬೇಕಾಗಿದ್ದು, 17 ಗಂಟೆ 20 ನಿಮಿಷಗಳ ಕಾಲ ಪ್ರಯಾಣಿಸಬೇಕಾಗಿದೆ ಎನ್ನಲಾಗಿದೆ.

ಪ್ರಪಂಚದಲ್ಲಿ ಅತಿ ಹೆಚ್ಚು ದೂರ ಪ್ರಯಾಣಿಸುವ ವಿಮಾನಗಳು ಯಾವವು?

1. ಖತಾರ್ ಏರ್ವೇಸ್ : ಔಕ್‍ಲ್ಯಾಂಡ್ - ದೋಹಾ

ನಾವಿಂದು ತಿಳಿಸಲಿರುವ ಅತಿ ಹೆಚ್ಚು ದೂರ ಪ್ರಯಾಣ ಮಾಡುವ ವಿಮಾನಗಳಲ್ಲಿ ಬೋಯಿಂಗ್ 777-200ಎಲ್ಆರ್ ವಿಮಾನವು ಮೊದಲನೆಯ ಸ್ಥಾನವನ್ನು ಪಡೆದಿದೆ. ಹಾಗೆಯೇ ಇದು ಔಕ್‍ಲ್ಯಾಂಡ್ ನಿಂದ ದೋಹಾವನ್ನು ತಲುಪಲು ಸುಮಾರು 14,535 ಕಿಲೋಮೀಟರ್ ಚಲಿಸಬೇಕಾಗಿದ್ದು, 18 ಗಂಟೆ ಮತ್ತು 5 ನಿಮಿಷಗಳ ಕಾಲ ಪ್ರಯಾಣಿಸಬೇಕಾಗಿದೆಯಂತೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

1. ಮಾರಾಟದಲ್ಲಿ ಬುಲೆಟ್ ಹಿಂದಿಕ್ಕಿದ ಕ್ಲಾಸಿಕ್ 350 ಗನ್‌ಮೆಟಲ್ ಗ್ರೇ ವಿಶೇಷತೆ ಏನು?

2. ಡಿಜೈರ್ ಟೂರ್ ಎಸ್ ಸಿಎನ್‌ಜಿ ಕಾರಿನ ಮಹತ್ವದ ತಾಂತ್ರಿಕ ಅಂಶಗಳು ಸೋರಿಕೆ..

3. ಈ ನಗರದಲ್ಲಿ ಇನ್ಮುಂದೆ ಶಾಪಿಂಗ್ ಮಾಲ್‌ಗಳಲ್ಲಿ ಉಚಿತ ಪಾರ್ಕಿಂಗ್ ಸೌಲಭ್ಯ..

4. ಬಿಡುಗಡೆಯಾಗಲಿರುವ ಹೊಸ ಬಜಾಜ್ ಪಲ್ಸರ್ 150 ಬೈಕ್ ಬೆಲೆ ಎಷ್ಟು ಗೊತ್ತಾ?

5. ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

Most Read Articles

Kannada
Read more on plane
English summary
The Longest Flight Routes In The World — Probably The Flights Which Give The Most Jet Lag Too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X