ವಿದೇಶಿ ಸೇನೆಗಳಿಗೂ ಅಚ್ಚು ಮೆಚ್ಚು ಮೇಡ್ ಇನ್ ಇಂಡಿಯಾ ಕಾರುಗಳು

ಭಾರತದ ಆಟೋಮೊಬೈಲ್ ಕಂಪನಿಗಳು ವಿವಿಧ ಎಸ್‌ಯುವಿಗಳನ್ನು ಅಭಿವೃದ್ಧಿಪಡಿಸಿ ಮಾರಾಟ ಮಾಡುತ್ತಿವೆ. ಈ ಎಸ್‌ಯುವಿಗಳನ್ನು ಭಾರತೀಯ ಸೇನೆ ಹಾಗೂ ಪ್ಯಾರಾ ಮಿಲಿಟರಿ ಪಡೆಗಳು ಸಹ ಬಳಸುತ್ತವೆ.

ವಿದೇಶಿ ಸೇನೆಗಳಿಗೂ ಅಚ್ಚು ಮೆಚ್ಚು ಮೇಡ್ ಇನ್ ಇಂಡಿಯಾ ಕಾರುಗಳು

ಮೇಡ್ ಇನ್ ಇಂಡಿಯಾ ಎಸ್‌ಯುವಿಗಳನ್ನು ಭಾರತದ ಸೇನೆ ಮಾತ್ರವಲ್ಲದೇ ವಿದೇಶಿ ಮಿಲಿಟರಿ ಹಾಗೂ ಪೊಲೀಸ್ ಪಡೆಗಳು ಸಹ ಬಳಸುತ್ತವೆ. ಈ ಲೇಖನದಲ್ಲಿ ಮೇಡ್ ಇನ್ ಇಂಡಿಯಾ ಎಸ್‌ಯುವಿಗಳನ್ನು ಬಳಸುವ ವಿದೇಶಿ ಸೇನೆ ಹಾಗೂ ಪೊಲೀಸ್ ಪಡೆಗಳು ಯಾವುವು ಎಂಬುದನ್ನು ನೋಡೋಣ.

ವಿದೇಶಿ ಸೇನೆಗಳಿಗೂ ಅಚ್ಚು ಮೆಚ್ಚು ಮೇಡ್ ಇನ್ ಇಂಡಿಯಾ ಕಾರುಗಳು

ಟಾಟಾ ಹೆಕ್ಸಾ - ಬಾಂಗ್ಲಾದೇಶ

ಬಾಂಗ್ಲಾದೇಶ ಸೇನೆಯು ಟಾಟಾ ಮೋಟಾರ್ಸ್ ಕಂಪನಿಯ ಜೊತೆಗೆ ಹೆಕ್ಸಾ ಎಸ್‌ಯುವಿಗಳನ್ನು ಅಧಿಕೃತ ವಾಹನವಾಗಿ ಬಳಸುವ ಒಪ್ಪಂದವನ್ನು ಮಾಡಿಕೊಂಡಿದೆ. ಈ ಮೇಡ್ ಇನ್ ಇಂಡಿಯಾ ಎಸ್‌ಯುವಿಯು ಬಾಂಗ್ಲಾದೇಶ ಸೇನೆಯ ಅಧಿಕೃತ ವಾಹನವಾಗಿದೆ. ಬಾಂಗ್ಲಾದೇಶ ಸೇನೆಯಿಂದ ಅನುಮೋದನೆ ಪಡೆಯುವ ಮೊದಲು, ಟಾಟಾ ಮೋಟಾರ್ಸ್ ಹೆಕ್ಸಾ ಎಸ್‌ಯುವಿಯ ಹಲವಾರು ಪರೀಕ್ಷೆಗಳನ್ನು ನಡೆಸಿತ್ತು.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ವಿದೇಶಿ ಸೇನೆಗಳಿಗೂ ಅಚ್ಚು ಮೆಚ್ಚು ಮೇಡ್ ಇನ್ ಇಂಡಿಯಾ ಕಾರುಗಳು

ಮಹೀಂದ್ರಾ ಎಕ್ಸ್‌ಯುವಿ 500 - ದಕ್ಷಿಣ ಆಫ್ರಿಕಾ

ಭಾರತದಲ್ಲಿರುವ ಜನಪ್ರಿಯ ಎಸ್‌ಯುವಿಗಳಲ್ಲಿ ಮಹೀಂದ್ರಾ ಕಂಪನಿಯ ಎಸ್‌ಯುವಿಗಳು ಸಹ ಸೇರಿವೆ. ಮಹೀಂದ್ರಾ ಎಕ್ಸ್‌ವಿ 500 ಎಸ್‌ಯುವಿ ದಕ್ಷಿಣ ಆಫ್ರಿಕಾದ ಪೊಲೀಸ್ ಪಡೆಯ ಅಧಿಕೃತ ವಾಹನವಾಗಿದೆ.

ವಿದೇಶಿ ಸೇನೆಗಳಿಗೂ ಅಚ್ಚು ಮೆಚ್ಚು ಮೇಡ್ ಇನ್ ಇಂಡಿಯಾ ಕಾರುಗಳು

ದಕ್ಷಿಣ ಆಫ್ರಿಕಾದ ಪೊಲೀಸ್ ಪಡೆಯಲ್ಲಿ ಮಹೀಂದ್ರಾ ಎಕ್ಸ್‌ವಿ 500 ಡಬ್ಲ್ಯು 8 ಮಾದರಿಯನ್ನು ಬಳಸಲಾಗುತ್ತದೆ. ಈ ಎಸ್‌ಯುವಿ 4 ವ್ಹೀಲ್ ಡ್ರೈವ್ ಸಿಸ್ಟಂ ಹೊಂದಿದೆ. ದೇಶಿಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಎಕ್ಸ್‌ವಿ 500, ಜೀಪ್ ಕಂಪಾಸ್, ಟಾಟಾ ಹ್ಯಾರಿಯರ್ ಹಾಗೂ ಎಂಜಿ ಹೆಕ್ಟರ್ ಗಳಿಗೆ ಪೈಪೋಟಿ ನೀಡುತ್ತದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ವಿದೇಶಿ ಸೇನೆಗಳಿಗೂ ಅಚ್ಚು ಮೆಚ್ಚು ಮೇಡ್ ಇನ್ ಇಂಡಿಯಾ ಕಾರುಗಳು

ಟಾಟಾ ಸಫಾರಿ ಸ್ಟಾರ್ಮ್ - ಅಲ್ಜೀರಿಯಾ

ಟಾಟಾ ಸಫಾರಿ ಸ್ಟಾರ್ಮ್ ಅಲ್ಜೀರಿಯಾ ಪೊಲೀಸ್ ಪಡೆಯ ಪ್ರಮುಖ ಕಾರುಗಳಲ್ಲಿ ಒಂದಾಗಿದೆ. ಆರಾಮದಾಯಕವಾದ ಕ್ಯಾಬಿನ್ ಹೊಂದಿರುವ ಟಾಟಾ ಸಫಾರಿ ಸ್ಟಾರ್ಮ್ ಅತ್ಯುತ್ತಮವಾದ ಪರ್ಫಾಮೆನ್ಸ್ ಹೊಂದಿದೆ.

ವಿದೇಶಿ ಸೇನೆಗಳಿಗೂ ಅಚ್ಚು ಮೆಚ್ಚು ಮೇಡ್ ಇನ್ ಇಂಡಿಯಾ ಕಾರುಗಳು

ಈ ಎಸ್‌ಯುವಿ ಆಫ್-ರೋಡ್ ಗೆ ಸೂಕ್ತ ಮಾದರಿಯಾಗಿದೆ. ಕೈಗೆಟುಕುವ ಬೆಲೆಯನ್ನು ಹೊಂದಿರುವ ಕಾರಣಕ್ಕೆ ಅಲ್ಜೀರಿಯಾ ಪೊಲೀಸ್ ಪಡೆ ಟಾಟಾ ಸಫಾರಿ ಸ್ಟಾರ್ಮ್ ಎಸ್‌ಯುವಿಯನ್ನು ಆಯ್ಕೆ ಮಾಡಿಕೊಂಡಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ವಿದೇಶಿ ಸೇನೆಗಳಿಗೂ ಅಚ್ಚು ಮೆಚ್ಚು ಮೇಡ್ ಇನ್ ಇಂಡಿಯಾ ಕಾರುಗಳು

ಮಹೀಂದ್ರಾ ಸ್ಕಾರ್ಪಿಯೋ - ಮಾಲ್ಡೀವ್ಸ್

ಮಾಲ್ಡೀವ್ಸ್ ಪೊಲೀಸ್ ಪಡೆಯಲ್ಲಿ 4 ವ್ಹೀಲ್ ಡ್ರೈವ್ ಸಿಸ್ಟಂ ಹೊಂದಿರುವ ಮಹೀಂದ್ರಾ ಸ್ಕಾರ್ಪಿಯೋವನ್ನು ಬಳಸಲಾಗುತ್ತದೆ. ಮಾಲ್ಡೀವ್ಸ್ ಮಾತ್ರವಲ್ಲದೇ ಫಿಲಿಪೈನ್ಸ್ ಭದ್ರತಾ ಪಡೆಗಳೂ ಸ್ಕಾರ್ಪಿಯೋ ಎಸ್‌ಯುವಿಗಳನ್ನು ಬಳಸುತ್ತವೆ. 2016ರಲ್ಲಿ ಫಿಲಿಪೈನ್ಸ್ ಸೆಕ್ಯುರಿಟಿ ಫೋರ್ಸ್, 4-ವ್ಹೀಲ್ ಡ್ರೈವ್ ಸಿಸ್ಟಂ ಹೊಂದಿರುವ 398 ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುವಿಗಳನ್ನು ಖರೀದಿಸಿತ್ತು.

ವಿದೇಶಿ ಸೇನೆಗಳಿಗೂ ಅಚ್ಚು ಮೆಚ್ಚು ಮೇಡ್ ಇನ್ ಇಂಡಿಯಾ ಕಾರುಗಳು

ಮಾಲ್ಡೀವ್ಸ್, ಫಿಲಿಪೈನ್ಸ್ ಜೊತೆಗೆ ಶ್ರೀಲಂಕಾ ಪೊಲೀಸರು ಸಹ ಮಹೀಂದ್ರಾ ಸ್ಕಾರ್ಪಿಯೋಗಳನ್ನು ಬಳಸುತ್ತಿದ್ದಾರೆ. ಪ್ರಬಲ ಎಂಜಿನ್, ಆರಾಮದಾಯಕ ಕ್ಯಾಬಿನ್ ಹಾಗೂ 4 ವ್ಹೀಲ್ ಡ್ರೈವ್ ಸಿಸ್ಟಂ ಸೇರಿದಂತೆ ಹಲವಾರು ಕಾರಣಗಳಿಗಾಗಿ ಸ್ಕಾರ್ಪಿಯೋ ಭಾರತದ ಹೊರಗೂ ಹೆಚ್ಚು ಜನಪ್ರಿಯವಾಗಿದೆ.

Most Read Articles

Kannada
English summary
Made in India cars used by foreign military and police forces. Read in Kannada.
Story first published: Wednesday, September 23, 2020, 9:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X