ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಹೊಸ ಮೋಟಾರು ವಾಹನ ಕಾಯ್ದೆಯನ್ನು ಸೆಪ್ಟೆಂಬರ್ 1ರಿಂದ ಜಾರಿಗೆ ತರಲಾಗಿದೆ. ಈ ಹೊಸ ಕಾಯ್ದೆಯನ್ವಯ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗುತ್ತಿದೆ.

ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಈ ಕಾಯ್ದೆಯಡಿಯಲ್ಲಿ ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸಿದರೆ ಅವರ ಪೋಷಕರಿಗೆ ದಂಡ ವಿಧಿಸಲಾಗುತ್ತದೆ. ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸಿದರೆ ಅವರ ಪೋಷಕರಿಗೆ ಅಥವಾ ವಾಹನದ ಮಾಲೀಕರಿಗೆ ರೂ.25,000 ದಂಡ ವಿಧಿಸಲಾಗುವುದು. ಇದರ ಜೊತೆಗೆ ಮೂರು ತಿಂಗಳ ಸೆರೆವಾಸ ವಿಧಿಸಲಾಗುವುದು.

ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಇಷ್ಟೆಲ್ಲಾ ನಿಯಮಗಳಿದ್ದರೂ, ದಂಡವನ್ನು ಭಾರೀ ಪ್ರಮಾಣದಲ್ಲಿ ವಿಧಿಸಲಾಗುತ್ತಿದ್ದರೂ ಕೆಲವು ಪೋಷಕರು ತಮ್ಮ ವಾಹನಗಳನ್ನು ಚಲಾಯಿಸಲು ಮಕ್ಕಳಿಗೆ ನೀಡುತ್ತಿದ್ದಾರೆ. ಇದೇ ರೀತಿಯ ಮತ್ತೊಂದು ಘಟನೆ ಲಕ್ನೋದಲ್ಲಿ ನಡೆದಿದೆ.

ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ತನ್ನ 8 ವರ್ಷದ ಮಗನಿಗೆ ತನ್ನ ಬೈಕ್ ಕೊಟ್ಟು ಹಾಲು ತರಲು ಕಳುಹಿಸಿದ ತಂದೆ ಅದಕ್ಕಾಗಿ ಭಾರೀ ಪ್ರಮಾಣದ ದಂಡವನ್ನು ತೆರಬೇಕಾಗಿದೆ. 8 ವರ್ಷದ ಬಾಲಕನು ಬೈಕ್ ಅನ್ನು ಚಾಲನೆ ಮಾಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಪೊಲೀಸರು ರೂ.30,000 ದಂಡ ವಿಧಿಸಿದ್ದಾರೆ.

ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಈ ಬೈಕ್ ಕಾಕೋರಿಯಲ್ಲಿರುವ ಹಾಲು ವ್ಯಾಪಾರಿಯ ಹೆಸರಿನಲ್ಲಿ ರಿಜಿಸ್ಟರ್ ಆಗಿದೆ. ಕಾಕೋರಿಯ ನಿವಾಸಿ ರಿಷಭ್ ಸಿಂಗ್ ಎಂಬುವವರು ಬಾಲಕನು ಬೈಕ್ ಚಾಲನೆ ಮಾಡುತ್ತಿರುವ ಈ ವೀಡಿಯೊವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಸೇರಿದಂತೆ ಹಲವು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಟ್ಯಾಗ್ ಮಾಡಿದ್ದರು.

ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಈ ವೀಡಿಯೊವನ್ನು ಅಲ್ಲಿನ ಡಿಜಿಪಿ ಒ ಪಿ ಸಿಂಗ್‍‍ರವರು ಗಮನಿಸಿದ ನಂತರ ಪೊಲೀಸರು ಸಕ್ರಿಯರಾಗಿದ್ದಾರೆ. ಇದಾದ ನಂತರ ಪೊಲೀಸರು ಬೈಕಿನ ಮಾಲೀಕನಿಗಾಗಿ ಶೋಧ ನಡೆಸಿದ್ದಾರೆ. ಸಂಚಾರ ವಿಭಾಗದ ಎಸ್‍‍ಪಿರವರು ಈ ಬೈಕ್ ಅನ್ನು ಪತ್ತೆ ಹಚ್ಚಿದ್ದಾರೆ.

ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಸಂಚಾರಿ ವಿಭಾಗದ ಎಸ್‍‍ಪಿ ಪೂರ್ಣೆಂದು ಸಿಂಗ್‍‍ರವರ ಪ್ರಕಾರ, ಈ ವೀಡಿಯೊವನ್ನು ಮಂಗಳವಾರ ಸಂಜೆ ಟ್ವೀಟ್ ಮಾಡಲಾಗಿದೆ. ಬೈಕ್ ನಂಬರಿನ ಆಧಾರದ ಮೇಲೆ ಹೊಸ ಕಾಯ್ದೆಯನ್ವಯ ದಂಡವನ್ನು ವಿಧಿಸಲಾಗುವುದು.

MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಹೊಸ ಕಾಯ್ದೆಯನ್ವಯ ಅಪ್ರಾಪ್ತ ವಯಸ್ಕರು ಬೈಕುಗಳನ್ನು ಚಲಾಯಿಸಿದರೆ ಅಂತಹ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಲಾಗುವುದು. ಅದರಂತೆ ರೂ.30,000 ದಂಡ ವಿಧಿಸಿ, ಜೈಲು ಶಿಕ್ಷೆ ವಿಧಿಸಲಾಗುವುದು.

MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಬಾಲಕನು ಬೈಕ್ ಅನ್ನು ಚಲಾಯಿಸಿದ ಕಾರಣಕ್ಕೆ ಈ ಪ್ರಕರಣವನ್ನು ಬಾಲ ನ್ಯಾಯ ಮಂಡಳಿಗೆ ಕಳುಹಿಸಲಾಗುವುದು. ಈ ಹಿಂದೆ ಹೋಟೆಲ್‍ನಲ್ಲಿದ್ದ ಕಾರ್ ಅನ್ನು ಅಪ್ರಾಪ್ತ ವಯಸ್ಕನು ಚಲಾಯಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ರೂ.18,000 ದಂಡ ವಿಧಿಸಲಾಗಿತ್ತು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಆ ಕಾರು ನಟರೊಬ್ಬರಿಗೆ ಸೇರಿತ್ತು. ನಂತರ ಆ ಕಾರಿಗಾಗಿ ಶೋಧ ನಡೆಸಲಾಗಿತ್ತು. ಈ ಹಿಂದೆ ಹೈದರಾಬಾದ್‍‍ನಲ್ಲಿ ಬೈಕುಗಳನ್ನು ಅಪ್ರಾಪ್ತ ವಯಸ್ಕರು ಚಲಾಯಿಸಿದ್ದ ಕಾರಣಕ್ಕೆ ಅವರ ಪೋಷಕರಿಗೆ ಶಿಕ್ಷೆ ವಿಧಿಸಲಾಗಿತ್ತು.

Most Read Articles

Kannada
English summary
Eight-year-old child was riding a bike, video went viral father fined - Read in Kannada
Story first published: Thursday, September 26, 2019, 17:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X