ಹೆಚ್ಚುವರಿ ಬಂಪರ್ ಅಳವಡಿಕೆ ನಿಷೇಧವನ್ನು ಎತ್ತಿ ಹಿಡಿದ ಹೈಕೋರ್ಟ್

ಇತ್ತೀಚಿಗೆ ಕಾರುಗಳು ಸೇರಿದಂತೆ ನಾಲ್ಕು ಚಕ್ರದ ವಾಹನಗಳಲ್ಲಿ ಹೆಚ್ಚುವರಿ ಬಂಪರ್ ಅಳವಡಿಸುವುದು ಸಾಮಾನ್ಯವಾಗಿದೆ. ಕೇಂದ್ರ ಸರ್ಕಾರವು ಈಗಾಗಲೇ ವಾಹನಗಳಲ್ಲಿ ಹೆಚ್ಚುವರಿ ಬಂಪರ್‌ಗಳನ್ನು ಅಳವಡಿಸುವುದನ್ನು ನಿಷೇಧಿಸಿದೆ. ಈ ನಿಷೇಧದ ಹೊರತಾಗಿಯೂ ಹಲವರು ತಮ್ಮ ವಾಹನಗಳಲ್ಲಿ ಹೆಚ್ಚುವರಿ ಬಂಪರ್‌ಗಳ ಬಳಕೆಯನ್ನು ಮುಂದುವರೆಸಿದ್ದಾರೆ.

ಹೆಚ್ಚುವರಿ ಬಂಪರ್ ಅಳವಡಿಕೆ ನಿಷೇಧವನ್ನು ಎತ್ತಿ ಹಿಡಿದ ಹೈಕೋರ್ಟ್

ಕಳೆದ ಕೆಲವು ತಿಂಗಳ ಹಿಂದೆ ತಮಿಳುನಾಡು ಪೊಲೀಸರು ಹಾಗೂ ಅಲ್ಲಿನ ಸಾರಿಗೆ ಇಲಾಖೆ ಅಧಿಕಾರಿಗಳು ಹೆಚ್ಚುವರಿ ಬಂಪರ್ ಅಳವಡಿಸಿರುವ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರು. ತಮಿಳುನಾಡು ಅಧಿಕಾರಿಗಳು ಈಗ ಮತ್ತೊಮ್ಮೆ ಇದೇ ರೀತಿಯ ಕ್ರಮ ತೆಗೆದುಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ಇದಕ್ಕೆ ಕಾರಣ ಮದ್ರಾಸ್ ಹೈಕೋರ್ಟ್ ನೀಡಿರುವ ಆದೇಶ.

ಹೆಚ್ಚುವರಿ ಬಂಪರ್ ಅಳವಡಿಕೆ ನಿಷೇಧವನ್ನು ಎತ್ತಿ ಹಿಡಿದ ಹೈಕೋರ್ಟ್

ಹೆಚ್ಚುವರಿ ಬಂಪರ್ ಹೊಂದಿರುವ ವಾಹನಗಳು ಪಾದಚಾರಿಗಳಿಗೆ ಅಪಾಯವನ್ನುಂಟು ಮಾಡುತ್ತವೆ. ಈ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರವು ವಾಹನಗಳಲ್ಲಿ ಹೆಚ್ಚುವರಿ ಬಂಪರ್‌ಗಳ ಅಳವಡಿಕೆಯನ್ನು ನಿಷೇಧಿಸಿತು. ಅಪಘಾತದ ಸಂದರ್ಭಗಳಲ್ಲಿ ಅನುಕೂಲವಾಗಲಿ ಎಂಬ ಕಾರಣಕ್ಕೆ ಕಾರುಗಳ ಮುಂಭಾಗದಲ್ಲಿ ಏರ್ ಬ್ಯಾಗ್ ಸೆನ್ಸಾರ್ ಗಳನ್ನು ಅಳವಡಿಸಲಾಗಿರುತ್ತದೆ.

ಹೆಚ್ಚುವರಿ ಬಂಪರ್ ಅಳವಡಿಕೆ ನಿಷೇಧವನ್ನು ಎತ್ತಿ ಹಿಡಿದ ಹೈಕೋರ್ಟ್

ಈ ಸೆನ್ಸಾರ್ ಗಳು ಘರ್ಷಣೆಯನ್ನು ತಕ್ಷಣವೇ ಪತ್ತೆ ಹಚ್ಚಿ, ಏರ್ ಬ್ಯಾಗ್ ಗಳನ್ನು ವಿಸ್ತರಿಸುತ್ತವೆ. ಆದರೆ ಈ ಸ್ಥಳದಲ್ಲಿ ಹೆಚ್ಚುವರಿ ಬಂಪರ್ ಅಳವಡಿಸುವುದರಿಂದ, ಸೆನ್ಸಾರ್‌ಗಳು ಘರ್ಷಣೆಯ ಪರಿಣಾಮವನ್ನು ಅರಿತುಕೊಳ್ಳುವ ಸಾಧ್ಯತೆಗಳು ಇಲ್ಲವಾಗುತ್ತವೆ. ಇದರಿಂದ ಅಪಘಾತದ ಸಂದರ್ಭಗಳಲ್ಲಿ ಏರ್ ಬ್ಯಾಗ್ ಗಳು ತೆರೆದು ಕೊಳ್ಳುವುದಿಲ್ಲ.

ಹೆಚ್ಚುವರಿ ಬಂಪರ್ ಅಳವಡಿಕೆ ನಿಷೇಧವನ್ನು ಎತ್ತಿ ಹಿಡಿದ ಹೈಕೋರ್ಟ್

ಇದರಿಂದ ವಾಹನಗಳ ಒಳಗೆ ಕುಳಿತುಕೊಳ್ಳುವ ಪ್ರಯಾಣಿಕರ ಜೀವಕ್ಕೂ ಅಪಾಯವಾಗುತ್ತದೆ. ಕಾರುಗಳಲ್ಲಿ ಹೆಚ್ಚುವರಿ ಬಂಪರ್ ಅಳವಡಿಸುವುದನ್ನು ನಿಷೇಧಿಸಲು ಇದು ಸಹ ಒಂದು ಪ್ರಮುಖ ಕಾರಣವಾಗಿದೆ. ನಿಷೇಧದ ಹೊರತಾಗಿಯೂ ಕೆಲವರು ಹೆಚ್ಚುವರಿ ಬಂಪರ್‌ಗಳ ಬಳಕೆಯನ್ನು ಮುಂದುವರೆಸಿದ್ದಾರೆ.

ಹೆಚ್ಚುವರಿ ಬಂಪರ್ ಅಳವಡಿಕೆ ನಿಷೇಧವನ್ನು ಎತ್ತಿ ಹಿಡಿದ ಹೈಕೋರ್ಟ್

ಇದರ ವಿರುದ್ಧ ಸಾಮಾಜಿಕ ಕಾರ್ಯಕರ್ತರಾದ ಲೆನಿನ್ ಪಾಲ್ ಮದ್ರಾಸ್ ಹೈಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿದ್ದರು. ಹೆಚ್ಚುವರಿ ಬಂಪರ್‌ಗಳ ಮೇಲೆ ವಿಧಿಸಲಾಗಿರುವ ನಿಷೇಧವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಅವರು ತಮ್ಮ ಅರ್ಜಿಯಲ್ಲಿ ಮನವಿ ಮಾಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ನಿಷೇಧವಿದ್ದರೂ ವಾಹನಗಳಲ್ಲಿ ಹೆಚ್ಚುವರಿ ಬಂಪರ್ ಅಳವಡಿಸುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.

ಹೆಚ್ಚುವರಿ ಬಂಪರ್ ಅಳವಡಿಕೆ ನಿಷೇಧವನ್ನು ಎತ್ತಿ ಹಿಡಿದ ಹೈಕೋರ್ಟ್

ಸಾರ್ವಜನಿಕರು ಮಾತ್ರವಲ್ಲದೆ ಸಚಿವರು ಹಾಗೂ ಉನ್ನತ ಅಧಿಕಾರಿಗಳು ಸಹ ತಮ್ಮ ವಾಹನಗಳಲ್ಲಿ ಹೆಚ್ಚುವರಿ ಬಂಪರ್ ಅಳವಡಿಸುತ್ತಿರುವ ಬಗ್ಗೆ ನ್ಯಾಯಾಲಯ ಕಳವಳ ವ್ಯಕ್ತಪಡಿಸಿತ್ತು. ನಂತರ ವಾಹನಗಳಲ್ಲಿರುವ ಹೆಚ್ಚುವರಿ ಬಂಪರ್‌ಗಳನ್ನು ತೆಗೆದು ಹಾಕುವಂತೆ ಸಾರಿಗೆ ಅಧಿಕಾರಿಗಳಿಗೆ ನ್ಯಾಯಾಲಯವು ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಸಾರಿಗೆ ಇಲಾಖೆ ಅಧಿಕಾರಿಗಳು ವಾಹನಗಳಲ್ಲಿರುವ ಹೆಚ್ಚುವರಿ ಬಂಪರ್ ಗಳನ್ನು ತೆರವುಗೊಳಿಸಲು ಮುಂದಾದರು.

ಹೆಚ್ಚುವರಿ ಬಂಪರ್ ಅಳವಡಿಕೆ ನಿಷೇಧವನ್ನು ಎತ್ತಿ ಹಿಡಿದ ಹೈಕೋರ್ಟ್

ಹೆಚ್ಚುವರಿ ಬಂಪರ್ ಹೊಂದಿರುವ ವಾಹನಗಳಿಗೆ ರೂ. 5,000 ಗಳವರೆಗೆ ದಂಡ ವಿಧಿಸಲಾಗುವುದು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ವಾಹನ ಮಾಲೀಕರಿಗೆ ಎಚ್ಚರಿಕೆ ನೀಡಿದರು. ಇದರ ನಂತರ ಕೆಲವರು ತಾವಾಗಿಯೇ ಹೆಚ್ಚುವರಿ ಬಂಪರ್‌ಗಳನ್ನು ತೆಗೆದು ಹಾಕಿದರು. ಇನ್ನೂ ಕೆಲವು ವಾಹನಗಳಲ್ಲಿದ್ದ ಬಂಪರ್ ಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳು ತೆರವುಗೊಳಿಸಿದರು.

ಹೆಚ್ಚುವರಿ ಬಂಪರ್ ಅಳವಡಿಕೆ ನಿಷೇಧವನ್ನು ಎತ್ತಿ ಹಿಡಿದ ಹೈಕೋರ್ಟ್

ಈ ನಡುವೆ ಹೆಚ್ಚುವರಿ ಬಂಪರ್‌ಗಳ ನಿಷೇಧವನ್ನು ಪ್ರಶ್ನಿಸಿ ಬಂಪರ್ ತಯಾರಕರ ಪರವಾಗಿ ಅರ್ಜಿ ಸಲ್ಲಿಸಲಾಯಿತು. ಈ ಪ್ರಕರಣ ಇಂದು (ಸೆಪ್ಟೆಂಬರ್ 21) ಮುಖ್ಯ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಸಂಜಿಬ್ ಬ್ಯಾನರ್ಜಿ ಹಾಗೂ ನ್ಯಾಯಮೂರ್ತಿ ಆದಿಕೇಶವಾಲು ಅವರನ್ನೊಳಗೊಂಡ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಹೆಚ್ಚುವರಿ ಬಂಪರ್ ಅಳವಡಿಕೆ ನಿಷೇಧವನ್ನು ಎತ್ತಿ ಹಿಡಿದ ಹೈಕೋರ್ಟ್

ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲರು ವಾಹನಗಳಲ್ಲಿರುವ ಹೆಚ್ಚುವರಿ ಬಂಪರ್‌ಗಳು ಪ್ರಯಾಣಿಕರಿಗೆ ಯಾವುದೇ ಹಾನಿ ಉಂಟುಮಾಡುವುದಿಲ್ಲ ಎಂದು ಹೇಳಿದರು. ಬಂಪರ್‌ಗಳು ಅಪಘಾತಗಳಿಗೆ ಕಾರಣವಾಗುತ್ತವೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಅವರು ವಾದ ಮಂಡಿಸಿದರು.

ಹೆಚ್ಚುವರಿ ಬಂಪರ್ ಅಳವಡಿಕೆ ನಿಷೇಧವನ್ನು ಎತ್ತಿ ಹಿಡಿದ ಹೈಕೋರ್ಟ್

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ವಾಹನಗಳಲ್ಲಿ ಹೆಚ್ಚುವರಿ ಬಂಪರ್‌ಗಳ ಮೇಲೆ ವಿಧಿಸಲಾಗಿರುವ ನಿಷೇಧವನ್ನು ಮುಂದುವರಿಸಲಾಗುವುದು ಹಾಗೂ ಅದನ್ನು ಯಾವುದೇ ಕಾರಣಕ್ಕೂ ಹಿಂತೆಗೆದುಕೊಳ್ಳಲಾಗುವುದಿಲ್ಲ ಎಂದು ಹೇಳಿದ್ದಾರೆ.

ಹೆಚ್ಚುವರಿ ಬಂಪರ್ ಅಳವಡಿಕೆ ನಿಷೇಧವನ್ನು ಎತ್ತಿ ಹಿಡಿದ ಹೈಕೋರ್ಟ್

ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಸರ್ಕಾರವು ಹೆಚ್ಚುವರಿ ಬಂಪರ್ ಗಳ ಬಳಕೆಯನ್ನು ನಿಷೇಧಿಸಿದೆ. ಇದು ಸರ್ಕಾರದ ನೀತಿ ನಿರ್ಧಾರವಾಗಿರುವುದರಿಂದಈ ವಿಷಯದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಇದೇ ವೇಳೆ ಹೆಚ್ಚುವರಿ ಬಂಪರ್‌ಗಳ ಮೇಲೆ ವಿಧಿಸಲಾಗಿರುವ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ಹೆಚ್ಚುವರಿ ಬಂಪರ್ ಅಳವಡಿಕೆ ನಿಷೇಧವನ್ನು ಎತ್ತಿ ಹಿಡಿದ ಹೈಕೋರ್ಟ್

ಇದರಿಂದ ಮುಂಬರುವ ದಿನಗಳಲ್ಲಿ ತಮಿಳುನಾಡಿನಲ್ಲಿ ಹೆಚ್ಚುವರಿ ಬಂಪರ್ ಹೊಂದಿರುವ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ. ಮುಂಬರುವ ದಿನಗಳಲ್ಲಿ ಇತರ ರಾಜ್ಯ ಸರ್ಕಾರಗಳೂ ಸಹ ಇದೇ ಹಾದಿಯನ್ನು ಹಿಡಿಯುವ ಸಾಧ್ಯತೆಗಳಿವೆ. ನೀವೂ ಸಹ ನಿಮ್ಮ ವಾಹನದಲ್ಲಿ ಹೆಚ್ಚುವರಿ ಬಂಪರ್ ಅಳವಡಿಸಿದ್ದರೆ ತಕ್ಷಣವೇ ಅದನ್ನು ತೆಗೆಯುವುದು ಉತ್ತಮ. ಇಲ್ಲದಿದ್ದರೆ ದಂಡ ತೆರ ಬೇಕಾಗುತ್ತದೆ. ಕಾರುಗಳಲ್ಲಿರುವ ಹೆಚ್ಚುವರಿ ಬಂಪರ್ ಗಳನ್ನು ತೆಗೆದು ಹಾಕುವುದು ಸುರಕ್ಷತೆಯ ದೃಷ್ಟಿಯಿಂದಲೂ ಒಳ್ಳೆಯದು. ಹೆಚ್ಚುವರಿ ಬಂಪರ್ ಅಳವಡಿಕೆ ಜೇಬಿಗೆ ಕತ್ತರಿ ಹಾಕುವುದರ ಜೊತೆಗೆ ಸುರಕ್ಷತೆಗೂ ಅಡ್ಡಿ ಪಡಿಸುತ್ತದೆ.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Madras high court orders to remove extra bumper from vehicles details
Story first published: Wednesday, September 22, 2021, 19:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X