ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಜೀವನದಲ್ಲಿ ಪ್ರತಿಯೊಬ್ಬರಿಗೂ ಯಾವುದಾದರೂ ಒಂದು ವಸ್ತು ಬಹಳ ಮುಖ್ಯವಾಗಿರುತ್ತದೆ. ಅದು ಪ್ರೀತಿ ಪಾತ್ರರು ನೀಡುವ ಉಡುಗೊರೆಯೇ ಆಗಿರ ಬಹುದು ಅಥವಾ ಮದುವೆಯ ಉಂಗುರವೇ ಆಗಿರಬಹುದು. ಆ ವಸ್ತುವನ್ನು ಕಳೆದುಕೊಂಡಾಗ ಆಗುವ ನೋವು ಹೇಳತೀರದು.

ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಕಳೆದುಹೋದ ಪ್ರೀತಿಯ ವಸ್ತು ಸಿಗುವುದೇ ಇಲ್ಲ ಎಂದು ಕೊಂಡಾಗ ಮತ್ತೆ ಆ ವಸ್ತು ಸಿಕ್ಕರೆ ಆಗುವ ಸಂತೋಷವನ್ನು ಬಣ್ಣಿಸಲು ಸಾಧ್ಯವಿಲ್ಲ. ಆಂಡ್ರಿಯಾಸ್ ಡಿಸೋಜಾ ಹಾಗೂ ಅವರ ಪತ್ನಿಗೆ ಆಗುತ್ತಿರುವ ಖುಷಿಯು ಇದೇ ರೀತಿಯದು. ಅವರು ಕಳೆದುಕೊಂಡಿದ್ದ ತಮ್ಮ ಪ್ರೀತಿ ಪಾತ್ರ ವಸ್ತುವನ್ನು ಮರಳಿ ಪಡೆದಿದ್ದಾರೆ.ಆಂಡ್ರಿಯಾಸ್ ಡಿಸೋಜಾ ದೇಶಿಯ ಮಾರುಕಟ್ಟೆಯ ಜನಪ್ರಿಯ ಎಸ್‌ಯುವಿಯಾದ ಜೀಪ್ ಕಂಪಾಸ್ ಅನ್ನು ಹೊಂದಿದ್ದಾರೆ.

ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಇತ್ತೀಚೆಗೆ ಅವರ ಪತ್ನಿ ಧರಿಸಿದ್ದ ಮದುವೆಯ ಉಂಗುರವು ಬೆರಳಿನಿಂದ ಅನಿರೀಕ್ಷಿತವಾಗಿ ಜಾರಿ ಕಾರಿನಲ್ಲಿ ಬಿದ್ದಿತ್ತು. ಸುದೀರ್ಘ ಹುಡುಕಾಟದ ನಂತರವೂ ಮದುವೆಯ ಉಂಗುರ ಸಿಗಲಿಲ್ಲ. ಈ ಕಾರಣಕ್ಕೆ ಕಾರನ್ನು ಮಹಾರಾಷ್ಟ್ರದ ಥಾಣೆಯಲ್ಲಿರುವ ಜೀಪ್ ಸರ್ವೀಸ್ ಸೆಂಟರ್ ಗೆ ಕೊಂಡೊಯ್ಯಲಾಯಿತು.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಸರ್ವೀಸ್ ಸೆಂಟರ್ ಸಿಬ್ಬಂದಿ ಕಾರಿನ ಮೂಲೆ ಮೂಲೆಯನ್ನು ಹುಡುಕಿದರೂ ಉಂಗುರ ಪತ್ತೆಯಾಗಲಿಲ್ಲ. ಈ ಕಾರಣಕ್ಕೆ ಕಾರಿನ ಒಳಭಾಗವನ್ನು ಸಂಪೂರ್ಣವಾಗಿ ತೆಗೆದುಹಾಕಲಾಯಿತು. ಸೀಟುಗಳನ್ನು ಸಹ ಹೊರ ತೆಗೆಯಲಾಯಿತು.

ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಸುಮಾರು ಎರಡು ದಿನಗಳ ಹುಡುಕಾಟದ ನಂತರ ಸರ್ವೀಸ್ ಸೆಂಟರ್ ಸಿಬ್ಬಂದಿಗಳ ಪರಿಶ್ರಮದ ಪರಿಣಾಮವಾಗಿ ಆಂಡ್ರಿಯಾಸ್ ಡಿಸೋಜಾ ಅವರ ಪತ್ನಿ ಧರಿಸಿದ್ದ ಮದುವೆ ಉಂಗುರ ಪತ್ತೆಯಾಯಿತು. ಉಂಗುರವು ಕಾರಿನೊಳಗಿದ್ದ ಪೋಸ್ಟ್‌ನಲ್ಲಿ ಸಿಲುಕಿಕೊಂಡಿತ್ತು.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಆಂಡ್ರಿಯಾಸ್ ಡಿಸೋಜಾ ಈ ಘಟನೆಯ ವಿವರವನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದಾರೆ. ನನ್ನ ಹೆಂಡತಿ ಧರಿಸಿದ್ದ ಅಮೂಲ್ಯವಾದ ಮದುವೆಯ ಉಂಗುರವು ಕಾರಿನಲ್ಲಿ ನಾಪತ್ತೆಯಾಗಿತ್ತು. ಹುಡುಕಾಡಿದರೂ ಪತ್ತೆಯಾಗದ ಕಾರಣ ನಾವು ಕಾರನ್ನು ಥಾಣೆಯ ಜೀಪ್ ಸರ್ವೀಸ್ ಸೆಂಟರ್ ಗೆ ಕೊಂಡೊಯ್ದೆವು.

ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಸುಮಾರು ಎರಡು ದಿನಗಳ ಹುಡುಕಾಟದ ನಂತರ ಉಂಗುರವು ಪತ್ತೆಯಾಯಿತು. ಇದಕ್ಕಾಗಿ ಸರ್ವೀಸ್ ಸೆಂಟರ್ ಮ್ಯಾನೇಜರ್ ನಿರಂಜನ್ ಹಾಗೂ ಅವರ ತಂಡಕ್ಕೆ ಧನ್ಯವಾದ ಹೇಳುತ್ತೇನೆ. ಅವರ ಬೆಂಬಲ ಹಾಗೂ ಪರಿಶ್ರಮದಿಂದ ಇದು ಸಾಧ್ಯಯಾಯಿತು. ನಾನು ಹಾಗೂ ನನ್ನ ಹೆಂಡತಿ ಮತ್ತೊಮ್ಮೆ ಉಂಗುರಗಳನ್ನು ಬದಲಿಸಿಕೊಂಡೆವು ಎಂದು ಹೇಳಿದ್ದಾರೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಪತ್ತೆಯಾದ ಉಂಗುರವು ನಮ್ಮ ಮದುವೆ ಆದಾಗ ಇದ್ದ ಆನಂದವನ್ನು ಮತ್ತೊಮ್ಮೆ ಅನುಭವಿಸುವಂತೆ ಮಾಡಿತು ಎಂದು ಅವರು ಹೇಳಿದ್ದಾರೆ. ಆಂಡ್ರಿಯಾಸ್ ಡಿಸೋಜಾ ಅವರ ಈ ಪೋಸ್ಟ್ ನೋಡಿರುವ ಅನೇಕರು ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.

ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಆಂಡ್ರಿಯಾಸ್ ಡಿಸೋಜಾ ತಮ್ಮ ಪತ್ನಿಯನ್ನು ಹಾಗೂ ಅವರ ನೆನಪುಗಳನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದೆ. ಜೀಪ್ ಕಂಪಾಸ್ ಭಾರತದ ಜನಪ್ರಿಯ ಎಸ್‌ಯುವಿಗಳಲ್ಲಿ ಒಂದಾಗಿದೆ. ಜೀಪ್ ಕಂಪಾಸ್ ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಹ್ಯಾರಿಯರ್ ಹಾಗೂ ಮಹೀಂದ್ರಾ ಎಕ್ಸ್‌ವಿ 500ಗಳಿಗೆ ಪೈಪೋಟಿ ನೀಡುತ್ತದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಕಳೆದುಹೋದ ಉಂಗುರವನ್ನು ಪತ್ತೆಹಚ್ಚಲು ಕಾರಿನಲ್ಲಿರುವ ಬಿಡಿಭಾಗಗಳನ್ನೆಲ್ಲಾ ಹೊರ ತೆಗೆಯಲಾಗಿದೆ. ಈ ಕಾರ್ಯಕ್ಕೆ ಹೆಚ್ಚು ಖರ್ಚಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಎಷ್ಟೇ ಖರ್ಚಾದರೂ ಚಿಂತಿಸದೇ ತಮ್ಮ ಹೆಂಡತಿಯ ಪ್ರೀತಿ ಪಾತ್ರ ಉಂಗುರಕ್ಕಾಗಿ ಆಂಡ್ರಿಯಾಸ್ ಡಿಸೋಜಾ ಈ ಕಾರ್ಯಕ್ಕೆ ಮುಂದಾಗಿದ್ದಾರೆ.

Most Read Articles

Kannada
English summary
Lost wedding ring found in jeep compass cabin after 2 days of search. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X