ಡಿ‍ಎಲ್ ಹಾಗೂ ಆರ್‌ಸಿ ಕಾರ್ಡ್‌ಗಳಲ್ಲಿ ಶೀಘ್ರದಲ್ಲೇ ಮಹತ್ವದ ಬದಲಾವಣೆ

2019ರ ಮಾರ್ಚ್ ತಿಂಗಳಿನಲ್ಲಿ ಕೇಂದ್ರದ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ಹೊಸ ಅಧಿಸೂಚನೆಯನ್ನು ಹೊರಡಿಸಿತ್ತು. ಈ ಅಧಿಸೂಚನೆಯಲ್ಲಿ ದೇಶದ ಎಲ್ಲಾ ರಾಜ್ಯಗಳು ಡ್ರೈವಿಂಗ್ ಲೈಸೆನ್ಸ್ ಹಾಗೂ ವಾಹನಗಳ ರಿಜಿಸ್ಟ್ರೇಶನ್ ಸರ್ಟಿಫಿಕೇಟ್ ಅನ್ನು ಒಂದೇ ಕಾರ್ಡಿನಲ್ಲಿ ನೀಡಲು ಕ್ರಮಕೈಗೊಳ್ಳುವಂತೆ ಸೂಚಿಸಲಾಗಿತ್ತು.

ಡಿ‍ಎಲ್ ಹಾಗೂ ಆರ್‍‍ಸಿ ಕಾರ್ಡ್‍‍ಗಳಲ್ಲಿ ಮಹತ್ವದ ಬದಲಾವಣೆ

ಈ ಅಧಿಸೂಚನೆಯಂತೆ ಮಧ್ಯ ಪ್ರದೇಶವು ಇಂಟಿಗ್ರೇಟೆಡ್ ವೆಹಿಕಲ್ ರಿಜಿಸ್ಟ್ರೇಷನ್ ಕಾರ್ಡ್ ಯೋಜನೆಯನ್ನು ಜಾರಿಗೆ ತಂದಿದೆ. ಮಧ್ಯ ಪ್ರದೇಶವು ಕೇಂದ್ರ ಸರ್ಕಾರದ ಅಧಿಸೂಚನೆಯಂತೆ ಈ ಯೋಜನೆಯನ್ನು ಜಾರಿಗೆ ತಂದ ಮೊದಲ ರಾಜ್ಯವಾಗಿದೆ.

ಡಿ‍ಎಲ್ ಹಾಗೂ ಆರ್‍‍ಸಿ ಕಾರ್ಡ್‍‍ಗಳಲ್ಲಿ ಮಹತ್ವದ ಬದಲಾವಣೆ

ಭಾರತದಲ್ಲಿರುವ ಪ್ರತಿಯೊಂದು ರಾಜ್ಯಗಳು ತಮ್ಮದೇ ಆದ ವೆಹಿಕಲ್ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಹಾಗೂ ಡ್ರೈವಿಂಗ್ ಲೈಸೆನ್ಸ್ ಗಳನ್ನು ವಿತರಿಸುತ್ತಿವೆ. ಇವುಗಳು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಿಭಿನ್ನವಾಗಿವೆ.

ಡಿ‍ಎಲ್ ಹಾಗೂ ಆರ್‍‍ಸಿ ಕಾರ್ಡ್‍‍ಗಳಲ್ಲಿ ಮಹತ್ವದ ಬದಲಾವಣೆ

ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳ ಕಾರ್ಡ್‍‍‍ಗಳನ್ನು ಒಂದೇ ರೀತಿಯಲ್ಲಿಡಲು ಮುಂದಾಗಿದೆ. ಇದಕ್ಕಾಗಿ ವಿಭಿನ್ನವಾದ ಕಾರ್ಡ್ ಅನ್ನು ದೇಶಾದ್ಯಂತ ಜಾರಿಗೊಳಿಸಲಿದೆ. ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಿದ ಒಂದು ವರ್ಷದ ನಂತರ ಮಧ್ಯ ಪ್ರದೇಶ ಸರ್ಕಾರವು ಈ ಯೋಜನೆಯನ್ನು ಜಾರಿಗೊಳಿಸಿದೆ.

ಡಿ‍ಎಲ್ ಹಾಗೂ ಆರ್‍‍ಸಿ ಕಾರ್ಡ್‍‍ಗಳಲ್ಲಿ ಮಹತ್ವದ ಬದಲಾವಣೆ

ಇದರ ಜೊತೆಗೆ ಮಧ್ಯ ಪ್ರದೇಶ ಸರ್ಕಾರವು ಇಂಟಿಗ್ರೇಟೆಡ್ ಡ್ರೈವಿಂಗ್ ಲೈಸೆನ್ಸ್ ಕಾರ್ಡ್ ಯೋಜನೆಯನ್ನು ಸಹ ಜಾರಿಗೆ ತರಲಿದೆ. ಈ ಯೋಜನೆಯು ಈಗಾಗಲೇ ಉತ್ತರ ಪ್ರದೇಶದಲ್ಲಿ ಜಾರಿಯಲ್ಲಿದೆ. ಈ ಯೋಜನೆಗೆ ಮಧ್ಯ ಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್‍‍ರವರು ನಿನ್ನೆ ಚಾಲನೆ ನೀಡಿದರು.

ಡಿ‍ಎಲ್ ಹಾಗೂ ಆರ್‍‍ಸಿ ಕಾರ್ಡ್‍‍ಗಳಲ್ಲಿ ಮಹತ್ವದ ಬದಲಾವಣೆ

ಆರು ಜನರಿಗೆ ಇಂಟಿಗ್ರೇಟೆಡ್ ವೆಹಿಕಲ್ ರಿಜಿಸ್ಟ್ರೇಷನ್ ಕಾರ್ಡ್ ಹಾಗೂ ಡ್ರೈವಿಂಗ್ ಲೈಸೆನ್ಸ್ ಗಳನ್ನು ವಿತರಿಸಲಾಯಿತು. ಈ ಬಗ್ಗೆ ಮಾತನಾಡಿದ ಮಧ್ಯ ಪ್ರದೇಶದ ಸಾರಿಗೆ ಆಯುಕ್ತರಾದ ಮಧು ಕುಮಾರ್‍‍ರವರು ಕೇಂದ್ರ ಸರ್ಕಾರದ ಅಧಿಸೂಚನೆಯಂತೆ ಈ ಯೋಜನೆಯನ್ನು ರಾಜ್ಯಾದ್ಯಂತ ಜಾರಿಗೊಳಿಸಲಾಗಿದೆ ಎಂದು ಹೇಳಿದರು.

ಡಿ‍ಎಲ್ ಹಾಗೂ ಆರ್‍‍ಸಿ ಕಾರ್ಡ್‍‍ಗಳಲ್ಲಿ ಮಹತ್ವದ ಬದಲಾವಣೆ

ಈ ಹೊಸ ಇಂಟಿಗ್ರೇಟೆಡ್ ಐಡಿ ಕಾರ್ಡ್ ಬೇರೆ ಕಾರ್ಡ್‍‍‍ಗಳ ರೀತಿಯಲ್ಲಿರದೇ ಹಲವಾರು ಮಾಹಿತಿಯನ್ನು ಹೊಂದಿರಲಿದೆ. ಈ ಕಾರ್ಡ್‍ಗಳಲ್ಲಿ ವಾಹನದ ಬಗೆಗಿನ ಮಾಹಿತಿ ಹಾಗೂ ಅದರ ಮಾಲೀಕರ ಮಾಹಿತಿಯನ್ನು ಪ್ರಿಂಟ್ ಮಾಡಲಾಗಿರುತ್ತದೆ.

ಡಿ‍ಎಲ್ ಹಾಗೂ ಆರ್‍‍ಸಿ ಕಾರ್ಡ್‍‍ಗಳಲ್ಲಿ ಮಹತ್ವದ ಬದಲಾವಣೆ

ಡ್ರೈವರ್ ಲೈಸೆನ್ಸ್ ಕಾರ್ಡ್‍‍ನಲ್ಲಿಯೂ ಇದೇ ರೀತಿಯ ಮಾಹಿತಿ ಇರಲಿದೆ. ಈ ಕಾರ್ಡಿನಲ್ಲಿ ಕ್ಯೂ‍ಆರ್ ಸ್ಕ್ಯಾನ್ ಅಳವಡಿಸಲಾಗುವುದು. ಇದರಿಂದಾಗಿ ಈ ಕಾರ್ಡ್ ಅನ್ನು ಸ್ಕ್ಯಾನ್ ಮಾಡಿದ ನಂತರ ಎಲ್ಲಾ ವಿಷಯಗಳ ಮಾಹಿತಿಯು ದೊರೆಯಲಿದೆ.

ಡಿ‍ಎಲ್ ಹಾಗೂ ಆರ್‍‍ಸಿ ಕಾರ್ಡ್‍‍ಗಳಲ್ಲಿ ಮಹತ್ವದ ಬದಲಾವಣೆ

ಇವುಗಳಲ್ಲಿ ಚಾಲಕನ ಹೆಸರು, ವಿಳಾಸ, ಬ್ಲಡ್ ಗ್ರೂಪ್, ಜನ್ಮ ದಿನಾಂಕ, ಫೋಟೊ ಹಾಗೂ ವ್ಯಾಲಿಡಿಟಿ ಅವಧಿಯ ಮಾಹಿತಿಗಳಿರಲಿವೆ. ಈ ಕಾರ್ಡ್‍‍‍ಗಳನ್ನು ವಿತರಿಸಲು ಸಾಫ್ಟ್ ವೇರ್ ಅಭಿವೃದ್ಧಿಪಡಿಸಲಾಗಿದೆ. ಯಾವುದೇ ತಪ್ಪುಗಳು ಕಂಡು ಬಂದರೆ ಅವುಗಳನ್ನು ಸರಿಪಡಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.

Most Read Articles

Kannada
English summary
Unified vehicle registration card to come soon. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X