ಅಪಘಾತದಲ್ಲಿ ಪ್ರಾಣ ಸ್ನೇಹಿತನನ್ನು ಕಳೆದುಕೊಂಡ ಈತ ಮಾಡಿದ ಉಪಕಾರ ಎಂತದ್ದು ಗೊತ್ತಾ?

ರಸ್ತೆ ಅಪಘಾತಗಳ ಸಂದರ್ಭದಲ್ಲಿ ಬಹುತೇಕ ಜನರು ಗಾಯಾಳುಗಳ ನೆರವಿಗೆ ಬರಲು ಹಿಂದೇಟು ಹಾಕುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದಕ್ಕೆ ಕಾರಣ, ಎಲ್ಲಿ ನಮ್ಮ ವಿರುದ್ಧ ಕೇಸ್ ದಾಖಲಾಗುತ್ತದೆಯೋ, ಎಲ್ಲಿ ಕೋರ್ಟ್, ಕಚೇರಿ ಎಂದು ತಿರುಗಾಡುವ ಪ್ರಸಂಗಗಳು ಎದುರಾಗುತ್ತವೆಯೋ ಎಂದು ಎಷ್ಟೋ ಮಂದಿ ಸಂತ್ರಸ್ತರ ನೆರವಿಗೆ ಹೋಗದೇ ಇರುವುದನ್ನು ಪ್ರತೀ ನಿತ್ಯ ನೋಡುತ್ತಿರುತ್ತೇವೆ.

ಪ್ರಾಣ ಸ್ನೇಹಿತನನ್ನು ಕಳೆದುಕೊಂಡ ಈತ ಮಾಡಿದ ಉಪಕಾರ ಎಂತದ್ದು ಗೊತ್ತಾ.?

ನಿಜವಾಗಿಯು ಯಾವುದಕ್ಕು ಅಂಜದೆಯೆ ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಸಮೀಪದಲ್ಲಿನ ಆಸ್ಪತ್ರೆಗೆ ಕರೆಯೊಯ್ಯುವವರನ್ನು ನಿಜಕ್ಕು ನಾವು ಮೆಚ್ಚಲೇಬೇಕು, ಇಂತಹ ಒಬ್ಬ ಸಾಹಸ ವೀರನ ಬಗ್ಗೆ ಇಂದಿನ ಲೇಖನದಲ್ಲಿ ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ. ಈತ ರಸ್ತೆ ಅಪಘಾತದಲ್ಲಿ ಗಾಯಗೊಂಡ ಸುಮಾರು 60 ಮಂದಿಯನ್ನು ರಕ್ಷಿಸಿದ್ದಾನೆ ಎಂದರೆ ನೀವು ನಂಬಲೇಬೇಕು.

ಪ್ರಾಣ ಸ್ನೇಹಿತನನ್ನು ಕಳೆದುಕೊಂಡ ಈತ ಮಾಡಿದ ಉಪಕಾರ ಎಂತದ್ದು ಗೊತ್ತಾ.?

ರಸ್ತೆ ಅಪಘಾತದಲ್ಲಿ ಮಾತ್ರವಲ್ಲದೇ ಯಾವುದಾದರು ತೊಂದರೆಯಲ್ಲಿ ಸಿಕ್ಕಿಕ್ಕೊಂಡವರನ್ನು ರಕ್ಷಿಸಲು ಮುಂದಾಗದೆ ಕೈಯಲ್ಲಿರುವ ಮೊಬೈಲ್ ಹಿಡಿದುಕೊಂಡು, ಫೋಟೊ ಕ್ಲಿಕ್ ಮಾಡಿ ಮತ್ತು ಘಟನೆ ನಡೆದ ಸ್ಥಳದಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಹೋಗುವ ಜನಗಳ ಮಧ್ಯೆ ಈತ ತನ್ನ ಜೀವನದಲ್ಲಿ ನಡೆದ ಘಟನೆಯ ಪ್ರೇರೇಪಣೆಯೊಂದಿಗೆ ಗಾಯಾಳುಗಳನ್ನು ರಕ್ಷಿಸಲು ಮುಂದಾಗಿದ್ದಾನೆ.

ಪ್ರಾಣ ಸ್ನೇಹಿತನನ್ನು ಕಳೆದುಕೊಂಡ ಈತ ಮಾಡಿದ ಉಪಕಾರ ಎಂತದ್ದು ಗೊತ್ತಾ.?

ಮನೋಜ್ ಸಿಂಗ್ ಎಂಬುವವರ ಜೀವನದಲ್ಲಿ ಮರೆಯಲಾಗದ ಘಟನೆಯೊಂದು ನಡೆದಿದ್ದು, ಆ ಘಟನೆಯಿಂದ ಎಚ್ಚೆತ್ತುಕೊಂಡಿರುವ ಮನೋಜ್ ರಸ್ತೆ ಅಪಘಾತದಲ್ಲಿ ಗಾಯಾಳುಗಳನ್ನ ಸರಿಯಾದ ಸಮಯಕ್ಕೆ ಹತ್ತಿರದಲ್ಲಿದ್ದ ಆಸ್ಪತ್ರೆಗೆ ಸೇರಿಸಿ ಇಲ್ಲಿಯವರೆಗು ಸುಮಾರು 60 ಮಂದಿಯ ಜೀವ ರಕ್ಷಿಸಿದ್ದಾರೆ.

ಪ್ರಾಣ ಸ್ನೇಹಿತನನ್ನು ಕಳೆದುಕೊಂಡ ಈತ ಮಾಡಿದ ಉಪಕಾರ ಎಂತದ್ದು ಗೊತ್ತಾ.?

1991ರಲ್ಲಿ ನಡೆದ ರಸ್ತೆ ಅಪಘಾತ ಒಂದರಲ್ಲಿ ತನ್ನ ಪ್ರಾಣ ಸ್ನೇಹಿತ ಪ್ರಮೋದ್ ತಿವಾರಿ ಅವರು ಕಚೇರಿಯಿಂದ ಮನೆಗೆ ಹಿಂದಿರುಗುವಾಗ ಅಪರಿಚಿತ ವಾಹನ ಒಂದು ಗುದ್ದಿ ಪ್ರಾಣ ಕಳೆದುಕೊಂಡಿದ್ದರು. ಈ ಘಟನೆ ನಡೆಯುವಾಗ ಪಕ್ಕದಲ್ಲಿಯೇ ಇದ್ದ ಮನೋಜ್ ಅವರು ಆ ಸಮಯದಲ್ಲಿ ಯಾವುದೇ ರೀತಿಯಾದ ಸಹಾಯ ಮಾಡಲು ಸಾಧ್ಯವಾಗಿರಲಿಲ್ಲವಂತೆ.

ಪ್ರಾಣ ಸ್ನೇಹಿತನನ್ನು ಕಳೆದುಕೊಂಡ ಈತ ಮಾಡಿದ ಉಪಕಾರ ಎಂತದ್ದು ಗೊತ್ತಾ.?

ರಕ್ತದ ಮಡುವಿನಲ್ಲಿ ಬಿದ್ದಿದ್ದ ಗೆಳೆಯನನ್ನ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸಲು ಸಾಧ್ಯವಾಗದ ಹಿನ್ನಲೆ ಮನನೊಂದಿದ್ದ ಮನೋಜ್ ಸಿಂಗ್ ತನ್ನ ಗೆಳಯನಿಗೆ ಆದ ಪರಿಸ್ಥಿತಿ ಇತರರಿಗೆ ಬಾರದಿರಲೆಂದು ಇಂತಹ ಮಾನವೀಯ ಕಾರ್ಯವನ್ನು ಶುರು ಮಾಡಿದ್ದರು.

ಪ್ರಾಣ ಸ್ನೇಹಿತನನ್ನು ಕಳೆದುಕೊಂಡ ಈತ ಮಾಡಿದ ಉಪಕಾರ ಎಂತದ್ದು ಗೊತ್ತಾ.?

1991ರಿಂದ ಇಂದಿನ ತನಕ ಸುಮಾರು 27 ವರ್ಷದಲ್ಲಿ ಮನೋಜ್ ಅವರು ರಸ್ತೆ ಅಪಘಾತದಲ್ಲಿ ಗಾಯಗೊಂಡ ಸುಮಾರು 60ಕ್ಕು ಹೆಚ್ಚು ಮಂದಿಯನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕರೆದೊಯ್ದು ಅವರ ಜೀವ ಉಳಿಸಲು ನೆರವಾಗಿದ್ದಾರೆ.

ಪ್ರಾಣ ಸ್ನೇಹಿತನನ್ನು ಕಳೆದುಕೊಂಡ ಈತ ಮಾಡಿದ ಉಪಕಾರ ಎಂತದ್ದು ಗೊತ್ತಾ.?

ತಾನು ರಕ್ಷಣೆ ಮಾಡಿದ ಒಬ್ಬೊಬ್ಬರಲ್ಲು ತನ್ನ ಸ್ನೇಹಿತನನ್ನು ಕಂಡಿದ್ದು, ತನ್ನ ಸ್ನೇಹಿತನನ್ನು ಮನೋಜ್ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಇಂದು ತಾವು ಆ ನೋವನ್ನು ಮರೆಯಲು ಮತ್ತು ಭಾವನಾತ್ಮಕ ಸಂಗತಿಯನ್ನು ನೀಗಿಸಿಕೊಳ್ಳಲು ಬೇರೊಬ್ಬರಿಗೆ ಸಹಾಯ ಮಾಡುತ್ತಿರುವುದಾಗಿ ಮನೋಜ್ ಸಿಂಗ್ ಹೇಳಿಕೊಂಡಿದ್ದಾರೆ.

ಪ್ರಾಣ ಸ್ನೇಹಿತನನ್ನು ಕಳೆದುಕೊಂಡ ಈತ ಮಾಡಿದ ಉಪಕಾರ ಎಂತದ್ದು ಗೊತ್ತಾ.?

ಮನೋಜ್ ಸಿಂಗ್ ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ತಮ್ಮ ವಿದ್ಯಾರ್ಥಿಗಳಿಗೂ ಸಹ ಇಂತಹ ಸಂದರ್ಭ ಬಂದರೆ ಹಿಂಜರಿಯದೆ ಗಾಯಾಳುಗಳ ರಕ್ಷಣೆಗೆ ಮುಂದಾಗುವಂತೆ ಭೋದನೆ ಮಾಡುತ್ತಿದ್ದು, ಅದೆಷ್ಟೊ ಕುಟುಂಬಗಳ ಆಧಾರಸ್ತಂಬಗಳನ್ನು ರಕ್ಷಿಸಿದ್ದಾರೆ ಎಂದರೆ ತಪಾಗುವುದಿಲ್ಲ.

MOST READ: ವಾಹನ ಮಾಲೀಕರೇ ಇತ್ತ ಗಮನಿಸಿ - ನಂಬರ್ ಪ್ಲೇಟ್‍ನಲ್ಲಿ ಸಧ್ಯದಲ್ಲೆ ಭಾರೀ ಬದಲಾವಣೆ?

Most Read Articles

Kannada
English summary
Lucknow ManWho Saw His Friend Bleed To Death In Road Accident, Has Saved 60 Lives In 27 Years. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more