Just In
- 1 hr ago
ಭಾರತದಲ್ಲಿ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆಗೆ ಸಿದ್ದವಾದ ಎಲೆಕ್ಟ್ರಾನ್ ಇವಿ
- 14 hrs ago
ಆಕರ್ಷಕ ವಿನ್ಯಾಸದ 2022ರ ಹ್ಯುಂಡೈ ಟ್ಯೂಸಾನ್ ಎಸ್ಯುವಿಯ ವಿಶೇಷತೆಗಳು
- 15 hrs ago
ಪಾಸ್ಫೋರ್ಟ್ ಪ್ರಯೋಜನಗಳೇನು? ಏಕೆ ವಿವಿಧ ಬಣ್ಣಗಳಲ್ಲಿ ಲಭ್ಯವಿರುತ್ತವೆ ನೋಡಿ..
- 16 hrs ago
ಬ್ರೇಕ್ ಫೇಲ್ ಆದಾಗ ಕೇವಲ 8 ಸೆಕೆಂಡುಗಳಲ್ಲಿ ಕಾರು ನಿಲ್ಲಿಸುವುದು ಹೇಗೆ? ಇಲ್ಲಿದೆ ಉಪಯುಕ್ತ ಸಲಹೆ
Don't Miss!
- News
Breaking: ಮಹಾರಾಷ್ಟ್ರದಲ್ಲಿ ಗೂಡ್ಸ್ ಮತ್ತು ಪ್ಯಾಸೆಂಜರ್ ರೈಲು ಡಿಕ್ಕಿ
- Travel
ವಿಶ್ವದ ಅತ್ಯಂತ ತೇವವಾದ ಸ್ಥಳಗಳು: ಭೂಮಿಯ ಮೇಲಿನ ಮಳೆಯ ಸ್ಥಳಗಳ ಪಟ್ಟಿ
- Education
UGC Scholarship : ಯುಜಿಸಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
- Movies
ಮಗಳಿಗೆ ದುಬಾರಿ ಗಿಫ್ಟ್ ಕೊಟ್ಟ ನಟ ದುನಿಯಾ ವಿಜಯ್!
- Lifestyle
ಶನಿದೋಷ ನಿವಾರಣೆ ಹಾಗೂ ಸಂಪತ್ತು ವೃದ್ಧಿಗೆ ಕೃಷ್ಣ ಜನ್ಮಾಷ್ಟಮಿಗೆ ಮಾಡಿ ಈ ವಿಶೇಷ ಪರಿಹಾರ
- Technology
ಧಮಾಕಾ ಕೊಡುಗೆ!..ಭರ್ಜರಿ ಡಿಸ್ಕೌಂಟ್ನಲ್ಲಿ ಹೊಸ ಸ್ಮಾರ್ಟ್ಟಿವಿ ನಿಮ್ಮದಾಗಿಸಿಕೊಳ್ಳಿ!
- Finance
ಆಗಸ್ಟ್ 17: ಭಾರತದ ಮೆಟ್ರೋ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು
- Sports
ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಖರೀದಿಸುತ್ತೇನೆ ಎಂದ ಎಲಾನ್ ಮಸ್ಕ್!
ಮೇಡ್ ಇನ್ ಇಂಡಿಯಾ ಯುದ್ಧ ವಾಹನಗಳ ಅಬ್ಬರ: ಮತ್ತಷ್ಟು ಬಲಿಷ್ಟಗೊಂಡ ಭಾರತೀಯ ಸೇನೆ!
ವಿಶ್ವದ ಅತಿ ಬಲಿಷ್ಟ ರಾಷ್ಟ್ರಗಳಲ್ಲಿ ಭಾರತವು ಒಂದಾಗಿದ್ದು, ಅಮೆರಿಕಾ, ರಷ್ಯಾ, ಚೀನಾ ನಂತರ ಅತಿ ಹೆಚ್ಚು ಸೇನಾ ಬಲವನ್ನು ಹೊಂದಿರುವ ದೇಶವಾಗಿ ಗುರ್ತಿಸಿಕೊಂಡಿದೆ. ಸಣ್ಣ ದೇಶಗಳಂತಲ್ಲದೇ ಯಾವುದೇ ದೇಶ ಭಾರತದೊಂದಿಗೆ ವೈರತ್ವ ಮಾಡಿಕೊಳ್ಳಲು ನಡುಕ ಹುಟ್ಟಿಸುವಷ್ಟು ಬಲಿಷ್ಟವಾಗಿ ಬೆಳೆದು ನಿಂತಿದೆ.

ಪ್ರಸ್ತುತ ದೇಶದಲ್ಲಿ ತಂತ್ರಜ್ಞಾನ, ಶಿಕ್ಷಣ, ಉದ್ಯಮಗಳು ಹೆಚ್ಚಾಗಿ ಬೆಳೆಯುತ್ತಿದ್ದು, ಇದು ಸೇನೆಗೆ ಪೂರಕವಾಗಿ ಮಾರ್ಪಟ್ಟಿವೆ. ಕೇಂದ್ರ ಸರ್ಕಾರ ಕೂಡ ಸೇನೆಗಾಗಿ ಹೆಚ್ಚು ಬಜೆಟ್ ಅನ್ನು ಮೀಸಲಿಡುತ್ತಿದ್ದು, ಎಲ್ಲಾ ತರಹದ ಹೊಸ ಆಯುಧಗಳನ್ನು ಸೈನಿಕರಿಗೆ ಪೂರೈಸುತ್ತಿದೆ. ಇದರಲ್ಲಿ ದೇಶೀಯ ಆಯುಧಗಳ ಜೊತೆಗೆ ಹೊರ ದೇಶಗಳ ಆಯುಧಗಳು ಸಹ ಇವೆ.

ಇದೀಗ ಸೇನೆಯನ್ನು ಮತ್ತಷ್ಟು ಬಲಿಷ್ಟಗೊಳಿಸಿಲು ದೇಶೀಯ ನಿರ್ಮಿತ ವಾಹನ, ಆಯುಧಗಳನ್ನು ನೀಡಲು ಮುಂದಾಗಿದೆ. ಮುಂದಿನ ವರ್ಷಗಳಲ್ಲಿ ಸಂಪೂರ್ಣ ಸ್ವದೇಶಿ ನಿರ್ಮಿತ ಆಯುಧಗಳನ್ನು ಸೈನಿಕರಿಗೆ ನೀಡಲು ಯೋಜಿಸಲಾಗಿದೆ. ಇದರ ಭಾಗವಾಗಿ ಇತ್ತೀಚೆಗೆ ಮೇಡ್ ಇನ್ ಇಂಡಿಯಾದ ಯುದ್ಧ ವಾಹನಗಳನ್ನು (ಟ್ಯಾಂಕರ್) ಭಾರತೀಯ ಸೇನೆಗೆ ಹಸ್ತಾಂತರಿಸಲಾಗಿದೆ.

ಲಡಾಖ್‌ನಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಲು ಭಾರತೀಯ ಸೇನೆಯು ಮೇಡ್-ಇನ್-ಇಂಡಿಯಾ ಪದಾತಿಸೈನ್ಯದ ಯುದ್ಧ ವಾಹನಗಳನ್ನು ಸೇರ್ಪಡೆಗೊಳಿಸಿದೆ. ಲಡಾಖ್ ಗಡಿಯಲ್ಲಿ ಸೇನೆಯ ಚಟುವಟಿಕೆಗಳನ್ನು ಹೆಚ್ಚಿಸಲು ಮತ್ತು ನೆರವು ವಿತರಣೆಯನ್ನು ವೇಗಗೊಳಿಸಲು ಈ ವಾಹನಗಳನ್ನು ಸೇರಿಸಲಾಗಿದೆ ಎಂದು ಹೇಳಲಾಗಿದೆ.

ಈ ಪದಾತಿಸೈನ್ಯದ ಯುದ್ಧ ವಾಹನಗಳನ್ನು ಲಡಾಖ್‌ನ ಕಣಿವೆಗಳಲ್ಲಿ ಓಡಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಲಡಾಖ್ ಪ್ರದೇಶಗಳಲ್ಲಿ ಸಾಮಾನ್ಯ ಮಿಲಿಟರಿ ವಾಹನದಿಂದ ಚಲಿಸಲು ಅಸಾಧ್ಯವಾಗಿದ್ದು, ಈ ಯುದ್ಧ ವಾಹನಗಳಿಂದ ಸುಲಭವಾಗಿ ಸೇನಾ ಪಡೆಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುರಕ್ಷಿತವಾಗಿ ಕೊಂಡೊಯ್ಯಬಹುದು.

ಅಷ್ಟೇ ಅಲ್ಲ, ಈ ಯುದ್ಧ ವಾಹನಗಳಲ್ಲಿ ಆಯುಧಗಳನ್ನೂ ಅಳವಡಿಸಲಾಗಿದ್ದು, ವಾಹನದೊಳಗೆ ಕುಳಿತು ನಿಯಂತ್ರಿಸಬಹುದಾಗಿದೆ. ಈ ಹೊಸ ವಾಹನಗಳನ್ನು ಸೇನೆಗೆ ಹಸ್ತಾಂತರಿಸುವಾಗ, ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ಹೊಸ ವಾಹನವನ್ನು ವೈಯಕ್ತಿಕವಾಗಿ ಓಡಿಸಿದರು. ಕಠಿಣ ಪ್ರದೇಶಗಳಲ್ಲಿ ಸುಲಭವಾಗಿ ಕುಶಲತೆಯಿಂದ ನಡೆಸಬಹುದು ಎಂದು ಹೇಳಿದರು.

ಈ ಮೇಡ್-ಇನ್-ಇಂಡಿಯಾದ ಯುದ್ಧ ವಾಹನಗಳು ಸಂಪೂರ್ಣ ಶಸ್ತ್ರಸಜ್ಜಿತವಾಗಿವೆ ಮತ್ತು ಯುದ್ಧದ ಸಮಯದಲ್ಲಿ ಒಳಗೆ ಕುಳಿತ ಸೈನಿಕರನ್ನು ಬುಲೆಟ್‌ಗಳು ಮತ್ತು ಬಾಂಬ್‌ಗಳಿಂದ ರಕ್ಷಿಸುವ ಸಾಮರ್ಥ್ಯವನ್ನು ಹೊಂದಿವೆ. ಈ ಯುದ್ಧ ವಾಹನಗಳನ್ನು ಬುಲೆಟ್ ಪ್ರೂಫ್ ಸ್ಟೀಲ್ ಶೀಟ್‌ಗಳಿಂದ ತಯಾರಿಸಲಾಗಿದೆ. ಈ ವಾಹನದಲ್ಲಿ ಬೈನಾಕ್ಯುಲರ್‌ಗಳನ್ನು ಅಳವಡಿಸಲಾಗಿದ್ದು, ಒಳಗಡೆ ಕುಳಿತಿರುವ ಯೋಧ 1,800 ಮೀಟರ್‌ವರೆಗೆ ನೋಡಬಹುದಾಗಿದೆ.

ಇನ್‌ಫ್ಯಾಂಟ್ರಿ ಪ್ರೊಟೆಕ್ಟೆಡ್ ಮೊಬಿಲಿಟಿ ವೆಹಿಕಲ್ಸ್ (IPMV) ಹೆಸರಿನ ಈ ವಾಹನಗಳನ್ನು ಈ ವರ್ಷದ ಏಪ್ರಿಲ್‌ನಲ್ಲಿ ಭಾರತೀಯ ಸೇನೆಗೆ ಹಸ್ತಾಂತರಿಸಲಾಯಿತು. ಲಡಾಖ್‌ನ ಪರ್ವತ ಪ್ರದೇಶಗಳಲ್ಲಿ ಸೇನೆಯು ಈ ವಾಹನಗಳನ್ನು ಬಳಸುತ್ತಿದೆ. ಈ ವಾಹನಗಳನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ಟಾಟಾ ಗ್ರೂಪ್ ಜಂಟಿಯಾಗಿ ಅಭಿವೃದ್ಧಿಪಡಿಸಿವೆ.

ಸೇನೆಗೆ ಭಾರತದಲ್ಲಿ ತಯಾರಿಸಿದ ವಾಹನಗಳನ್ನು ಪೂರೈಸುವ 50,000 ಕೋಟಿ ರೂಪಾಯಿಗಳ ಯೋಜನೆಯನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ. ಪ್ರಸ್ತುತ, ಯುದ್ಧ ವಾಹನಗಳಿಗೆ ಭಾರತೀಯ ಸೇನೆಯ ಅವಲಂಬನೆಯು ರಷ್ಯಾ ಮತ್ತು ಅಮೆರಿಕದಲ್ಲಿ ತಯಾರಾದ ವಾಹನಗಳ ಮೇಲೆ ಹೆಚ್ಚಾಗಿದೆ. ಆದರೆ, ಈಗ ಮೇಡ್-ಇನ್-ಇಂಡಿಯಾ ಅಭಿಯಾನದಡಿಯಲ್ಲಿ ದೇಶದ ಹಲವು ಕಂಪನಿಗಳು ಸೇನೆಯ ಅಗತ್ಯತೆಗಳನ್ನು ಪೂರೈಸಲು ಮುಂದೆ ಬರುತ್ತಿವೆ.

ಪ್ರಸ್ತುತ Tata, Mahindra, Bharat Forge, Kalyani ಮತ್ತು Larsen & Toubro ನಂತಹ ಕಂಪನಿಗಳು ಸೇನೆಗಾಗಿ ಹಗುರವಾದ ಮತ್ತು ಭಾರೀ ತೂಕದ ಯುದ್ಧ ವಾಹನಗಳನ್ನು ತಯಾರಿಸುತ್ತಿವೆ. ಮುಂದಿನ ವರ್ಷಗಳಲ್ಲಿ ಭಾರತೀಯ ವಾಹನ ತಯಾರಕಾ ಕಂಪನಿಗಿಂದಲೇ ಗುಣಮಟ್ಟದ ಯುದ್ಧ ವಾಹನಗಳು ತಯಾರಾಗಲಿದ್ದು, ವಿದೇಶಗಳಿಗು ರಫ್ತಾಗುವ ನಿರೀಕ್ಷೆಯಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಭಾರತವು ಇಂದು ಹಿಂದೆಂದಿಗಿಂತಲೂ ಬಲಿಷ್ಟ ದೇಶವಾಗಿ ಬೆಳೆದು ನಿಂತಿದೆ. ವಿಶ್ವ ರಾಷ್ಟ್ರಗಳು ನಮ್ಮ ಕಡೆ ತಿರುಗಿ ನೋಡುವಂತಹ ಸ್ಥಾನದಲ್ಲಿದೆ. ಎಲ್ಲಾ ರಂಗಗಳಲ್ಲೂ ಭಾರತವು ಗುರ್ತಿಸಿಕೊಂಡಿದ್ದು, ಸೇನಾ ಬಲದಲ್ಲೂ ತನ್ನ ಸಾಮರ್ಥ್ಯವನ್ನು ಸಾಭೀತು ಪಡಿಸಿಕೊಂಡಿದೆ. ಇದಕ್ಕೆ ಸ್ವದೇಶಿ ಉದ್ಯಮಗಳ ಸಹಕಾರ ಕೂಡ ಅನನ್ಯವಾಗಿದೆ. ತಂತ್ರಜ್ಞಾನ, ಆಯುಧ, ವಾಹನಗಳು ಸೇರಿದಂತೆ ಹಲವು ವಿಧಗಳಲ್ಲಿ ದೇಶೀಯ ಕಂಪನಿಗಳು ಸಹಕರಿಸುತ್ತಿವೆ. ಈ ಬೆಳವಣಿಗೆಯು ಮುಂದಿನ ದಿನಗಳಲ್ಲಿ ದೇಶವನ್ನು ಅಗ್ರ ಸ್ಥಾನಕ್ಕೆ ಕೊಂಡೊಯ್ಯುವ ನಿರೀಕ್ಷೆಯಿದೆ.