ಟೊಯೊಟಾ ಫಾರ್ಚುನರ್ ಜಿಆರ್-ಎಸ್‌ ಗಿಂತ ಕಡಿಮೆ ಬೆಲೆಯ ಐಷಾರಾಮಿ ಕಾರುಗಳಿವು..

ಟೊಯೊಟಾ ಫಾರ್ಚುನರ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ. 2008 ರಲ್ಲಿ ಭಾರತದಲ್ಲಿ ಪ್ರಾರಂಭವಾದಾಗಿನಿಂದ, ಟೊಯೋಟಾ ಫಾರ್ಚುನರ್ ಬೆಲೆಗಳು ಹಲವು ಪಟ್ಟು ಹೆಚ್ಚಾಗಿದೆ, ಇತ್ತೀಚೆಗೆ ಬಿಡುಗಡೆಯಾದ ಟಾಪ್-ಸ್ಪೆಕ್ ಫಾರ್ಚುನರ್ ಜಿಆರ್-ಎಸ್‌ ಬೆಲೆಯು ರೂ.48.43 ಲಕ್ಷವಾಗಿದೆ.

ಟೊಯೊಟಾ ಫಾರ್ಚುನರ್ ಜಿಆರ್-ಎಸ್‌ ಗಿಂತ ಕಡಿಮೆ ಬೆಲೆಯ ಐಷಾರಾಮಿ ಕಾರುಗಳಿವು..

ಟೊಯೊಟಾ ಫಾರ್ಚುನರ್ ಉತ್ತಮ ಆಫ್-ರೋಡ್ ಸಾಮರ್ಥ್ಯದ ಎಸ್‍ಯುವಿಯಾಗಿದೆ. ಅಲ್ಲದೇ ಈ ಎಸ್‍ಯುವಿಯು ಅಗ್ರೇಸಿವ್ ಲುಕ್ ನೊಂದಿಗೆ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಆದರೆ ಫಾರ್ಚುನರ್ ಎಸ್‍ಯುವಿಯ ಬೆಲೆಯು ತುಸು ದುಬಾರಿಯಾಗಿದೆ. ಟೊಯೊಟಾದ ಟಾಪ್-ಸ್ಪೆಕ್ ಫಾರ್ಚುನರ್ ಜಿಆರ್-ಎಸ್‌ ವೆರಿಯೆಂಟ್‌ಗಿಂತ ಕಡಿಮೆ ಬೆಲೆಯಲ್ಲಿ ಹಲವಾರು ಐಷಾರಾಮಿ ಕಾರುಗಳು ಮಾರಾಟವಾಗುತ್ತಿದೆ. ಈ ಎಲ್ಲಾ ಐಷಾರಾಮಿ ಕಾರುಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಟೊಯೊಟಾ ಫಾರ್ಚುನರ್ ಜಿಆರ್-ಎಸ್‌ ಗಿಂತ ಕಡಿಮೆ ಬೆಲೆಯ ಐಷಾರಾಮಿ ಕಾರುಗಳಿವು..

ಬಿಎಂಡಬ್ಲ್ಯು ಎಕ್ಸ್1

ಈ ಬಿಎಂಡಬ್ಲ್ಯು ಎಕ್ಸ್1 ಫಾರ್ಚುನರ್ ಟಾಪ್ ಸ್ಪೆಕ್ ಮಾದರಿಗಿಂತ ಕಡಿಮೆ ಬೆಲೆಯನ್ನು ಹೊಂದಿದೆ. ಫಾರ್ಚುನರ್ ಜಿಆರ್-ಎಸ್‌ ಹೆಚ್ಚು ದುಬಾರಿಯಾಗುವುದರೊಂದಿಗೆ ಕೆಲವು ಗ್ರಾಹಕರು ಈ ಬಿಎಂಡಬ್ಲ್ಯು ಕಾರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಈ ಮಾದರಿಯು ಫಾರ್ಚುನರ್ ಮಾದರಿಯ ರೀತಿಯಲ್ಲಿ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿಲ್ಲ.

ಟೊಯೊಟಾ ಫಾರ್ಚುನರ್ ಜಿಆರ್-ಎಸ್‌ ಗಿಂತ ಕಡಿಮೆ ಬೆಲೆಯ ಐಷಾರಾಮಿ ಕಾರುಗಳಿವು..

ಆದರೆ ಅದನ್ನು ಹೊರತುಪಡಿಸಿ, ಇದು ಹಿಂದಿನದಕ್ಕಿಂತ ಹೆಚ್ಚು ಸ್ಕೋರ್ ಮಾಡುತ್ತದೆ. ಈ ಬಿಎಂಡಬ್ಲ್ಯು ಎಕ್ಸ್1 ಕಾರಿನ ಬೆಲೆಯು ರೂ,41.50 ಲಕ್ಷವಾಗಿದೆ. ಈ ಕಾರಿನಲ್ಲಿ 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ನೀಡಲಾಗುತ್ತದೆ.

ಟೊಯೊಟಾ ಫಾರ್ಚುನರ್ ಜಿಆರ್-ಎಸ್‌ ಗಿಂತ ಕಡಿಮೆ ಬೆಲೆಯ ಐಷಾರಾಮಿ ಕಾರುಗಳಿವು..

ಆಡಿ ಕ್ಯೂ2

ಟೊಯೊಟಾ ಫಾರ್ಚುನರ್ ಜಿಆರ್-ಎಸ್‌ನ ಅರ್ಧದಷ್ಟು ಗಾತ್ರದ್ದಾಗಿರಬಹುದು, ಆದರೆ ಒಳಭಾಗದಲ್ಲಿ ಐಷಾರಾಮಿ ಅನುಭವವನ್ನು ನೀಡುತ್ತದೆ. ಈ ಆಡಿ ಕ್ಯೂ2 ಎಸ್‍ಯುವಿಯ ಬೆಲೆಯು ರೂ.34.99 ಲಕ್ಷವಾಗಿದೆ. ಆಡಿ ಕ್ಯೂ2 ಸರ್ವೋತ್ಕೃಷ್ಟವಾದ ಜರ್ಮನ್ ಕಾಂಪ್ಯಾಕ್ಟ್ ಎಸ್‍ಯುವಿ ಆಗಿದ್ದು, ಗಟ್ಟಿಮುಟ್ಟಾದ ನಿರ್ಮಾಣ ಗುಣಮಟ್ಟ, ಉತ್ತಮ ಡ್ರೈವಿಂಗ್ ಡೈನಾಮಿಕ್ಸ್ ಅನ್ನು ಒಳಗೊಂದಿದೆ. ಈ ಎಸ್‍ಯುವಿಯಲ್ಲಿ 2.0-ಲೀಟರ್ TFSI ಪೆಟ್ರೋಲ್ ಎಂಜಿನ್ ಹೊಂದಿದೆ.

ಟೊಯೊಟಾ ಫಾರ್ಚುನರ್ ಜಿಆರ್-ಎಸ್‌ ಗಿಂತ ಕಡಿಮೆ ಬೆಲೆಯ ಐಷಾರಾಮಿ ಕಾರುಗಳಿವು..

ಆಡಿ ಎ4

ಈ ಆಡಿ ಎ4 ಸರಿಯಾದ ಜರ್ಮನ್ ಮಧ್ಯಮ ಗಾತ್ರದ ಸೆಡಾನ್ ಆಗಿದ್ದು, ದುಬಾರಿ ಜರ್ಮನ್ ಕಾರಿನಿಂದ ಒಬ್ಬರು ನಿರೀಕ್ಷಿಸುವ ಎಲ್ಲಾ ಫೀಚರ್ಸ್ ಗಳನ್ನು ಹೊಂದಿವೆ. ಈ ಕಾರಿನ ಬೆಲೆಯು ರೂ.40 ಲಕ್ಷವಾಗಿದೆ. ಅದರ ನೇರ ಪ್ರತಿಸ್ಪರ್ಧಿಗಳಲ್ಲಿ ಅತ್ಯಂತ ಕೈಗೆಟುಕುವ ಐಷಾರಾಮಿ ಮಧ್ಯಮ ಗಾತ್ರದ ಸೆಡಾನ್ ಆಗಿದೆ.

ಟೊಯೊಟಾ ಫಾರ್ಚುನರ್ ಜಿಆರ್-ಎಸ್‌ ಗಿಂತ ಕಡಿಮೆ ಬೆಲೆಯ ಐಷಾರಾಮಿ ಕಾರುಗಳಿವು..

ಆಡಿ ಕಂಪನಿಯು ಎ4 ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಅತ್ಯುತ್ತಮ ಪರ್ಫಾಮೆನ್ಸ್ ಪ್ರೇರಿತ ಎಂಜಿನ್ ಆಯ್ಕೆ ನೀಡಿದ್ದು, ಕಾರಿನ ಮುಂಭಾಗದ ಹೆಕ್ಸಾಗೊನಲ್ ಗ್ರಿಲ್ ಮತ್ತು ಹೊಸ ವಿನ್ಯಾಸದ ಎಲ್ಇಡಿ ಹೆಡ್‌ಲ್ಯಾಂಪ್ ಪಡೆದುಕೊಂಡಿದೆ. ಕಾರಿನ ಒಳಭಾಗದ ತಾಂತ್ರಿಕ ಅಂಶಗಳು ಸಹ ಮತ್ತಷ್ಟು ಪ್ರೀಮಿಯಂ ಮಾದರಿಗಳಾಗಿದ್ದು, ಸಾಫ್ಟ್ ಟಚ್ ಮಟಿರಿಯಲ್‌ಗಳು ಕಾರಿನ ಕ್ಯಾಬಿನ್ ಐಷಾರಾಮಿಗೆ ಮತ್ತಷ್ಟು ಪೂಕವಾಗಿವೆ ಎನ್ನಬಹುದು.

ಟೊಯೊಟಾ ಫಾರ್ಚುನರ್ ಜಿಆರ್-ಎಸ್‌ ಗಿಂತ ಕಡಿಮೆ ಬೆಲೆಯ ಐಷಾರಾಮಿ ಕಾರುಗಳಿವು..

ಜಾಗ್ವಾರ್ ಎಕ್ಸ್‌ಇ

ಟೊಯೊಟಾ ಫಾರ್ಚುನರ್ ಜಿಆರ್-ಎಸ್‌ ಗಿಂತ ಡಿಮೆ ಬೆಲೆಗೆ ಸ್ಪೋರ್ಟಿ ಪಾತ್ರದೊಂದಿಗೆ ಮಧ್ಯಮ ಗಾತ್ರದ ಐಷಾರಾಮಿ ಸೆಡಾನ್ ಬಯಸಿದರೆ, ಜಾಗ್ವಾ ಎಕ್ಸ್‌ಇ ಉತಮ ಆಯ್ಕೆಯಾಗಿದೆ. ನಯವಾದ ಸ್ಟೈಲಿಂಗ್ ಮತ್ತು ಥ್ರಿಲ್ಲಿಂಗ್ ಡ್ರೈವಿಂಗ್ ಡೈನಾಮಿಕ್ಸ್ ಜಾಗ್ವಾರ್ ಎಕ್ಸ್‌ಇಗೆ ಅಥ್ಲೆಟಿಕ್ ಆಕರ್ಷಣೆಯನ್ನು ನೀಡುತ್ತದೆ, ಈ ಜಾಗ್ವಾರ್ ಎಕ್ಸ್‌ಇ ಕಾರಿನ ಬೆಲೆಯು ರೂ.46.64 ಲಕ್ಷವಾಗಿದೆ.

ಟೊಯೊಟಾ ಫಾರ್ಚುನರ್ ಜಿಆರ್-ಎಸ್‌ ಗಿಂತ ಕಡಿಮೆ ಬೆಲೆಯ ಐಷಾರಾಮಿ ಕಾರುಗಳಿವು..

ಈ ಕಾರಿನ ಮುಂಭಾಗದಲ್ಲಿ ನವೀಕರಿಸಿದ ಗ್ರಿಲ್ ಮತ್ತು ಹೊಸ ಹೆಡ್‍‍ಲ್ಯಾಂಪ್ ಅನ್ನು ಹೊಂದಿದೆ. ಸಿಲ್ಕ್ ಹೆಡ್‍‍ಲ್ಯಾಂಪ್ 12 ಎಂಎಂ ಸ್ಲಿಮ್ಮರ್ ಆಗಿದ್ದು, ಜೆ-ಬ್ಲೇಡ್ ಎಲ್‍ಇಡಿ ಡೇಟೈಮ್ ರನ್ನಿಂಗ್ ಲೈ‍ಟ್‍ಗಳನ್ನು ಸಹ ಒಳಗೊಂಡಿದೆ. ವಾಹನದ ಬಂಪರ್‍‍ನಲ್ಲಿ ದೊಡ್ಡ ಏರ್‍‍ಡ್ಯಾಮ್‍‍ಗಳನ್ನು ಅಳವಡಿಸಲಾಗಿದೆ. ಏರ್‍ ಡ್ಯಾಮ್‍, ಬಂಪರ್‍ ಮತ್ತು ಅಂಡರ್‍‍ಬಾಡಿ ಡಿಫ್ಯೂಸರ್ ಅನ್ನು ಹೊಂದಿದೆ. ಈ ಕಾರು ಅಲಾಯ್ ವ್ಹೀಲ್‍‍ಗಳನ್ನು ಹೊಂದಿದೆ. ಹಿಂಭಾಗದಲ್ಲಿ ಟೇಲ್‍ಲೈಟ್‍ಗಳನ್ನು ಅಳವಡಿಸಲಾಗಿದೆ.

ಟೊಯೊಟಾ ಫಾರ್ಚುನರ್ ಜಿಆರ್-ಎಸ್‌ ಗಿಂತ ಕಡಿಮೆ ಬೆಲೆಯ ಐಷಾರಾಮಿ ಕಾರುಗಳಿವು..

ಬಿಎಂಡಬ್ಲ್ಯು 2 ಸೀರಿಸ್ ಗ್ರ್ಯಾನ್ ಕೂಪೆ

ದೃಷ್ಟಿಗೋಚರವಾಗಿ ಹೆಚ್ಚು ಬೆರಗುಗೊಳಿಸುತ್ತದೆ-ಕಾಣುವ ಪ್ಯಾಕೇಜ್ ಅನ್ನು ಹೊಂದಿದೆ. ಸಿರೀಸ್ ಗ್ರ್ಯಾನ್ ಕೂಪ್ ಉತ್ತಮ ಚಾಲಕರ ಕಾರನ್ನು ಆಯ್ಕೆ ಮಾಡಲು ಎರಡು ಪ್ರಬಲವಾದ ಎಂಜಿನ್ ಆಯ್ಕೆಗಳನ್ನು ಹೊಂದಿದೆ - 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಮತ್ತು 2.0-ಲೀಟರ್ ಡೀಸೆಲ್ ಆಗಿದೆ. ಈ ಕಾರಿನ ಬೆಲೆಯು ರೂ.41.50 ಲಕ್ಷವಾಗಿದೆ.

ಟೊಯೊಟಾ ಫಾರ್ಚುನರ್ ಜಿಆರ್-ಎಸ್‌ ಗಿಂತ ಕಡಿಮೆ ಬೆಲೆಯ ಐಷಾರಾಮಿ ಕಾರುಗಳಿವು..

ಈ ಬಿಎಂಡಬ್ಲ್ಯು 2-ಸೀರಿಸ್ ಗ್ರ್ಯಾನ್ ಕೂಪೆ ಕಾರು ಯುಕೆಎಲ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಈ ಪ್ಲಾಟ್‌ಫಾರ್ಮ್ ವಿಶಾಲವಾದ ಕ್ಯಾಬಿನ್ ಅನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ ಮತ್ತು ಇದು ಉತ್ಪಾದನಾ ವೆಚ್ಚವನ್ನೂ ಕಡಿಮೆ ಮಾಡುತ್ತದೆ. ಬಿಎಂಡಬ್ಲ್ಯು 2-ಸೀರಿಸ್ ಗ್ರ್ಯಾನ್ ಕೂಪೆ ಕಾರು 4,526 ಎಂಎಂ ಉದ್ದ, 1,800 ಎಂಎಂ ಅಗಲ ಮತ್ತು 1,420 ಎಂಎಂ ಎತ್ತರವನ್ನು ಹೊಂದಿದೆ. ಇನ್ನು ಈ ಐಷಾರಾಮಿ ಕೂಪೆ 2,670 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. ಬಿಎಂಡಬ್ಲ್ಯು 2-ಸೀರಿಸ್ ಗ್ರ್ಯಾನ್ ಕೂಪೆ ಕಾರು ತನ್ನ ಪ್ರತಿಸ್ಪರ್ಧಿ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಕಾರಿಗಿಂತ 59 ಎಂಎಂ ಉದ್ದದ ವ್ಹೀಲ್ ಬೇಸ್ ಹೆಚ್ಚಿದೆ.

ಟೊಯೊಟಾ ಫಾರ್ಚುನರ್ ಜಿಆರ್-ಎಸ್‌ ಗಿಂತ ಕಡಿಮೆ ಬೆಲೆಯ ಐಷಾರಾಮಿ ಕಾರುಗಳಿವು..

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭಾರತೀಯ ಮಾರುಕಟ್ಟೆಯ ಫುಲ್ ಸೈಜ್ ಎಸ್‍ಯುವಿ ವಿಭಾಗದಲ್ಲಿ ಟೊಯೊಟಾ ಫಾರ್ಚುನರ್ ದುಬಾರಿ ಬೆಲೆಯನ್ನು ಹೊಂದಿದ್ದರು ಪ್ರಾಬಲ್ಯವನ್ನು ಸಾಧಿಸುತ್ತಿದೆ. ಇನ್ನು ಟೊಯೊಟಾ ಫಾರ್ಚುನರ್ ಟಾಪ್-ಸ್ಪೆಕ್ ಜಿಆರ್-ಎಸ್‌ ಗಿಂತ ಕಡಿಮೆ ಬೆಲೆಯಲ್ಲಿ ಹಲವಾರು ಐಷಾರಾಮಿ ಕಾರುಗಳು ಲಭ್ಯವಿದೆ. ಆದರೆ ಫಾರ್ಚುನರ್ ಅತ್ಯುತ್ತಮ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿರುವ ಎಸ್‍ಯುವಿಯಾಗಿದೆ.

Most Read Articles

Kannada
English summary
Luxury cars that are cheaper than toyota fortuner gr s details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X